Tuesday, March 27, 2012

ಪರ್ಕಳದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

ಉಡುಪಿ, ಮಾ.25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪರ್ಕಳ ಜೇಸಿಐ ಸಹಭಾಗಿತ್ವದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಮತ್ತು ವಿಶ್ವ ಮಹಿಳಾ ದಿನಾಚರಣೆಯನ್ನು ರವಿವಾರ ಪರ್ಕಳ ಶ್ರೀನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಹಿರೇಬೆಟ್ಟು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ, ಕ್ಷಯ ರೋಗ, ಅದರ ಬಗ್ಗೆ ಮುಂಜಾಗ್ರತಾ ಕ್ರಮ ಹಾಗೂ ಆರೋಗ್ಯ ಕುರಿತು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಮಂಜುನಾಥ, ರೋಗದ ಬಗ್ಗೆ ಎಚ್ಚರ ವಹಿಸುವಂತೆ ತಿಳಿಹೇಳಿದರು.

ವಿಶ್ವ ಮಹಿಳಾ ದಿನದ ಅಂಗವಾಗಿ ಜೇಸಿಯ ವಲಯ ತರಬೇತುಧಾರೆ ಶಿಲ್ಪಾಜೋಶಿ ಮಹಿಳಾ ಅಸ್ತಿತ್ವದ ಬಗ್ಗೆ ತರಬೇತಿ ನೀಡಿದರು. ಪರ್ಕಳ ಜೇಸೀ ಅಧ್ಯಕ್ಷ ಮನೋಜ್ ಕಡಬ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ ಕಾರ್ಯ ದರ್ಶಿ ಸಂದೀಪ್ ಕುಮರ್, ವಲಯಾಧಿಕಾರಿ ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಮಂಜುನಾಥ್, ಗಿರೀಶ್, ಹಿರಿಯ ಆರೋಗ್ಯ ಸಹಾಯಕ ಆನಂದ ಗೌಡ ಉಪಸ್ಥಿತರಿದ್ದರು.

Wednesday, May 25, 2011

ಮರ ಮತ್ತು ಕಾಯಿ

ಭಾUರಥಿ ಹೆಗಡೆ
ಸರಿಯಾಗಿ ಆರು ಘಂಟೆಗೆ, ಬಿಡಾರದ ಕೋಳಿಯಲ್ಲ, ದಿನೂ ತಂದ ವಾಚಿನ ಕೋಳಿ ‘ಕೊ ಕ್ಕೊ ಕೋ ಕೋಂ’ ಕೂಗಿದಾಗ ಎಚ್ಚೆತ್ತ ಪದ್ದು ಚಿಕ್ಕಿ, ಕಣ್ಣು ಬಿಡಬೇಕೆಂದರೆ, ರೆಪ್ಪೆಗಳ ಮೇಲೆ ಯಾರೋ ಕಲ್ಲು ಹೇರಿಟ್ಟ ಭಾಸ, ಮಗ್ಗುಲಾಗತೊಡಗಿದರೆ ಮೈಕೈಯೆಲ್ಲ ಗುದ್ದಿ ಹಣ್ಣು ಮಾಡಿದ ನೋವು, ಅದೇ ಅರೆ ಭ್ರಮೆಯಲ್ಲಿ ಕಣ್ಣು ಮುಚ್ಚಿದವಳು. ‘ರಾಮ ರಾಮಾ’ ಎಂಬ ಗಂಡನ ನರಳಿಕೆಗೆ ಧಡಕ್ಕನೆ ಎದ್ದು ಕುಳಿತಳು.

ಹೌದು, ಹೊರಗೆ ಬೆಳ್ಳಂಬೆಳಗಾಗಿ ಬಿಟ್ಟದೆ. ಅಂಗಳದ ತುದಿಯ ತೆಂಗಿನ ಗಿಡದಲ್ಲಿ ಆಗಲೇ, ಕಾಗೆ ಗುಬ್ಬಿಗಳ ಕಟಿಪಿಟಿ ಶುರುವಾಗಿದೆ. ಕೊಟ್ಟಿಗೆಯ ಮಂದಿ ಕರೆಯುತ್ತಿದ್ದಾರೆ. ಒಂಬತ್ತೂ ವರೆ ಬಸ್ಸು ಬರುವುದರೊಳಗಾಗಿ ತಾನು ಮಾಡಬೇಕಿರುವ ಕೆಲಸಗಳ ರಾಶಿ ನೆನೆದೇ ಎದೆಯೊಡೆದು ಗಂಟಲಿಗೆ ಬರುತ್ತಿದೆ. ಆದರೆ ಶರೀರ ಮಾತ್ರ ಏನೇ ಆದರೂ ಈ ಜನ್ಮದಲ್ಲಿ ಮೇಲೇಳ ಲಾರೆನೆಂಬ ಹಟ ತೊಟ್ಟು ಬಿಟ್ಟ್ಟಿದೆ.... ಸಾಯ್ಲಿ, ಎಲ್ಲಾ ಹುಲಿ ತಿಂದು ಹೋಗ್ಲಿ. ಮನೆ- ಮಕ್ಳು- ಸಂಸಾರ ಎಂದು ಒಂದು ಹದಿಮೂರು ವರ್ಷದಿಂದ ಜೀವ ತೇಯ್ದಿದ್ದಕ್ಕೆ, ಆತಲ್ಲ ಸಮಾ ಮಂಗಳಾರ‍್ತಿ! ಸಾಕೋ? ಇನ್ನೂ ಬೇಕೋ? ಋಣವೇ ಋಣವೆ. ಮನೆಗೆ ಬೇಕು ಮಕ್ಳಿಗೆ ಬೇಕು ಎಂದು ಆ ಪರಿ ಉಪವಾಸ, ವನವಾಸ ಮಾಡಿ ಮಂಗನ ಮಾಡಿಟ್ಟೆ ಹೌದ? ಒಂದೊಂದು ಮೆಟ್ಟು ಜಾಗಕ್ಕಾಗಿ ದಾಯಾದಿಗಳ ಕೈಲಿ ಹೊಡೆ ದಾಡಿದೆ ಹೌದ? ಬೆಟ್ಟದಲ್ಲಿ, ಹಿತ್ತಿಲಲ್ಲಿ ಎಂದಿಲ್ಲದೆ ಗಡಿ ಒತ್ತಿ, ಹುಲ್ಲು, ಸೊಪ್ಪು ಕೊದು, ಗಂಡನನ್ನು ಮುಂದು ಮಾಡಿ ಕೊಂಡು ಜಗಳಕ್ಕೆ ನಿಂತೆ ಹೌದ?... ಹೆಂಗಾತು ಈಗ?.... ಮುಚ್ಚಿದ ಕಣ್ಣಿವೆಯೊಳಗೆ- ಮುಚ್ಚಿಹೋದ ಮನಸ್ಸಿನೆದುರು ಯಾರದೋ ಸಪೂರ ದನಿ ಹಗೂರ ಮಾತು... ಯಾರೂ? ಯಾರದೂ?.....

ಇಲ್ಲ, ಇನ್ನು ಸಾಧ್ಯವಿಲ್ಲ ಅನ್ನುತ್ತ ಚಿಕ್ಕಿ ದಡಬಡಿಸಿ ಹಾಸಿಗೆ ಸುತ್ತಿ, ಸೀದಾ ಬಚ್ಚಲಿಗೇ ಹೋಗಿ ನಿಂತಳು. ರಾತ್ರಿಯ ಇಡೀ ಅಧ್ಯಾಯದ ನೆನಪನ್ನು ಸೋಪಿನೊಂದಿಗೆ ತೊಳೆದುಬಿಟ್ಟು, ಒಲೆ ಬೂದಿ ತೆಗೆದು, ಸಗಣಿ ಸಾರಿಸಿ, ಬೆಂಕಿ ಒಟ್ಟಿ, ಚಾಕ್ಕೆ ನೀರಿಡುವ ಹೊತ್ತಿಗೆ ಮತ್ತೆ ಹಾಸಿಗೆಯಿಂದ ‘ರಾಮ ರಾಮಾ-ರಾಮಾ ರಾಮಾ’ ನರಳಿಕೆ, ದೇವ್ರೆ! ಪೆಟ್ಟು ಜೋರಾಗಿಯೇ ಬಿದ್ದಿರ ಬೇಕು. ಇಲ್ಲಾಂದ್ರೆ ಹಾಗೆಲ್ಲ ನರಳುವ ಜನವೇ ಅಲ್ಲ. ಇಡೀ ದಿನ, ಗಡಿಯಾರದ ಮುಳ್ಳಿನಂತೆ, ಮೇಲೇರಿ ಇಳಿವ ಸೂರ‍್ಯ ನಂತೆ, ತಾನಾಯಿತು ತನ್ನ ಕೆಲಸವಾಯಿತು. ತೀರಾ ಉಮೇದಿ ಬಂದಾಗ, ಭಂಗಿ ಸೊಪ್ಪಿನ ಪಾನಕವಾಯಿತು. ಹೊರ‍್ತೂ ಯಾರೇ ಬರಲಿ, ಹೋಗಲಿ, ಯಾರಿಗೆ ಆರಾಮವಿರಲಿ, ಬಿಡಲಿ, ತನ್ನ ಹ್ವಾರ‍್ಯ ಬಿಟ್ಟಿದ್ದು ಇಲ್ಲ. ಹೆಂಡತಿ ಮಕ್ಕಳ ವ್ಯಾಜ್ಯ ದಲ್ಲಿ ಉಪ್ಪು-ಉಪ್ಪಿನ ಕಲ್ಲು ಅಂದಿದ್ದೂ ಇಲ್ಲ. ಅಂಥಾದ್ರಲ್ಲಿ....

ಕುನ್ನಿಗೊಡ್ಡೆ! ನಿನಗೊಳ್ಳೆ ಕಾಲ ಬಂದಿದ್ದಲ್ಲ ಇಂಥಾ ಬುದ್ದಿ, ತಡೆ ತಡೆ ಮಾಡ್ತೇನೆ ನಿಂಗೊಂದ್ ಮದುವೇಯ.... ಅವಳು ಕರಕರ ಹಲ್ಲು ಕಡಿದು, ಗಂಡನ ಹತ್ತಿರ ಹೋಗಿ, ಬಗ್ಗಿ, “ಇಕಾ, ಇಕಳಿ ಚಾ ತಂದೆ” ಅಂದಾಗ, ಅವನು ಮತ್ತಷ್ಟು ‘ಹುಹುಹು’ ಗುಟ್ಟುತ್ತ, ಮೆಲ್ಲಗೆ ಮೇಲೆದ್ದು, ಗೋಡೆ ಹಿಡಿದುಕೊಂಡು, ಮುಖ ತೊಳೆಯಲು ಹೊಂಟಿದ್ದು ಕಂಡು ಮತ್ತಷ್ಟು ಮೈ ಉರಿಯಿತು. ಇಲ್ಲ, ಇನ್ನು ಸುಮ್ಮನಿರೋದಿಲ್ಲ. ಇಡೀ ಎಂಟಾನೆಂಟು ವರ್ಷ, ತನ್ನದೆ ಎಂಜಲು-ತನ್ನದೇ ಬಚ್ಚಲು ಹೇಳೋದ್ಯಾರಿಗೆ ಎಂದು ಸಹಿಸಿದ್ದೇ ಸಹಿಸಿದ್ದು. ಒಳಗಿನ ಹೊಗೆ ಹೊರಬೀಳದಿದ್ಹಾಂಗೆ ಮುಚ್ಚಿಕೊಂಡಿದ್ದೇ ಕೊಂಡಿದ್ದು. ಇಲ್ಲ, ಇನ್ನು ಮುಚ್ಚಿಟ್ಟುಕೊಳ್ಳ ಲಾರೆ, ಪುಂಡಂಗರ್ಧ ರಾಜ್ಯ ಉಂಬಳಿಯಂತೆ, ನೋಡ್ತೇನೆ, ನಾನೂ ನೋಡೇ ಬಿಡ್ತೇನೆ, ಹಂ, ... ಒಲೆಯ ಹಾಯ್ಗದ ಸೌದೆ ಯೊಂದಿಗೆ ತಾನೂ ಧಗಧಗಿಸುತ್ತ ಚಿಕ್ಕಿ ಕೊಟ್ಟಿಗೆಯತ್ತ ನಡೆದಳು.

ನಡೆದದ್ದೇನೋ ಹೌದು, ಆದರೆ ಎಮ್ಮೆ ಕರೆಯಲು ತುದಿಗಾಲಲ್ಲಿ ಕೂತರೆ, ಮೇಲೇಳಲಿಕ್ಕಾಗುತ್ತಿಲ್ಲ. ಶರೀರದ ಯಾವ್ಯಾವ ಭಾಗ ನೋಯುತ್ತಿದೆಯೆಂದು ತಿಳಿಯುತ್ತಲೂ ಇಲ್ಲ. ಬಿದ್ದಿದ್ದು ಮೂರೇ ಮೂರು ಲತ್ತೆ, ಕಬ್ಬಿಣದ ಸರಳಿಂದ..... ಐವತ್ನಾಲ್ಕರ ಶರೀರಕ್ಕೆ. ಅದೂ ಆರು ಬಾಣಂತನದಲ್ಲಿ ಅತ್ತ ಹೋಗಿ ಇತ್ತ ಬಂದದ್ದು. (ಅದರಲ್ಲೇ ಮೂರು ಹಾಳು ಬಾಣಂತನ ಬೇರೆ) ಸೊಂಟ ಮುರಿಯದೆ ಶಾಬೀತಾಗಿ ಉಳಿದದ್ದೇ ಹೆಚ್ಚು. ಇನ್ನೊಂದು ಚಣ ಅಲ್ಲೇ ಇದ್ದಿದ್ದರೆ, ಬಹುಶಃ ಕೈ ಕಾಲು ಮುರಿದೇ ಕುಂಡ್ರಿಸುತ್ತಿದ್ದ ಮಗ ಬಹಾದ್ದೂರ. ಆ ಕರ್ರೊ ಕತ್ತಲಲ್ಲಿ, ಪೆಟ್ಟು ತಿಂದ ಎಮ್ಮೆ ಬಿದ್ಹಾಕಿ ಓಡುವಂತೆ ಓಡಿ, ಸೌದೆ ಮನೆ ಹಿಂದೆ ಅಡಗಿ ಕೂತಿದ್ದಕ್ಕೆ ಈಗ ಮೇಲೆದ್ದು ಓಡಾ ಡುತ್ತಿರುವುದು. ಇರ‍್ಲಿ, ನೋಡಿಯೇ ಬಿಡೋಣ..... ನಾನಂದ್ರೆ ಏನಂತ ತಿಳ್ಕೊಂಡಿದಾನೆ ಕುನ್ನಿ ಹಂ.... ಕಟ್ಟಿಸಿಕೊಂಡ ಹಲ್ಲು ತುಂಡಾಗಿ ಬಿಡಬಾರದೆಂಬ ಹುಶಾರಿನಲ್ಲೇ ಮತ್ತೊಮ್ಮೆ ಹಲ್ಲು ಕರ ಕರ ಮಾಡಿ, ಪದ್ದು ಚಿಕ್ಕಿ ಉಪ್ಪಿಟ್ಟು ಕೆದಕತೊಡಗಿದಳು.
ಉಪ್ಪಿಟ್ಟಾಯಿತು. ಮತ್ತೊಂದು ಚಹಾ ಕುದಿಯಿತು. ಉಪ್ಪಿಟ್ಟು ಕಂಡಿದ್ದೇ, ದಿನೂನ ಮುಖ ಸಿಂಡರಿಸಿದರೂ, ಮಾತಿಲ್ಲದೆ ಮೂವರೂ ತಿಂದು ಮುಗಿಸಿಯಾಯಿತು. ಮೇಲೇಳುವಾಗ “ದಿನೂ” ಎಂದು ದೈನ್ಯದಿಂದ ಅವಳು ಕರೆದದ್ದಕ್ಕೆ ‘ಎನು?’ ಎಂಬಂತೆ ಅಮ್ಮನ ಮುಖ ನೋಡಿದ, ಕರುಣೆಯಿಂದಲೋ? ತಾತ್ಸಾರದಿಂದಲೋ?....

“ತಮ್ಮಾ, ನೀನೂ ನಂಜೊತೆ ಪ್ಯಾಟಿಗೆ ಬಂದ್ಬಿಡು. ಆ ಠೊಣ ಪನ ಸೊಕ್ಕು ಅದೆಷ್ಟಿದ್ಯೋ ನೋಡಿಬಿಡೋಣ. ಆ ಹವಾಲ್ದಾ ರಣ್ಣ ನಿಂಗೊತ್ತಿದೆಯಲ್ಲ...... ”, ಅಮ್ಮನ ಮಾತಿಗೆ ಮಗ ಉತ್ತರಿಸದಿದ್ದರೂ ನರಳುತ್ತಿದ್ದ ಅಪ್ಪ ತಲೆಯೆತ್ತಿ, ಪಟಕ್ಕನೆ ಬಾಯಿಬಿಟ್ಟ.
“ಹೆಡ್ಡೀ ಹೆಡ್ಡಿ, ನಿನ್ನ ತಲೆ ಏನು ಹನ್ನೆರಡಾಣೆ ಆಗ್ಹೋ ಯ್ತೇನೆ? ಹೊಟ್ಟೆ ಮಗನ ಹಿಡಿದು ಪೊಲೀಸ್ರಿಗೆ ಕೊಡ್ಲಿಕ್ಕೆ ಹೊಂಟೀಯಲ್ಲ, ಥೂ ನಿನ ಜನ್ಮಕ್ಕೆ......”. ಅದೇನೋ ಮಹಾ ಹೇಳಿಬಿಟ್ಟೆನೆಂಬಂತೆ ತಲೆ ತಗ್ಗಿಸಿ, ಬಗ್ಗಿದ ಶರೀರವನ್ನು ಇನ್ನಷ್ಟು ಮುದ್ದೆಗೊಳಿಸಿ, ಬೆವರೊರೆಸಿಕೊಳ್ಳತೊಡಗಿದ. ಎಂದೂ ಇಲ್ಲದ ಗಂಡನ ಈ ಪರಿಗೆ, ಮಿಕಿ ಮಿಕಿ ನೋಡುತ್ತ, ಚಿಕ್ಕಿ ಇನ್ನಷ್ಟು ಬೆಂಕಿಯಾದಳು.
“ಹಾಂ ಹಂ, ಹೌದು. ನಾ ಹೆಡ್ಡಿಯಾಗಿದ್ದಕ್ಕೇ ನಿಮ್ಮೆಲ್ರ ತಿಪ್ಪೆ ಬಳೀತಾ ಬಿದ್ದಿರೋದು. ನೀವು ಮಾ ಬುದವಂತ್ರು. ದಿನ ದಿನಾ ಮಗನ ಕೈಲಿ ಲತ್ತೆ ತಿಂತಾ ಕುಂತಿರಿ. ನಾನೆಲ್ಲಾದರೂ ದೇಶಾಂತ್ರ ಹೊಂಟ್ಹೋಗ್ತೇನೆ, ಈ ನಮನಿ ಜಗಳ-ರಗಳೆ-ಹೊಡೆದಾಟ ಇನ್ನು ನೋಡ್ಲಾರೆ.....” ಬುಸುಗುಟ್ಟುತ್ತ ಅವಳು ಮೇಲೆದ್ದಾಗ, ಮಗ ಅಪ್ಪನ ಕೈ ಹಿಡಿದು, “ಅಪಾ ನೀ ಸುಮ್ನಿರು. ಅವ್ನನ್ನೇನು ಯಾರೂ ಕೊಂದು ಹಾಕೋದಿಲ್ಲ. ಅಲ್ಲಿ ಪೊಲೀಸ್ರ ಬೂಟು ಗಾಲಿನ ರುಚಿ ಕಂಡ್ರೆ ಮಾತ್ರ ಅವ್ನಿಗೆ ಬುದ್ಧಿ ಬರೋದು. ಅವನ ನೆತ್ತಿಗೇರಿದ ಪಿತ್ತ ಇಳಿಸ್ಲಿಕ್ಕೆ ಅವರೇ ಸಮ. ನೀ ಅಡ್ಡ ಬರ‍್ಬೇಡ....” ಅನ್ನುತ್ತ ಅಲ್ಲಿಂದೆದ್ದ.

ಎದ್ದಿದ್ದೇನೋ ಹೌದು. ಆದರೆ ಹೋಗುವುದೆಲ್ಲಿಗೆ? ನಿಂತ ಭೂಮಿಯ ಸೀಮೆ ದಾಟಿ, ಸಾಮಾನ್ಯರು ಇನ್ಯಾವ ಗ್ರಹಕ್ಕೆ ಹೋಗಲು ಸಾಧ್ಯವಿದೆ? ಮಣ್ಣ ಮೇಲಿನ ಕಲ್ಲು ಮುಳ್ಳಿನ ದಾರಿಯ ಹೊರತಾದ ಹಾದಿ ಎಲ್ಲಿದೆ?.... ಈ ನೆಲದ ಮೇಲಿನ ಸಮಸ್ತ ಕ್ಷುದ್ರತೆಯೂ ಮನೆ ಮಾಡಿ ನಿಂತ ಮನೆ, ಅಲ್ಲಿ ಅವನ ಬುದ್ಧಿ ಬಲ್ಲಾದಂದಿನಿಂದ ಜಗಳವಿಲ್ಲದ ದಿನವೇ ಇಲ್ಲ. ಇವನು ಶಾಲೆ ಕಲಿಯುವ ಹೊತ್ತಿನಲ್ಲೇ, ಇಬ್ಬರು ಅತ್ತಿಗೆಯರು- ಅಕ್ಕಂದಿರು-ಅವರ ಒಂದೊಂದು ಮರಿಗಳು ಗಿಜಿಬಿಜಿ ತುಂಬಿ ಕೊಂಡ ಗೂಡಿನಲ್ಲಿ, ಬೆಳಗಾಗೆದ್ದು ಚಾ ಕುಡಿಯುವಾಗಲೇ, ಒಬ್ಬಳ ಮಗನಿಗೆ ಇನ್ನೊಬ್ಬಳು ತುಪ್ಪ ಹಾಕಲಿಲ್ಲವೆಂಬ ಆಕ್ರೋಶ, ಇಲ್ಲಾ ಹಲ್ಲು ಪುಡಿಗಾಗಿ, ಇಲ್ಲಾ ಸೋಪಿಗಾಗಿ, ಮತ್ತೆಲ್ಲ ಸಾಯಲಿ, ಮಗುವಿನ ಹಾಲಿಗೆ ಚಿಟಕಿ ಸಕ್ಕರೆ ಹಾಕಿ ದ್ದಕ್ಕೂ ಯಜಮಾನ ಅಣ್ಣನ ಗೌಜೇ ಗೌಜು. ಅವನಿಗೆ ‘ಸೋ’ ಅನ್ನುವ ಹೆಂಡತಿ. ಸತ್ತೂ, ಬಿದ್ದೂ ಗೇಯಲಿಕ್ಕೆ ಮನೆಜನ ಬೇಕು, ಉಂಡು-ತಿಂದು, ಉಟ್ಟು-ತೊಟ್ಟು ಮಾಡಲು ಬೇಡ ಅಂದ್ರೆ ಯಾರು ಕೇಳ್ತಾರೆ? ಎಂದು ಉಳಿದವರ ಆಕ್ರೋಶ. ತಾಯಿ ಒಮ್ಮೆ ಕೃಷ್ಣ ಪಕ್ಷ, ಒಮ್ಮೆ ಶುಕ್ಲ ಪಕ್ಷ. ಪಂಕ್ತಿಯ ಬುಡದಲ್ಲೇ ಕೂತು, ಕಂಕಿಂ ಎನ್ನದೇ ಬಂದಿದ್ದು ತಿಂದು, ಮೇಲೇಳುತ್ತಿದ್ದ ಅಪ್ಪನಂತೆ ಈ ಸಣ್ಣವನೂ ಉಪ್ಪಿಗೂ ಇಲ್ಲ, ಸೊಪ್ಪಿಗೂ ಇಲ್ಲ. ಅಂತೂ, ಹೇಗೋ ಎಳೆದುಕೊಂಂಡು ಬಂದ ಸಂಸಾರದ ತೇರು, ಇವನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಹರಿದು ಮೂರು ಚೂರಾ ಗಿತ್ತು.

ಆಗಲಿ, ಮಹಾ ಏನಾಯ್ತು? ಕಾಯಿ ಬಂದು ಬಂದು, ಹೇರಿಕೊಂಡ ಮಾವಿನ ಟೊಂಗೆ ಮುರಿದುಬಿದ್ದಿದ್ದಕ್ಕೆ ಮರಕ್ಕೆ ಯಾಕೆ ಚಿಂತೆ? ಇನ್ನೊಂದು ಬದಿಯಿಂದ ಚಿಗುರಿಕೊಂಡರಾ ಯ್ತಪ್ಪ. ಅಂದರೆ ಅದಲ್ಲ ಪ್ರಶ್ನೆ. ಇದ್ದ ಎರಡೆಕರೆ ತೊಟದಲ್ಲಿ ನಾಲ್ಕು ಪಾಲು ಮಾಡಿದಾಗ ಯಾರಿಗೆ ಸಾಕಾಗುತ್ತದೆ?..... ಇಡೀ ವರ್ಷಕ್ಕೆ ಕ್ವಿಂಟಾಲು ಅಡಿಕೆ ಕೊಯ್ದು, ಯಾವ ಕುಟುಂಬ ಸುಖವಾಗಿರಲು ಸಾಧ್ಯ?....
ತನಗೆ ಕೊಟ್ಟ ತೋಟ ಹಾಳು, ಅಡಿಕೆಯಾಗುವುದಿಲ್ಲ. ಎಂದು ಹಿರಿಯವನು- ತನ್ನದು ಮತ್ತೂ ಖರಾಬು, ಸಣ್ಣವನ ತೋಟ ತನಗೆ ಬೇಕು ಎಂದು ನಡುವಿನವನು-ಒಮ್ಮೆ ಎಲ್ಲರೂ ಒಪ್ಪಿಕೊಂಡರು ಹಿಸೆ ಕರಾರು ಬರೆದಾದ ಮೇಲೆ ತಕರಾರು ಮಾಡಿದ್ರೆ ಯಾರು ಕೇಳ್ತಾರೆ? ಎಂದು ತಾಯಿ-ಹ್ಯಾಗೆ ಕೇಳೋದಿಲ್ಲ ನೋಡೇಬಿಡ್ತೇವೆ ಎಂದು ಅವರಿಬ್ಬರು ಅದೆಲ್ಲ ಹಾಳಾಯ್ತು, ಒಂದು ಒಗ್ಗರಣೆ ಸೌಂಟಿಗಾಗಿ, ಒಂದು ಎಣ್ಣೆ ಗಿಂಡಿಗಾಗಿ, ಒಂದು ದೀಪದ ಶಮೆ, ಒಂದು ಶ್ಯಾವಂತಿಗೆ ಹಿಳ್ಳಿಗಾಗಿಯೂ ಹತ್ತಿ ಹರಿಯದ ಜಗಳ.... ಹತ್ತಿರದ ನೆಂಟರಿಷ್ಟರು, ನೆಂಟರಲ್ಲದ ಹಿರಿಯ ಪಂಚರು-ಯಾರೇ ಬಂದು ಹೇಳಿದರೂ ಮತ್ತಷ್ಟು ಜಟಕಾಗುವ ಜಗಳ..... ಕಂಡೂ ಕಂಡೂ ತಲೆ ಕೆಟ್ಟುಹೋದ ದಿನು, ಯಾರಿಗೂ ಸುದ್ದಿ ಕೊಡದೆ ಬೊಂಬಾಯಿ ಬಸ್ಸು ಹತ್ತಿದವನು, ಹೋದ ಎಂಟೇ ದಿನಕ್ಕೆ ಕುದಿಯುವ ಜ್ವರ ಹೊತ್ತು ವಾಪಸು ಬಂದಾಗ, ತಾಯಿ ಬುದ್ಧಿ ಹೇಳಿ, ತನ್ನ ಏಕೈಕ ಆಪದ್ಧನವಾದ ವಠಣಿ ಸರ ಮಾರಿ, ಊರ ಬಸ್‌ಸ್ಟಾಪಿನಲ್ಲಿ ಗೂಡಂಗಡಿ ಹಾಕಿ ಕೊಟ್ಟಿದ್ದಳು.

......ತಾಯಿಯ ಮಾತಿನಂತೆ ಮಿಂದು, ಅಂಗಿ,ಪ್ಯಾಂಟು ತೊಟ್ಟ ದಿನು ಅಮ್ಮನನ್ನು ಕರೆದರೆ,ಅವಳಿನ್ನೂ ಪಾತ್ರೆ ತಿಕ್ಕುತ್ತಿದ್ದಾಳೆ. ಘಂಟೆ ಆಗಲೇ ಒಂಬತ್ತು. ಇನ್ನರ್ಧ ತಾಸಿನಲ್ಲಿ ಇವಳು ಮಿಂದು, ಸೀರೆಯುಟ್ಟು ಹೊರಟಂತೆಯೇ ಸೈ. ಶಾಲೆಮನೆ ಘಟ್ಟ ಹತ್ತುತ್ತಿದ್ದಾಗಲೇ ಬಸ್ಸು ‘ಬುರ್ರ್’ ಎಂದು ಹೋಗಿ ಯಾಗಿರುತ್ತದೆ. ಥತ್, ಹಾಳ್‌ಬಿದ್ಹೋಗ್ಲಿ!...... ಮನಸ್ಸಿನಲ್ಲೇ ಅಲವತ್ತು ಕೊಳ್ಳುತ್ತ, “ಅಮ್ಮಾ, ನೀ ಮೀಯ್ಲಿಕ್ಹೋಗು. ಇದಿಷ್ಟು ನಾ ತೊಳಿತೇನೆ” ಅಂದ ಮಗನ ಮಾತಿಗೆ ತಾಯಿ ತಿರುಗಿ ಮಾತಾಡಲೂ ಇಲ್ಲ, ಕೆಲಸ ಬಿಟ್ಟು ಮೇಲೇಳಲೂ ಇಲ್ಲ. ಅವನ ಮುಖವನ್ನೇ ಮಿಕಿ ಮಿಕಿ ನೋಡಿದಳು ಮಾತ್ರ.

ಇವನೊಬ್ಬನಿಗಾದರೂ ಅಮ್ಮ ಎಂಬ ಮಮಕಾರ, ಮುಳ್ಳು ವೊನೆಯಷ್ಟಾದರೂ ಇದ್ದಿದ್ದರೆ, ಒಂದು ದಿನ ಬಿಡದೆ, ಮೂರೆಮ್ಮೆ ಕರೆದ ಹಾಲನ್ನು, ತಾನೇ ಪೇಟೆಗೆ ಹೊತ್ತೊಯ್ದು ಮಾರಬೇಕಿರ ಲಿಲ್ಲ..... ಮತ್ತೆ ಮನೆಗೆ ಬಂದು ಹಸಿಬಿಸಿ ಕೂಳು ಕುಚ್ಚಬೇಕಿರ ಲಿಲ್ಲ..... ಅದೆಲ್ಲ ಸಾಯ್ಲಿ, ಹೊಂತಗಾರ ಪೋರ ಅಂಬುವನು ಕನಿಷ್ಠ, ದನಕರ ಮೈ ತೊಳೆಸಿ, ಸಗಣಿ ಬಾಚಿ, ಹುಲ್ಲು ತಂದು ಹಾಕುವಷ್ಟಾದರೂ ಸಹಾಯ ಮಾಡಿದ್ದರೆ?....
ಪದ್ದು ಚಿಕ್ಕಿ, ದೊಡ್ಡದೊಂದು ನಿಟ್ಟುಸಿರಿನೊಂದಿಗೆ ಪಾತ್ರೆ ಗಳನ್ನೆತ್ತಿ ಒಳಗೊಯ್ದಳು.

ಒಳಗೆ ಎಂಜಲು ಬಾಳೆ, ಬಾಳೆಗೆ ಮುತ್ತಿಕೊಂಡ ನೊಣದ ರಾಶಿ, ಒಲೆಮೂಲೆಯಲ್ಲಿ ಪರಮಾನಂದದಿಂದ ಕಣ್ಣು ಮುಚ್ಚಿದ ಬೆಕ್ಕು...... ಈಗಿದನ್ನೆಲ್ಲ ಚೊಕ್ಕಗೊಳಿಸುತ್ತ ಕೂತರೆ ಬಸ್ಸು ತಪ್ಪಿ, ಮತ್ತಂದು ತಾಸು ಬಿಸಿಲಲ್ಲಿ ತಾಪ ತೆಗಿಯಬೇಕು. ‘ಸತ್ತಿರ‍್ಲಿ ಎಲ್ಲವೂ ಇದ್ದ ಹಾಂಗೆ’ ಅಂದುಕೊಳ್ಳುತ್ತ ಚಿಕ್ಕಿ, ಬರಬರ ಎರಡು ಚೊಂಬುಮಿಂದು, ತಲೆಬಾಚಿ, ಅಡರಾಬಡರಾ ಸೀರೆ ಸುತ್ತಿ ಕೊಂಡು, ನಾಲ್ಕಾರು ಕ್ಯಾನುಗಳಿಗೆ ಹಾಲು ಅಳೆದು, ಎಲ್ಲದಕ್ಕೂ ಮರೆಯದೆ ಒಂದೊಂದು ಲೋಟ ನೀರು ಸೇರಿಸಿ, ಕ್ಯಾನು ಗಳನ್ನೆಲ್ಲ ಕೈ ಚೀಲಕ್ಕೆ ತುಂಬಿ, ಚಪ್ಪಲಿ ಮೆಟ್ಟಿದಾಗ ದಿನು, ಮಾತಿಲ್ಲದೆ ಅವಳನ್ನು ಹಿಂಬಾಲಿಸಿದ.

ಬ್ಯಾಡ ಬ್ಯಾಡಂದ್ರೂ ಹಿಂಬಾಲಿಸಿ ಬರುವ ನೆನಪುಗಳ ಭಾರ ಹೊತ್ತು ಮನೆ ಮುಂದಿನ ಘಟ್ಟ ಏರುತ್ತಿರುವಾಗಲೆ ದೂರ ದಲ್ಲೆಲ್ಲೊ ಬಸ್ಸಿನ ಸದ್ದು. ಹಾಲಿನ ಚೀಲವನ್ನು ಮಗನ ಕೈಗೆ ದಾಟಿಸಿದ್ದೇ, ಚಿಕ್ಕಿ ನಿಜಕ್ಕೂ ಓಡತೊಡಗಿದಳು. ಓಡಿ ಬಸ್ ಸ್ಟಾಪ್ ತಲುಪುವುದಕ್ಕೂ, ಬಸ್ಸು ಬಂದು ನಿಲ್ಲುವುದಕ್ಕೂ ಸರಿಯಾಯಿತು. ಯಾವತ್ತೂ ದಿನ ತುಂಬಿದ ಬಸುರಿಯಂತೆ ತುಂಬಿಕೊಂಡಿರುತ್ತಿದ್ದ ಬಸ್ಸು, ಇವತ್ತೇಕೊ ಖಾಲಿಯಿರುವುದು ಕಂಡು, ‘ಹಯ್ಯಪ್ಪ! ಸದ್ಯ’ ಅನ್ನಿಸಿ, ಮಗನ ಕೈಯಿಂದ ಕೈ ಚೀಲ ಗಳನ್ನಿಸಿದುಕೊಂಡು ತೊಡೆಯ ಮೇಲಿರಿಸಿ ಕುಳಿತುಕೊಂಡಾ ಗಲೂ, ಏನ್ ಮಾಡ್ಲಿ? ಈಗೇನ್ ಮಾಡ್ಲಿ? ಒಂಬ ಗೊಂದಲ ಕಾಡುತ್ತಿದೆ. ಏನಾದರೂ ಮಾಡಲೇಬೇಕೆ? ಎಂಬ ಅನುಮಾನ ಎದೆಯಲ್ಲಿ ಕೈ ಹಾಕಿ ಎಳೆದಾಡುತ್ತಿದೆ......... ಎಷ್ಟಂದ್ರೂ, ತಾನೇ ಬಸಿರಾಗಿ, ಹೆತ್ತು ಹಾಲುಣಿಸಿ ಬೆಳೆಸಿದ ಮಗ. ತಾನಿಷ್ಟೆಲ್ಲ ಕಷ್ಟ ಪಟ್ಟಿದ್ದಾದ್ರೂ ಮತ್ಯಾಕೆ? ತನ್ನ ಕಷ್ಟ ತನ್ನ ಮಕ್ಳಿಗೆ ಬರಬಾರ‍್ದು. ತನ್ನ ದುಃಖದ ಝಳ ತನ್ನ ಮಕ್ಳು ಮರಿಗೆ ತಾಗಬಾರ‍್ದು. ಅವ್ರು ಸುಖವಾಗಿರ‍್ಬೇಕು. ಅವ್ರು ಸೂಡಿದ ಹೂ ಬಾಡಬಾರ‍್ದು. ಅವ್ರು ಮಕ್ಳು ಮರಿ ಕಂಡು, ನಾಲ್ಕು ಕಾಲಗನಾತ್ನಾಗಿ ಬದುಕಿಕೊಂಡು ಹೋಗ್ಬೇಕು ಎಂದೇ ಅಲ್ಲವೆ- ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಒಂದೇ ಸೂರಿನಡಿಗೆ ಬದುಕಲು ಸಾಧ್ಯವಿಲ್ಲವೆಂದಾಗ, ಆತು ತಮ್ಮಾ, ನಿಮ್ಮ ನಿಮ್ಮ ಪಾಲು ನೀವು ತಗಂಡು ನಿಮ್ಮ ನಿಮ್ಮಷ್ಟಕ್ಕೇ ನೆರುಂಬ್ಳಾಗಿ ಇರಿ, ಎಂದು ಹಿಸೆ ಮಾಡಿ ಕೊಟ್ಟಿದ್ದು? ಅದರಲ್ಲೂ, ಕಟ್ಟಿದ ಮನೆಯನ್ನು ಅವರಿಬ್ಬರಿಗೆ ಬಿಟ್ಟುಕೊಟ್ಟು, ಮುದುಕ-ಮುದುಕಿ ಹಿತ್ತಿಲ ತುದಿಯ ಸೌದೆಕೊಟ್ಟಿಗೆಯಲ್ಲಿ ಬಿಡಾರ ಹೂಡಿದ್ದು?..... ಕಾಗೆ, ನಾಯಿ ಕಾಟ ತಾಳಲಾರದೆ, ಅವಳೇ ಒಂದೊಂದೇ ಬುಟ್ಟಿಯಾಗಿ ದರೆಯ ಮಣ್ಣು ತಂದು ಎದೆಯೆತ್ತರದ ಗೋಡೆ ಮೆತ್ತಿದ್ದು?

ಏನೇ ಆದ್ರೂ ಇವ್ರು ತನ್ನ ತಂದೆತಾಯಿ, ತಮಗಾಗಿ ಇವರು ಇಷ್ಟು ವರ್ಷ ಕಷ್ಟಪಟ್ಟಿದ್ದಾರೆ ಅನ್ನೋ ತನುಕರಣ ಸಾಯ್ಲಿ, ಹಣ್ಣಾದ ಕೂದಲಿಗೆ, ಕಳೆದ ಆಯುಷ್ಯಕ್ಕೆ ಕಿಮ್ಮತ್ತು ಕೊಡುವಷ್ಟೂ ಮನುಷ್ಯತ್ವ ಉಳಿದಿಲ್ಲವೆಂದಾದರೆ ಏನ್ ಮಾಡಿ ಏನು ಬಂದ್ಹಾಂಗಾತು? ಎಲ್ಲಾ ಹಣೆಬರಾ ಅಷ್ಟೆ.
ನಿನ್ನೆ ಆದದ್ದಿಷ್ಟು. ಒಂದು ತೆಂಗಿನ ಮರದ ಕಾಯಿ ಕೊಯ್ಸಿದ ನೆವ ತೆಗೆದು ತನ್ನ ಕಣ್ಣದುರಿಗೇ ದಿನೂಗೆ ದನಬಡಿತ ಬಡಿದುಬಿಟ್ಟ! “ಅಯ್ಯಯ್ಯೋ, ಬ್ಯಾಡ ಬಿಟ್ಬಿಡೋ, ನಿನ್ನ ದಮ್ಮಯ್ಯ ಹೊಡಿ ಬ್ಯಾಡ್ವೋ- ಏ ತಮ್ಮಾ ಬಿಟ್ಟಬಿಡೊ” ಎಂದು ತಾನು ಕೂಗಿಕೊಂಡರೂ ಕೇಳದೆ ಬಡಿಯುವುದೊಂದೇ ಮಾಡ್ತಾ ಇದ್ದಾಗ ತಾಯಿಯಾದವಳು ಸುಮ್ನೆ ನೋಡ್ತಾ ನಿಂತಿರಬೇಕಿತ್ತೆ? ಇಲ್ಲಾ, ಇನ್ನೂ ನಾಲ್ಕು ಹಾಕು ಎಂದು ಬಡಿಗೆ ತಂದು ಕೊಡಬೇಕಿತ್ತೆ? ಅದೇನೂ ಸಾಧ್ಯವಿಲ್ಲದೆ ಹೊಡೆದಾಟ ಬಿಡಿಸಲು ಹೋಗಿದ್ದಷ್ಟು ನೆನಪು. ಬೆನ್ನಿಗೆ ಏನೋ ಭಯಂಕರ ಪೆಟ್ಟು, ಬಂದು ಬಂದು ಮೂರು ಸಲ ಬಡಿದದ್ದೊಂದು ನೆನಪು. ಮುಂದೇನಾಯಿತೆಂದು ಗೊತ್ತೇ ಆಗದೆ “ಅಪ್ಪಯ್ಯೋ” ಎಂದು ಕೂಗುತ್ತ, ಜೀವದಾಸೆ ಬಿಟ್ಟು ಓಡಿ ಮುಂದಿನ ಪೆಟ್ಟಿನಿಂದ ತಪ್ಪಿಸಿ ಕೊಂಡಳು. ಆದರೆ ಅಲ್ಲೇ ನಿಂತಿದ್ದ ಗಂಡನಿಗೆ, ತಪ್ಪಿಸಿಕೊಳ್ಳಲು ಸಾಧ್ಯವಾಗದೇ, ಮಗ್ಗುಲ ಮುರಿ ಹೊಡೆತ ಬಿತ್ತು.
ಆಯಿತು. ಮೈಕೈ ನೋವಿಗೆ ಹತ್ತು ಗುಳಿಗೆ ತಿಂದರೆ ಗುಣವಾದೀತು. ಆದರೆ ಮನಸ್ಸಿಗೆ ಬಿದ್ದ ಪೆಟ್ಟು?

ಹೆತ್ತ ತಂದೆತಾಯಿಗೆ, ವಿನಾಕಾರಣ ಕಬ್ಬಿಣದ ಸರಳಿಂದ ಹೊಡೆದ ಅವನ ಕೈ ಕಾಲು ಮುರಿದು ಕುಂಡ್ರಿಸಬೇಕು ಎಂದು ಆ ಮನಸ್ಸು ಹಲ್ಲು ಕಡಿಯುತ್ತದೆ, ಬೇಡ. ಹಾಗನ್ನಬೇಡ, ಅನ್ನುತ್ತಲೇ ಅವ್ನ ಹೆಂಡ್ತಿ ರಂಡೆಯಾಗ್ಲಿ, ಅವ್ನ ಮಗನಿಗೆ ಹಾವು ಕಚ್ಚಲಿ, ಅವ್ನ ಮನೆ ಮಂಜಾಣಾಗ್ಲಿ... ಎಂದು ಶಪಿಸುತ್ತದೆ. ಇಲ್ಲ ಹಾಗಲ್ಲ, ಅವ್ನ ಪೊಲೀಸ್ರಿಗೆ ಹಿಡಿದುಕೊಟ್ಟು ನಾಲ್ಕು ಸಮಾ ಇಕ್ಕಿಸಬೇಕು ಎಂದು ಬುಸುಗುಟ್ಟುತ್ತಿದೆ..... ಥೂ ಥೂ ಸೊಡ್ಲೆ ಜನ್ಮವೆ! ಏನೇ ಮಾಡಿದ್ರೂ, ಮನೆ ಮಜ್ಜಿಗೆ ತಗೊಂಡ್ಹೋಗಿ ಬೈನೆ ಮರದಡಿಗೆ ಕುಂತು ಕುಡಿದ್ಹಾಂಗೆ ಅಲ್ವೇನೆ, ಮಳ್ಳು?...... ಎಂದು ಮರುಕ್ಷಣದಲ್ಲೇ ಅಳತೊಡಗುತ್ತದೆ...

“ಯಾರ್ರೀ ಸುಂಕದಕಟ್ಟೆ?” ಎಂಬ ಕಂಡಕ್ಟರನ ಕೂಗಿಗೆ ಎಚ್ಚೆತ್ತ ಪದ್ದು ಚಿಕ್ಕಿ, ದಡಬಡ ಕೈ ಚೀಲ ಹೊತ್ತು ಕೆಳಗಿಳಿದು, “ದಿನೂ ನೀನಿಲ್ಲೇ ನಿಂತ್ಕ. ನಾನು ಹಾಲು ಕೊಟ್ಟು ಬರ‍್ತೇನೆ” ಅಂದಾಗ ಹನ್ನೊಂದರ ಬಿಸಿಲು ಚುರುಗುಟ್ಟುತ್ತಿತ್ತು. ಎಂಟು ಮನೆಗಳ ಬಾಗಿಲು ತಟ್ಟಿ, ಲೀಟರು- ಅರ್ಧಲೀಟರು ಹಾಲು ಅಳೆದು, ಅವರಂದಿದ್ದಕ್ಕೆಲ್ಲ ‘ಹಾಹೂಂ’ ಅಂದು, ಮತ್ತೆ ಮಗನನ್ನು ಕೂಡಿಕೊಳ್ಳುವಾಗ ಇನ್ನರ್ಧ ತಾಸು ಸರಿದುಹೋಯಿತು. ಅಲ್ಲಿಂದ ಸೀದಾ ಹೋರಟು, ಎಂದೆಂದೂ ತುಳಿದಿರದ ಪೊಲೀಸಠಾಣೆಯ ಮೆಟ್ಟಿಲು ಹತ್ತುತ್ತಿರುವಾಗಲೇ, “ಥೂ ಥೂ, ಯಾಕ್ ಬಂದೆ ಇಲ್ಲಿ? ನಮ್ಮಂಥವ್ರು, ಬರೋ ಜಾಗವೇನೆ ಇದು?” ಎಂಬ ಹಿಂಜರಿಕೆ ಶುರುವಾಗಿ, ಮಗನ ಹಿಂದೆ ಹಿಂದೇ ಅಡಗುತ್ತ ಮುನ್ನಡೆದಳು.

ಪುಣ್ಯಕ್ಕೆ ಮಗನ ಪರಿಚಯದ ಪೊಲೀಸ್ ಅಲ್ಲೇ ಇದ್ದವನು, ಇವರ ಮುಖ ಕಂಡು ಏನು ಎಂಬಂತೆ ಹುಬ್ಬರಿಸಿದಾಗ, ಅವನ ಹತ್ತಿರ ನಿಂತು, ತಾಯಿ ಮಗ ಹೆದರುತ್ತಲೇ, ನಿನ್ನೆ ನಡೆದ ಪ್ರಸಂಗವನ್ನೆಲ್ಲ ವರದಿ ಒಪ್ಪಿಸಿ, ದೊಡ್ಡವನ ವಿರುದ್ಧ ದೂರು ಬರೆಸಿ, “ನೀವೇನೂ ಚಿಂತೆ ಮಾಡ್ಬೇಡಿ ಅಮ್ಮ, ನಾವೆಲ್ಲ ಬಂದೋಬಸ್ತ್ ಮಾಡ್ತೇವೆ” ಎಂಬ ಸಾಹೇಬರ ಭರವಸೆ ಯೊಂದಿಗೆ ಬಸ್‌ಸ್ಟಾಪಿಗೆ ಬಂದು ನಿಂತರೆ, ಬಸ್ಸಿನ ಸುಳಿವಿಲ್ಲ. ಹಾಗೇ ವಾರೆನೋಟದಿಂದ ಮಗನಮುಖ ನೋಡಿದರೆ, ಅಲ್ಲಿ ರಣರಣ ಬಿಸಿಲೊಂದರ ಹೊರತಾಗಿ, ಧಾರೆಗಟ್ಟಿದ ಬೆವರಿನ ಹೊರತಾಗಿ ಇನ್ನೇನ್ನೂ ಕಾಣುತ್ತಿಲ್ಲ. ನಿಜಕ್ಕೂ ಅವನ ಮನಸ್ಸಿನಲ್ಲೇನಿದೆ ಎಂಬುದೂ ಗೊತ್ತಾಗುತ್ತಿಲ್ಲ.
ಈ ಮಾಣಿ ಖರೇ ಅಂದ್ರೂ ಅಣ್ಣನ ಕಾಟದಿಂದಾಗಿ ಸೋತು ಹೋಗಿದ್ದಾನೆ. ಅಂವ, ಆ ಠೊಣಪ ಉರಿಯೋದು, ಉರಿಯೋದು ಅಂದ್ರೆ ಅದೆಷ್ಟು ಪರಿ? ಯಾವತ್ತು ಆ ಹೆಂಡ್ತಿ ಅನ್ನೋ ವೇಷ ಒಳಹೊಕ್ಕಿತೋ, ಆವತ್ತೇ ಶುರು, ತಾನು, ತನ್ನ ಹೆಂಡ್ತಿ-ನಂತ್ರ ಹುಟ್ಟಿದ ಮಗ ಮಾತ್ರ ದೇವಲೋಕ, ಉಳಿದ ವ್ರೆಲ್ಲಾ ಕಾಲಗಡಿಗಿನ ಕಸ. ಎಲ್ಲೆಲ್ಲಿಂದಲೋ ಬಂದು ಒಂದು ಗೂಡಿನೊಳ ಹೊಕ್ಕು, ಅಲ್ಲಿದ್ದಿದ್ದನ್ನೆಲ್ಲ ತನಗೆ, ತನಗೆ ಎಂದು ಕಚ್ಚಾಡಿ ಹಿಸಿದುಕೊಳ್ಳುವ ಸೊಸೆಯಂದಿರಿಗಿಂತ ಹೆಚ್ಚಾಗಿ, ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ಹಾಸಿಗೆ ಯಲ್ಲಿ ಮಲಗಿ ಎದ್ದ ಗಂಡು ಮಕ್ಕಳು ಬೆಳೆಯುತ್ತಾ ಬಂದಂತೆ ಪರಸ್ಪರ ವೈರಿಗಳಾಗಿಬಿಡುತ್ತಾರೆಂದರೆ- ಹೆತ್ತವರೂ ಕೂಡ ಅವರಿಗೆ ಶತ್ರುಗಳಾಗಿ ಕಾಣುತ್ತಾರೆಂದರೆ-ಇದ್ಯಾವ ವಿಚಿತ್ರ ವಪ್ಪಾ ಶಿವನೆ!

ಕುಕ್ಕರುಗಾಲಲ್ಲಿ ತುದೀ ಬಾಳೆಯೆದುರು ಕೂತು ಮಾತಿಲ್ಲದೇ ಹಾಕಿದ್ದು ತಿಂದು ಎದ್ದು ಹೋಗುವ ದಿನೂ ಎಲ್ಲಿ? ಅದು ವಾರೆ, ಇದು ಡೊಂಕು, ದೋಸೆ ಮೆತ್ತ, ಚಾ ತೆಳ್ಳ, ಎಂದೆಲ್ಲ ಗೌಜಿ ಮಾಡಿ ಹೆಂಗಸರ ಕಣ್ಣಲ್ಲಿ ನೀರಿಳಿಸುವ ಠೊಣಪ ಈ ಸದು ಎಲ್ಲಿ?..... ಹಾಗೆ ನೋಡಿದರೆ ಮೂರೂ ಮಕ್ಕಳನ್ನು ಒಂದೇ ರೀತಿ ಹೊತ್ತು ಹೆತ್ತು ಸಾಕಿದ್ದು, ಒಂದೇ ರೀತಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ತೊಟದ ಕಳೆ ಕಿತ್ತಿದ್ದು, ಒಂದೇ ರೀತಿ ಅನ್ನವಿದ್ದಾಗ ಅನ್ನ-ಇಲ್ಲದಿದ್ದಾಗ ಗಂಜಿ ತುತ್ತು ಮಾಡಿ ತಿನ್ನಿಸಿದ್ದು. ಒಂದೇ ರೀತಿ ಹರಿದ ಅಂದಿ, ಚಡ್ಡಿಗೆ ತೇಪೆ ಹಚ್ಚಿ ತೊಡಿಸಿದ್ದು. ಒಂದೊಂದು ಬಾಳೆಹಣ್ಣಿಗಾಗಿ ಆಸೆಗಣ್ಣು ಹೊತ್ತು ನೆರೆಮನೆಯೆದುರು ಮಾತಿಲ್ಲದೆ ನಿಂತ ಮೂರು ಮಕ್ಕಳನ್ನು ಕರೆದು, ಮೂವರಿಗೂ ಬೆನ್ನುಮುರಿ ಬಡಿದದ್ದು...... ಇಲ್ಲ, ಯಾವುದರಲ್ಲೂ ಎಳ್ಳುಕಾಳಿನಷ್ಟು ಫರಕು ಇಲ್ಲವೇ ಇಲ್ಲ. ಆದರೂ ಅಕ್ಕಾದ ಮಗ-ಆಗದ ಮಗ ಅಂದರೆ.....
ಉರಿಬಿಸಿಲ ಸೀಳುತ್ತ ಬಂದ ಬಸ್ಸಿನ ಶಬ್ದಕ್ಕೆ ಈ ಲೋಕಕ್ಕಿ ಳಿದ ಪದ್ದು ಚಿಕ್ಕಿ, ಪಕ್ಕಕ್ಕೆ ತಿರುಗಿದರೆ ಮಗ ಇಲ್ಲ. ಅವನಾಗಲೇ ಬಸ್ಸಿಗೆ ಕೈ ಮಾಡಿ ನಿಂತಿದ್ದಾನೆ. ನೋಡುತ್ತಿದ್ದಂತೆಯೇ ಬಸ್ಸು ಬಂದು ನಿಂತು, ಇವರಿಬ್ಬರೂ ರಶ್ಶಿನಲ್ಲಿ ಒಳನುಗ್ಗಿ, ಅಂತೂ ಇಂತೂ ಮನೆಯ ಹತ್ತಿರದ ತಂಗುಮನೆಯೆದುರು ಇಳಿದಾಗ ಸೂರ‍್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. “ತಮ್ಮಾ, ಘಂಟೆ ಎಷ್ಟಾತೋ?” ಅಂದರೆ “ಒಂದು”ಅಂದ ತಣ್ಣಗೆ. ಕೇಳಿದ ಚಿಕ್ಕಿ ಮತ್ತಷ್ಟು ತಣ್ಣಗಾಗಿಬಿಟ್ಟಳು. ಇನ್ನು ಮನೆಗೆ ಹೋಗಿ ಒಲೆ ಹೊತ್ತಿಸಿ, ಅನ್ನಕ್ಕಿಟ್ಟು- ಮೇಲಿಂದ ಸುರಿದುಕೊಳ್ಳಲು ಏನೋ ಒಂದು ಸಾರು ಮಾಡಿ-ಉಣ್ಣುವ ಹೊತ್ತಿಗೆ ಹೊತ್ತು ಸೂರಿಳಿದಿರುತ್ತದೆ. ಸಾಯ್ಲಿ, ಇವತ್ತು ಒಂದಷ್ಟು ಅವಲಕ್ಕಿ ನೆನೆಸಿಕೊಂಡು ತಿಂದ್ರಾಯ್ತು ಅಂದುಕೊಳ್ಳುವಾಗ, ಖಾಲಿಯಾದ ಅವಲಕ್ಕಿ ಡಬ್ಬದ ನೆನಪಾಗಿ ಮತ್ತಷ್ಟು ಸಿಟ್ಟು ಬಂತು. ವೈಶಾಖದ ರಣ ಬಿಸಿಲು, ಕರಕರ ಕೆರೆಯುವ ಖಾಲಿಹೊಟ್ಟೆ, ಇನ್ನೊಂದು ಹೆಜ್ಜೆಯನ್ನು ಎತ್ತಿಡಲಾರನೆಂಬಷ್ಟು ಸುಸ್ತು-ಮೇಲಿಂದ ಮನೆಗೆ ಹೋಗಿ ಅನ್ನ ಬೇಯಿಸಿ ತಿನ್ನಬೇಕಾಗಿರುವ ಸಂದರ್ಭ ....... ಅವಳ ಮೈ ಮುಖವೆಲ್ಲ ಬೆವರಿ ಬೆವರಿ ಒಂದೇ ಧಾರೆಯಾಗಿ, ಜೊತೆಗೆ ಕಣ್ಣೀರೂ ಸೇರಿ ಹರಿದು, ಹರಿದು ನೆಲ ಮುಟ್ಟಿತು.
ಹಾಗೆ ನೆಲಕ್ಕಿಳಿದ ಕಸುವನ್ನೆಲ್ಲ ಒಟ್ಟು ಗೂಡಿಸಿ, ಹೇಗೊ ಮೇಲೆತ್ತಿ, ಒಲೆಹೊತ್ತಿಸಿ, ಅನ್ನ ಬೇಯಿಸಿ, ಮೇಲಿಂದ ಒಂದು ಟೊಮಟೊ ಸಾರು ಕುದಿಸಿ, ಬೆಳಗಿನ ಎಂಜಲು ಬಾಳೆಯ ಪಕ್ಕದಲ್ಲೇ ಈಗ ಊಟದ ಬಾಳೆಯನ್ನು ಹಾಕಿಕೊಂಡು ಮೂವರೂ ಉಂಡು ಮೇಲೇಳುವಾಗ ಮೂರು ಘಂಟೆ.

ಇಲ್ಲ, ಇನ್ನು ಏನೇನೂ ಸಾಧ್ಯವಿಲ್ಲ ಅಂದುಕೊಳ್ಳುತ್ತಲೇ ಬಾಳೆ ಒಗೆದು, ಎಂಜಲು ಸಾರಿಸಿ, ಪಾತ್ರೆಯನ್ನೆಲ್ಲ ಬಚ್ಚಲಲ್ಲಿ ಒಟ್ಟಿ, ಒಲೆಯ ಬಿಸಿಯಿಂದ ಸರಿದು, ಬರಿ ನೆಲದಲ್ಲೇ ಬಿದ್ದುಕೊಂಡ ಚಿಕ್ಕಿಗೆ, ಈ ಬದಿಯ ಖಬರಿಲ್ಲದ ನಿದ್ದೆ. ಈ ನೆಲದ ಜಗಳ ರಂಪಗಳೆಲ್ಲವನ್ನೂ ಸುಳ್ಳಾಗಿಸಿಬಿಟ್ಟ ನಿದ್ದೆ. ಪದ್ದು ಚಿಕ್ಕಿ ಅಂದರೆ ಕೇವಲ ಉಸಿರಾಟ ಮಾತ್ರವಾಗಿಬಿಟ್ಟ ನಿದ್ದೆ. ಎಷ್ಟು ಹೊತ್ತಾಯಿತೋ....
ಅಂಥಾ ಘನ ಘೋರ ನಿದ್ರೆಯಲ್ಲೂ, ಎಲ್ಲೋ ಯಾರೋ ಅಳುವ ಸದ್ದು. ಯಾರೋ ಯಾರಿಗೋ ಬೈದ-ಬಡಿದ ಸದ್ದು. ಯಾವುದೋ ಗಾಡಿಯ “ಭರ್ರೋ” ಆವಾಜು. ಫಕ್ಕನೆ ಕಣ್ಣುಬಿಟ್ಟ ಚಿಕ್ಕಿ. ಬಡಕ್ಕನೆ ಮೇಲೆದ್ದು ಅರೆನಿದ್ರೆಯಲ್ಲೇ ಬಾಗಿಲಲ್ಲಿಣುಕಿದಳು. ಹೌದು, ಸದಾನಂದ! ಅಂಗಳದೆದುರು ಪೋಲೀಸ್ ಜೀಪು ನಿಂತಿದೆ, ಇಬ್ಬರು ಪೇದೆಗಳು ಅವನ ಕೈ ಹಿಡಿದೆಳೆದು ಜೀಪಿಗೆ ತುಂಬುತ್ತಿದ್ದಾರೆ, ಅವನ ಹೆಂಡತಿ, ಮಗ ಇಬ್ಬರೂ, “ಅಯ್ಯಯ್ಯೋ- ಅಯ್ಯಯ್ಯೋ” ಕೂಗುತ್ತಿ ದ್ದಾರೆ,...... ಆಹ್! ಹೆಂಗಾತೋ ಭೋಸುಡಿ? ಹೆಂಗಾತೂ ಅಂದೆ, ಹೆತ್ತ ಅಪ್ಪ ಅಬ್ಬೆಗೇ ಬಡಿದವ್ರು ಯಾವತ್ತೂ ಉದ್ಧಾರಾಗೋದಿಲ್ಲ ಅಂದೆ, ನೀನೇನು ಮಹಾ ಮೇಲಿಂದ ಇಳಿದುಬಂದವನೇನೋ ಮನಸಿಗೆ ಕಂಡ್ಹಾಗೆ ಮೆರಿಲಿಕ್ಕೆ? ಕನಿಷ್ಠ ಹಿರಿಯ ಕಿರಿಯ ಅನ್ನೋದಾದ್ರೂ ಬೇಡವೇನೋ ಕುನ್ನಿ?..... ಹೋಗು, ಹೋಗು ಅವ್ರ ಕೈಲಿ ಸಮಾಲತ್ತೆ ತಿನ್ನು. ಕೊಬ್ಬೆಲ್ಲಾ ಕರಗಲಿ.... ಹಂ, ಮಾಡಿದಂವ ಉಣತಾ ಮನೆಯಂಥ ಕಡುಬ ಸರೀಯಾತು ತಗ.... ಅವಳು ಹಿಂತಿರುಗಿದರೂ, ಯಾಕೊ ಮನಸ್ಸು ತಿರುಗಲೊಲ್ಲದು. ನಾಲಿಗೆ ಎಷ್ಟೇ ಬೈದುಕೊಂಡರೂ, ಹೊಟ್ಟೆಯ ಒಳಾ ಒಳಗಿನ ಯಾವುದೋ ದನಿ, ‘ಅಯ್ಯೋ-ಅಯ್ಯೋ’ ಮಾಡುವುದನ್ನು ಬಿಡಲೊಲ್ಲದು.

ಅದನ್ನೆಲ್ಲ ಅಲ್ಲಲ್ಲಿಗೇ ಬಿಟ್ಟು ಚಿಕ್ಕಿ, ತನ್ನ ಹ್ವಾರ‍್ಯಕ್ಕೆ ಹೊರಡು ವಾಗ, ಪಕ್ಕದಲ್ಲೇ ನಿಂತು ಆ ಮನೆಯತ್ತಲೇ ನೋಡುತ್ತಿದ್ದ ದಿನೂ ಮತ್ತು ಅವನಪ್ಪನನ್ನು ಕಂಡು ಏನೋ ಕಸಿವಿಸಿ. ಏನೋ ತಳಮಳ. ಅದರಲ್ಲೂ ಅಪ್ಪನ ಕಣ್ಣಲ್ಲಿ, ‘ಆತ? ನಿಂಗೊಳ್ಳೇ ಸಂತೃಪ್ತಿ ಆತ? ಹೋಗು, ಹೊಟ್ಟೆ ತುಂಬಾ ಹಾಲು ಕುಡಿ’ ಅನ್ನುವ ಭಾವ ಜಿನುಗುತ್ತಿರುವುದನ್ನು ಕಂಡು ಅಲ್ಲಿ ನಿಲ್ಲಲಾಗದೇ ಒಳ ನಡೆದುಬಿಟ್ಟಳು.
ದಿನದಂತೆ ಸಂಜೆಯಾಯಿತು. ದನಕರುಗಳಿಗೆ ಹುಲ್ಲು, ಅಕ್ಕಚ್ಚು ಹಾಕಿ, ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕುವು ದರೊಂದಿಗೆ -ಒಂದು ಅನ್ನ ಬೇಯಿಸಿ ಪಳದ್ಯ ಕುದಿಸುವದ ರೊಂದಿಗೆ, ಮಾತಿಲ್ಲದೆ ಮೂವರೂ ತಲೆಬಗ್ಗಿಸಿ ಉಣ್ಣುವದ ರೊಂದಿಗೆ ರಾತ್ರಿಯಾಯಿತು. ಎಂಜಲು ಮುಸುರೆ ಮಾಡಿ ಮುಗಿಸಿ, ಹಾಸಿಗೆ ಬಿಚ್ಚುವಾಗ ಅವಳು, ಯಾಕೆಂದು ಗೊತ್ತಿಲ್ಲದೆ ಅಂಗಳಕ್ಕೆ ಹೋದರೆ ಯಾರದೋ ಬೈಕಿನಲ್ಲಿ ಸದೂನ ಹೆಂಡತಿ ಮಗನನ್ನು ಮುಂದಿಟ್ಟುಕೊಂಡು ಹೊರಟಿದ್ದು ಕಂಡು, ಈ ಅಪರಾತ್ರಿಯಲ್ಲಿ ಎಲ್ಲಿಗಪ್ಪಾ ಎಂಬ ಕುತೂಹಲದೊಂದಿಗೆ, ಅವರ‍್ಯಾರೂ ಇನ್ನೂ ಉಂಡಿರಲಿಕ್ಕಿಲ್ಲವೆಂಬ ವಾಸ್ತವ ಫಕ್ಕನೆ ನೆನಪಾಗಿ ಎದೆ ಝಲ್ಲೆಂದಿತು........ ಅರೆ, ನಂದೇನು ತಪ್ಪು? ಅಂವ ಮಾಡಿದ್ದು ಅಂಥಾ ಕೆಲ್ಸ. ಮಗ ಆಗ್ಲಿ ವೊಮ್ಮಗ ಆಗ್ಲಿ ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗೋದೆ ಸೈ. ನೋಡ್ಲಿ, ಅಂವಂಗೂ ಹೊಡ್ತದ ರುಚಿ ಗೊತ್ತಾಗ್ಲಿ ಹಂ, ಎಂದು ಮತ್ತೊಮ್ಮೆ ಅವಡುಗಚ್ಚಿ, ಆ ಸೆಕೆಯಲ್ಲೂ ಚಾದರ ಎಳೆದು ಮುಖ ಮುಚ್ಚಿಕೊಂಡಳು.

ಆದರೆ ಮುಸುಕಿನೊಳಗಿನ ಎವೆಗಳು ಕ್ಷಣ ಮಾತ್ರಕ್ಕೂ ಮುಚ್ಚದೆ, ಆಚೀಚೆ ಹೊರಳುತ್ತ, ಒಮ್ಮೆ ಧಡಕ್ಕನೆ ಎದ್ದು ಕೂತು ಮತ್ತೆ ಮಲಗಿ ಹುಶ್‌ಗರೆಯುತ್ತ, ಶಿವ್ ಶಿವಾ! ಇದೇನಾಗಿ ಹೋತು? ಏನ್ಮಾಡಿ ಬಿಟ್ಟೆ? ತನ್ನಿಂದ ತಪ್ಪಾಗಿಹೋಯಿತೋ? ಅಥವಾ ಅವನ ತಪ್ಪಿಗೆ ಸರೀ ಶಿಕ್ಷೆಯಾಯಿತೋ?....... ಪೋಲೀಸರೆಂದರೆ ವೊದಲೇ ಯಮನ ಮನುಷ್ಯರು. ಸುಟ್ಟ ಪೋರನಿಗೆ ಕುಡ್ತೆ ನೀರಾದರೂ ಕೊಟ್ಟರೋ ಇಲ್ಲವೋ?........ ಅದೆಷ್ಟು ಬಡಿದರೋ..... ಹೊಡೆದರೊ.... ಕೈಕಾಲು ಮುರಿದು ಹಾಕಿದರೋ...... ಒಂದು, ಎರಡಕ್ಕೂ ಬಿಟ್ಟರೋ ಇಲ್ಲವೋ?...... ಒಳಬಾಯಲ್ಲೇ ಹಲುಬಿ ಹಲುಬಿ, ಪಕ್ಕದ ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ಗಂಡನ ಮೌನದ ಬಗ್ಗೆ ಅಲ್ಲೇ ಸಿಟ್ಟೇರಿ, ಗೊರಕೆ ಹೊಡೆಯುತ್ತಿರುವ ದಿನೂ ಬಗ್ಗೆ ಮತ್ತಷ್ಟು ಕೆಂಡಕಾರಿ, ಯಾವಾಗ ಕಣ್ಣು ಮುಚ್ಚಿತೋ......ಬಿಟ್ಟಾಗ ಬಿಸಿಲ ಕುಡಿ ಕಣ್ಣಿರಿಯುತ್ತಿತ್ತು. ಗಡ ಬಡಿಸಿ ಎದ್ದು ವಾಚು ನೋಡಿದರೆ ಆರೂವರೆ!

ದೇವ್ರೆ ದೇವ್ರೆ, ಅನ್ನುತ್ತ, ಕಸಬರಿಗೆ ಹಿಡಿದ ಚಿಕ್ಕಿ, ಬಾಗಿಲು ಸಾರಿಸಿ, ಬಗ್ಗಿ ರಂಗೋಲಿ ಇಡುವಾಗ, ಎಡಬದಿಗೆ ನಿಂತ ಸರಳೆ ಅಂದರೆ ಸದೂನ ಹೆಂಡತಿಯನ್ನು ಕಂಡು ಬೆಚ್ಚಿ ನೆಟ್ಟಗಾದಳು. ಸರಳೆಯ ಮುಖವೆಂದರೆ ಕೆಂಪು ದಾಸವಾಳದ ಹೂವಾಗಿಬಿಟ್ಟದೆ. ಕಣ್ಣು, ಮೂಗಿಂದ ಗಂಗೆ ಯಮುನೆಯರು ಹರಿಯುತ್ತಿದ್ದಾರೆ. ಏನೋ ಹೇಳಲು ತೆರೆದ ತುಟಿ ಥರಗುಟ್ಟುತ್ತಿದೆ.
ಥರಗುಟ್ಟಲಿ ನನಗೇನಂತೆ, ಕಳ್ಳ ಮೂಳಿನ್ನ ತಂದು, ಈ ಅತ್ತೆ ಅಂದ್ರೆ ಶುದ್ಧ ಕತ್ತೆ ಅಂತ ತಿಳ್ದಿದ್ದಾಳೆ, ಬೇಕಾದ್ದು ಹಾಳ್ ಬಡ ಕೊಂಡು ಹೋಗ್ಲಿ..... ಸರ್ರನೆ ತಿರುಗಿ ಒಳಹೊರಟರೆ, ಯಕೋ ಕಾಲು ಮೇಲೇಳಲೇ ಇಲ್ಲ. ಸೊಸೆಯ ಕಣ್ಣಿಂದ ಕಣ್ಣು ಕೀಳಲು ಸಾಧ್ಯವಾಗಲೂ ಇಲ್ಲ. ಒಂದು ಕ್ಷಣ-ಒಂದೇ ಒಂದು ಕ್ಷಣದ ಪರಸ್ಪರ ಕಣ್ಣ ತಿವಿತದಲ್ಲಿ, ಅತ್ತೆ ಸೊಸೆಯರ ದೃಷ್ಟಿ ಯುದ್ಧದಲ್ಲಿ, ಯುಗಾಂತರಗಳ ಹೆಣ್ಣುಗಳ ಪಾಡು ಹಾದು ಹೋಯಿತೋ- ಮನುಷ್ಯನೊಳಗಿನ ಸ್ವರ್ಗ ಸರಕಗಳು ಪರಸ್ಪರ qs ಕೊಟ್ಟು ಉರುಳಿಬಿದ್ದವೋ...... ಯಾರಿಗೆ ಗೊತ್ತು? ಸೊಸೆ ಬಾಯಿಗೆ ಸೆರಗು ಒತ್ತಿ ಹಿಡಿದು, ಥಟ್ಟನೆ ಹಿಂತಿರುಗಿ ನಡೆದುಬಿಟ್ಟಾಗ, ಚಿಕ್ಕಿ ಕಂಗಾಲು.

‘ಕತೆ ಏನಾಗಿದೆ ಹಾಗಿದ್ರೆ? ಅವಳು ಯಾಕೆ ಇಲ್ಲಿ ಬಂದು, ಚಣದ ಮಟ್ಟಿಗೆ ಕಂಬದ್ಹಾಂಗೆ ನಿಂತುಕೊಂಡಿದ್ದು? ಯಾಕೆ ಏನೂ ಹೇಳದೆ ಹಾಗೆ ನಡೆದುಬಿಟ್ಟಿದ್ದು?..... ವೊದಲೇ ಅತ್ತೆ ಸೊಸೆ ಸಂಬಂಧ, ಈಗಂತೂ ಬ್ರಹ್ಮಾಂಡದಂಥ ಸಿಟ್ಟೂ ತುಂಬಿ ಟ್ಟುಕೊಂಡು ತನ್ನ ಮೇಲೆ ಕಾರಲಿಕ್ಕಾಗಿಯೇ ಕಾಯುತ್ತಿರ ಬಹುದು..... ಅವನನ್ನು ಬಿಟ್ಟ ಲಕ್ಷಣವಂತೂ ಇಲ್ಲ. ಅದೆಷ್ಟು ಹಿಂಸೆಕೊಟ್ಟರೋ, ಯಾವ್ಯಾವ ಪರಿ ನೋಯಿಸಿದರೋ, ಕೋದಂಡ ಹಾಕಿ ನೇತಾಡಿಸಿದರೋ...... ಶಿವನೇ! ಎಂಥಾ ಸಗಣಿ ತನ್ನೋ ಕೆಲ್ಸ ಮಾಡಿಬಿಟ್ಟೆ. ಈಗೇನ್ ಮಾಡ್ಲಪ್ಪಾ ದೇವ್ರೆ?.....’ ಅಲವತ್ತುಕೊಂಡು ಚಿಕ್ಕಿ ಗಡಿಬಿಡಿಯಿಂದ ಕೈಕಾಲು ಓಡಿಸತೊಡಗಿದಳು.
ಗಂಡಸರಿಬ್ಬರಿಗೂ ಏನೂ ಹೇಳದೆ, ದಿನದಂತೆ ಹಾಲಿನ ಕ್ಯಾನುಗಳನ್ನು ಚೀಲಕ್ಕೆ ತುಂಬಿಕೊಂಡು ಬಸ್ಸೇರಿದವಳು, ಪೇಟೆಯಲ್ಲಿಳಿದು ಎಲ್ಲಾ ಮನೆಗೂ ಹಾಲು ಅಳೆದು, ಸೀದಾ ನಿನ್ನೆ ಹೋದ ಪೋಲೀಸ್‌ಠಾಣೆಯ ಅಂಗಳ ತುಳಿಯುತ್ತಿದ್ದಾಗ, ಹೆಜ್ಜೆ ಹಿಂದೆ ಹಿಂದೇ ಬೀಳತ್ತಿದೆ. ಆದರೂ ಹೇಗೋ ಮೆಟ್ಟಿಲೇ ರಿದಾಗ, ನಿನ್ನೆ ಕಂಡ ಸಾಹೇಬರೇ, “ಬನ್ನಿ ಅಮ್ಮಾ” ಅಂದರು. ಅವರ ಖುರ್ಚಿಯ ಹತ್ತಿರ ಮಾತಿಲ್ಲದೆ ಒಂದು ಕ್ಷಣ ನಿಂತಂತೆ, ಅವರೇ, “ಸರೀ ಬುದ್ಧಿ ಕಲ್ಸಿದೇವೆ, ಇನ್ಯಾವತ್ತೂ ಆತ ನಿಮ್ಮ ಸುದ್ದಿಗೆ ಬರೋದಿಲ್ಲ ಬಿಡಿ” ಅಂದಾಗ ಮೆಲ್ಲಗೆ “ನಾನವನ ನೋಡಬಹುದಾ?” ಅಂದು, ತಟ್ಟನೆ ನಾಲಿಗೆ ಕಚ್ಚಿಕೊಂಡಳು.
“ಓಯಸ್, ಏ ಗುರಪಣ್ಣ ಇವ್ರನ್ನು ಒಳಗೆ ಕರ‍್ಕೊಂಡ್ಹೋಗು” ಅನ್ನುತ್ತಿದ್ದಂತೆ ಬಂದ ಗುರುತಿನ ಪೋಲೀಸು, ಒಂಥರಾ ಮುಖ ಮಾಡಿ, “ಬನ್ನಿ” ಅಂದ.

ಹೋಗಿ ನೋಡಿದರೆ, ಕೊಟ್ಟಿಗೆಯಂಥ ಕೋಣೆಯಲ್ಲಿ ಅವನೇ-ತನ್ನ ಚೊಚ್ಚಿಲು ಕಂದನೇ - ‘ಹತ್ತು ಸಾವಿರವಾಗು, ಕಿತ್ತಳೆ ವನವಾಗು, ಬಪ್ಪವರಿಗೆ ತವರು ಮನೆಯಾಗು’ ಎಂದು ದಿನಂಪ್ರತಿ ಹರಸಿ ಬೆಳೆಸಿದವಳಿಗೆ ಕೈಯೆತ್ತಿ ಬಡಿದ ಆ ಬಹದ್ದೂರನೇ, ದೊಣಕಲಿಗೆ ಕಟ್ಟಿದ ಎಮ್ಮೆಯಂತೆ ಕುಳಿತು ಕೊಂಡಿದ್ದಾನೆ..... ಹೆಜ್ಜೆ ಸದ್ದಿಗೆ ತಿರುಗಿದವನು, “ಬಂದ್ಯ? ಇಲ್ಲಿಗೂ ಬಂದುಬಿಟ್ಯ ಚಂದ ನೋಡ್ಲಿಕ್ಕೆ? ನೋಡು, ನೋಡಿ ಹೊಟ್ಟೆ ತುಂಬಾ ಹಾಲು ಹುಯ್ಕೋ ಹೋಗು. ಆದ್ರೆ ನಾ ನಿನ್ನ ಸುಮ್ನೆ ಬಿಡೋದಿಲ್ಲ. ವೊದ್ಲು ನಾ ಹೊರಬಂದುಕೊಳ್ತೇನೆ. ನಂತ್ರ ಏನ್ಮಾಡ್ತೇನೆ ಅಂತ ನಂಗೇ ಗೊತ್ತಿಲ್ಲ. ನೆನಪಿಡ್ಕ.......” ಕೂಗಿ ಕಣ್ಣು ಕೆಕ್ಕರಿಸಿದ ಅಬ್ಬರಕ್ಕೆ ಅವಳು ತಣ್ಣಗಾದಳು.
.........ಅವನ ಬಸಿರಿನಲ್ಲಿ, ಮಿಂದ ಒಂದೂವರೆ ತಿಂಗಳಿಗೇ ಅದೇನೋ ಆನಂದ, ಸಂಭ್ರಮ, ವಾಂತಿ ತಲೆ ತಿರುಗುವಿಕೆಯ ಸಂಕಟದಲ್ಲೂ ಅದೇನೊ ಸಂತೋಷ. ಆಮೇಲೆ, ವೊದಲ ಬಾರಿಗೆ ಹೊಟ್ಟೆಯೊಳಗೊಂದು ಜೀವ ಮಿಸುಕಾಡಿ, ಒದ್ದಾಗ ಅದೇನೋ ವಿಚಿತ್ರ ಖುಶಿ. ಓಡಿಯಾಡೋ ಹುಡುಗನ ಹಾವಳಿಗೆ ಬೇಸತ್ತು ಇವಳು ಒಂದು ಹೊಡೆದರೆ, ಅವನು ಹತ್ತು ಹೊಡೆಯುವವನು, ಇವಳು ಒಂದು ಬೈದರೆ ಅವನು ನೂರು ಬೈಯುವವನು. ಆಗಲೂ ಒಂಥರಾ ಆನಂದವೇ. ಶಾಲೆ ಯಲ್ಲೂ ಅಷ್ಟೇ. ಕ್ಲಾಸಿನ ಹುಡುಗರೊಂದಿಗೆ ಗುದ್ದಾಡಿ ವೊಣಕಾಲೆಲ್ಲ ಗಾಯ ಮಾಡಿಕೊಂಡು ಬಂದಾಗ, ಬೈಯುತ್ತಲೇ ಔಷಧ ಹಚ್ಚಿದರೂ ಒಳಗೊಳಗೆ ಮಗನ ಸಾಹಸಕ್ಕಾಗಿ ಹೆಮ್ಮೆಯಿರುತ್ತಿತ್ತು. ಕಲ್ಲರೆಯ ಮೇಲೆ ಬಿಟ್ಟರೂ ಮಗ ಜೈಸಿಕೊಂಡು ಹೋದಾನು ಎಂಬ ಗರ್ವವಿತ್ತು. ಆದರೀಗ?......
ತಣ್ಣಗೆ ಮಗನೆದುರಿಂದ ಹೊರಡುವಾಗ, ಕರುಳ ಬುಡದಿಂದ ಸಣ್ಣದಾಗಿ ಏನೋ ಒಂದು ಮೇಲೆದ್ದು, ಇಡೀ ಜೀವವನ್ನೇ ಕಟ್ಟಿ ಎಳೆಯುತ್ತಿರುವ ಭಾಸ, ಇಲ್ಲ ನಾನಿಲ್ಲಿಂದ ಹೋಗೋದಿಲ್ಲ, ಹೋಗಲಾರೆ ಎಂದು ಯಾವುದೋ ದನಿ ಪಿಸುಗುಟ್ಟಿದ ಭಾಸ.
ಮತ್ತೆ ಸಾಹೇಬರ ಮುಂದೆ ಬಂದು ನಿಂತಾಗ, ಈ ಮುದುಕೀದು ಮತ್ತೇನು ರಿಪಿರಿಪಿಯಪ್ಪಾ! ಎಂದು ಅವರಿಗೆ ಸಣ್ಣದಾಗಿ ಸಿಟ್ಟೇರಿ, ಕಣ್ಣೆತ್ತಿ ನೋಡಿದಾಗ ಅವಳು ಹೆದರುತ್ತಲೇ, “ಸಾಹೇಬ್ರೆ” ಅಂದಳು.
“ಏನಮ್ಮಾ? ಮಗನ ನೋಡ್ಕೊಂಡು ಬಂದ್ಯಲ್ಲ, ಮತ್ತೇನು?” ಅಂದರು ಅಸಹನೆಯಿಂದ.
“ಉಹುಂ, ಮತ್ತೇನಿಲ್ಲ. ನಮ್ಮ ಸದೂನ ಇಲ್ಲಿಂದ ಬಿಟ್ಟುಬಿಡ್ಲಿಕ್ಕಾದೀತ ಅಂತ.....”
“ಛೆಛೆ, ಇದೊಳ್ಳೇ ಕತೆಯಾಯ್ತಲ್ಲ. ನಿನ್ನೆಯಷ್ಟೇ ಬಂದು, ಮಗ ಹಾಂಗ್ ಹೊಡೆದ-ಹೀಂಗ್ ಬಡಿದ ಅಂತೆಲ್ಲ ಕಂಪ್ಲೇಟು ಬರೆಸಿದವ್ರೂ ನೀವೇ, ಈಗ ಸುಮ್ಮನೆ ಬಿಟ್ಬಿಡಿ ಅನ್ನೋರೂ ನೀವೆ. ನಿಮಗೇನು ತಲೆ ಸರಿ ಇದ್ಯೋ ಇಲ್ವೋ.....? ಇಲ್ಲಿ ನಾವೇನು ಬಿಟ್ಟಿ ಕುಂತಿದೇವೇನು, ನೀವು ಕುಣಿಲಿದ್ಹಾಂಗೆ ಕುಣೀಲಿಕ್ಕೆ?..... ಅದೆಲ್ಲ ಆಗೋದಿಲ್ಲ. ನೀವು ಬರಕೊಟ್ಟ ದೂರಿನ ಮೇಲಿಂದ ಲಾಕಪ್ಪಿಗೆ ಹಾಕಿದೇವೆ. ಈಗ ಕಾಸು ಕೋರ್ಟಿಗೆ ಹೋಗಿದೆ. ಬೇಕಿದ್ರೆ ಅಲ್ಲೇ ಜಾಮೀನು ಕಟ್ಟಿ ಬಿಡಿಸ್ಕೊಳ್ಳಿ. ಈಗ ನಾವೇನೂ ಮಾಡೋಕಾಗೋದಿಲ್ಲ.”
“ಸ್ವಾಮಿ, ದಯವಿಟ್ಟು ಇವ್ನ ಬಿಟ್ಟುಬಿಡ್ರಿ, ನನ್ನ ಹೊಟ್ಯಲ್ಲಿ ಹುಟ್ಟಿದ ಮಗ ಹೀಂಗೆ ಪಂಜರದಲ್ಲಿ ಕೂತಿರೋದ ನೋಡ್ಲಾರೆ.... ದಯ ಮಾಡಿ ಬಿಟ್ಟುಬಿಡ್ರಿ......”
“ಹಾಗಾದ್ರೆ ಬನ್ನಿ, ಅಂವ ನಿಮ್ಮ ಕಾಲು ಹಿಡಿದು ತಪ್ಪಾಯ್ತು, ಇನ್ನಿಂಥಾ ಕೆಲ್ಸ ಮಾಡೋದಿಲ್ಲ ಅನ್ನಲಿ, ನೀವು ನಿಮ್ಮ ಕಂಪ್ಲೇಂಟ್ ವಾಪಸ್ ತಗೊಂಡ್ಬಿಡಿ, ಅಂದ್ರೆ ಇವ್ನ ಬಿಟ್ಟುಬಿಡ್ತೇವೆ,” ಎಂದು ಹೇಳುತ್ತಲೇ ಪಿ.ಸಿ.ಯಿಂದ ಮತ್ತೆ ಕೋಣೆ ಬಾಗಿಲು ತೆಗೆಸಿ.
“ಏಳೊ ಲೌಡಿಮಗನೆ, ಅಮ್ಮನ ಕಾಲು ಹಿಡಿದು ತಪ್ಪಾಯ್ತು ಅಂತ ಒಪ್ಪಿಕೊ,ಅಂದ್ರೆ ಸೀದಾ ಮನೆಗ್ಹೋಗಬಹುದು.....”ಅನ್ನುತ್ತ ಅವನ ಕೈ ಹಿಡಿದೆಳೆದು ತಾಯಿಯ ಕಾಲಿಗೆ ದೂಡಿದರು.
ಆತ ಬಿದ್ದಷ್ಟೇ ವೇಗವಾಗಿ ಜಿಗಿದೆದ್ದು ನಿಂತು, “ಇಲ್ಲ, ನಾ ಯಾರ ಕಾಲಿಗೂ ಬೀಳೋದಿಲ್ಲ. ಇವ್ಳು, ಇವ್ಳು ನನ್ನ ತಾಯಿಯಲ್ಲ, ಹೆಮ್ಮಾರಿ, ನಮ್ಮ ಮನೆಗೆ ಗಂಟುಬಿದ್ದ ಬ್ರಹ್ಮ ರಾಕ್ಷಸಿ, ನೀವು ನನ್ನ ಜನ್ಮ ಕೊದ್ರೂ ಸೈತ ನಾನಿವ್ಳ ಕಾಲಿಗೆ ಬೀಳೋದಿಲ್ಲ. ಇಲ್ಲ..... ಇಲ್ಲ....... ”ಕೂಗುತ್ತಲೇ ಆತ ಹೊರಗೋಡಲು ಪ್ರಯತ್ನಿಸಿದಾಗ, ಪಿ.ಸಿ.ಗಳಿಬ್ಬರೂ ಸೇರಿ ಅವನನ್ನು ಹಿಡಿದು ನಿಲ್ಲಿಸಿದರು.
“ಓಡಿ ಹೋಗ್ತೀಯೇನಲೇ ಭೋಸುಡಿಕೇ, ಹೋಗು ನೋಡೋಣ, ಮಾಡಿದ್ದು ಅಂಥಾ ಕೆಲಸ, ಮೇಲಿಂದ ಕೊಬ್ಬು ನೋಡು. ನಿನ್ನ ಕೊಬ್ಬಿಳಿಸೋದು ಹ್ಯಾಂಗೆ ಅಂತ ನಂಗೊತ್ತಿದೆ,...... ನಿನ್ನ ಸುಮ್ನೆ ಬಿಡೋದಿಲ್ಲ. ಹರಾಮ್ ಖೋರ್‌ನ್ನ ತಂದು.....”, ಸಾಹೇಬರು ಬೈಯುತ್ತಲೇ ಅವನ ಮುಸುಡಿಗೆ ಬೂಟುಗಾಲಿಂದ ಒದ್ದಾಗ, ಅವನು ‘ಅಯ್ಯೋ’ ಅನ್ನುತ್ತ ನೆಲಕ್ಕೆ ಬಿದ್ದ. ಪೆಟ್ಟು ಕಣ್ಣಿಗೆ ಬಿತ್ತೋ? ಮೂಗಿಗೋ? ತಲೆಬುಡ ಗೊತ್ತಾಗಲಿಲ್ಲ.
ಈಗ ಪದ್ದು ಚಿಕ್ಕಿ, ಮಾಳಬೆಕ್ಕಿನ ಹೆಜ್ಜೆ ಸದ್ದಿಗೆ ಹೆದರಿ, ಒಲೆ ಮೂಲೆಯಲ್ಲಿ, ಒದ್ದರೂ ಮ್ಯಾಂವ್ ಗುಟ್ಟದೆ ರಾಬಿ ಕೂತ ಬೆಕ್ಕಿನ ಮರಿ!....... ಸಾಹೇಬರ ಬೂಟುಗಾಲು ಒದ್ದಿದ್ದು ಮಗನನ್ನಲ್ಲ, ತನ್ನನ್ನು, ಅವರು ಅವಮಾನಿಸಿದ್ದೂ ಸದೂ ಎಂಬ ಧಾಂಡಿಗ ಗಂಡಸನ್ನಲ್ಲ- ತನ್ನ ಬಸಿರನ್ನು. ಆ ತಾಯ್ತನದ ಸಹನೆಯನ್ನು. ನಲವತ್ತು ವರ್ಷಗಳ ತನ್ನ ಸಂಸಾರವೆಂಬ ಒಂಟಿಗಾಲಿನ ತಪಸ್ಸನ್ನು...... ವೊದಲೇ ಬೆವರಿದ ಮೈ, ಈಗ ಧಾರೆಯಿಟ್ಟು, ಈವರೆಗೂ ಕಟ್ಟಿಕೊಂಡ ಗಂಗಾ ಪ್ರವಾಹ ಕಣ್ಣಿಂದಲೂ ಧುಮುಕಿಬಿಟ್ಟಿತು.

ಹಾಗೆ ಅಳುತ್ತಲೇ, “ನಿಮ್ಮ ದಮ್ಮಯ್ಯ ಸಾಹೆಬ್ರೆ, ಇವ್ನ ಬಿಟ್ಬಿಡಿ, ನಿಮಗೆ ಕೈ ಮುಗಿತೇನೆ, ದಯವಿಟ್ಟು ಬಿಟ್ಟುಬಿಡ್ರೀ.......” ಅನ್ನುತ್ತ ಅವರ ಎರಡೂ ಕಾಲು ಹಿಡಿದುಕೊಂಡು ಗೋಳಾಡಿದಾಗ, “ಹುಂ, ಆಯ್ತು ಬನ್ನಿ ಇಲ್ಲಿ” ಅಂದರು.
ತಮ್ಮ ಕ್ಯಾಬಿನ್ನಿಗೆ ಬಂದು, ಸರಸರ ನಾಲ್ಕು ವಾಕ್ಯ Uಚಿ, ಅವಳ ಸಹಿ ತೆಗೆದುಕೊಂಡು, “ಸರಿ ನಿಮ್ಮ ಮಗನ ಕರ‍್ಕೊಂಡು ಹೋಗಿ. ಆದ್ರೆ ಮತ್ತೆ ನಾಳೇನೇ, ಹಂಗಾಯ್ತು-ಹಿಂಗಾಯ್ತು ಅಂತ ಬರ‍್ಬೇಡಿ.” ಅಂದು ಪಿ.ಸಿ.ಗೆ ಸನ್ನೆ ಮಾಡಿದಾಗ, ಆತ ಲಾಕಪ್ಪಿನ ಕೀಲಿ ತೆಗೆದು, “ನಡಿಯೋ ಬೇವಾರ್ಸಿ, ಇನ್ನೆಂದಾದ್ರೂ ಇಂಥಾ ಕೆಲ್ಸ ಮಾಡಿದ್ರೆ ನಿನ್ನ ಗತಿ ಮುಗಿತ್ತೂಂತ ತಿಳಕೊ.” ಸಿಕ್ಕಿದ ಒಂದು ಅವಕಾಶ ಕೈ ಜಾರದಂತೆ ಸದೂನ ಮುಖಕ್ಕೆ ಉಗಿದು ಹೊರಕಳಿಸಿದ.
ನೆತ್ತಿ ಮೇಲಿನ ಸೂರ‍್ಯ ಸುರಿಸುತ್ತಿರುವ ಸುಡು ಸುಡು ಬಿಸಿಲಲ್ಲಿ, ನೆರಳಿನಂತೆ ತಾಯಿಯನ್ನು ಹಿಂಬಾಲಿಸಿದ ಮಗ ಬಸ್‌ಸ್ಟಾಪ್‌ನಲ್ಲಿ ನಿಂತಾಗಲೂ ಮಾತಾಡಲಿಲ್ಲ. ಮತ್ತೊಂದು ಗಳಿಗೆಗೆ ಬಂದ ಬಸ್ಸು ಏರಿ, ಇಳಿದು, ಮನೆಯ ಹಾದಿ ಹಿಡಿದಾಗಲೂ ಮಾತಾಡಲಿಲ್ಲ. ಆದರೆ ದಾರಿಯಲ್ಲಿದ್ದ ಹಲಸಿನ ಮರ ಮತ್ತು ಕಳ್ಳಿಗಿಡಗಳು ಪರಸ್ಪರ ಮಾತಾಡಿಕೊಂಡವು.
ಏನೆಂದು?
“ಇದೇಯ ಕಂಡ್ಯ. ಹೊತ್ತ- ಹೆತ್ತ ಸೌಭಾಗ್ಯ ಸಂಭ್ರಮ. ಹೆಣ್ತನದ ವಿಧಿ”, ಅಂದಿತು ಮರ.
“ಆದರೆ ಯಾಕೆ? ಯಾಕೆ ಹೊರೋದು ಹೆರೋದು-ನಂತ್ರ ಕೊರಗೋದು? ನೀನೂ ಸೈತ ಯಾಕಾಗಿ ಇಷ್ಟೆಲ್ಲಾ ಕಾಯಿ ಬಿಡಬೇಕು? ಯಾಕೆ ಮೈ ತುಂಬ ಮುಳ್ಳು ಹೊರಬೇಕು?”
“ಯಾಕಂದ್ರೆ ನನ್ನೊಳಾ ಒಳಗಿನ ಏನೋ ಒಂದು- ಇಡೀ ನನ್ನ ಸಾರ ಸರ‍್ವಸ್ವ ಅನ್ನು, ಅಥವಾ ಹೊಟ್ಟೆಯೊಳಗೆ ಕಟ್ಟಿಕೊಂಡ ನಂಜಿನ ವೊಟ್ಟೆ ಅಂತನ್ನು ಬೇಕಾದ್ರೆ, ಅದನ್ನು ಹೊರಹಾಕಿ ನಾನು ಹಗುರಾಗಬೇಕು. ಒಳಗೊಳಗೇ ಹಣ್ಣು ಮಾಡುವ ಗುದುಮುರಿಗೆಯಿಂದ ನನ್ನನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಈ ಸುಡುಗಾಡಿನ ತಾಯ್ತನ. ಅದಕ್ಕಾಗಿ ಈ ಪರ ಸಂಕಟ. ಅದಕ್ಕಾಗಿ ಜನ್ಮಕ್ಕಂಟಿದ ನೋವು.... ಅದೆಲ್ಲ ನಿಂಗೊತ್ತಾಗೋದಿಲ್ಲ ಬಿಡು”, ಅಂದಿತು ಬುಡದಿಂದ ತಲೆಯವರೆಗೂ ಸಣ್ಣ, ದೊಡ್ಡ ಕಾಯಿಗಳ ಸರಮಾಲೆಯನ್ನೆ ಹೊತ್ತು ನಿಂತ ಹಲಸು.
“ಇದ್ದೀತಪ್ಪಾ, ಅದು ನಂಗೊತ್ತಿಲ್ಲ.” ವ್ಯಂಗ್ಯವಾಗಿ ಹೇಳಿ ಸುಮ್ಮನಾಯಿತು, ಒಂದು ಹೂವನ್ನೂ ಅರಳಿಸದ ಕಳ್ಳಿ.
ಕಲ್ಲು ಮುಖದ ಮಗನೊಂದಿಗೆ-ಹಾಲಿನ ಕ್ಯಾನುಗಳೊಂದಿಗೆ, ಚಿಕ್ಕಿ ಮನೆಯ ಹಾದಿ ತುಳಿದಳು.

ಗತಿ

ಬಸ್ಸಿನಿಂದಿಳಿದು ಧೂಳೀಮಯವಾದ ರಸ್ತೆಯಲ್ಲಿ ಅಂದಾಜಿ ನಲ್ಲೇ ಕಾಲಿಡುತ್ತಾ ದಾರಿ ಸವೆಸಿ ಮನೆಸೇರಿ ಬಾಗಿಲು ತಟ್ಟಿದೆ. ಎದ್ದು ಚಿಮಿಣಿ ದೀಪ ಹಚ್ಚಿ ಕಣ್ಣುಜ್ಜಿಕೊಳ್ಳುತ್ತಾ ಬಂದು ಬಾಗಿಲು ತೆರೆದ ಅಮ್ಮ ನನ್ನನ್ನು ಗುರುತಿಸಿ ‘ಯಾರು ಅಪ್ಪುವಾ? ಈ ಅಮಾವಾಸ್ಯೆ ಕತ್ತಲಲ್ಲಿ ಹ್ಯಾಗೆ ಬಂದಿ ಮಗಾ?’ಎಂದು ಹೇಳಿ ನನ್ನನ್ನೇ ಪಿಳಿ ಪಿಳಿ ನೋಡಿದಳು. ‘ಕಾಗದ ಸಿಕ್ಕಿತಾ?’ ಎಂದು ಕೇಳಿದಳು. ‘ಹೌದು’ ಎಂದೆ. ಬಟ್ಟೆ ಕಳಚಿ ಗೋಡೆಯಲ್ಲಿದ್ದ ಗೂಟಕ್ಕೆ ಸಿಕ್ಕಿಸಿ ಬಾವಿಕಟ್ಟೆಗೆ ತೆರಳಿ ಕೈ ಕಾಲು ಮುಖ ತೊಳೆದುಕೊಂಡು ಬಂದೆ. ‘ಅನ್ನಕ್ಕೆ ನೀರು ಹಾಕಿಯಾಗಿದೆ. ಅದೇ ಆಗಬಹುದಾ ಅಲ್ಲ ಬಿಸಿ ಅನ್ನ ಮಾಡಬೇಕಾ?’ ಎಂದು ಕೇಳಿದಳು. ‘ಅದನ್ನೇ ಹಿಂಡಿ ಹಾಕು’ ಎಂದೆ. ಪಡಸಾಲೆಯಲ್ಲಿ ತಟ್ಟೆಯ ಮುಂದೆ ಕುಳಿತು ಮಜ್ಜಿಗೆಯಲ್ಲಿ ಅನ್ನವನ್ನು ಕಲಸಿ ಊಟದ ಶಾಸ್ತ್ರವನ್ನು ಮುಗಿಸಿ ಕೈ ತೊಳೆದು ಚಾಪೆ ಬಿಡಿಸಿ ಚೀಲವನ್ನು ತಲೆಯಡಿ ಇಟ್ಟು ಮಲಗಿದೆ. ‘ನಾಳೆಯೇ ಅಲ್ಲಿಗೆ ಹೋಗಿ ಬರುತ್ತೇನೆ, ವೊದಲ ಬಸ್ಸಿನಲ್ಲೇ, ಬೇಗ ಎಬ್ಬಿಸು’ ಎಂದೆ. ಅಮ್ಮ ದೀಪ ಆರಿಸಿ ಜಗಲಿಯಲ್ಲಿ ಹಾಸಿದ್ದ ಬಟ್ಟೆಯ ಮೇಲೆ ಬಿದ್ದುಕೊಂಡಳು. ‘ಅಪ್ಪ ಇಲ್ಲವಾ?’ ಎಂದು ಕೇಳಿದೆ. ‘ಅಲೆವೂರಿಗೆ ಹೋಗಿದ್ದಾರೆ’ ಎಂದಳು.

ಪ್ರಯಾಣದ ಬಳಲಿಕೆಯಿಂದ ನಿದ್ದೆ ಬಂದುದರಿಂದ ಬೆಳಗ್ಗೆ ಬೇಗನೇ ಎಚ್ಚರವಾಗದೆ ಅಮ್ಮನೇ ಬಂದು ಎಬ್ಬಿಸಿದಳು. ದನ ಕರುಗಳಿಗೆ ಕಲಗಚ್ಚು ಇಟ್ಟು ಗಂಜಿಗೆ ನೀರಿಟ್ಟು ವೊಸರು ಕಡೆಯಲು ಕುಳಿತುಕೊಳ್ಳುವಷ್ಟರಲ್ಲಿ ನಾನು ಮುಖ ತೊಳೆದು ಸ್ನಾನ ಮಾಡಿ ಸಂಧ್ಯಾವಂದನೆಯ ‘ಶಾಸ್ತ್ರ’ ಮುಗಿಸಿ ಎದ್ದಾಗ ‘ಬಟ್ಟಲಲ್ಲಿ ಗಂಜಿ ಹಾಕಿದ್ದೇನೆ. ಬೇಗ ‘ಊಟ ಮಾಡಿ ಹೊರಡು’ ಎಂದು ಹೇಳಿ ಚೊಂಬು ಹಿಡಿದುಕೊಂಡು ಹಟ್ಟಿಗೆ ಹೋಗಿ ಕರುವನ್ನು ಬಿಟ್ಟು, ಕಟ್ಟಿ, ದನದ ಕಾಲಬುಡದಲ್ಲಿ ಕುಳಿತು ಹಾಲು ಕರೆಯತೊಡಗಿದಳು. ತಲೆಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳೋಣವೆಂದು ಎಣ್ಣೆಯ ಪಾತ್ರೆಯನ್ನು ಕೌಚಿ ಹಿಡಿದರೂ ಎಣ್ಣೆ ಬೀಳದಿದ್ದುದರಿಂದ ನಾಗಂದಿಗೆಯಲ್ಲಿದ್ದ ಡಬ್ಬಕ್ಕೆ ಕೈ ಹಾಕಿದೆ. ಅದರಲ್ಲಿಯೂ ಎಣ್ಣೆ ಇಲ್ಲದಿದ್ದಾಗ ಅಮ್ಮನ ಬಳಿಯೇ ತೆರಳಿ ಕೇಳಿದೆ. ‘ಕೋಣೆಯಲ್ಲಿ ಬಾಗಿಲ ಮೂಲೆಯಲ್ಲಿ ಬಾಟಲಿಯಲ್ಲಿ ಸ್ವಲ್ಪ ಉಂಟು. ಅದನ್ನು ಹಾಕಿಕೊ’ ಎಂದಳು. ತಲೆ ಬಾಚಿಕೊಂಡು ಎರಡು ಉಪ್ಪಿನ ಹರಳನ್ನು ಗಂಜಿಯ ಮೇಲೆ ಉದುರಿಸಿ ಪರಿಶಿಂಚನಮಾಡಿ ಊಟಕ್ಕೆ ಕುಳಿತೆ. ‘ಮ್ಯಾವ್’ ಎನ್ನುತ್ತಾ ಬಟ್ಟಲ ಬಳಿ ಬಂದ ಬೆಕ್ಕಿಗೆ ಗೋಡೆಯ ಬಳಿಯಲ್ಲಿ ಸ್ವಲ್ಪ ಗಂಜಿ ಹಾಕಿ ಊಟ ಮುಗಿಸಿ ಎದ್ದೆ.

ಅಮ್ಮ ಹಾಲನ್ನು ತಂದು ಸ್ವಲ್ಪ ನೀರು ಬೆರಸಿ ಸ್ಟೀಲ್ ಚೊಂಬಿನಲ್ಲಿ ತುಂಬಿಸಿ ‘ಹೋಗುವಾಗ ಇದನ್ನು ರಾಜಣ್ಣ ಹೊಟೆಲಿನಲ್ಲಿ ಕೊಟ್ಟು ಹೋಗು. ದುಡ್ಡು ಕೊಡಲಿಕ್ಕೆ ಹೇಳು. ಎರಡು ತಿಂಗಳಿಂದ ಕೊಡಲಿಲ್ಲ ದರಿದ್ರದವ. ಹೀಗಾದ್ರೆ ದನಕ್ಕೆ ಹಿಂಡಿ ಹಾಕುವುದು ಎಲ್ಲಿಂದ? ಮನೆಯ ಖರ್ಚು ನಡೆಯುವುದು ಹೇಗೆ?’ ಎಂದು ಗೊಣಗಿದಳು. ಅವಳನ್ನು ನೋಡಿದೆ. ಆದರೆ ನನ್ನಿಂದ ನೋಡಲಾಗಲಿಲ್ಲ. ಆ ಸುಕ್ಕುಗಟ್ಟಿದ ಶರೀರ, ಗುಳಿಬಿದ್ದ ಕೆನ್ನೆ, ನೆರಿಬಿದ್ದ ಹಣೆ, ಒಣಗಿ ಹೋದ ಚರ್ಮ, ನಿಸ್ತೇಜವಾದ ಕಣ್ಣುಗಳು, ಒಡೆದು ಹೋದ ಪಾದಗಳು ಹಟ್ಟಿಗೆ ಹೋದವಳು ಕಾಲು ಕೂಡಾ ತೊಳೆದುಕೊಂಡು ಬಂದಿರಲಿಲ್ಲ. ಸೆಗಣಿ ಮೆತ್ತಿಕೊಂಡೇ ಇತ್ತು. ಉಟ್ಟಿದ್ದ ಸೀರೆ ಸ್ವಲ್ಪ ಹರಿದಿತ್ತು. ಕಾಲಿನ ಗಂಟಿನಲ್ಲಿದ್ದ ಗಾಯಕ್ಕೆ ನೊಣಗಳು ಮುತ್ತಿಕೊಂಡಿದ್ದವು. ಕಾಲಿಗೆ ಏನಾಗಿದೆ ಎಂದು ಕೇಳಿದೆ. ಎಮ್ಮೆ ಹಾಯ್ದು ಬಿದ್ದದ್ದು ಎಂದಳು. ಮುಲಾಮು ತರಲೇ ಎಂದೆ. ಬೇಡ, ಹಾಗೆಯೇ ಗುಣವಾಗುತ್ತೆ ಎಂದಳು. ಏನೋ ಒಂದು ಸಣ್ಣ ಕಟ್ಟನ್ನು ತಂದು ನನ್ನ ಚೀಲದಲ್ಲಿ ತುರುಕಿದಳು. ಅದರಲ್ಲೊಂದು ಭಸ್ಮ ಉಂಟು. ಅದನ್ನು ನಿತ್ಯ ಹಚ್ಚಿಕೊಳ್ಳಲಿಕ್ಕೆ ಹೇಳು. ಒಳ್ಳೆಯದಾಗುವುದಾದರೆ ಆಗುತ್ತೆ ಎಂದಳು. ಅಪ್ಪ ಯಾವಾಗ ಬರ್ತಾರೆ ಎಂದು ಕೇಳಿದೆ. ‘ಇನ್ನೂ ನಾಲ್ಕೈದು ದಿನವಾಗಬಹುದು. ಏನೋ ಯಾಗ ನಡೆಯುತ್ತಿದೆಯಂತೆ. ಅದನ್ನು ಮುಗಿಸಿರಬಹುದು’ ಎಂದಳು.

ಬಟ್ಟಲು ತೊಳೆದು ಬಟ್ಟೆ ಧರಿಸಿದೆ. ಮತ್ತೊಮ್ಮೆ ತಲೆ ಬಾಚಿಕೊಂಡೆ.

ದಾರಿ ಗೊತ್ತಾದೀತಲ್ಲಾ ಎಂದಳು. ವಾತದಿಂದ ನರಳುತ್ತಿದ್ದ ಅಜ್ಜಿ ಮಲಗಿದ್ದಲ್ಲಿಗೆ ಹೋಗಿ ನೋಡಿದೆ. ಪಿಳಿ ಪಿಳಿ ನೋಡಿದರು. ಮಾತನಾಡಲಿಲ್ಲ. ನಿಟ್ಟುಸಿರುಬಿಟ್ಟು ಹೊರಬಂದೆ. ಮನೆಯಲ್ಲಿ ಜೀವಕಳೆಯೇ ಇರಲಿಲ್ಲ. ‘ಇಡೀ ದಿನ ಅಳುತ್ತಾ ಕೂತುಕೊಳ್ಳುವುದು ಬೇಡ. ನಾನು ಹೋಗಿ ಬರುತ್ತೇನೆ’ ಎಂದೆ. ಅಮ್ಮ ಸೆರಗಿನಲ್ಲಿ ಕಣ್ಣು ಒರೆಸಿಕೊಂಡಳು. ಹಟ್ಟಿಯತ್ತ ತೆರಳಿ ವೊಲೆ ತಿನ್ನುತ್ತಿದ್ದ ಕರುವನ್ನು ಎಳೆದು ತಂದು ಗೂಟಕ್ಕೆ ಕಟ್ಟಿ ಬಂದು ನಾನು ಸುಮಾರು ದೂರ ಹೋಗುವವರೆಗೂ ನನ್ನನ್ನೇ ನೋಡುತ್ತಿದ್ದಳು.
ಮೇಲ್ಮನೆಯ ಹಾಡಿ ದಾಟುವಾಗ ತಲೆಯಲ್ಲಿ ಅಕ್ಕನ ವಿಚಾರವೇ ಸುಳಿಯುತ್ತಿತ್ತು.
ಹಾಡಿಗೆ ಹೋಗಿದ್ದ ರಾಮ್ ಚಿಕ್ಕಪ್ಪ ಚೊಂಬು ಹಿಡಿದುಕೊಂಡು ಜನಿವಾರ ಕಿವಿಗೆ ಸಿಕ್ಕಿಸಿಕೊಂಡು ಬರುತ್ತಿದುದು ಕಾಣಿಸಿತು. ಹತ್ತಿರ ಬಂದವರೇ ‘ಯಾವಾಗ ಬಂದೇ ಮಾಣೀ’ ಎಂದು ಕೇಳಿದರು. ಹೇಳಿದೆ. ‘ಮನೆ ಕಡೆ ಬಂದು ಹೋಗಲ್ಲಾ’ ಎಂದರು. ‘ತೀರ್ಥ ಹಳ್ಳಿಗೆ ಇತ್ತಲಾಗೆ ಹೋಗಿದ್ದೆಯಾ?’
‘ಇಲ್ಲ, ಅಲ್ಲಿಗೇ ಹೊರಟಿದ್ದೇನೆ.’
‘ಓ ಹಾಗೋ ಬಾ ಮನೆಗೆ ಬಂದು ಹೋಗು’
ಅವರನ್ನೇ ಹಿಂಬಾಲಿಸಿದೆ. ಚಿಕ್ಕಪ್ಪ ಏನನ್ನೋ ಗಾಢವಾಗಿ ಆಲೋಚಿಸುತ್ತಿದ್ದಂತೆ ಕಂಡಿತು.
ಚಿಕ್ಕಪ್ಪ ಬಾವಿಕಟ್ಟೆಗೆ ಹೋದರು. ನಾನು ಮನೆಯಂಗಳದಲ್ಲೇ ನಿಂತೆ. ಕಸ ಗುಡಿಸುತ್ತಿದ್ದ ಚಿಕ್ಕಮ್ಮ ಪೊರಕೆ ಬಿಸುಟು ‘ಯಾರು? ಅಪ್ಪುವಾ? ಎಂದರು. ‘ಹೌದು’ ಎಂದೆ. ‘ಬಾ, ಒಳಗೆ ಬಾ’ ಎಂದರು. ಚಾವಡಿಯಲ್ಲಿ ಹೋಗಿ ಕುಳಿತೆ. ಚಿಕ್ಕಪ್ಪನೂ ಕೈ ಕಾಲು ತೊಳೆದುಕೊಂಡು ಬಂದರು. ‘ಅಕ್ಕನ ಮನೆಗೆ ಹೋಗಿ ಬರುತ್ತೀಯಾ?’ ಎಂದರು. ‘ಹೌದು’ ಎಂದೆ.
‘ವಿಶೇಷವೇನಾದರೂ ಉಂಟಾ?’
‘ವಿಶೇಷವೇನೂ ಇಲ್ಲ. ಎಂಟು ದಿನದ ಹಿಂದೆ ಅಕ್ಕನಿಂದ ಕಾಗದ ಬಂದಿತ್ತಂತೆ..’
‘ಹೌದು ಅದು ನನಗೂ ಗೊತ್ತು. ಈಗ ಹೇಗಿದ್ದಾನಂತೆ ಬಾಬೂರಾಯ?’ ಹುಶಾರಿಲ್ಲಾಂತ ಬರೆದಿದ್ದಳಂತಲ್ಲಾ.’
‘ಅನಂತರ ಏನೂ ಸುದ್ದಿ ಇಲ್ಲ. ಅಲ್ಲಿಗೆ ಒಮ್ಮೆ ಹೋಗಿ ಬಂದರೆ ಒಳ್ಳೆಯದೂಂತ ಅಮ್ಮ ಕಾಗದ ಬರೆಸಿದ್ದಳು. ನಾನು ಅದಕ್ಕಾಗಿಯೇ ನಿನ್ನೆ ಹೊರಟು ಬಂದೆ. ಅಲ್ಲಿಗೆ ಹೋಗಿ ಅಕ್ಕನನ್ನು ಒಮ್ಮೆ ನೋಡಿ ಬರೋಣಾಂತ ಹೊರಟಿದ್ದೇನೆ.’
ಚಿಕ್ಕಮ್ಮ ನಿಟ್ಟುಸಿರಿಟ್ಟು ಒಳಗೆ ಹೋದರು. ಚಿಕ್ಕಪ್ಪ ಕುರ್ಚಿ ಎಳೆದು ಕುಳಿತರು. ಸ್ವಲ್ಪ ಹೊತ್ತು ಮೌನ. ಎರಡು ಲೋಟ ಕಾಫಿ ತಂದಿಟ್ಟರು ಚಿಕ್ಕಮ್ಮ. ಲೋಟ ಎತ್ತಿ ತುಟಿಗೆ ತಾಗಿಸಿದೆ.

‘ಈಗ ನೀನು ಹೋಗಿ ಅವಳನ್ನು ಕರೆದುಕೊಂಡು ಬರುತ್ತೀಯಾ ಅಲ್ಲ ಸುಮ್ಮನೆ ನೋಡಿ ಬರುವುದಾ?’-ಚಿಕ್ಕಪ್ಪ ಕೇಳಿದರು.
‘ಏನು ಮಾಡೋದೂಂತ ನನಗೆ ಗೊತ್ತಾಗೊಲ್ಲ. ಇಷ್ಟು ವರ್ಷ ಅಲ್ಲಿದ್ದವಳನ್ನು ಈಗ ಬಾವ ಹುಶಾರಿಲ್ಲದೆ ಇರುವಾಗ ಕರೆದುಕೊಂಡು ಬರುವುದಾದರೂ ಹೇಗೆ? ಅವಳು ಬರುವುದು ಕೂಡಾ ಗ್ಯಾರಂಟಿ ಇಲ್ಲ. ಹೇಗೋ ಹೋಗಿ ಒಮ್ಮೆ ಮುಖ ತೋರಿಸಿ ಬರುವುದು ಅಷ್ಟೆ’-ಎಂದೆ.
‘ಏನೋ ಮಹರಾಯ ನನಗಂತೂ ಇದು ಒಂದೂ ಅರ್ಥವಾಗೊಲ್ಲ. ಇದು ಹೀಗೇ ಆಗುತ್ತೇಂತ ನನಗೆ ವೊದಲೇ ಗೊತ್ತಿತ್ತು. ನಿನ್ನ ಅಪ್ಪನಿಗೆ ನಾನು ಸಾರಿ ಸಾರಿ ಹೇಳಿದ್ದೆ.- ಈ ಸಂಬಂಧ ಬೇಡ ಅಂತ. ಆ ಮನೆಯಲ್ಲಿ’ ಹುಡುಗಿ ಯನ್ನು ಹುರಿದು ಮುಕ್ಕುವ ಪ್ರಾಣಿಗಳೇ ಇರುವುದು ಅಂತ. ನನ್ನ ಮಾತು ಕೇಳಿದ್ನಾ? ಅವರಿಗೆ ಅಡಿಕೆ ತೋಟ ಉಂಟು, ಕಾರು ಉಂಟು, ಬಂಗಲೆ ಉಂಟು ಅಂತ ಚಿನ್ನದಂಥ ಹುಡುಗಿಯನ್ನು ತೆಗೆದುಕೊಂಡು ಹೋಗಿ ಆ ಹೊಂಡಕ್ಕೆ ಹಾಕಿದ. ಈಗ ನೋಡು ಅವಸ್ಥೆ. ದೊಡ್ಡವರು ಏನು ಮಾಡಿದರೂ ಚೆಂದ. ನಾವ್ಯಾರೂ ಅವರ ಮನೆಗೆ ಕಾಲಿಡಕೂಡದೂಂತ ಕಟ್ಟಪ್ಪಣೆ ಆಗಿದೆಯಲ್ಲಾ? ಮದುವೆಯಾಗಿ ನಾಲ್ಕು ವರ್ಷ ಆಯ್ತು. ಅವಳ ಮುಖ ದರ್ಶನವಾದರೂ ಆಗಿದೆಯಾ ನಮಗೆ ಆ ಮೇಲೆ. ಒಂದು ಸರ್ತಿಯಾದರೂ ಕಳುಹಿಸಿಕೊಟ್ಟಿದ್ದಾರಾ ಹುಡುಗಿಯನ್ನು. ಕಾಗದ ಬರೆದರೆ ಜವಾಬೇ ಇಲ್ಲ. ಅದು ಹೋಗಲಿ- ಇವಳಿಗಾದರೂ ಏನಾದರೂ ಉಪಾಯ ಹೊಳೆಯಬಾರದೇ? ಅಲ್ಲಿ ಹೇಗಿದ್ದಾಳೋ ಏನಾಗಿದ್ದಾಳೋ ದೇವರಿಗೇ ಗೊತ್ತು?

‘ಗಣೇಶ ಕೆಫೆಯವರು ಇತ್ತೀಚೆಗೆ ನೋಡಿದ್ದರಂತೆ. ತುಂಬ ಬಚ್ಚಿ ಹೋಗಿದ್ದಾಳಂತೆ. ಈಗ ಹೊಟ್ಟೆಗೂ ಸರಿಯಾಗಿ ಹಾಕೋಲ್ಲ ಅಂದರಂತೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ’ ಎಂದೆ.
‘ಸುಮ್ಮನೆ ಅವರಿವರ ಮಾತು ಕೇಳಿ ಪ್ರಯೋಜನವಿಲ್ಲ. ಹುಡುಗಿಗೆ ಏನಾದರೂ ಒಂದು ದಾರಿ ತೋರಿಸಬೇಡವೇ? ಅದಕ್ಕೇನಾದರೂ ಉಪಾಯವಿದ್ದರೆ ಯೋಚಿಸಿರಿ’- ಚಿಕ್ಕಮ್ಮ ನಡುವೆ ಬಾಯಿ ಹಾಕಿದರು.
‘ಯೋಚಿಸಲಿಕ್ಕೇನು ಉಳಿದಿದೆ ಇನ್ನು ಮಣ್ಣು? ಮಾಡುವುದನ್ನೆಲ್ಲಾ ಮಡಿಯಾಗಿದೆ. ಇದುವರೆಗೆ ಗಂಡ ಹೆಂಡತಿ ಒಳ್ಳೆಯದಾಗಿರಲಿ ಅಂತ ಏನೆಲ್ಲಾ ಮಾಡಿಲ್ಲ ಹೇಳು. ಅವನ ಪೈಕಿಯವರ ಹತ್ತಿರ ಹೇಳಿಸಿ ನೋಡಿಯಾಯ್ತು. ಕಾಗದ ಬರೆದು ನೋಡಿಯಾಯ್ತು. ಕಡೆಗೆ ಯಂತ್ರ, ತಂತ್ರ, ಹೋಮ, ಶಾಂತಿ ಕೂಡಾ ಮಾಡಿಯಾಯ್ತು. ಕೋರ್ಟಿನ ಕಟ್ಟೆಯೊಂದನ್ನು ಏರಿಲ್ಲ. ಅದಕ್ಕಿಂತ ಹುಡುಗಿಗೆ ಸ್ವಲ್ಪ ಫಾಲಿಡಾಲನ್ನೋ ಇಲಿಪಾಶಾಣವನ್ನೋ ಕೊಟ್ಟು ಬಿಟ್ಟರೆ ಎಲ್ಲವಕ್ಕೂ ಮಂಗಳ ಹಾಡಿದಂತೆ ಆಗುತ್ತದೆ. ಕಡೆಗೆ ಯಾವ ಸಮಸ್ಯೆಯೂ ಇರೋಲ್ಲ.’

ಚಿಕ್ಕಪ್ಪನ ಮಾತು ಕೇಳಿ ನನ್ನ ಕಣ್ಣಲ್ಲಿ ಥಟ್ಟನೆ ನೀರಿಳಿಯಿತು. ಕಣ್ಣೊರೆಸಿಕೊಂಡೆ. ಮಾತನಾಡಲು ಗಂಟಲು ಒಣಗಿತ್ತು.
‘ಈಗ ಅತ್ತರೂ ಪ್ರಯೋಜನವಿಲ್ಲ, ನಕ್ಕರೂ ಪ್ರಯೋಜನವಿಲ್ಲ. ಆ ಹುಡುಗಿಯ ಅವಸ್ಥೆಯನ್ನು ನೆನೆದರೆ ಸಂಕಟವಾಗುತ್ತೆ. ಆದರೆ ಏನು ಮಾಡುವುದು ಹೇಳು?’ ಎಂದರು ಚಿಕ್ಕಪ್ಪ.
ಚಿಕ್ಕಪ್ಪನ ಮಗ ರಂಗ ಶಾಲೆಗೆ ಹೊರಟ. ‘ರಂಗ..ಈ ಹಾಲನ್ನು ರಾಜಣ್ಣನ ಹೊಟೇಲಿನಲ್ಲಿ ಕೊಟ್ಟು ಹೋಗು ಮಾರಾಯ.. ಹಾಗೆಯೇ ಸ್ವಲ್ಪ ದುಡ್ಡು ಕೊಟ್ಟು ಕಳಿಸಬೇಕಂತೇಂತ ಹೇಳು’ ಎಂದೆ. ಆಗಲಿ ಎಂದು ರಂಗ ಆ ಹಾಲನ್ನು ಕೊಂಡು ಹೋದ.
‘ಈಗ ನೀನು ಹೋಗಿ ಏನು ಮಾಡಬೇಕೂಂತಿದ್ದೀಯಾ?’ ಎಲೆ ಅಡಿಕೆ ಮೆಲ್ಲುತ್ತಾ ಚಿಕ್ಕಪ್ಪ ಕೇಳಿದರು.
‘ಮಾಡುವುದೆಂಥದು? ಹೋಗಿ ಅಕ್ಕನನ್ನು ನೋಡಿಕೊಂಡು ಬರುವುದು. ಬಂದರೆ ಕರೆದುಕೊಂಡು ಬರುವುದು’ ಎಂದೆ.
‘ಅವಳು ಬರ್ತಾಳೆ ಅಂತ ನಾನು ನಂಬುವುದಿಲ್ಲ. ಅವಳಿಗೂ ಹಠ ಏನೂ ಕಡಿಮೆ ಇಲ್ಲ. ಬರುವ ಹಾಗಿದ್ದರೆ ಅವತ್ತೇ ಬರುತ್ತಿದ್ದಳು. ಈಗ ನಾಲ್ಕು ವರ್ಷಗಳಿಂದಲೂ ಅಲ್ಲಿಯೇ ಒದ್ದಾಡುತ್ತಿಲ್ಲವೇ? ಒಳ್ಳೆಯದಾಗಿಯೇ ಗಂಡನನ್ನು ಕರೆದುಕೊಂಡೇ ಬರುತ್ತೇನೆಂಬ ಛಲ ಅವಳಲ್ಲಿರಬಹುದು. ಅವಳ ಹಠ ಸಾಧನೆ ಯಾವಾಗ ಆಗುತ್ತೋ ಕಾದು ನೋಡಬೇಕು’ ಎಂದು ನಿಟ್ಟುಸಿರಿಟ್ಟರು ಚಿಕ್ಕಪ್ಪ.
ಸ್ವಲ್ಪ ಹೊತ್ತು ತಡೆದು ಕೇಳಿದೆ-‘ನೀವು ಜತೆಯಲ್ಲಿ ಬನ್ನಿಯಲ್ಲ ಚಿಕ್ಕಪ್ಪ, ಒಟ್ಟಿಗೆ ಹೋಗಿ ಬರುವ.’
ಚಿಕ್ಕಪ್ಪ ಮಾತನಾಡಲಿಲ್ಲ. ಎಲೆಗೆ ಸುಣ್ಣ ಹಚ್ಚಿ ಬಾಯಲ್ಲಿಟ್ಟುಕೊಂಡರು, ಹೊಗೆಸೊಪ್ಪಿಗೆ ಸುಣ್ಣ ಹಚ್ಚಿ ಮಡಿಸಿ ಬಾಯಲಿಟ್ಟುಕೊಂಡರು. ಎಂಜಿಲು ಉಗುಳಿ ಬಂದರು.
‘ನಾನು ಬೇಕಾದರೆ ಬರುತ್ತೇನೆ. ಆದರೆ ಏಕಾಏಕಿ ನಾವು ಹೋದ್ದನ್ನು ನೋಡಿ ಅವರು ಏನಾದರೂ ತಿಳಿದುಕೊಂಡರೇ?’
‘ತಿಳಿದುಕೊಳ್ಳಲಿಕ್ಕೆ ಏನುಂಟು ಚಿಕ್ಕಪ್ಪ? ಎಲ್ಲವೂ ಗೊತ್ತಿದ್ದದ್ದೇ. ಅವರ ವಿಚಾರ ಎಲ್ಲರಿಗೂ ಗೊತ್ತುಂಟು. ಏನು ಬೇಕಾದರೂ ತಿಳಿದುಕೊಳ್ಳಲಿ. ನಾವು ಏನಾದರೂ ತೀರ್ಮಾನ ಮಾಡಲಿಕ್ಕೇ ಬಂದಿದ್ದೇವೇಂತ ಅವರು ತಿಳಿದುಕೊಂಡರೆ ಮತ್ತೂ ಅನುಕೂಲವೇ ಅಲ್ಲವೇ?’
‘ಅದೇನೋ ಸರಿ. ಆದರೆ ನಾವು ಹೋಗಿ ಏನೇನೋ ಮಾತನಾಡಿ ಕಷ್ಟ ಕೊಡುವಂಥಾದ್ದಾದರೂ ಏನುಂಟು? ಕೊಡುವ ಉಪಟಳ ಎಲ್ಲ ಕೊಟ್ಟಾಗಿದೆ. ಮಾಡಿಸಬಾರದ ಕೆಲಸಗಳನ್ನೆಲ್ಲ ಅವಳಿಂದ ಮಾಡಿಸಿಯಾಗಿದೆ, ಇನ್ನು ಹೆಚ್ಚೆಂದರೆ ಅವಳ ಪ್ರಾಣ ತೆಗೆದಾರು. ಅಷ್ಟೊಂದಕ್ಕೆ ಅವಳು’ ಹೆದರುತ್ತಾಳೆಯೇ? ಪ್ರಾಣ ತೆಗೆಯುವುದೂ ಅಷ್ಟು ಸುಲಭದಲ್ಲಿದೆಯೇ?
‘ಒಂದು ದೃಷ್ಟಿಯಲ್ಲಿ ನೀನು ಹೇಳುವುದೂ ಸರಿ. ಈಗ ನಾವು ಸುಮ್ಮನೆ ಹೋಗಿ ಬರುವುದರಲ್ಲಿ ಅರ್ಥವಿಲ್ಲ. ಒಂದೋ ಗಂಡ ಹೆಂಡತಿ ಒಟ್ಟಾಗುವ ಹಾಗೆ ಮಾಡಬೇಕು. ಇಲ್ಲ, ಅವಳನ್ನು ಕರೆದುಕೊಂಡು ಬರಬೇಕು, ಗಂಡನ ಸುಖವೂ ಇಲ್ಲ, ಅತ್ತೆ ಮಾವನವರ ಪ್ರೀತಿಯೂ ಇಲ್ಲ. ಮೈದುನ ನಾದಿನಿಯರ ಸ್ನೇಹವೂ ಇಲ್ಲ. ಬರೀ ಕತ್ತೆ ಚತಾಕರಿ ಮಾಡಿಕೊಂಡಿದ್ದು. ಬರೀ ಹೊಟ್ಟೆಯಲ್ಲಿ ಅವಳು ಅಲ್ಲಿ ಇರುವುದಕ್ಕಿಂತ ನಮ್ಮ ಮನೆಯಲ್ಲೇ ಇದ್ದದ್ರಲ್ಲೇ ತೃಪ್ತಿಪಟ್ಟುಕೊಂಡು ಇರಲಿ. ನಮ್ಮ ಮಗು ನಮಗೆ ಹೆಚ್ಚಾಗ್ತದಾ? ಏನೇಳ್ತೀ ನೀನು?’ ಎಂದರು ಚಿಕ್ಕಪ್ಪ.
ನನಗೆ ಸ್ವಲ್ಪ ಧೈರ್ಯ ಬಂದಂತಾಯ್ತು. ‘ಈ ಸರ್ತಿ ಏನಾದರೂ ಒಂದು ಇತ್ಯರ್ಥ ಮಾಡಿಬರುವ. ನೀವೂ ಹೊರಡಿ ಚಿಕ್ಕಪ್ಪ’ ಎಂದೆ.
‘ಈಗ ಅರ್ಜೆಂಟಾಗಿ ಹೊರಡಿ ಎಂದರೆ ಮನೆಬಿಟ್ಟು ಹೋಗುವುದು ಹೇಗೆ ಮಾರಾಯ? ತೋಟದಲ್ಲೊಂದು ಬಾವಿ ತೋಡಿಸಲು ಶುರುಮಾಡಿದ್ದೇನೆ. ಕಬ್ಬಿಗೆ ಗೊಬ್ಬರ ಹಾಕಿಸಬೇಕು. ಕೆಲಸ ಕಂಡಾಬಟ್ಟೆ ಇದೆ. ಎಂಥದು ಮಾಡುವುದೋ ತಿಳಿಯದು.’
‘ಒಂದೆರಡು ದಿನದ ಮಟ್ಟಿಗೆ ಏನಾದರೂ ಮಾಡಬಹುದು. ನಾಳೆ ಸಂಜೆ ಅಥವಾ ನಾಳಿದ್ದು ಬೆಳಗ್ಗೆ ವಾಪಸ್ಸು ಬಂದರಾಯಿತು.’
ನನ್ನ ಮಾತಿಗೆ ಒಪ್ಪಿ ಚಿಕ್ಕಪ್ಪ ಸ್ನಾನ ಮಾಡಿ ಬರಲು ಕೊಡಪಾನ ಹಿಡಿದು ಬಾವಿಕಟ್ಟೆಗೆ ತೆರಳಿದರು. ನಾನು ಕೈ ಚೀಲವನ್ನು ಚಾವಡಿಯ ಗೂಟಕ್ಕೆ ಸಿಕ್ಕಿಸಿ ಚಿಕ್ಕಮ್ಮನ ಹಿಂದೆ ಅಡುಗೆ ಮನೆಗೆ ತೆರಳಿದೆ.
‘ಅಲ್ಲ... ಒಂದು ಸುದ್ದಿಯೂ ತಿಳಿಯುತ್ತಿಲ್ಲ ಮಾರಾಯ. ಒಂದೊಂದು ಸಲ ಒಂದೊಂದು ತರದ ಸುದ್ದಿ ಬರ್ತಿದೆ. ಎಲ್ಲರಿಗೂ ಅವಳದ್ದೇ ಯೋಚನೆಯಾಗಿದೆ. ನಿನ್ನ ಚಿಕ್ಕಪ್ಪ ಅಂತೂ ದಿವಸಕ್ಕೆ ಹತ್ತು ಸರ್ತಿ ಅವಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಎಂಥಾ ಹುಡುಗಿಯ ಸ್ಥಿತಿ ಹೇಗೆ ಆಗಿ ಹೋಯ್ತು ನೋಡು’- ಚಿಕ್ಕಮ್ಮ ಬಹಳ ಬೇಸರದಿಂದ ಹೇಳಿದರು.
‘ಎಲ್ಲಾ ನಮ್ಮ ಹಣೇಬರಹ. ಈಚೆಗೆ ನಿಮಗೇನಾದರೂ ಸುದ್ದಿ ಬಂದಿದೆಯಾ?’
‘ಆಗೊಮ್ಮೆ ಈಗೊಮ್ಮೆ ಒಂದೊಂದು ವಿಚಾರ ತಿಳಿಯುತ್ತೆ. ನಂಬಲಿಕ್ಕೂ ಅಲ್ಲ, ಬಿಡಲಿಕ್ಕೂ ಅಲ್ಲ. ಒಮ್ಮೆ ಯಾರೋ ಹೇಳಿದರು ಗಂಡಹೆಂಡತಿ ಒಳ್ಳೆಯದಾಗುವ ಹಾಗೆ ಉಂಟು ಅಂತ. ಅತ್ತೆ ಯಾವಾಗಲೂ ಬುಸುಗುಟ್ಟುತ್ತಾ ಇರುತ್ತಾರಂತೆ. ಬಾಬೂರಾಯ ಮನೆಯಲ್ಲಿ ಯಾರ ಹತ್ತಿರವೂ ಮಾತನಾಡುವುದಿಲ್ಲವಂತೆ. ಬೆಳಿಗ್ಗೆ ಕಾರು ಹಿಡಿದುಕೊಂಡು ಹೋದರೆ ಬರುವುದು ರಾತ್ರಿಯೇ ಸೈ. ಅವನ ಕೋಣೆಯೇ ಬೇರೆ, ಅವನ ವ್ಯವಹಾರವೇ ಬೇರೆ. ಎಲ್ಲಾ ಪ್ರಮೀಳಾ ದರ್ಬಾರು ಅಲ್ಲಿ. ನಿನ್ನ ಅಕ್ಕ ಎಷ್ಟೋ ಸರ್ತಿ ಅವನ ಕೋಣೆಗೆ ಬೇರೆ ಬೇರೆ ನೆವದಲ್ಲಿ ಹೋಗಿ ಅವನಿಂದ ಬೈಸಿಕೊಂಡು ಬಂದಿದ್ದಾಳಂತೆ. ಏಟು ಕೂಡಾ ತಿಂದಿದ್ದಾಳಂತೆ ನೋಡು. ಒಟ್ಟಾರೆ ಅವನ ತಲೆಯೇ ಕೆಟ್ಟ ಹಾಗಿದೆ. ಅವನೇ ಒಂದು ಸತಿ ಹೇಳಿದ ಅಂತೆ- ನಾನು ಕರೆದಾಗ ಮಾತ್ರ ನೀನು ಬರಬೇಕು. ಅದಕ್ಕೆ ವೊದಲು ನನಗೆ ಮುಖ ಕೂಡಾ ತೋರಿಸಬೇಡ ಅಂತ. ಹುಡುಗಿಯ ಗತಿ ಹೀಗೆ ಆದ್ರೆ ಹೇಗೆ ಹೇಳು. ವೊನ್ನೆ ವೊನ್ನೆ ಒಂದು ದಿನ ಕಣ್ಣೀರು ಸುರಿಸುತ್ತಾ ಅಡಿಗೆ ಮನೆಯಲ್ಲಿ ಒಬ್ಬಳೇ ಕುಳಿತಿದ್ದಳಂತೆ. ಆ ಮುದಿ ಮಾವ ಹೇಳಿದ್ರಂತೆ-ಸ್ವಲ್ಪ ತಾಳ್ಮೆ ವಹಿಸು... ದುಡುಕಿ ನಿನ್ನ ಬಾಳು ಪೂರಾ ಹಾಳು ಮಾಡಿಕೊಳ್ಳಬೇಡ... ಒಳ್ಳೆಯದಾಗುತ್ತೆ ಅಂತ. ಆ ಸಂಸಾರದ ಗುಟ್ಟೇ ಗೊತ್ತಾಗೋಲ್ಲಾ ಮಾರಾಯ. ಅವಳಿಗೆ ಎಲ್ಲಿಗೂ ಹೋಗಲಿಕ್ಕಿಲ್ಲವಂತೆ. ಮನೆಗೆ ಯಾರಾದರೂ ಬಂದರೆ ಅವಳಿಗೆ ಎದುರು ಬರಲೂ ಬಿಡುಮದಿಲ್ಲವಂತೆ. ನೆರೆಕರೆಯವರಲ್ಲಿ ಮಾತನಾಡಲೂ ಬಿಡುವುದಿಲ್ಲವಂತೆ ಅಷ್ಟು ದೊಡ್ಡ ಮನೆಯ ಒಳಗಿನ ಹೊರಗಿನ ಕೆಲಸ ಎಲ್ಲಾ ಒಬ್ಬಳೇ ಮಾಡುವುದಂದ್ರೆ ಏನು ಸಾಮಾನ್ಯವೇ? ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು, ರುಬ್ಬುವುದು, ನೀರು ತುಂಬುವುದು, ಒಂದೇ ಎರಡೇ! ಕೆಲಸ ಸಾಯ್ಲಿ ನಾವೂ ಮಾಡೂತ್ತೇವೆ. ಆದರೆ ಹೊಟ್ಟೆಗೂ ಸರಿಯಾಗಿ ಹಾಕದೆ, ಮಾತು ಕೂಡಾ ಸರಿಯಾಗಿ ಆಡದೆ ಇದ್ದರೆ ಅವಳು ಹೇಗೆ ಇರಬೇಕು ಹೇಳು. ಲೆಕ್ಕಕ್ಕೆ ದೊಡ್ಡ ಮನೆಯ ದೊಡ್ಡ ಸೊಸೆ. ಇಲ್ಲಿ ಇರುವಾಗ ಪಟಾಪಟಿ ಮಾತನಾಡುತ್ತಿದ್ದ ಹುಡುಗಿ ಮಂಕಾಗಿ, ಬೆಪ್ಪು ಕಟ್ಟಿ ಹೋಗಿದೆಯಂತೆ ಈಗ. ನಾನಾಗಿದ್ದರೆ ಎಂದೋ ಜಗಳವಾಡಿ ಓಡಿ ಬರುತ್ತಿದ್ದೆ. ಇವಳಿಗೆ ಇಷ್ಟು ಹಠ, ತಾಳ್ಮೆ ಹೇಗೆ ಬಂತೋ ಆ ದೇವರಿಗೇ ಗೊತ್ತು. ಗಂಡ ಒಬ್ಬ ಸರಿ ಇದ್ದಿದ್ದರೆ ಈ ಉಳಿದ ಮಾರಿಗಳನ್ನೆಲ್ಲ ಸದೆ ಬಡಿಯಬಹುದಿತ್ತು. ಅವನೇ ಅವಳ ಕೈ ಬಿಟ್ಟಿರುವಾಗ, ಈ ರಣಹದ್ದುಗಳು ಅವಳನ್ನು ತಿನ್ನದೇ ಬಿಡುತ್ತಾವೆಯೇ..? ನೀನು ನಿಂತೇ ಇದ್ದಿ, ಕೂತುಕೋ ಅಪ್ಪು. ನಾನು ಈಗ ಬಂದೆ..’

ಚಿಕ್ಕಮ್ಮ ಒಲೆಯ ಹತ್ತಿರ ಹೋದರು, ನಾನು ಮೂಕನಾಗಿಯೇ ನಿಂತಿದ್ದೆ. ನನ್ನಿಂದ ಯಾವ ಮಾತನ್ನೂ ಆಡಲಾಗಲಿಲ್ಲ. ಅಕ್ಕನ ದಾರುಣ ಸ್ಥಿತಿಯನ್ನು ನೆನೆದು ಗಂಟಲು ಒಣಗಿತ್ತು. ತೇವವಾಗಿದ್ದ ಕಣ್ಣುಗಳನ್ನು ಒರೆಸಿಕೊಂಡು ಚಾವಡಿಗೆ ಬಂದೆ. ಗೋಡೆಯ ಮೇಲಿದ್ದ ಫೊಟೋಗಳು ಕಣ್ಣಿಗೆ ಬಿದ್ದವು. ಅಕ್ಕನ ಮದುವೆಯ ಸಮಯ ತೆಗೆಸಿದ್ದ ಫೊಟೋಗಳು ಅಲ್ಲಿದ್ದವು. ಅಕ್ಕ ಭಾವ ಒಟ್ಟಿಗೆ ಕುಳಿತದ್ದು, ಧಾರೆಯ ಸಮಯ ಎದಿರು ಬದಿರಾಗಿ ನಿಂತದ್ದು, ದಿಬ್ಬಣದ್ದು, ಇಡೀ ಸಂಸಾರದವರು ಒಟ್ಟಾಗಿ ಕುಳಿತದ್ದು ಎಲ್ಲಾ ನಮೂನೆಯ ಫೊಟೋಗಳೂ ಅಲ್ಲಿದ್ದುವು. ಅಕ್ಕನ ಮುಖದಲ್ಲಿ ತೇಜಸ್ವಿ ಕಳೆ, ಮುಗ್ಧ ನಗು, ಲವಲವಿಕೆ, ಭಾವನೊಟ್ಟಿಗೆ ನಿಂತ ಠೀವಿ, ಭಾವ ಹೆಗಲ ಮೇಲೆ ಕೈ ಹಾಕಿ ಕುಳಿತಿದ್ದಾಗಿನ ಅವಳ ಹಿಗ್ಗು- ರಾಮ ರಾಮಾ ನೆನೆಯದಾದೆ. ಒಂದೇ ಒಂದು ತಿಂಗಳು.. ಮದುವೆಯಾಗಿ ಒಂದೇ ಒಂದು ತಿಂಗಳು. ಯಾವ ಜಂಜಾಟವೂ ಇಲ್ಲದೆ ಅಕ್ಕನ ಜೀವನ ಸುಖಮಯವಾಗಿತ್ತು. ಸಂಭ್ರಮಮಯವಾಗಿತ್ತು. ಅಥವಾ ಹಾಗೆಯೇ ನಮಗೆಲ್ಲಾ ಕಂಡಿತ್ತು. ಅನಂತರ ಏನಾಯ್ತೋ? ಗಂಡನ ಮನೆಗೆ ಕಣ್ಣೀರಿಟ್ಟು ತೆರಳಿದ ಅಕ್ಕ ಎಲ್ಲರನ್ನೂ ಕಣ್ಣೀರಲ್ಲೇ ಮುಳುಗಿಸಿದಳು. ಅಂದಿನಿಂದ ಇಂದಿನವರೆಗೂ ಸುಖವಿಲ್ಲ, ಶಾಂತಿ ಇಲ್ಲ. ಒಂದೊಂದೇ ಈಗಲೋ ಆಗಲೋ ನಡೆದಂತೆ ಭಾಸವಾಗುತ್ತಿದೆ. ಎಲ್ಲ ಒಂದು ಕನಸಿನಂತೆ ಕಾಣುತ್ತಿದೆ. ಅಕ್ಕ ಬೆಳೆದು ಸುಂದರಿಯಾಗಿ ಕಂಡು ಎಲ್ಲರ ಕಣ್ಮನಗಳಿಗೆ ಸಂತಸ ನೀಡಿದ್ದು, ಒಂದು ಬಾರಿ ಕಂಡೊಡನೆಯೇ ಮದುವೆಯಾಗಲು ಒಪ್ಪಿ ಭಾವ ಮುಂದೆ ಬಂದದ್ದು, ಅಕ್ಕನನ್ನು ನೋಡಿ ಹೋದ ಮೇಲೆ ಮಾರನೆಯ ದಿನವೇ ಭಾವ ಮೋಟರ್ ಸೈಕಲಿನಲ್ಲಿ ಬಂದು ಅಕ್ಕನನ್ನು ಕುಂಜಾರ್‌ಗಿರಿಗೆ ಕರೆದುಕೊಂಡು ಹೋದ್ದು, ಅಲ್ಲಿ ದೇವರೆದುರು ನಿಂತು ಏನನ್ನೋ ಪ್ರಾರ್ಥಿಸಿಕೊಂಡದ್ದು, ಕೈ ಕೈ ಹಿಡಿದು ಇಬ್ಬರೂ ಕೆಳಗಿಳಿದದ್ದು, ಓಡಲಾರದ ನನ್ನನ್ನು ಕಂಡು ಹಾಸ್ಯ ಮಾಡಿದ್ದು, ದೇವಸ್ಥಾನದಲ್ಲಿ ಮದುವೆಯಾದದ್ದು. ಅಕ್ಕನಿಗೆ ಜಲ್ಲಿ ಇಳಿಸಿದ್ದು, ಬಾವನ ತಾಯಿಗೂ ಅಪ್ಪಯ್ಯನ ಅಕ್ಕನಿಗೂ ಏನೋ ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾದ್ದು..ಎಲ್ಲವೂ ನಿನ್ನೆ ವೊನ್ನೆ ನಡೆದ ಹಾಗೆ ಇದೆ. ಆ ಅತ್ತೆಗೆ ಅಕ್ಕನಲ್ಲಿ ಏನು ಕುಂದು ಕಂಡು ಬಂತೋ? ಬಡವರ ಮನೆಯ ಹುಡುಗಿಯೆಂದು ಜರೆದದ್ದಂತೆ, ಹೀಯಾಳಿಸಿ ಮಾತನಾಡಿದ್ದಂತೆ, ಎಲ್ಲಾ ಕೆಲಸಗಳನ್ನೂ ಅವಳಿಂದಲೇ ಮಾಡಿಸಿದ್ದಂತೆ, ಅಕ್ಕ ಒಮ್ಮೆ ಏನೋ ಎದುರುತ್ತರ ಕೊಟ್ಟದ್ದಕ್ಕೆ ಎದೆ ಬಡಿದುಕೊಂಡು ಅತ್ತಿದ್ದಂತೆ, ಭಾವನ ಹತ್ತಿರ ಇಲ್ಲ ಸಲ್ಲದ ಚಾಡಿ ಹೇಳಿ ಅಕ್ಕನನ್ನು ಹೆಂಡತಿಯಾಗಿ ಪರಿಗ್ರಹಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಂತೆ- ಎಲ್ಲವೂ ಅಂತೆಗಳ ಕಂತೆಯಾಗಿಯೇ ಉಳಿದಿವೆ. ನಿಜವಾಗಿ ಏನು ನಡೆದಿದೆ, ಏಕೆ ನಡೆದಿದೆ ಎಂಬುದು ಯಾರಿಗೂ ಸರಿಯಾಗಿ ತಿಳಿಯದು.

ಹತ್ತು ಘಂಟೆಗೆ ಊಟ ಮುಗಿಸಿ ನಾವು ಸುಮಾರು ದೂರ ಹೋದ ಮೇಲೆ ಚಿಕ್ಕಪ್ಪ ಹೇಳಿದರು- ‘ಈ ನಮೂನೆಯ ಜನಗಳನ್ನು ನಾನು ಎಲ್ಲೂ ನೋಡಿಲ್ಲ ಮಾರಾಯ. ಇವರ ಕಥೆ ಎಂಥದೂಂತ ಗೊತ್ತಾಗೋಲ್ಲ. ನೋಡು ಅವಳ ಮದುವೆಯಾಗಿ ನಾಲ್ಕು ವರ್ಷವಾಯಿತು ಹೆಚ್ಚು ಕಡಿಮೆ. ಪ್ರಸ್ತದ ದಿನ ಬಿಟ್ಟು ಮತ್ತೆಂದೂ ಬಾಬುರಾಯ ಅವಳೊಟ್ಟಿಗೆ ಇದ್ದ ಹಾಗೆ ಕಾಣೊಲ್ಲ. ಅವನ ಮನೆಯವರು ಮನುಷ್ಯ ಜಾತಿಯಲ್ಲಿ ಮಾತನಾಡುವುದಿಲ್ಲ. ಅವರ ಮನೆಯಲ್ಲಿ ವಿಶೇಷದ ಊಟ ಏನೂ ಆದ್ದು ನಮಗೆ ಗೊತ್ತಿಲ್ಲ. ಈ ಹುಡುಗಿಗೆ ಈ ವಯಸ್ಸಿನಲ್ಲೇ ಹೀಗೆ ಆಗಬೇಕಾ? ಗಂಡ ಸತ್ತು ಹೋಗಿದ್ದರೆ ವಿಧವೆ ಅಂತ ಆದ್ರೂ ಒಂದು ಸಮಾಧಾನ ಇರ್ತಿತ್ತು. ಈಗ ಗಂಡ ಇದ್ದು ಆ ಎಳೆಯ ಜೀವ ಯಾತನೆ ಪಡಬೇಕಾಯ್ತಲ್ಲಾ. ಮಾತೆತ್ತಿದರೆ ಅಪ್ಪನ ಮನೆಗೆ ಹೋಗು ಅಂತ ಬೈಯ್ತಾ ಇರ್ತಾಳಂತೆ ಆ ಮುದುಕಿ. ಗಂಡನ ಮನೆ ಬೇಕಾದರೆ ಇಲ್ಲಿ ಹೇಳಿದ ಹಾಗೆ ಕೇಳ್ತಾ ಇರಬೇಕು, ಇಲ್ಲದಿದ್ದರೆ ನಿನ್ನ ಅಪ್ಪನ ಮನೆಗೆ ಹೋಗಬಹುದು. ನಮ್ಮದೇನೂ ಅಡ್ಡಿ ಇಲ್ಲ ಅಂತ ಹೇಳಿದ್ದಾಳಂತೆ ಅವಳು. ಅಲ್ಲ ಅಷ್ಟು ಮಕ್ಕಳಿಗೂ ಸ್ವಂತ ಬುದ್ಧಿ ಎನ್ನುವಂಥಾದ್ದೇ ಇಲ್ಲವೋ ಹೇಗೆ? ಯಾರೂ ನೆಲದ ಮೇಲೆ ಇದ್ದ ಹಾಗೆಯೇ ಕಾಣುವುದಿಲ್ಲ. ಎಲ್ಲಾ ಅಹಂಕಾರದ ಮುದ್ದೆಗಳೇ. ನನಗಂತೂ ಸಂಶಯವುಂಟು. ಅವನಿಗೆ ಬೇರೆ ಯಾರೋ ಗಿರಾಕಿ ಗಂಟು ಬಿದ್ದಿದ್ದೇಂತ...’
‘ಹೌದೇ?...’
‘ನಿನಗೆ ಅದೆಲ್ಲಾ ಗೊತ್ತಿರಲಿಕ್ಕಿಲ್ಲ. ನೀನು ಪರವೂರಿನಲ್ಲಿರುವವ. ನಿನ್ನ ಭಾವನ ವಿಚಾರ ನಿನಗೆ ಗೊತ್ತಾಗುವುದಾದರೂ ಹೇಗೆ? ಅವನೊಬ್ಬ ಶುದ್ಧ ಲಫಂಗ ಅಂತ ನಾನು ಹೇಳಲಾರೆ. ವ್ಯಾಪಾರ ವ್ಯವಹಾರದಲ್ಲಿ ಒಳ್ಳೇ ಚುರುಕಿದ್ದಾನೆ. ಆದರೇನು? ಮನುಷ್ಯತ್ವ ಬೇಡವೇ? ಮನೆ ವಿಚಾರದಲ್ಲಿ, ಹೆಂಡತಿ ವಿಚಾರದಲ್ಲಿ ತಲೆಯೇ ಹಾಕೋಲ್ಲ ಅಂದರೆ ಹೇಗೆ? ಹುಡುಗಿಯ ವಿಷಯ ಮಾತನಾಡಲು ಹೋದರೆ ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಮಾತನಾಡಿ ಎನ್ನುತ್ತಾನೆ. ಅಂಥವನ ಹತ್ತಿರ ವಾದಿಸುವುದು ಹೇಗೆ? ವಾರಕ್ಕೆ ಮೂರು ಸರ್ತಿ ಶಿವವೊಗ್ಗಕ್ಕೆ ಹೋಗಿ ಬರುತ್ತಾನೆ. ಅಲ್ಲಿ ಯಾವುದೋ ಒಂದು ಹುಡುಗಿಯನ್ನು ಕಟ್ಟಿಕೊಂಡಿದ್ದಾನಂತೆ. ಒಂದಲ್ಲ ಹತ್ತು ಹುಡುಗಿಯರಿರಲಿ; ಅದಕ್ಕೆ ಮದುವೆಯಾದವಳನ್ನು ಈ ರೀತಿ ನೋಡಿಕೊಳ್ಳಬೇಕೂಂತ ಉಂಟಾ?... ಆ ಹುಡುಗಿ ಇವನ ತಲೆ ತಿರುಗಿಸಿದ್ದಾಳೆ ಅಂತ್ಲೂ ಹೇಳುತ್ತಾರೆ. ಆದರೆ ಇವನಿಗೆ ಇವನ ತಲೆ ಸರಿ ಇಟ್ಟುಕೊಳ್ಳಲು ತಿಳಿಯದೇ? ಅಂತೂ ಈ ಚಿನ್ನದಂಥ ಹುಡುಗಿಯನ್ನು ಕಸಕ್ಕೆ ಹಾಕಿದನಲ್ಲಾ ಎಂತ ಬೇಸರವಾಗುತ್ತೆ. ನೆವನಕ್ಕೊಂದು ಇವಳ ಕಾಗದ- ‘ಅತ್ತೆ ಕಷ್ಟ ಕೊಡುತ್ತಾರೆ ನಾವು ಸ್ವಲ್ಪ ಸಮಯ ಅವರಿಂದ ದೂರ ಇರುವುದು ಒಳ್ಳೆಯದು’ ಅಂತ ಬರೆದಿದ್ದಳಂತೆ ಹಿಂದೆ. ಅದೇ ವಿಚಾರವನ್ನು ದೊಡ್ಡದು ಮಾಡಿ ನಿಮ್ಮ ಹುಡುಗಿ ನಮಗೆ ಬೇಡ ಅಂತ ಮನೆಗೆ ಬಂದವಳನ್ನು ಕರೆದುಕೊಂಡು ಹೋಗಲೇ ಇಲ್ಲ. ಕಡೆಗೆ ನಾವು ಕರೆದುಕೊಂಡು ಹೋಗಿ ಪಂಚಾಯಿಗೆ ಮಾಡಿ ಬಿಟ್ಟು ಬಂದದ್ದಲ್ವಾ? ನಾವು ಯಾರೂ ಅಲ್ಲಿಗೆ ಹೋಗಬಾರದೆಂಬ ಷರತ್ತಿಗೂ ಒಪ್ಪಿ ಬಂದೆವು- ಕ್ರಮೇಣ-ಗಂಡ -ಹೆಂಡತಿ, ಅತ್ತೆ-ಸೊಸೆ ಒಳ್ಳೆಯ ರೀತಿಯಲ್ಲಿ ಇರಬಹುದೆಂದುಕೊಂಡು. ಆದರೆ ಆದ ಕಥೆಯೇ ಬೇರೆ. ಎಲ್ಲರೂ ಹೇಳುವುದು ನೋಡಿದರೆ ಹುಡುಗಿ ಇಷ್ಟು ದಿವಸ ಜೀವ ಇಟ್ಟುಕೊಂಡು ಬದುಕಿದ್ದೇ ದೊಡ್ಡದು ಅಂತ. ಕೆಲಸದ ಹುಡುಗಿಗಿಂತಲೂ ಕೀಳಾಗಿ ಆ ಮನೆಯಲ್ಲಿ ಒದ್ದಾಡ್ತಾ ಇದ್ದಾಳೆ. ನಾವು ಇಷ್ಟು ದಿನ ಕೈ ಕಟ್ಟಿ ಬಾಯಿ ಮುಚ್ಚಿ ಕುಳಿತದ್ದು ತಪ್ಪಾಯ್ತು. ಈಗ ನಾಲ್ಕು ಜನರ ಎದುರು ಅವರ ಮರ್ಯಾದೆ ತೆಗೆದು ಬರಬೇಕು ಅಷ್ಟೆ. ಹುಡುಗಿಯ ಬಾಳಂತೂ ಹಾಳಾಯ್ತು. ಇನ್ನು ನಾವು ಹೆದರಿ ಕೂರಬಾರದು.’
‘ಜ್ಯೋತಿಷಿ ಸೀನು ಭಟ್ರು ಖಡಾಖಂಡಿತವಾಗಿ ಹೇಳಿದ್ದಾರಂತೆ- ಇನ್ನೊಂದು ತಿಂಗಳೊಳಗೆ ಮನೆಗೆ ಬರ್ತಾಳೆ, ಮುಂದೆ ಒಳ್ಳೆಯದಾಗುತ್ತದೆ ಅಂತ. ಅವಳ ಜಾತಕದಲ್ಲೂ ಮೂರು ನಾಲ್ಕು ವರ್ಷ ಬಹಳ ಕಠಿಣ, ನಂತರ ಒಳ್ಳೆಯದಾಗುತ್ತದೆ ಅಂತ ಉಂಟಂತೆ. ಅಪ್ಪಯ್ಯ ಅವಳಿಗೆ ಶ್ರೇಯಸ್ಸಾಗಬೇಕೂಂತ ನಿತ್ಯ ದೇವಿಪಾರಾಯಣೆ ಮಾಡ್ತಾ ಇದ್ದಾರೆ. ನವಗ್ರಹ ಹೋಮ, ಹವನ, ಶಾಂತಿಗಳನ್ನೆಲ್ಲಾ ಮಾಡಿಸಿಯಾಯ್ತು ಅವಳ ಹೆಸರಿನಲ್ಲಿ. ಎಲ್ಲಾ ದೇವರಿಗೂ ಮುಡಿಪು ತೆಗೆದಿರಿಸಿದೆ. ಮರ್ಯಾದೆಯಾಗಿ ಯಾವ ಗಲಾಟೆಯೂ ಇಲ್ಲದೆ ಗಂಡ ಹೆಂಡತಿ ಚೆನ್ನಾಗಿದ್ದರೆ ಸಾಕು ಎಂಬುದು ನಮ್ಮ ಆಸೆ. ನಾವು ಹೋದ ಮೇಲೆ ಏನೆಲ್ಲಾ ಗಲಾಟೆ ನಡೆಯುತ್ತೋ ದೇವರಿಗೇ ಗೊತ್ತು.’

‘ಗಲಾಟೆ ಆಗಲೂಬಹುದು. ಆಗದಿರಲೂಬಹುದು. ಅಂತೂ ನಾವು ಹೋದೊಡನೆಯೇ ನಮ್ಮ ಕುತ್ತಿಗೆಗೆ ಕೈ ಹಾಕಿ ಹೊರಗೆ ದೂಡಲಿಕ್ಕಿಲ್ಲವಲ್ಲಾ. ಅಪರೂಪಕ್ಕೆ ಹೋದವರನ್ನು ಮಾತನಾಡಿಸದೇ ಇರಲಿಕ್ಕಿಲ್ಲವಲ್ಲಾ. ನಾವೂ ಮನಬಿಚ್ಚಿಯೇ ಮಾತನಾಡೋಣ. ನಿನ್ನ ಭಾವ ಹುಶಾರಾಗಿದ್ದರೆ ಅಕ್ಕನನ್ನು ಕರೆದುಕೊಂಡು ಮನೆಗೆ ಬಂದು ಹೋಗಲು ಹೇಳೋಣ. ನಮಗೇನು ಹೆದರಿಕೆ. ಏನಾದರೂ ಒಂದು ಇತ್ಯರ್ಥ ಆಗಲಿ. ಏನ್ಹೇಳ್ತಿ ನೀನು?’
ನಾನು ಏನನ್ನೂ ಹೇಳಲಿಲ್ಲ.

ಆಗುಂಬೆಯಲ್ಲಿ ನಾವು ಬಸ್ಸು ಹತ್ತುವಾಗ ಹಾರಾಡಿಯ ನಮ್ಮ ಗುರುತಿನವರೊಬ್ಬರು ಸಿಕ್ಕಿದರು. ಭಾವನ ಹತ್ತಿರದ ಸಂಬಂಧಿ ಕೂಡಾ. ನನ್ನ ಪರಿಚಯ ಅವರಿಗೆ ಸರಿಯಾಗಿ ಇದ್ದಂತೆ ಕಾಣಲಿಲ್ಲ. ಆದರೆ ಚಿಕ್ಕಪ್ಪನ ಪರಿಚಯ ಚೆನ್ನಾಗಿತ್ತು. ಚಿಕ್ಕಪ್ಪನೇ ಅವರನ್ನು ಕಂಡು ‘ತೀರ್ಥಹಳ್ಳಿಯವರೆಗೆ ಹೋಗಿ ಬರುತ್ತೇವೆ. ಅಲ್ಲಿಯ ಸಮಾಚಾರ ಏನಾದರೂ ಗೊತ್ತುಂಟಾ?’ ಎಂದು ಕೇಳಿದರು.
‘ಬಾಬು ರಾಯನಿಗೆ ಹುಶಾರಿರಲಿಲ್ಲ. ಸ್ವಲ್ಪ ಜ್ವರವಿತ್ತು. ಅದು ಗುಣವಾಯ್ತು. ವೊನ್ನೆ ಶಿವವೊಗ್ಗಕ್ಕೆ ಹೋಗಿದ್ದ, ವಾಪಸ್ಸು ಬರುವಾಗ ಮೋಟರ್ ಸೈಕಲ್ ಆಕ್ಸಿಡೆಂಟ್ ಆಗಿ ತಲೆಗೆ ತುಂಬಾ ಪೆಟ್ಟಾಗಿದೆ. ಶಿವವೊಗ್ಗ ಆಸ್ಪತ್ರೆಗೆ ಹಾಕಿದ್ದಾರೆ. ನಾನೂ ನಿನ್ನೆ ನೋಡಿಬಂದೆ. ಜೀವ ಉಳಿಯುವುದು ಕಷ್ಟ’-ಎಂದರು. ‘ಇನ್ನು ದೇವರೇ ಗತಿ’ ಎಂದು ನಿಟ್ಟುಸಿರಿಟ್ಟು ತೆರಳಿದರು.
‘ಚಿಕ್ಕಪ್ಪ, ನಾವು ಸೀದಾ ಶಿವವೊಗ್ಗಕ್ಕೆ ಹೋಗಿ ಭಾವನನ್ನು ನೋಡಿ ಬಂದರೆ ಹೇಗೆ?’ ಎಂದೆ.
‘ಬೇಡ. ತೀರ್ಥಹಳ್ಳಿಯಲ್ಲಿ ಇಳಿದು, ಮನೆಯಲ್ಲಿ ವಿಚಾರಿಸಿಯೇ ಬೇಕಾದರೆ ಶಿವವೊಗ್ಗಕ್ಕೆ ಹೋಗುವ’ ಎಂದರು.
ನಾವು ಭಾವನ ಮನೆ ಸೇರಿದಾಗ ಘಂಟೆ ನಾಲ್ಕಾಗಿತ್ತು. ಮನೆಯೆಲ್ಲಾ ಭಣ ಭಣ ಎನ್ನುತ್ತಿತ್ತು. ಯಾರದ್ದೂ ಸದ್ದಿಲ್ಲ. ಅಲ್ಲಿದ್ದ ಪುರೋಹಿತರೊಬ್ಬರು ನಮ್ಮನ್ನು ಕಂಡು ‘ನೀವು ಬಾಬುರಾಯನ ಹೆಂಡತಿ ಕಡೆಯವರಾ? ಬಾಬುರಾಯನ ಕಥೆ ಮುಗಿಯಿತು. ಬೆಳಗ್ಗೆ ಶಿವವೊಗ್ಗದಿಂದ ಹೆಣ ತಂದು ಈಗ ತಾನೇ ಸಂಸ್ಕಾರ ಆಯ್ತು. ಎಲ್ಲಾ ಒಳಗಿದ್ದಾರೆ’ ಎಂದರು.

ಚಿಕ್ಕಪ್ಪನ ಮುಖ ಕಪ್ಪಾಯ್ತು. ನನ್ನ ಕೈ ಕಾಲು ಗಡಗಡನೆ ನಡುಗುತ್ತಿತ್ತು.ಪಡಸಾಲೆಯಲ್ಲಿ ಅಕ್ಕ ಒಬ್ಬಳೇ ಕುಳಿತಿದ್ದಳು. ಕಣ್ಣಿನಲ್ಲಿ ಚೂರೂ ನೀರಿರಲಿಲ್ಲ. ಮುಖದಲ್ಲಿ ಚೂರೂ ವ್ಯಸನವಿರಲಿಲ್ಲ. ನನ್ನನ್ನು ನೋಡಿಯೂ ಅವಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ನನ್ನೆದುರು ಆಚೀಚೆ ಮನೆಯೊಳಗೇ ಓಡಾಡುತ್ತಿದ್ದ ಆ ಅತ್ತೆ, ಮಾವ, ನಾದಿನಿಯರು, ಭಾವನ ತಮ್ಮಂದಿರು ಎಲ್ಲ ಪಿಶಾಚಿಗಳಂತೆ, ರಾಕ್ಷಸರಂತೆ ಕಂಡು ಬಂದರು. ನಾನು ಮೂಕನಾಗಿ ಅಕ್ಕನ ಎದುರು ಎಷ್ಟು ಹೊತ್ತು ನಿಂತಿದ್ದೆನೋ? ಚಿಕ್ಕಪ್ಪ ಬಂದು ಎಚ್ಚರಿಸಿದರು.- ಅಪ್ಪು ಕಾರು ತಂದಿದ್ದೇನೆ. ಇವಳನ್ನು ಕರೆದುಕೊಂಡು ಹೋಗುವ. ಈ ಮನೆಯ ಋಣ ಮುಗಿಯಿತು ಅವಳಿಗೆ. ಇನ್ನಾದರೂ ಉಳಿದವರು ಸುಖವಾಗಿರಲಿ ಎಂದರು.

ಅಕ್ಕನನ್ನು ಕಾರಿನಿಂದಿಳಿಸಿ ಮನೆಗೆ ಕರೆದುಕೊಂಡು ಹೋದೆವು. ರಾತ್ರಿಯಾಗಿ ಅಮ್ಮ ಮಲಗಿಯಾಗಿತ್ತು. ಅವಳನ್ನು ಎಬ್ಬಿಸಿದೆ. ಚಿಮಿಣಿ ದೀಪದ ಬೆಳಕಿನಲ್ಲಿ ಕುಂಕುಮವಿಲ್ಲದೆ ಬಂದು ನಿಂತಿದ್ದ ಅಕ್ಕನನ್ನು ನೋಡಿ ಅಮ್ಮ ಚೀರಿದಳು. ನಾನು ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಸಾಧ್ಯವಾದಷ್ಟು ಅತ್ತೆ.

ಸರಳುಗಳ ಹಿಂದಿನಿಂದ

ಸುಮಾ ಸುಧಾಕಿರಣ್
(ವಾರ್ಭಾಭಾರತಿ, ಮೇ ೮)
ನಾಲ್ಕನೆ ಮಹಡಿಯ ಬಾಲ್ಕನಿಯಲ್ಲಿ ನಿಂತು ಗ್ರಿಲ್ ಸರಳುಗಳನ್ನು ಹಿಡಿದು ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದಾಳೆ ಮಗಳು ಎದುರು ರಸ್ತೆಯಲ್ಲಿ ಆಡುವ ಕಟ್ಟಡ ಕಾರ್ಮಿಕರ ಮಕ್ಕಳೆಡೆಗೆ.

ಒಂದು ಕ್ಷಣ ಸಿನೆಮಾಗಳಲ್ಲಿ ತೋರಿಸುವ ಜೈಲಿನ ಕೈದಿಗಳ ನೆನಪಾಯಿತು ನನಗೆ.
ಬೀಳುವ ಚಡ್ಡಿಯನ್ನೊಂದು ಕೈಯಲ್ಲಿ ಹಿಡಿದುಕೊಂಡೇ ಓಡುತ್ತಿರುವ ಆ ಪುಟ್ಟ ಹುಡುಗ, ಗೊಣ್ಣೆ ಸುರಿಸುತ್ತಾ ಓಡುತ್ತಿರುವ ಈ ಹುಡುಗಿಯನ್ನು ಇನ್ನೇನು ಹಿಡಿದೇ ಬಿಟ್ಟ ....
ಓಡು ಓಡು .. ನಿಂತಲ್ಲೇ ಕೂಗುತ್ತಿದ್ದಾಳೆ ಮಗಳು, ಇವಳೇ ಸಿಕ್ಕಿಬಿದ್ದಳೇನೋ ಎಂಬ ಭಾವದಲ್ಲಿ. ಕಣ್ಣುಗಳಲ್ಲೇನೋ ಹೊಳಪು.
ಅಮ್ಮ ನಾನೂ ಅಲ್ಲಿ ಆಡಲು ಹೋಗಲೆ? ಕೇಳಿದ್ದಳೊಮ್ಮೆ. ಸುಮ್ಮನಿರಿಸಿದ್ದೆ ಅವರ ಕೊಳಕುತನ, ಕೆಟ್ಟ ಭಾಷೆ, ಹರುಕು ಬಟ್ಟೆ ಅದು ಇದು ಹೀಗೆ ನೂರೆಂಟು ಕಾರಣ ಕೊಟ್ಟು.

ಛೆ! ಆ ಬೀದಿ ಮಕ್ಕಳ ಜೊತೆ ಆಡಲು ಕಳಿಸು ವುದೆ? ನಮ್ಮ ಅಂತಸ್ತೇನು? ಪಕ್ಕದ ಬಿಲ್ಡಿಂಗಿನ ಮಿಸೆಸ್ ಶರ್ಮ, ಎದುರು ಮನೆಯ ಮಿಸೆಸ್ ರಾವ್, ಕೊನೆ ಮನೆಯ ನಿಕಿತಾ ಜೈನ್ ಎಲ್ಲ ಏನೆಂದಾರು!

ಅಂದಿನಿಂದ ಇವಳದು ನಿತ್ಯ ಸಾಯಂಕಾಲ ಇದೇ ಕಾಯಕ .....ಬಾಲ್ಕನಿಯಲ್ಲಿ ನಿಂತು ಗ್ರಿಲ್ನಲ್ಲಿ ಹಣುಕಿ ಹೊರನೋಡುತ್ತಾ ನಿಲ್ಲುವುದು ....ಆ ಬೀದಿ ಮಕ್ಕಳಾಡುವ ಆಟಗಳನ್ನು ಕಣ್ತುಂಬಿಕೊಳ್ಳುವುದು, ತಾನೇ ಆಡುತ್ತಿರುವಂತೆ ಪ್ರತಿಕ್ರಿಯಿಸುವುದು.
ಕತ್ತಲೆಯಾಗುವವರೆಗೂ ಅವರ ಆಟ ಮುಂದುವರಿಯುತ್ತದೆ. ಇವಳ ನೋಟವೂ.... ನಂತರ ಕಾಲು ಸೋತಂತೆ, ಮಂಕು ಮುಖದಿಂದ ಒಳಬರುತ್ತಾಳೆ.

ಈ ದಿನಚರಿ ತಪ್ಪಿಸಲು ನಾನು ಏನೇನೆಲ್ಲ ಮಾಡಿದೆ ಗೊತ್ತೆ ? ಕಂಪ್ಯೂಟರ್ ಗೇಮ್ಸ್, ಡಿಯೊ ಗೇಮ್ಸ್, ಕಾರ್ಟೂನ್ ಫಿಲ್ಮ್, ರಿಮೋಟ್ ಏರೋಪ್ಲೇನ್..... ಒಂದೇ ಎರಡೇ ...ಊಹುಂ ....ಯಾವುದೂ ಅವಳ ಕಣ್ಣುಗಳಲ್ಲಿ ಬೀದಿ ಮಕ್ಕಳ ಆಟ ನೋಡುತ್ತಿರುವಾಗ ಕಾಣುವ ಹೊಳಪನ್ನು ತರಲಿಲ್ಲ.

ನನ್ನ ಸಮೃದ್ಧ ಬಾಲ್ಯದ ನೆನಪಾಗುತ್ತದೆ. ....ತುಂಬಾ ಮಳೆ ಎಂದು ಶಾಲೆಗೆ ರಜೆ ಕೊಟ್ಟರೆ ಸಾಯಂಕಾಲದವರೆಗೂ ರಸ್ತೆ, ಚರಂಡಿ ನೀರಿನಲ್ಲಿ ಅಟವಾಡುತ್ತಿದ್ದುದು ... ಮನೆಯೆದುರಿನ ಚಿಕ್ಕ ಹಳ್ಳದ ನೀರಿನಲ್ಲಿರುತ್ತಿದ್ದ ಬಣ್ಣ ಬಣ್ಣದ ಕಲ್ಲುಗಳನ್ನು ತೇಯ್ದು ಆ ಬಣ್ಣಗಳನ್ನು ಮೈ ,ಮುಖಕ್ಕೆಲ್ಲ ಬಳಿದುಕೊಂಡು ಯಕ್ಷಗಾನದ ಬಣ್ಣದ ವೇಷ ಕಟ್ಟಿದ್ದು.... ಮಾವಿನಮರದ ಕೊಂಬೆಗೆ ಜೋಕಾಲಿ ಕಟ್ಟಿ ಜೋರಾಗಿ ಜೀಕಿ ಬಿದ್ದದ್ದು .... ಸೈಕಲ್ ಕಲಿಯುತ್ತೇನೆಂದು ಹೊಂಗೆ ಮರದ ಬಳಿಯ ಏರಿನಿಂದ ಸ್ಪೀಡಾಗಿ ಬಂದು ಜಾರಿ ಬಿದ್ದು ಕಾಲು ಮುರಿದುಕೊಂಡದ್ದು .....ಮದುವೆಯಾಟ ಆಡೋಣ ಎಂದು ಪುಟ್ಟ ರಶ್ಮಿಗೂ ಮತ್ತು ತುಂಟ ರಾಮುಗೂ ಶೃಂಗರಿಸಿ ಕುಳ್ಳಿರಿಸಿ ಆರತಿ ಎತ್ತಿದ್ದು .....ತಂಗಿಗೆ ಸ್ಕೂಟರ್ ಸವಾರಿ ಮಾಡಿಸುತ್ತೇನೆಂದು ತೆಂಗಿನ ಹೆಡೆಯ ಮೇಲೆ ಕೂರಿಸಿ ಎಳೆದದ್ದು ......ಅವಳಿಗೆ ಸೌತೆಮಿಡಿ ಕೊಡುತ್ತೇನೆಂದು ಕಹಿಹಿಂಡಲೆ ಕಾಯಿ ತಿನ್ನಿಸಿ ಅಳಿಸಿದ್ದು ......ಕಣ್ಣೆ ಮುಚ್ಚೆ ಆಟವಾಡುವಾಗ ದೊಡ್ಡಜ್ಜನಮನೆಯ ಕತ್ತಲೆಕೋಣೆಯಲ್ಲಿ ಗಂಟೆಗಟ್ಟಲೆ ಅವಿತು ಕುಳಿತದ್ದು......ಅಜ್ಜನ ಹತ್ತಿರ ತೆಂಗಿನ ಮಡಿಲುಗಳ ಚಾಪೆ ನೇಯಿಸಿಕೊಂಡು ಸೀಮಾ ಮನೆಯ ಅಂಗಳದಲ್ಲಿ ಗುಡಿಸಲು ಕಟ್ಟಿ ಖಾರ ಅವಲಕ್ಕಿ ಮಾಡಿ ತಿಂದದ್ದು.......ಕೆಳಗಿನ ಗದ್ದೆಯ ಹೊಳೆಯ ಒಂಟಿ ಸಂಕದ ಮೇಲೆ ದೊಂಬರ ಹುಡುಗಿಯಂತೆ ಸರ್ಕಸ್ ಮಾಡಿ ನಡೆಯುತ್ತಿದ್ದುದು.... ಭತ್ತದ ಕಣದ ಮೂಲೆಯಲ್ಲಿದ್ದ ಹುಲ್ಲಿನ ಗೊಣಬೆ ಹತ್ತಿ ಜಾರುತ್ತಿದ್ದುದು.... ತುಳಸಿಯೊಂದಿಗೆ ಹುಣಸೇ ಮರದ ಹಿಂದೆ ಅವಿತು ಕುಳಿತು, ಸಾಯಂಕಾಲದ ವೇಳೆ ಆಚೆ ದಿಂಬದ ತನ್ನ ಮನೆಗೆ ಹೋಗುತ್ತಿದ್ದ ಮಡಿವಾಳ ಗಂಗೆಯನ್ನು ಗೂಬೆಯಂತೆ ಕೂಗಿ ಹೆದರಿಸುತ್ತಿದ್ದುದು.....ಬೇಸಗೆ ಬಂತೆಂದರೆ ರಸ್ತೆಯಲ್ಲಿ ಡಾಂಕಿ ಮಂಕಿ, ಉಪ್ಪಾಟ, ಸಗಣಿ ಕೋಲು ಇತ್ಯಾದಿ ಆಟಗಳನ್ನು ರಾತ್ರಿಯವರೆಗೂ ಆಡುತ್ತಿದ್ದುದು .....ಸಾಯಂಕಾಲ ರೈಲು ನೋಡಲು ದೂರದ ಬ್ಯಾಣದ ಬಳಿಯಿದ್ದ ರೈಲ್ವೆ ರಸ್ತೆಗೆ ಓಡುತ್ತಿದ್ದುದು..........ಓಹ್ ನೆನೆದಷ್ಟೂ ಮುಗಿಯದ ನೆನಪಿನ ಸುರುಳಿ!

ಈ ಲೋಕಕ್ಕೆ ಜಾರಿದಾಗ ಗ್ರಿಲ್ ಹಿಂದೆ ನಿಂತ ಮಂಕು ಕಣ್ಗಳ ಮಗಳ ಮುಖ ನೋಡಿ ನನ್ನ ಕಣ್ಣಂಚು ಒದ್ದೆಯಾಗುತ್ತದೆ.
ನಿಧಾನಕ್ಕೆ ಹೊರಬಾಗಿಲು ತೆಗೆದು, ಹೋಗು ಪುಟ್ಟ ಎನ್ನುತ್ತೇನೆ.... ಸಂತಸದಿಂದ ಅರಳುವ ಅವಳ ಕಣ್ಗಳ ಬೆಳಕಲ್ಲಿ ಮಿಸೆಸ್ ಶರ್ಮ, ಮಿಸೆಸ್ ರಾವ್, ನಿಖಿತಾ ಜೈನ್ ಎಲ್ಲರೂ ಮಸುಕಾಗುತ್ತಾರೆ.

ಬೇಸಿಗೆ ರಜೆ ಮಕ್ಕಳ ಹಕ್ಕು

ಎಪ್ರಿಲ್ ೨೯, ೨೦೧೧ ವಾರ್ತಾಭಾರತಿ

ಹಿಂದೆಲ್ಲ ವಿದ್ಯಾರ್ಥಿಗಳು, ಮಕ್ಕಳು ಬೇಸಿಗೆಯ ಕಾಲಕ್ಕಾಗಿ ಕಾಯುತ್ತಿದ್ದರು. ಸುಡುವ ಬಿಸಿಲು ಆಕಾಶದಿಂದ ಸುರಿ ಯುತ್ತಿದ್ದರೂ ಅದು ಅವರ ಪಾಲಿಗೆ ತಂಪಾಗಿ ಕಾಣುತ್ತಿತ್ತು. ಇದಕ್ಕಿರುವ ಕಾರಣ ಒಂದೇ. ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸ ಲಾಗುತ್ತಿತ್ತು. ಸುಮಾರು ಒಂದೂವರೆ ತಿಂಗಳು ಮಕ್ಕಳ ಪಾಲಿಗೆ ‘ರಜೆ’ಯ ಹಬ್ಬ. ಈ ಸಂದರ್ಭದಲ್ಲಿ ಮೇಷ್ಟ್ರುಗಳ ಭಯವಿಲ್ಲ. ಪಾಠದ ಹಂಗಿಲ್ಲ. ಬೆಳಗ್ಗೆ ಎದ್ದ ಕೂಡಲೇ ಶಾಲೆಗೆ ಸಿದ್ಧವಾಗಬೇಕಾಗಿಲ್ಲ. ನಾಲ್ಕು ಗೋಡೆಗಳ ನಡುವೆ ಬೆಳಗ್ಗಿನಿಂದ ಸಂಜೆಯ ವರೆಗೆ ಜೈಲಿನ ಬದುಕನ್ನು ಕಳೆಯಬೇಕಾಗಿಲ್ಲ. ಪರೀಕ್ಷೆಗೆ ಹೆದರಬೇಕಾಗಿಲ್ಲ. ಮನೆಯಲ್ಲಿ ಹೋಮ್‌ವರ್ಕ್‌ನ ರಗಳೆಯೂ ಇಲ್ಲ. ಈ ಕಾರಣಕ್ಕಾಗಿಯೇ ಮಕ್ಕಳು ಬೇಸಿಗೆಗಾಗಿ ಕಾಯುತ್ತಿದ್ದರು.

ಹಿಂದೆಲ್ಲ ಬೇಸಿಗೆಯನ್ನು ಮಕ್ಕಳು ಅನುಭವಿಸುವ ರೀತಿಯೂ ಭಿನ್ನವಾಗಿ ರುತ್ತಿತ್ತು. ಮಕ್ಕಳು ನಡೆದದ್ದೇ ದಾರಿ. ಆಡಿದ್ದೇ ಆಟ. ಬೇಸಿಗೆಯಲ್ಲಿ ಗೇರು, ಮಾವು ವೊದಲಾದ ಹಣ್ಣುಗಳು ಕಣ್ಣು ಬಿಡುವ ಸಮಯ. ಬೀದಿಯಲ್ಲಿ ಬೆಳೆದು ನಿಂತ ಮಾವು, ಗೇರು ಗಿಡಗಳನ್ನು ಹತ್ತಿ ಹಣ್ಣುಗಳನ್ನು ಕೊಯ್ಯುವುದು ಮಕ್ಕಳ ದೊಡ್ಡ ಸಾಹಸ. ಕಲ್ಲೆಸೆದು ಮಾವುಗಳನ್ನು ಕೆಡವುದು, ಕಾಡು, ಗುಡ್ಡ ಅಲೆದು ನೇರಳೆ, ಪೇರಳೆ, ನೆಲ್ಲಿಕಾಯಿ ಸಂಗ್ರಹಿಸುವುದು, ಗೇರು ಬೀಜಗಳನ್ನು ಸಂಗ್ರಹಿಸಿ ಮಾರುವುದು ಇವೆಲ್ಲ ಮಕ್ಕಳ ಪಾಲಿನ ಭಾರೀ ಸಾಹಸಗಳು. ಇಲ್ಲಿ ಮಕ್ಕಳಿಗೆ ಯಾರೂ ಗುರುಗಳಿಲ್ಲ. ಅವರಿಗೆ ಅವರೇ ನಾಯಕರು. ನದಿ, ಕೆರೆಗಳಿಗೆಲ್ಲ ಮಕ್ಕಳೇ ರಾಜರು. ತಮಗೆ ತಾವೇ ಈಜು ಕಲಿತು, ನದಿಯ ಆಳ, ಅಗಲಗಳನ್ನು ಅಳೆಯುತ್ತಾರೆ. ಮೈದಾನದಲ್ಲಿ ಕ್ರಿಕೆಟ್ ಎನ್ನುವ ಏಕತಾನದ ಆಟಕ್ಕಿಂತಲೂ, ಗ್ರಾಮೀಣ ಆಟಗಳಲ್ಲಿ ಅವರು ತಲ್ಲೀನರಾಗಿರುತ್ತಾರೆ. ಗೋರಿ, ಕಬಡ್ಡಿ, ಕುಂಟೇಬಿಲ್ಲೇ, ಚಿನ್ನೆ ದಾಂಡು ಇತ್ಯಾದಿ ಆಟಗಳಿಗೆ ಜೀವ ಬರುತ್ತದೆ. ಈ ಆಟಗಳಲ್ಲಿ ಅವರಿಗೆ ಅವರೇ ಚಾಂಪಿಯನ್‌ಗಳು.

ಬೇಸಿಗೆಯ ಮಕ್ಕಳ ಆಟ-ಪಾಠಗಳಿಗೆ ಪ್ರಕೃತಿಯೇ ಗುರು. ಬಿಸಿಲು ಅವರಿಗೆ ತಾಗುವುದೇ ಇಲ್ಲ. ಕಾಡಿನಲ್ಲಿ ಅರಳುವ ಎಲ್ಲ ಹೂವುಗಳ ಹೆಸರು ಅವರಿಗೆ ಗೊತ್ತಿರುತ್ತಿತ್ತು. ಕಾಡುಹಣ್ಣುಗಳ ಸ್ವಾದವನ್ನು ಅವರು ಅರಿತಿದ್ದರು. ಇಡೀ ವರ್ಷ ಶಾಲೆಯಲ್ಲಿ ಅನುಭವಿಸಿದ ಕಟ್ಟುಪಾಡನ್ನೆಲ್ಲ ಪ್ರಕೃತಿಯ ಬಯಲಲ್ಲಿ ಹರಿದೊಗೆದು, ಜಿಗರೆಯಂತೆ ಜಿಗಿಯುತ್ತಾ ನಲಿದಾಡುತ್ತಾರೆ. ಅವರು ಶಾಲೆಯಲ್ಲಿ ಕಲಿತುದಕ್ಕಿಂತಲೂ ಹೆಚ್ಚು ವಿಷಯಗಳನ್ನು ಬೇಸಿಗೆಯಲ್ಲಿ ಈ ಪ್ರಕೃತಿಯ ಮಡಿಲಲ್ಲಿ ಕಲಿಯುತ್ತಿದ್ದರು. ಅವರೊಳಗಿನ ಸಾಹಸ, ಸೃಜನಶೀಲತೆ ಈ ಪ್ರಕೃತಿಯ ಮಡಿಲಲ್ಲಿ ಚಿಗುರೊಡೆಯುತ್ತಿತ್ತು. ಅವರೊಳಗೆ ಅವಿತಿದ್ದ ಪ್ರತಿಭೆಯಲ್ಲ ಈ ಪ್ರಕೃತಿಯ ಮಡಿಲಲ್ಲಿ ಜೀವ ಪಡೆಯುತ್ತಿತ್ತು. ಅವರ ಚಟುವಟಿಕೆಗಳಿಗೆ ಇಲ್ಲಿ ಪರೀಕ್ಷೆಯಿರಲಿಲ್ಲ. ಅಂಕ ಹಾಕುವವರೂ ಇರಲಿಲ್ಲ. ಆದರೆ ಎಲ್ಲ ವಿದ್ಯಾರ್ಥಿಗಳೂ ಪ್ರಕೃತಿಯ ಮಡಿಲಲ್ಲಿ ನೂರಕ್ಕೆ ನೂರು ಅಂಕ ಪಡೆದು ಉತ್ತೀರ್ಣರಾಗುತ್ತಿದ್ದರು.

ಆದರೆ ದುರದೃಷ್ಟವಶಾತ್ ಇಂದಿನ ದಿನಗಳಲ್ಲಿ ಮಕ್ಕಳಿಗೆ ಆ ಭಾಗ್ಯವಿದೆಯೇ? ವರ್ಷವಿಡೀ ಜೈಲಿನಂತಹ ಶಾಲೆಯ ನಾಲ್ಕು ಗೋಡೆಗಳೊಳಗೆ ಕಳೆಯುವ ಮಕ್ಕಳಿಗೆ ಬೇಸಿಗೆ ರಜೆಯೂ ಹಿತಕರವಾಗಿರುವುದಿಲ್ಲ. ಸಾಧಾರಣ ವಾಗಿ ಬೇಸಿಗೆ ರಜೆಯನ್ನು ಮಕ್ಕಳಿಗೆ ವಿಶೇಷ ತರಗತಿಗಳಿಗಾಗಿ ಪಾಲಕರು ಬಳಸಿಕೊಳ್ಳುತ್ತಾರೆ. ಅಥವಾ ಬೇಸಿಗೆ ಶಿಬಿರವೆನ್ನುವ ಕೃತಕ ವಾತಾವರಣದಲ್ಲಿ ಮಕ್ಕಳನ್ನು ಕಳೆಯ ಬಿಡಲಾಗುತ್ತದೆ. ಅಲ್ಲಿ ಮಕ್ಕಳಿಗೆ ಕಲೆ, ಹಾಡು, ಸಂUತ ಇತ್ಯಾದಿಗಳ ಕುರಿತಂತೆ ಬಲವಂತದ ಉಣಿಸನ್ನು ಉಣಿಸಲಾಗುತ್ತದೆ. ರಜೆಯ ನ್ನಾದರೂ ತಮ್ಮ ಇಷ್ಟದಂತೆ ಕಳೆಯುವ ಹಕ್ಕು ಮಕ್ಕಳಿಗಿಲ್ಲ. ಇತ್ತೀಚಿನ ದಿನಗಳಲ್ಲಿ ರಜೆಯ ದಿನಗಳಲ್ಲಿ ಮಕ್ಕಳು ಸ್ವತಂತ್ರವಾಗಿ ಹೊರಗಡೆ ತಿರುಗಾಡುವಂತಹ ವಾತಾವರಣವೂ ಇಲ್ಲ. ನಗರ ಪ್ರದೇಶಗಳಲ್ಲಿ ಇದು ಸಾಧ್ಯವೂ ಇಲ್ಲ. ಇದರ ಲಾಭವನ್ನು ತಮ್ಮದಾಗಿಸಿಕೊಳ್ಳಲು ಇಂದು ಬೇಸಿಗೆ ರಜೆ ಶಿಬಿರವೆನ್ನುವ ದಂಧೆ ಆರಂಭವಾಗಿದೆ. ಈ ಶಿಬಿರಗಳಲ್ಲಿ ಮಕ್ಕಳನ್ನು ಸೇರಿಸಬೇಕಾದರೆ ಮತ್ತೆ ಶುಲ್ಕಗಳಿವೆ. ಜೊತೆಗೆ ಸೃಜನಶೀಲತೆಯ ಹೆಸರಿನಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಟ್ಟುದನ್ನು ಮಕ್ಕಳು ಅನುಸರಿಸಬೇಕು. ತಂಟೆಗಳು, ಜಗಳ, ಆಟ, ಪಾಟ ಎಲ್ಲಕ್ಕೂ ಮತ್ತೆ ಕಡಿವಾಣ. ತಮ್ಮ ಮನಸ್ಸಿಗೆ ತೋಚಿದುದನ್ನು ಮಾಡುವ ಯಾವ ಅಧಿಕಾರವೂ ಇಲ್ಲ. ಮರಗಳಿಗೆ ಹತ್ತುಮದು, ನದಿ ಕಂಡಲ್ಲಿ ಈಜುವುದು ಇತ್ಯಾದಿಗಳಿಗೂ ಅವಕಾಶವಿಲ್ಲ. ಒಟ್ಟಿನಲ್ಲಿ ಶಾಲೆಯ ಇನ್ನೊಂದು ಮುಖವಾಗಿ ಈ ಶಿಬಿರಗಳು ಕೆಲಸ ಮಾಡುತ್ತವೆ.

ದುರದೃಷ್ಟವಶಾತ್ ಹಳ್ಳಿಗಳಲ್ಲೂ ಬೇಸಿಗೆ ಶಿಬಿರಗಳು ಕಾಲಿಟ್ಟಿವೆ. ಸ್ವತಂತ್ರವಾಗಿ ಹಾರುವ ಚಿಟ್ಟೆಗಳನ್ನು ಪಂಜರದಲ್ಲಿಟ್ಟು ಹಾರುವುದಕ್ಕೆ ಕಲಿಸುವ ಪ್ರಯತ್ನದಂತಿದೆ ಈ ಬೇಸಿಗೆ ಶಿಬಿರ. ಬೇಸಿಗೆ ರಜೆ ಮಕ್ಕಳ ಹಕ್ಕು. ಆ ರಜೆಯಲ್ಲಿ ಮಕ್ಕಳನ್ನು ಮಕ್ಕಳ ಪಾಡಿಗೆ ಬಿಡಬೇಕು. ಪೇಟೆಗಳಲ್ಲಿ ಇದಕ್ಕೆ ಅವಕಾಶವಿಲ್ಲ ನಿಜ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಹಳ್ಳಿಗಳಲ್ಲಿ ರುವ ತಮ್ಮ ಅಜ್ಜನ ಮನೆಗೆ, ಸಂಬಂಧಿಕರ ಮನೆಗೆ ಕರೆದೊಯ್ಯಬೇಕು. ಅಲ್ಲಿನ ಪ್ರಕೃತಿಯ ಮಡಿಲಲ್ಲಿ ಮಕ್ಕಳನ್ನು ಮುಕ್ತವಾಗಿ ಆಡುವುದಕ್ಕೆ, ಓಡಾಡುವುದಕ್ಕೆ ಬಿಡಬೇಕು. ಸಾಧ್ಯವಾದರೆ ಪಾಲಕರೂ ಈ ಮಕ್ಕಳ ಸಂತೋಷದೊಂದಿಗೆ ಭಾಗಿಯಾಗಬೇಕು. ಅವರ ಆಟ, ನೋಟ ಗಳಲ್ಲಿ ಜೊತೆಯಾಗಬೇಕು. ಪ್ರಕೃತಿಯ ಬಯಲಲ್ಲಿ ಮಕ್ಕಳು ಸಹಜವಾಗಿ ಅರಳುವುದಕ್ಕೆ ಬೇಸಿಗೆ ರಜೆ ಒಂದು ಅವಕಾಶವಾಗಬೇಕು. ಎಲ್ಲ ಪಾಲಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

Sunday, January 9, 2011

ಟ್ರೈಕೋಡರ್ಮದಲ್ಲೊಂದು ಪ್ರಯೋಗ ನಡೆಸಿದ ಕೃಷಿಕ ಅರವಿಂದ್-ಕಡಿಮೆ ವೆಚ್ಚ ಉತ್ತಮ ಇಳುವರಿಗಾಗಿ ಎರೆಗೊಬ್ಬರ

ರಾಜ್ಯದ ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ಸಾಹಿ ಬೆಳೆಗಾರರೋರ್ವರು ತಮ್ಮ ತೋಟದಲ್ಲಿ ಒಂದು ಪ್ರಯೋಗಾಲಯವನ್ನು ಖಾಸಗಿಯಾಗಿ ಸ್ಥಾಪಿಸಿದ್ದು, ಕರ್ನಾಟಕದಲ್ಲೇ ಇದು ಪ್ರಥಮ ಖಾಸಗಿ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೃಷಿ ಪಂಡಿತ ಅರವಿಂದ್ ತಮ್ಮ ಪ್ರಯೋಗಾಲಯದಲ್ಲಿ ಜೈವಿಕ ಶಿಲೀಂಧ್ರನಾಶಕ ಟ್ರೆಕೋಡರ್ಮವನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿದ್ದಾರೆ ಹಾಗೂ ಇತ್ತೀಚೆಗೆ ದ್ರವರೂಪದ ಸಾವಯವ ಗೊಬ್ಬರವನ್ನು ತಯಾರಿಸಿ ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ.

ಸಾಮಾನ್ಯವಾಗಿ ಬೆಳೆಗಳಿಗೆ ಬರುವ ರೋಗಗಳಿಂದ ಇಳುವರಿಯ ಸುಮಾರು ಶೇ.೨೫ರಷ್ಟು ಹಾಯಾಗುತ್ತದೆ. ಇವುಗಳನ್ನು ರಾಸಾಯಕ ಕೀಟನಾಶಕಗಳಿಂದ ಯಂತ್ರಿಸಬಹುದಾದರೂ ಅವುಗಳಿಂದಾಗುವ ದುಷ್ಪರಿಣಾಮ ಅಪಾರ. ಈ ಟ್ಟಿನಲ್ಲಿ ಜೈವಿಕ ಕೀಟನಾಶಕಗಳನ್ನು ಬಳಸಿ ರೋಗಗಳನ್ನು ಹತೋಟಿ ಮಾಡಲು ಸಾಧ್ಯ ಎನ್ನುತ್ತಾರೆ ಅರವಿಂದ್.

ಭೂತನಕಾಡು ಎಸ್ಟೇಟ್‌ನ ಕೃಷಿಪಂಡಿತ್ ಪ್ರಶಸ್ತಿ ವಿಜೇತ ಬಿ.ಸಿ.ಅರವಿಂದ್ ಹೇಳುವಂತೆ, ಟ್ರೆಕೋಡರ್ಮ ಒಂದು ಶಿಲೀಂಧ್ರವಾಗಿದ್ದು ಬೆಳೆಗಳಲ್ಲಿ ಬರುವ ಸೊರಗುರೋಗ, ಕಾಂಡಕೊಳೆಯುವಿಕೆ, ಪೈರು ಕೊಳೆಯುವ ರೋಗ, ಎಲೆಚುಕ್ಕೆ ರೋಗ, ಸಸಿ ಸಾಯುವ ರೋಗ, ಒಣಗುವ ರೋಗಗಳನ್ನು ಬಹಳ ಪರಿಣಾಮಕಾರಿಯಾಗಿ ಯಂತ್ರಿಸುತ್ತದೆ. ೧೯೩೦ರಿಂದಲೂ ವಿಶ್ವಾದ್ಯಂತ ವ್ಯಾಪಕವಾಗಿ ಮಣ್ಣಿನಲ್ಲಿರುವ ರೋಗಾಣುಗಳ ರ್ಮೂಲನೆಗೆ ಬಳಸಲಾಗುತ್ತದೆ ಎನ್ನುತ್ತಾರೆ. ಅರವಿಂದ್ ಹೇಳುವಂತೆ ಮಲೆನಾಡಿನ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ, ಬಾಳೆ, ಶುಂಠಿಗಳಿಗೆ ಬರುವ ಬೇರುರೋಗ, ಸೊರಗುರೋಗ, ಕೊಳೆರೋಗಗಳ ತಡೆಯುವಿಕೆಗೆ ಟ್ರೈಕೋಡರ್ಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ, ಟ್ರೆಕೋ ಡರ್ಮವನ್ನು ಬಳಸುವ ರೀತಿ ಹಾಗೂ ಅದರ ಉಪಯೋಗಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ ಎನ್ನುತ್ತಾರೆ.

ಟ್ರೆಕೋಡರ್ಮ ಶಿಲೀಂಧ್ರವು ಬೇರುಗಳ ಸಮೀಪದಲ್ಲಿ ಬೆಳೆದು, ಬೇರಿನ ಸುತ್ತಲೂ ಅತ್ಯಂತ ಪ್ರಬಲ ಕವಚವನ್ನು ರ್ಮಿಸಿ ಹಾಕಾರಕ ಶಿಲೀಂಧ್ರಗಳಿಂದ ಬೇರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಬೆಳೆಗಳಿಗೆ ಟ್ರೆಕೋಡರ್ಮವನ್ನು ಸಿಂಪಡಿಸಿದ ಮೇಲೆ ೨೦ ದಿವಸಗಳ ಕಾಲ ರಾಸಾಯಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡಬಾರದು. ಟ್ರೆಕೋಡರ್ಮದ ಜೀವಿತಾವಧಿ ೬ ತಿಂಗಳು ಮಾತ್ರ. ಬಳಿಕ ಅದರಲ್ಲಿನ ಜೀವಾಣುಗಳು ಸಾಯುತ್ತವೆ. ಅವಧಿ ಮೀರಿದ ಟ್ರೆಕೋಡರ್ಮವನ್ನು ಬಳಸಲೇಬಾರದು. ರೈತರು ಪೇಟೆಯಲ್ಲಿ ಖರೀದಿಸುವಾಗ ತಯಾರಿಸಿದ ದಿನಾಂಕವನ್ನು ತಪ್ಪದೇ ಗಮಸಬೇಕು.

ಬಳಕೆಯ ವಿಧಾನ: ಟ್ರೈಕೋಡರ್ಮವು ಬೆಳೆಗಳಿಗೆ ಬಾಧಿಸುವ ರೋಗಗಳನ್ನು ಬರದಂತೆ ತಡೆಯುತ್ತದೆಯೇ ಹೊರತು ಈಗಾಗಲೇ ಬಂದಿರುವ ರೋಗವನ್ನು ರ್ಮೂಲನೆ ಮಾಡುವುದಿಲ್ಲ. ಪ್ರತಿ ಬೆಳೆಗೆ ೫೦ ಗ್ರಾಂ ಟ್ರೆಕೋಡರ್ಮವನ್ನು ಹಾಕಿ ಅದರ ಮೇಲೆ ದನದ ಗೊಬ್ಬರ ಅಥವಾ ಬೇವಿನಪುಡಿ ಸಾವಯವ ಗೊಬ್ಬರವನ್ನು ಹಾಕಿದರೆ ಜೀವಾಣುಗಳು ಅದರ ಮೇಲೆ ಬೆಳೆಯುತ್ತದೆ. ಬೆಳೆಗಳಿಗೆ ಹಾಕುವಾಗ ತೇವಾಂಶ ಇರಬೇಕು. ಟ್ರೆಕೋಡರ್ಮವು ಕರಿಮೆಣಸಿನ ಬೆಳೆಗೆ ಹಾ ಮಾಡುವ ಸೊರಗುರೋಗಕ್ಕೆ ಬಹಳ ಪರಿಣಾಮಕಾರಕ. ವರ್ಷಕ್ಕೆ ೨ ಬಾರಿ ಅಂದರೆ ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಟ್ರೆಕೋಡರ್ಮವನ್ನು ಬಳಸಬೇಕು. ಇದರ ಬಳಕೆಯಿಂದ ರೋಗಾಣುಗಳನ್ನು ಸಾಯಿಸಬಲ್ಲ ಪ್ರತಿರೋಗಾಣುಗಳು ಉತ್ಪತಿಯಾಗುತ್ತದೆ. ಅದು ವೃದ್ಧಿ ಹೊಂದಿ ಮಣ್ಣಿನಲ್ಲಿಯೇ ಇದ್ದು, ಬೆಳೆಗೆ ಹಾ ಮಾಡುವ ರೋಗಾಣುವನ್ನು ಸಾಯಿಸಬಲ್ಲದು.

ಇತ್ತೀಚೆಗೆ ಅಗಾಧ ಪ್ರಮಾಣದಲ್ಲಿ ಪೀಡೆನಾಶಕಗಳನ್ನು ಅನಗತ್ಯವಾಗಿ ಬಳಸಿ ಪರಿಸರ ಹಾಳಾಗುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಹಲವಾರು ಉಪಯೋಗಕಾರಿ ಜೀವಿಗಳು ನಶಿಸಿ ಹೋಗುತ್ತದೆ. ಆಹಾರದಲ್ಲಿ ರಸಾಯಕ ಕೀಟನಾಶಕಗಳ ಉಳಿಕೆ ಅಂಶವು ಹೆಚ್ಚಾಗುತ್ತಿದೆ. ಆದುದರಿಂದ ಜೈವಿಕ ಪೀಡೆನಾಶಕಗಳನ್ನು ಬಳಸಿ ಪರಿಸರ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯಗಳಲ್ಲೊಂದಾಗಿದೆ. ಈ ದಿಶೆಯಲ್ಲಿ ಪ್ರಯತ್ನಿಸಲಾಗಿ, ಟ್ರೆಕೋಡರ್ಮ ಒಂದು ಪರಿಸರ ಸ್ನೇಹಿ ಜೈವಿಕ ಶಿಲೀಂಧ್ರನಾಶಕವೆಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ಬಿ.ಸಿ.ಅರವಿಂದ್‌ರನ್ನು ೯೪೪೮೩೨೦೪೭೩ರಲ್ಲಿ ಸಂಪರ್ಕಿಸಬಹುದಾಗಿದೆ.
-ಎಸ್.ಎನ್.ಮಂಜುನಾಥ್ ಭಟ್, ಮೂಡಿಗೆರೆ

ಕಡಿಮೆ ವೆಚ್ಚ ಉತ್ತಮ ಇಳುವರಿಗಾಗಿ ಎರೆಗೊಬ್ಬರ

ಅತಿಯಾದ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಉತ್ಪಾದನಾ ವೆಚ್ಚ ಅಧಿಕವಾಗಿ ಮಣ್ಣಿನ ಆರೋಗ್ಯ ಹಾಳಾಗುವುದರ ಜೊತೆಗೆ ಪರಿಸರ ಮಾಲಿನ್ಯ ಮತ್ತು ನಾವು ಸೇವಿಸುವ ಆಹಾರದಲ್ಲಿ ವಿಷ ಬೆರಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಸಾಯಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಸಾವಯವ ಕೃಷಿ ಪದ್ಧತಿ ಅನುಸರಣೆ ಅತ್ಯಗತ್ಯವಾಗಿದೆ. ಎರೆಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದರೊಂದಿಗೆ ಗುಣಮಟ್ಟದ ಆಹಾರ ಉತ್ಪಾದನೆ ಮಾಡುವ ಸುಸ್ಥಿರ ಬೇಸಾಯ ಪದ್ದತಿ ಒಂದಾಗಿದೆ.

ಎರೆಹುಳುವಿನ ಮುಖ್ಯ ಕಾರ್ಯವೆಂದರೆ ಭೂಮಿಯನ್ನು ಉಳುಮೆ ಮಾಡುವುದು ಮತ್ತು ಹಿಕ್ಕೆಗಳನ್ನು ಹಾಕುವುದಾಗಿದೆ. ಭೂಮಿಯ ಉಳುಮೆ ಸಾಮಾನ್ಯ ರೀತಿಯಲ್ಲಿ ಎರಡುವರೆ ಅಡಿಯವರೆಗೆ ಮಾಡಬಹುದಾಗಿದೆ. ಆದರೆ ಎರೆಹುಳವು ೯ ಅಡಿಗಿಂತಲೂ ಹೆಚ್ಚು ಉಳುಮೆ ಮಾಡಿ ಬೆಳೆಗೆ ಯಾವುದೇ ತೊಂದರೆ ಇಲ್ಲದಂತೆ ಮಾಡುವುದರ ಜೊತೆಗೆ ಸಾವಯವ ಪದಾರ್ಥಗಳನ್ನು ತಿನ್ನುತ್ತಾ ಸಾಗುವಾಗ ಅಲ್ಪಪ್ರಮಾಣದ ಆದ್ಯತೆ ಮತ್ತು ಯೂರಿಯಾವನ್ನು ಅದರ ಮೂತ್ರದ ಮೂಲಕ ಸೇರಿಸುತ್ತಾ ಹೋಗುವುದರಿಂದ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಪ್ರತಿ ಕ್ವಿಂಟಾಲ್ ಎರೆಗೊಬ್ಬರದಲ್ಲಿ ೬೦೦-೮೦೦ಗ್ರಾಂ ಸಾರಜನಕ, ೧೦೦೦-೧೧೦೦ಗ್ರಾಂ ರಂಜಕ ಮತ್ತು ೪೦೦-೫೦೦ಗ್ರಾಂ ಪೊಟಾಷ್ ಹೊಂದಿದ್ದು, ಕೊಟ್ಟಿಗೆ ಗೊಬ್ಬರಕ್ಕಿಂತ ೨ ಪಟ್ಟು ಸಾರಜನಕ, ೫ಪಟ್ಟು ರಂಜಕ ಮತ್ತು ಪೊಟಾಷ್ ಹೊಂದಿರುವುದರ ಜೊತೆಗೆ ಕ್ಯಾಲ್ಸಿಯಂ, ಬೋರಾನ್ ಸತು, ಕಬ್ಬಿಣ ಇತರೆ ಲಘು ಪೋಷಕಾಂಶಗಳನ್ನು ಹೊಂದಿರುತ್ತದೆ.

ಎರೆಗೊಬ್ಬರ ತಯಾರಿಕೆ: ಎರೆಗೊಬ್ಬರ ತಯಾರಿಕಾ ಮಡಿಯನ್ನು niರು niಲ್ಲದ ಎತ್ತರದ ಸ್ಥಳದಲ್ಲಿ ಮಾಡಬೇಕಾಗಿದ್ದು, ೭ರಿಂದ ೧೦ ಮೀಟರ್ ಉದ್ದ ೧ಮೀಟರ್ ಅಗಲ ಮತ್ತು ೦.೩ಮೀ ಆಳದ ಮಡಿಯು ಸೂಕ್ತವಾಗಿದೆ. ಇದರಲ್ಲಿ ಗೆದ್ದಲು, ಇರುವೆಗಳು ಕಂಡುಬರಬಾರದಾಗಿದ್ದು, ಕೆಲವೊಮ್ಮೆ ಕಂಡುಬಂದರೆ ಕ್ಲೋರೋಪೈರಿಫಾಸ್ ೨೦ಇಸಿ ಕೀಟನಾಶಕವನ್ನು, ಪ್ರತಿ ಲೀಟರ್ niರಿಗೆ ೨ ಲೀಟರ್ ಬೆರೆಸಿ ಮಡಿ ಪೂರ್ತಿ ನೆನೆಯುವ ಹಾಗೆ ಸಿಂಪಡಿಸಿ ಎಂಟು ಹತ್ತು ದಿನಗಳ ನಂತರ ಕೃಷಿ ತ್ಯಾಜ್ಯ ವಸ್ತುಗಳಾದ ತೆಂಗಿನ ಸಿಪ್ಪೆ/ರು ಹಿಡಿಯುವ ತ್ಯಾಜ್ಯ, ಸೆಗಣಿ/ತಿಪ್ಪೆಗೊಬ್ಬರ, ಕೃಷಿ ತ್ಯಾಜ್ಯ ವಸ್ತುಗಳು, ಎರೆಮಣ್ಣು/ತೋಟದ ಮಣ್ಣು, ಸೆಗಣಿ/ತಿಪ್ಪೆಗೊಬ್ಬರ, ಕಳೆ/ಹಸಿರೆಲೆ/ಹುಲ್ಲು, ಸೆಗಣಿಗೊಬ್ಬರ, ಎರೆಮಣ್ಣು/ತೋಟದ ಮಣ್ಣು ಹಾಗೂ ಒಣಗಿದ ಹುಲ್ಲುಗಳ ವಿವಿಧ ಪದರಗಳ ಈ ಕ್ರಮವಾಗಿ ಕೃಷಿ ತ್ಯಾಜ್ಯ ವಸ್ತುಗಳನ್ನು ೧೫ರಿಂದ ೨೦ಸೆಂ.ಮೀ, ಎರೆಮಣ್ಣನ್ನು ೧ಸೆಂ.ಮೀ ಹಾಗೂ ಸೆಗಣಿ ಗೊಬ್ಬರವನ್ನು ೫ರಿಂದ ೧೦ಸೆಂ.ಮೀ. ದಪ್ಪ ಹಾಕಬೇಕು.

ನಂತರ ೧೦ರಿಂದ ೧೫ದಿನಗಳವರೆಗೆ ಪ್ರತಿದಿನ ಮಡಿಯಲ್ಲಿ ಸಾಕಷ್ಟು ಹಸಿರು ಇರುವಂತೆ ರು ಹಾಕುವುದರಿಂದ ಮಡಿಯಲ್ಲಿ ತುಂಬಿರುವ ಪದಾರ್ಥಗಳು ಕಳೆಯುವುದು. ಈ ರೀತಿ ಕಳೆಯುವುದು ಖಾತರಿಪಡಿಸಿಕೊಂಡ ನಂತರ ೧,೦೦೦ ಎರೆಹುಳುಗಳನ್ನು ಮಡಿಯಲ್ಲಿ ೧೦ಸೆಂ.ಮೀ ಆಳದಲ್ಲಿ ಬಿಡುವುದರೊಂದಿಗೆ ಕೊನೆಯ ಪದರವಾಗಿ ಹುಲ್ಲನ್ನು ೧೦ಸೆಂ.ಮೀ. ದಪ್ಪ ಹರಡಬೇಕು. ಗೊಬ್ಬರ ತಯಾರು ಆಗುವವರೆಗೆ ಮಡಿಯಲ್ಲಿ ಶೇ.೬೦-೭೦ರಷ್ಟು ತೇವಾಂಶ ಇರುವ ಹಾಗೆ ರು ಹಾಕಿ ಎಚ್ಚರ ವಹಿಸಬೇಕು. ಎರೆಹುಳು ಬಿಟ್ಟು ಸುಮಾರು ೪೫ ದಿನಗಳ ನಂತರ ಮಡಿಯ ಮೇಲ್ಪದರದಲ್ಲಿ ಹಿಕ್ಕೆಗಳನ್ನು ಹಾಕಲು ಪ್ರಾರಂಭವಾಗುವುದು ಹಾಗೂ ೭೫-೯೦ ದಿವಸಗಳ ನಂತರ ಶೇ.೮೦ರಷ್ಟು ಕಚ್ಚಾ ಪದಾರ್ಥ ಹಿಕ್ಕೆಯಾಗಿ ಮಾರ್ಪಾಡು ಆಗುವುದೇ ಎರೆಗೊಬ್ಬರ.

ಈ ರೀತಿ ಸಂಗ್ರವಾದಂತಹ ಎರೆಹುಳು ಗೊಬ್ಬರವನ್ನು ಮಡಿಯಿಂದ ತೆಗೆಯುವ ಮುನ್ನ ಒಂದು ವಾರ niರು ಹಾಕುವುದನ್ನು niಲ್ಲಿಸುವುದರಿಂದ ಮಡಿಯ ಮೇಲ್ಪದರಿನಲ್ಲಿ ತೇವಾಂಶ ಕಡಿಮೆಯಾಗಿ ಎರೆಹುಳುಗಳು ತಳಕ್ಕೆ ಹೋಗುತ್ತವೆ. ಸಂಗ್ರಹಿಸಿದ ಗೊಬ್ಬರವನ್ನು ನೆರಳಿನಲ್ಲಿ ಒಣಗಿಸಿ ಸಾಣೆ ಹಿಡಿದು ಚೀಲಗಳಲ್ಲಿ ತುಂಬಿಸಿಡಬೇಕು.

ಒಂದು ಗುಂಟೆ ವಿಸ್ತೀರ್ಣದ ಮಡಿಗಳಿಂದ ೩ ತಿಂಗಳಲ್ಲಿ ಸುಮಾರು ೩.೫ಟನ್ ಎರೆಹುಳು ಗೊಬ್ಬರವನ್ನು ಉತ್ಪಾದಿಸಬಹುದು. ಅಂದರೆ ೧ವರ್ಷದಲ್ಲಿ ೧ಗುಂಟೆಗೆ ೧೨-೨೦ಟನ್ ಗಳಷ್ಟು ಎರೆಹುಳು ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಒಂದು ಸಾವಿರ ಹುಳುಗಳು ಪ್ರತಿದಿನಕ್ಕೆ ೫ಕೆ.ಜಿಯಷ್ಟು ಎರೆಗೊಬ್ಬರವನ್ನು ತಯಾರಿಸುತ್ತದೆ. ಎರೆಹುಳು ಕೃಷಿ ಮಾಡುವಾಗ ಮಡಿಯಲ್ಲಿ ಹುಳ, ಗೆದ್ದಲು, ಕೆಂಚಿಗೆ ಇರುವೆ, ಚಪ್ಪಟೆ ಹುಳು, ಇಲಿ, ಶತಪದಿ, ಕಪ್ಪೆ, ಹಂದಿ, ಪಕ್ಷಿಗಳು ಇತ್ಯಾದಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ಮಾಡಲು ಬೇವಿನಹಿಂಡಿ, ಬೇವಿನ ಎಲೆ ಪುಡಿ, ಖಜೆ ಬೇರಿನ ಪುಡಿ, ಚಮರಂಗ ಪುಡಿ ಹಾಗೂ ಅರಿಶಿಣ ಪುಡಿಯು ಬಳಕೆ ಮಾಡಬಹುದಾಗಿದೆ. ಎರೆಗೊಬ್ಬರವನ್ನು ಬೆಳೆಗಳಿಗೆ ಸುಮಾರು ೧ಟನ್ ಪ್ರತಿ ಎಕರೆಗೆ ಬಳಸುವುದರೊಂದಿಗೆ ಒಳ್ಳೆಯ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
-ಮಂಜುನಾಥ.ಬಿ, ವಾರ್ತಾ ಸಹಾಯಕರು