-ರಘುನಾಥ ಚ.ಹ.
ಸಂಜಿ ಸೂರ್ಯನ ಕುಡುದ ಕೆರೆ ಕೆಂಪಾಗಿತ್ತು. ಲಕಲಕಾಂತ ಹೊಯ್ದಾಡುತಿರೋ ಅಲೆಗಳು ಎದೆಗೆ ಬಡುದಂಗನ್ನಿಸಿ ಕಣ್ಣನೋಟ ಮೀರಿ ನಿಂತ ನೀರುನ ನೋಡುತ ನಿಂತವರು, ತಲೆ ಭೂಚಕ್ರದಂತಾಗಿ ದಿಗಿಲು ಬೀಳುತ್ತಿದ್ದರು. ಊರ ಜನರೆಲ್ಲರ ಸಾರ ಸತುವ ಬಸಕೊಂಡು ದಿವಿನಾಗಿ ಬೆಳೆದು ನಿಂತಿದ್ದ ಜಾಲಿ ಗಿಡಗಳ ಇರುವೂ ಇರದಂಗೆ ತುಂಬಿ ಕೊಂಡಿದ್ದ ಗಂಗಮ್ಮ ಮಾತಾಯೀನ, ಎದೆಯಾಗೆ ಕಣ್ಣಾಗೆ ತುಂಬು ಕಂಡವರು ದಣಿವು ಅನ್ನಿಸಿದಾಗ ಸೋತ ಕಣ್ಣುಗಳನು ತೆಪ್ಪ ಕಟ್ಟುವ ಜನಗಳತ್ತ ಕದುಲಸಿ ಮತ್ತೆ ಜೀವ ತುಂಬುಕೋತಿದ್ದರು. ಸಂಜೀ ಜೊತೆ ಗಂಗಮ್ಮನ ಬಳುಕು ವಯ್ಯಾರಗಳನ್ನು ನೋಡೋಕೆ ಬರೋ ಗುಂಪೂ ಬೆಳೀತಿತ್ತು.
ರತಿದೇವಿ ಜೊತೆಯಾಗೆ ಜಲಕ್ರೀಡೆಗೆ ಹೊರಟ ಕಾಮಣ್ಣನ ತೇರುನಂಗೆ ತೆಪ್ಪ ಚಲುವಾಗಿತ್ತು. ಬಿದುರು ಬೊಂಬುಗಳ ಬಿಗಿದು ಕಟ್ಟಿದ್ದ ತೆಪ್ಪದ ಪ್ರತಿ ಗಳವೂ ಸುಣ್ಣಬಣ್ಣ ಸಿಂಗಾರ ಮಾಡಿಕೊಂಡಿತ್ತು. ಕೆಲವರು ಕಟ್ಟುಗಳ ಲಗುಬಿಗು ಪರೀಕ್ಷೆ ಮಾಡುತ ಇದ್ದರೆ, ಕೆಲವರು ತೆಪ್ಪದ ನಡುಭಾಗದಾಗೆ ಊರದೇವುರ ಕೂರಿಸೋಕೆ ಪೀಠವ ಕಟ್ಟುತ್ತಿದ್ದರು. ತೆಪ್ಪ ಚಲುವಾಗೋ ಸೊಗಸು ನೋಡುತ ಮೈಮರತವರು, ಭಾರೀ ಗಾತ್ರದ ತೆಪ್ಪ ನೀರಮ್ಯಾಗೆ ಹೂವಾಗೋದಾದ್ರೂ ಎಂಗೆ ಅಂತ ಅಂದಾಜು ಮಾಡಿ ಸೋಲುತ್ತಿದ್ದರು.
ಕಣ್ಣುಗಳ ಮೊಕದುದ್ದಕ್ಕೂ ಅರಳಿಸಿಕೊಂಡ ಚಿಳ್ಳೆಪಿಳ್ಳೆಗಳು ತೆಪ್ಪ ಕಟ್ಟುವವರಿಗೆ ಉಸುರು ತಾಗೂವಷ್ಟು ಹತ್ತುರವಾಗಿ, ಅವರು ಬಾಯಿ ಮಾಡುದಾಗ ಹಿಂದಕ್ಕೂ, ಸುಮ್ಮಗಾದಾಗ ಮುಂದಕ್ಕೂ ಜೋಕಲಾಡುತ್ತಿದ್ದವು. ಜನ ಮುಸುರಿ ಕೊಂಡಿದ್ದ ಕಂಡ ಏನೋ ಇಶೇಷ ಇರಬೋದೆಂದು ಸೇರಿದ್ದ ನಾಕಾರು ನಾಯಿಗಳು ಕುಂಯ್‌ಕುಂಯ್ ರಾಗವ ಪಾಡುತ್ತಿದ್ದವು.
ಇವತ್ತಿನ ರಾತ್ರಿ ಎಂಬೋದೊಂದು ಕಳದು, ನಾಳಿನ ಹಗಲೂ ಇರಳೂ ಉರುಳುದ ನಂತರ ಬರೋ ನಾಳಿದ್ದಿನ ಹಗಲೇ ತೆಪ್ಪೋತ್ಸವ. ಒಂದು ಹುಣ್ಣುಮೆ ಅಮಾಸೆಯಿಂದ ಊರುಗೇ ಊರೇ ಕನಸು ಕಂಡಿದ್ದ ದಿನ ಹತ್ತುರ ಹತ್ತುರಾದಂಗೆ, ಜವಾಬುದಾರಿಯ ಕತ್ತಾಗೆ ಕಟ್ಟುಕೊಂಡ ದೊಡ್ಡವರು ಒಂತಾವ ನಿಲ್ಲದೆ ಒಂತಾವ ಕೂರದೆ ತಟವಟ ಗುಟ್ಟುತ್ತಿದ್ದರು. ಕೆರೆ ಅಂಗಳದಾಗೆ ತೆಪ್ಪದ ಸಿಂಗಾರ ನಡೀತಿದ್ದರೆ, ಊರು ಮುಂದಲ ನಡೂ ಬಯಲು ನಾಗೆ ಹತ್ತು ಕುರುಕ್ಷೇತ್ರ ನಾಟಕಗಳನ್ನು ಒಂದೇ ಕಿತ ಆಡುದರೂ ಮಿಗುವಷ್ಟು ದೊಡ್ಡದಾದ ಸ್ಟೇಜು ಎದ್ದು ನಿಂತಿರೋದ ನೋಡಿ ಬೆಟ್ಟು ಕಡೀತ ದುರ್ಯೋ ಧನನ ದರ್ಬಾರು ಸೀನುಗಿಂತ ಸಕತ್ತಾಗೈತೆ ಅಂತ ಸ್ಟೇಜುನ ಕುರುತು ಜನ ಮಾತಾಡುತ್ತಿದ್ದರು.
ಹೊಟ್ಟೆ ಕೆಟ್ಟ ಹಸುಮಗು ಪದೇ ಪದೇ ಕಿರ್ರಂದಂಗೆ ನಾಕೈದು ದಿನಗಳಿಂದ ರಚ್ಚೆ ಹಿಡಿದಿದ್ದ ಜಿಗುಟು ಮಳೆಯಿಂದ ಮೋಡ ಕವುದಿದ್ದ ಊರ ಜನರ ಮೊಕಗಳು, ಬೆಳಗ್ಗೆ ಆಕಾಶ ಬೆಳ್ಳಗಾಗಿ ಮಧ್ಯಾಹ್ನ ಸೂರ್ಯ ಪರಮಾತ್ಮ ಧಗಧಗ ಉರು ದಾಗ ಕಳೆಯಾಗಿ ‘ಹಬ್ಬ ಒಂದು ಮುUವರೆಗೂ ಮನೆಯಾಗಿರಪ್ಪ ಮಳರಾಯ’ ಅಂತ ಬೇಡುತ್ತಿದ್ದವು.
ಹದಿನಾಲ್ಕು ವರುಷಗಳ ಶಾಪ ಕಳುದಂಗೆ ಮಾಯದಂಥ ಮಳೆ ಸುರುದು ಕೆರೆ ತುಂಬಿದ್ದು ಊರು ಜನುಗಳ ಪಾರವಿಲ್ಲದ ಹರುಷಕ್ಕೆ ಕಾರಣ ವಾಗಿತ್ತು. ತುಂಬಿನಿಂತ ಗಂಗವ್ವನ ಉಡಿಯಾಗಿ ನಿಂದ ಹುಟ್ಟಿಬಂದ ಗದ್ದೆ-ಮುಂಜಿ- ಮದುವೆಯಂಥ ಕನಸುಗಳು, ಬರದಿಂದ ಕಮರಿಹೋಗಿದ್ದ ಊರ ಜನುಗಳ ಎದಿಯಾಗೆ ಸಂಭ್ರಮ ಬಿತ್ತುತ್ತಿದ್ದರೆ, ಆ ಸಂಭ್ರಮದಾಗೆ ಹುಟ್ಟಿಕೊಂಡದ್ದು ಊರಹಬ್ಬ. ಹಿಂದೆ ಕಂಡಿಲ್ಲ, ಮುಂದೆ ನಡಯಾಕಿಲ್ಲ ಅನ್ನೂವಂಗೆ ಈ ಸಲದ ಊರಹಬ್ಬವ ಮಾಡುತೀನಿ ಅಂತ ಮುಂದಾಳಾದವನು ಅಣ್ಣಪ್ಪ ಗೌಡ. ಮೈ ತುಂಬಿ ಕೊಂಡಿರೊ ಗಂಗವ್ವಗೆ ಬಾಗಿನ, ತೆಪ್ಪೋತ್ಸವ, ಊರು ದೇವುರ ಉತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡ ಕ್ಷೇತ್ರದ ಶಾಸಕನೂ ಗ್ರಾಮ ಸ್ಥನೂ ಆದ ಅಣ್ಣಪ್ಪಗೌಡನ ಇಚ್ಛಾ ಪೂರೈಸೋಕೆ ನೂರಾರು ಜನ ಸೊಂಟ ಕಟ್ಟಿ ನಿಂತಿದ್ದರು.
ಇದೇ ಹೊತ್ತುನಾಗೆ ಊರುನ ಆತ್ಮದಂತಿದ್ದ ಗೌರ್ಮೆಂಟು ಹೈಸ್ಕೂಲುನ ಮಕ್ಕಳು ಇನ್ನೊಂದಿಷ್ಟು ಬುದ್ಧುವಂತರಾಗಲಿ ಅಂಬೋ ಉದ್ದೇಶದಿಂದ ರಾಜ್ಯದ ಘನ ಸರಕಾರ ಶಾಲೆಗೆ ಕಂಪ್ಯೂಟರು ಮಂಜೂರು ಮಾಡಿರುವುದಾಗಿಯೂ, ಇಡೀ ರಾಜ್ಯ ದಾಗಿ ಕಂಪ್ಯೂಟರು ಪಡೀತಿರೊ ಫಸ್ಟು ಗೌರ‍್ಮೆಂಟು ಸ್ಕೂಲು ಇದೆಂಬೋ ವಿಷಯವು ಊರಹಬ್ಬುದಷ್ಟೇ ಮಹತ್ವಪಡಕೊಂತು. ಉತ್ಸವದ ಜೊತೆಯಾಗೆ ಸ್ಕೂಲುನಾಗೆ ಕಂಪ್ಯೂಟರು ಕೇಂದ್ರವೂ ಶುರುವಾಗಲಿ ಅಂತ ಅಣ್ಣಪ್ಪಗೌಡರು ವಿಧಾನಸೌಧದ ಮೆಟ್ಟುಲನ ಹತ್ತೂ ಇಳುದು ಖುದ್ದು ಮುಖ್ಯಮಂತ್ರಿ ಗಳೇ ಬಂದು ಕಂಪ್ಯೂಟರು ಕೇಂದ್ರ ಉದ್ಘಾಟನೆ ಮಾಡೂವಂಗೆ ಒಪ್ಪುಸುದರು.
***
‘ತುಂಬ್ತು’ ಎಂದು ಕೂಗು ಹಾಕಿದಳು ಸಾವಿತ್ರಿ. ಸುತ್ತಲ ಗೋಡೆಗಳಿಂದೆಲ್ಲ ತನ್ನ ಮಾತೆ ಪ್ರತಿಧ್ವನಿಸಿ ದಂತೆನಿಸಿ ಬೆಚ್ಚಿದ ಸಾವಿತ್ರಿ, ತನ್ನನ್ನೇ ನೋಡುತ್ತಿದ್ದ ಅವ್ವ, ಅಕ್ಕನ ಕಣ್ಣುಗಳಾಗೆ ಇರೋದು ಕೋಪವೋ ತಾಪವೋ ಅನ್ನೂದರೀದೆ ಮಾತು ಮರತಳು. ಟಪ ಟಪ ಪಟಾಂತ ಸೂರಿನಿಂದ ಇಳೀತಿದ್ದ ಮಳೆ ತೊಟ್ಟು ಗಳಿಗೆ ಮಯ್ಯೊಡ್ಡಿ ತುಂಬಿದ್ದ ಸಿಲುವರು ದಬರಿಗೆಯ ನೀರುನ ಅಂಗಳಕ್ಕೆ ಚೆಲ್ಲುವ ಭಾUರಥಿ, ದಬರಿಗೆಯ ಮತ್ತೆ ನೀರುಗೆ ನೆಲೆಯಾಗಿಸಿ ಯಥಾ ಸ್ಥಾನದಾಗೆ ಕುಂತಳು.
ಮುಂದು ಮಾಡಿದ್ದ ಬಾಗಿಲು ಸಂದಿಯಾಗಿನಿಂದ ತೂರಿಬರೊ ಗಾಳಿಗೆ ಮಿಕ ಮಿಕ ಮಿಣಗುಡುತ್ತಿದ್ದ ಬುಡ್ಡಿ ದೀಪದ ಬೆಳಕುನಾಗೆ ಆತುಕೊಂಡು ಕೂತಿದ್ದ ತಾಯಿ ಮಕ್ಕಳು ಆಗಾಗ ಒಬ್ಬರ ಮೊಕ ಒಬ್ಬುರು ನೋಡುತ್ತಿದ್ದರು. ಮಾತೊಂಬೊ ಮಾಯ ಮರೆತು ಹೋದಂತಾಗಿ ಸೂರಿಂದ ಸಿಲುವರು ತಪ್ಪಲೆಗಳಿಗೆ ಇಳೀತಿದ್ದ ನೀರುನ ಟಪಟಪ್ಪ ಸಪ್ಪಳದ ಹೊರತು, ಮನೆಯಾಗೆ ಕೇಳುತ್ತಿದ್ದುದು ಮೂರು ಜೀವಗಳ ಉಸುರಾಟ ಮಾತ್ರ. ಮನೆಯಾಗೆಲ್ಲ ಮಳರಾಯ ಮೆರುದಾಡಿ, ತ್ಯಾವ ಕಾಣದೆ ಉಳುದ ಒಂದು ಪಟ್ಟೆಯಾಗೆ ಜೀವುಗಳು ಅಂಟಿಕೊಂಡಿದ್ದವು.
ಕೂತಲ್ಲೇ ತೂಗುತ್ತಿದ್ದ ಸಾವಿತ್ರಿಯ ತೊಡೆಯ ಮ್ಯಾಲೆ ಎಳಕೊಂಡ ಗೌರವ್ವ, ಸ್ಕೂಲುಬುಕ್ಕುನ ಮರಾಳೆಯಿಂದ ಮಾಡಿದ್ದ ದೋಣಿಯ ಸಾವಿತ್ರಿ ಕೈನಿಂದ ಬಿಡುಸಿ ಪಕ್ಕಕ್ಕಿಟ್ಟಳು. ಭಾUರಥಿ ಕೂಡ ಗೋಡೆಗೊರಗಿ ಕಣ್ಣು ಮುಚ್ಚಿದಳು. ಗೌರವ್ವನ ಕಣ್ಣುಗಳಾಗೆ ರಂಗಪ್ಪ ಭದ್ರವಾಗಿ ಕುಂತದ್ದರಿಂದ, ನಿದುರಾದೇವಿ ಕಣ್ಣುಗಳ ತೊರದು ಮೂರು ಹಣ್ಣುಮೆಗಳು ಕಳೆದು ಹೋಗಿದ್ದವು.
‘ಹೊಲದ ಕಡೀಕ್ಕೆ ಹೋಗಿ ಬತ್ತೀನಿ’ ಅಂತ ಗಂಜೀವೂ ಕುಡೀದೆ ವಂಟ ರಂಗಪ್ಪನಿಗೆ ಬೈಗಿನ ಮುದ್ದೆ ಮುರುಕವೇ ಕಡೆ ತುತ್ತಾಗಿತ್ತು. ‘ಯಾಕೋ ಗಂಟಲಾಗೆ ತುತ್ತೇ ಇಳೀದು’ ಅಂತ ಅರ್ಧಕ್ಕೆ ಕೈ ತೊಳೆದು, ಹೊಲಕ್ಕೆ ಹೋದವನು ಬದುವಿನ ಪಕ್ಕ ಹೆಣವಾಗಿದ್ದ. ಮಿರಿ ಮಿರಿ ಮಿಂಚುತ ಮೈ ಮ್ಯಾಗೆಲ್ಲ ಕೂದಲಿರೊ ಎರಡು ಹೆಡೆ ಸರ್ಪ ಬದುವಿನ ಪಕ್ಕದಾಗೆ ಸರಸರ ಹರುದು ಹೋದದ್ದನ್ನು ಕಂಡೆ ಎಂದ, ರಂಗಪ್ಪನ ಸಾವನ್ನು ಮೊದಲಿಗೆ ಕಂಡ ಮಾರಣ್ಣ. ರಂಗಪ್ಪನ ತುಟಿಗಲಾಗೆ ಸ್ವಲುಪ ನೊರೆ ಮೆತ್ತುಕಂಡಿದ್ದರೂ, ಮೈ ಬಣ್ಣ ನೀಲಿಗೆ ಮಾಸಿರಲಿಲ್ಲ. ಹೆಣದ ಸ್ವಲ್ಪ ದೂರದಾಗೆ ಮಕಾಡೆಯಾಗಿದ್ದ ಪಾಲಿಡಾಲು ಬಾಟಲಿಗೆ ಹುಮಕ್ಕನ ಕಣ್ಣಿಗೆಬಿತ್ತು. ರಂಗಪ್ಪನ ಪ್ರಾಣವ ಕೊಂಡುಹೋದದ್ದು ಸರ್ಪವೋ, ಪಾಲಿಡಾಲೋ ಅಂಬೋದು ಇತ್ಯರ್ಥವಾಗುವ ಮುನ್ನವೇ ರಂಗಪ್ಪ ಭೂಮ್ತಾಯಿ ಮಡಿಲಾಗೆ ಮೈ ಮರುಸುಕೊಂಡ. ತನ್ನ ಗಂಡನಿಗೆ ಚಿತೆಯಾದದ್ದು ಪಾಲಿಡಾಲೂ ಅಲ್ಲ, ಸರ್ಪವೂ ಅಲ್ಲ, ಸಾವುಕಾರ ಅಣ್ಣಪ್ಪಗೌಡನ ಋಣ ಅಂಬೋದು ಗೌರವ್ವನ ಮನಸ್ಸಿಗೆ ಗಟ್ಟಿಯಾಗಿತ್ತು. ಗೌಡನ ಹೊಲದಾಗೆ ಸುರುಸುದ ಬೆವ ರುಗೂ ಲೆಕ್ಕಪತ್ರದ ಬಾಕಿಗೂ ಯಾವತ್ತೂ ತಾಳೆಯಾಗದೆ ರಂಗಪ್ಪ ಚಿಂತೆಗೆ ಬಿದ್ದಿದ್ದ. ಬೆಳೆದು ನಿಂತಿದ್ದ ಹಿರೀ ಮಗಳು ಭಾUರಥಿಗೆ ಕಂಕಣವೂ ಕೂಡಿಬಂದು, ಕೈನಾಗೆ ಕಿಲುಬು ಕಾಸಿಲ್ಲದಿದ್ದರೂ, ಹುಡುಗನಿಗೆ ಹತ್ತು ಸಾಮರ ವರದಕ್ಷಿಣೆ ಮಡಗಿ ಸುಗ್ಗಿ ಮುಗುದ ಮ್ಯಾಲೆ ತಕ್ಕಮಟ್ಟಿಗೆ ಚೆನ್ನಾಗಿ ಲಕ್ನ ಮಾಡಿಕೊಡುತೀನಿ ಅಂತ ಮಾತು ಕೊಟ್ಟಿದ್ದ ಸಾವುಕಾರ ಪಂಚರಂಗಿ ರಾಗವ ಹಾಡತೊಡಗಿ ರಂಗಪ್ಪ ದಿಕ್ಕೆಟ್ಟಿದ್ದ. ಕಲ್ಲು ಕರಗೋ ಸರಿ ರಾತ್ರಿನಾಗೆ ಎದ್ದುಕುಂತು ಬೀಡಿ ಸುಡುತ, ಬೆಳ್ಳುಗಳ ಸುಟ್ಟುಕೋತ ಸೂರು ನೋಡುತ್ತಿದ್ದ ಗಂಡನ್ನ ಕಂಡು ಗೌರವ್ವ ದಿಂಬುನ ವದ್ದೆ ಮಾಡುತ ಮಗ್ಗುಲು ವಳ್ಳುತ್ತಿದ್ದಳು. ಹೆಂಡತಿಯ ಬಿಕ್ಕು ಕೇಳುದ ರಂಗಪ್ಪ ‘ದೇವುರವ್ನೆ ಗೌರಾ’ ಅಂತ ಸುಟ್ಟ ಬೆಟ್ಟನಾಗೆ ಕೆನ್ನೆ ಮ್ಯಾಗಲ ಹನಿ ವರಸುತ ಧೈರ್ಯ ತುಂಬುತ್ತಿ ದ್ದವನು. ತಾನೇ ಧೈರ್ಯ ಕಳಕೊಂಡು ಶಿವನ ಪಾದ ಸೇರ‍್ಕೊಂಡು, ತನ್ನ ಭಾರಾನೆಲ್ಲ ತಾಳಿ ಇಳುದ ಗೌರವ್ವನ ಕೊಳ್ಳುಗೆ ಕಟ್ಟಿದ್ದ.
***
ಮಳೆ ಎಂಬೋದು ಎಕ್ಕುಟ್ಟೋಗಿ ಬಿತ್ತುದ ಬೀಜ ಕಣ್ಣು ಬಿಡೋಕೆ ಮುಂಚೇನೆ ಸೀಕಲಾದ್ದರಿಂದ ರಂಗಪ್ಪ ಪಾಲಿಡಲು ಕುಡುದು ಸುತ್ತುವುನೆ ಅಂಬೊ ಮಾತು ಜನುಗಳ ಬಾಯಾಗೆ ಹೊರಳಿ ಹೊರಳಿ ಗಟ್ಟಿಯಾಗಿ, ಅದಕ್ಕೆ ಅಣ್ಣಪ್ಪಗೌಡನೂ, ತಾಲೂಕು ದೊರೆಗಳೂ ಹೂಂಗುಟ್ಟಿದರು. ಬೆಂಗಳೂರಿನಿಂದ ಟೀವಿನೋರು, ಪೇಪರುನೋರು ಬಂದು, ಗೌರವ್ವನ, ಭಾUರಥಿ, ಸಾವಿತ್ರೀನೂ ಮಾತಾಡುಸು ಕೊಂಡು ಹೋದರು. ಜೀವಕಳಕೊಂಡ ರೈತನ ಕುಟುಂಬಕ್ಕೆ ಸರಕಾರ ಲಕ್ಷ ರೂಪಾಯಿ ಪರಿಹಾರ ಕೊಡ್ತದೆಂದು ಮುಖ್ಯಮಂತ್ರಿಗಳು ಪೇಪರುನಾಗೆ ಭರವಸೆ ನೀಡಿದರು.
ಲಕ್ಷ ರೂಪಾಯಿ ವಿಷಯ ಕೇಳುದ ಕೆಲವರು ‘ರಂಗಪ್ಪನ ಪುಣ್ಯ ದೊಡ್ಡದು. ತಾನು ಸತ್ತರೂ ಹೆಂಡ್ರು ಮಕ್ಕಳಿಗೊಂದು ದಿಕ್ಕು ಮಾಡ್ದ’ ಅಂತ ಮಾತಾಡು ಕೋತಿದ್ದರು. ‘ಬಂಗಾರದಂಥ ಯಜ ಮಾನನ ಹೋದಮ್ಯಾಕೆ ಲಕ್ಷ ಕಟ್ಟುಕೊಂಡು ಏನ್ಮಾಡ್ಲಿ ಶಿವುನೆ’ ಅಂತ ಒಳಗೊಳಗೆ ನವೆಯುತ್ತಿದ್ದ ಗೌರವ್ವಗೆ, ತನ್ನನ್ನು ಸಾವುಕಾರ್ತಿಯಾಗೆ ನೋಡೋಕೆ ಸುರು ಮಾಡುದ ಜನಗಳ ಮಾತುಗಳು ಸಂಕಟ ತರುತ್ತಿದ್ದವು. ಇದೇ ಹೊತ್ತುನಾಗೆ ಭಾUರಥೀನ ಮನೆ ತುಂಬಸು ಕೊಳ್ಳಾಕೆ ಒಪ್ಪಿಕೊಂಡಿದ್ದ ಬೀಗರು- ‘ಕಂಡೋರ ಮಾತುಗೆ ಕಿವಿಕೊಟ್ಟು ದುಡ್ಡುನ ಪಾಪಿ ಪರದೇಶಿಗಳ ಪಾಲು ಮಾಡೀಯೆ. ಮಗಳು ಅಳೀ ಮಯ್ಯಗೊಂದು ನೆಳ್ಳು ಮಾಡ್ಕೊಡು. ನಿಂಗೂ ಚಿಕ್ಕೋಳುಗೂ ಅವರೇ ದಿಕ್ಕಾ ಯ್ತಾರೆ’ ಎಂದು ಉಪದೇಶ ಮಾಡಿದರು. ಗೌರವ್ವನ ಬಾಯಾಗೆ ತಟ್ಟನೆ ಮಾತುಗಳು ಹುಟ್ಟುದಿ ದ್ದುದ ನೋಡಿ- ‘ನಿಂಗೆ ಇಷ್ಟಯಿಲ್ಲದುದ್ರೆ ಒತ್ತಾಯಿಲ್ಲ ಬಿಡು. ನಮ್ಗೇನು ಹೆಣ್ಣುಗಳಿಗೆ ಬರವೇ?’ಅಂಬೊ ಬಾಣವನ್ನೂ ಬಿಟ್ಟರು.
ಬಣ್ಣ ಬದಲಿಸುವ ಬೀಗರ ದೆಸೆಯಿಂದ ದಿಕ್ಕು ತೋಚದೆ ಕೂತಿದ್ದ ಗೌರವ್ವ, ಅಣ್ಣಪ್ಪ ಗೌಡ ಹೇಳುದ ಕಾಗುದ ಪತ್ರಗಳ ಲೆಕ್ಕವ ಹೇಳಿ ಪೂರಾ ನೆಲ ಕಚ್ಚು ದಳು. ಯಾವತ್ತೂ ಜಮೆಯನ್ನೇ ಕಾಣದ ಲೆಕ್ಕದ ಪುಸ್ತಕದಾಗಿನ ರಂಗಪ್ಪನ ಸಾಲ ಬಡ್ಡಿ ಜೊತೆ ಹನು ಮಂತನ ಬಾಲದಂಗೆ ಬೆಳೆದು ಲಕ್ಷರೂಪಾಯಿ ದಾಟಿತ್ತು. ‘ಮೂಕೆತ್ತುನಂಗೆ ತನ್ನ ತ್ವಾಟದಾಗೆ ಗೇದ ರಂಗಪ್ಪನ ಮ್ಯಾಲಿನ ವಿಶ್ವಾಸದಿಂದ ಲಕ್ಷದ ಮ್ಯಾಲಿ ರೋದನ್ನು ಬಿಟ್ಟರೆ ಬಿಟ್ಟೇನು, ಉಳುದುದ ಮಾತ್ರ ಕೊಟ್ಟೇ ಕೊಡಬೇಕು. ಮುಖ್ಯಮಂತ್ರಿಗಳು ಚೆಕ್ಕು ಕೊಟ್ಟ ತಕ್ಷಣ ಜಮಾ ಮಾಡಬೇಕು’ ಅಂತ ಗೌರವ್ವಗೆ ಅಣ್ಣಪ್ಪಗೌಡ ಅಪ್ಪಣೆ ಮಾಡುದ.
‘ನೀವಿಂಗೆ ಪಟ್ಟು ಮಾಡುದರೆ ಬಡುವುರು ಕೆಟ್ಟೋಗ್ತೀವಿ’ ಅಂತ ಪಾದುಗಳ ಕಣ್ಣೀರಾಗೆ ತೊಳು ದರೂ ಅಣ್ಣಪ್ಪಗೌಡಗೆ ಗೌರವ್ವನ ಮ್ಯಾಗೆ ಕರುಣ ಹುಟ್ಟಲಿಲ್ಲ. ‘ಬಾಕೀನ ತೀರುಸದೆ ಹೋದುರೆ ರಂಗಪ್ಪನ ಅತುಮ ತ್ರಿಶಂಕು ಸ್ವರುಗದಾಗೆ ವಿಲ ವಿಲ ಒದ್ದಾಡ್ತದೆ. ನಂಗೂ ಕಷ್ಟನಷ್ಟ ಅಂತ ಇರ‍್ತದೆ. ಬ್ಯಾಂಕುನ ಸಾಲ ಮನೆ ಹೊಸಲುಗೆ ಬಂದದೆ, ಇಲ್ಲಾಂದ್ರೆ ಕೊಟ್ಟಾಗ ಕೊಡಿ ಅಂತ ಸುಮ್ಕಿರ‍್ತಿದ್ದೆ’ ಎಂದು ನಾಜೂಕಿನ ಮಾತಾಡಿದ ಗೌಡ, ‘ಖಾಲಿ ಬಿದ್ದಿರೊ ತ್ವಾಟದ ಮನೆಯಾಗೆ ಇದ್ದುಕೊಂಡು ತ್ವಾಟದ ಕೆಲಸ ಬೊಗಸೆ ನೋಡ್ಕಂಡಿರಿ.’ ಭಾUರಥಿಗೆ ಬ್ಯಾರೆ ಸಂಬಂಧ ಹುಡುಕುವ ಅಂತ ಗೌಡಕೆಯ ಮಾತೂ ಆಡುದ.
ಎಲ್ಲೆಲ್ಲೂ ಹಬ್ಬುಂಡಿದ್ದ ಕಳ್ಳು ಬಳ್ಳಿಗಳೆಲ್ಲ ತವರುಗೆ ಬಂದು, ಎತ್ತ ನೋಡುದರೂ ಸಂಭ್ರಮದ ಮುಖ ಗಳೇ ಕಾಣುತ್ತಿರಲಾಗಿ, ಇಂಥ ಜನ ಯಾವತ್ತೂ ಊರು ಕಂಡಿರಲಿಲ್ಲ ಅಂಬೊ ಮಾತುಗಳು ಊರು ಮುಂದಲ ಕಟ್ಟಮ್ಯಾಗೆ ಹುಟ್ಟುಕೋತಿದ್ದವು. ಕಣ್ಣುಗೆ ಹಬ್ಬದಂಗೆ ಸಿಂಗಾರ ಮಾಡ್ಕೊಂಡ ತೆಪ್ಪ ಪ್ರಯಾ ಣಕ್ಕೆ ತಯಾರಾಗಿ ನಿಂತಿದ್ದರೆ, ಇನ್ನೊಂದು ಕಡೆ ಬೆಂಡು ಬತ್ತಾಸು ಕಳ್ಳಪುರಿ ಆಟದ ಸಾಮಾನುಗಳ ಅಂಗಡಿಗಳ ಪರುಸೆ ಜೋರಾಗಿತ್ತು. ‘ಅವ್ವಾ ಬಳೆ, ಅಪ್ಪೋ ಟೇಪು, ನಂಗೆ ಪೀಪಿ’ ಅಂತ ಅಪ್ಪ ಅಮ್ಮುಗಳಿಗೆ ಜೋತು ಬೀಳುತ್ತಿದ್ದ ಚಿಳ್ಳೆ ಪಿಳ್ಳೆಗಳು ಪಾಡುತ್ತಿದ್ದ ಕಿರ್ರೋ ಅಂಬೊ ರಾಗವು, ಆಕಾಶನೂ ಭೂಮೀನೂ ಅಳೀತಾ ತಿರುಗುತ್ತಿದ್ದ ರಂಕಲುರಾಟೆ ಸಬುದದಾಗೆ ಸೇರಿಕೋತಿತ್ತು.
ಹಬ್ಬದ ಸಡುಗರ ಊರಾಗಿನ ಎಲ್ಲ ಮನೆಗಳು ಮೋರೆಗಳಾಗೆ ಚಿಲುಮೆಯಾಗಿ ಚಿಮ್ಮುತ್ತಿದ್ದರೆ, ಗೌರವ್ವನ ಮನೆಯಾಗಿ ಎಂಥ ಸಂಭ್ರಮಕ್ಕೂ ಬಗ್ಗದ ಸೂತಕದ ಕಳೆಯಿತ್ತು. ಕೆರೆಯಾಗೆ ಗಂಗಮ್ಮ ಮೈ ತುಂಬಕಂಡಿದ್ದರೆ ಗೌರವ್ವನ ಕಣ್ಣುಬಾವಿಗಳ ತಳ ಬತ್ತಿ ಹೋಗಿತ್ತು.
ಅವ್ವ ಅಕ್ಕ ಕಣ್ಣೀರಾಗೆ ಕೈ ತೊಳಿತಾ ಹಗಲುಗಳ ರಾತ್ರಿಯಾಗಿಸುತ ರಾತ್ರಿಗಳ ಹಗಲು ಮಾಡು ತ್ತಿದ್ದರೆ, ಒಂದು ಕೆನ್ನೆಯಾಗೆ ಹಾಲು ಇನ್ನೊಂದು ಕೆನ್ನೆಯಾಗೆ ನೀರು ಅನ್ನೂವಂಗಿದ್ದ ಸಾವಿತ್ರಿ, ಸ್ಕೂಲು ಬುಕ್ಕುನ ಮರಾಳೆಯಾಗಿ ಮಾಡಿದ್ದ ದೋಣಿಯ ತೆಪ್ಪದ ಜೊತೆಯಾಗೆ ತೇಲಿಬಿಡಬೇಕು ಅಂತ ಕನಸು ಕಾಣುತ್ತಿದ್ದಳು. ಅಪ್ಪ ಹೋದಮ್ಯಾಗೆ ಸ್ಕೂಲು ಕಡೆ ಮೊಕ ಹಾಕಿ ಮಲಗದ ಸಾವಿತ್ರಿ, ಆ ಮನೆ ಯಾಗೊಂದು ಮುರು, ಈ ಮನೆಯಾಗೊಂದು ಮುರು ಉಂಡು ಬೆಳೆಯುತ್ತಿದ್ದರೆ, ಗೌರವ್ವನೂ ಭಾUರಥಿಯೂ ಯಾವ ಹೊತ್ತುನಾಗೆ ಒಲೆಗೆ ಬೆಂಕಿ ಕಾಣಿಸುತ್ತಾರೆ, ಯಾವಾಗ ಮುಸುರೆ ಬಳೀತಾರೆ ಅಂಬೋದು ನೆರೆಹೊರೆಯೋರಿಗೆ ಸೋಜಿಗದ ಸಂಗತಿಯಾಗಿ, ತಾವು ಕಲಿತ ಬುದ್ಧಿ ಮಾತುಗಳೆಲ್ಲ ಖರ್ಚಾದ ನಂತರ ಅವ್ವ ಮಗಳ ಅವುರ ಪಾಲಿಗೆ ಅಂತ ಬುಟ್ಟರು.
‘ಅವ್ವ ವತ್ತಾರೆ ಕೆರೆ ಅಂಗಳಕ್ಕೆ ರಾಜಿ ಜೊತೆ ಯಾಗೇ ಹೋತೀನಿ’ ಅಂತ ಗಿಳಿಯಂಗೆ ಸಾವಿತ್ರಿ ಪದೇ ಪದೇ ಉಲೀತಿದ್ದರೆ, ಅವ್ವ ಕಕಮಿಕ ಅನ್ನದಿ ರೋದ ನೋಡುವ ಭಾUರಥಿ ‘ಹೋಗುವಂತೆ ಸುಮ್ಕಿರು’ ಅಂತ ಸಾವಿತ್ರಿಯ ವರಾತವ ನಿಲ್ಲುಸು ದಳು. ಅವ್ವನ ಮೊಕ ನೋಡುದಾಗೆಲ್ಲ ಕಳ್ಳು ಕೊಳ್ಳುಗೆ ಬಂದಂಗನ್ನಿಸಿ ಭಾUರಥಿ ಬಾಯಾಗೆ ಸೆರಗಿಟ್ಕೊಂಡು ಬಿಕ್ಕುತ್ತಿದ್ದಳು.
ದೀಪ ಹಚ್ಚೊ ಹೊತ್ತುನಾಗೆ ಪ್ರತ್ಯಕ್ಷನಾಗಿದ್ದ ಅಣ್ಣಪ್ಪಗೌಡ, ಬಾಕಿ ವಿಷಯವ ನೆಪ್ಪು ಮಾಡಿದರೂ, ಗೌರವ್ವ ಉಭಶುಭ ಅನ್ನದ್ದು ನೋಡಿ, ‘ನಿಮ್ಮವ್ವಂಗೆ ಎಲ್ಲ ಸರಿಯಾಗಿ ಹೇಳು. ಬೆಳಗ್ಗೆ ಎಲ್ಲರೂ ಸ್ಟೇಜುತಾಕೆ ಬಂದು ಮುಂದೆಯೇ ಜಾಗ ಮಾಡ್ಕೊಂಡು ಕುಂತ್ಕಂಡಿರಿ’ ಎಂದು ವಾರೆಗಣ್ಣಾಗೆ ಭಾUರಥೀನ ನೋಡುತ ವಾಪಸ್ಸಾಗಿದ್ದ. ಮೈಮ್ಯಾಗೆಲ್ಲ ಚೇಳುಗಳ ಹರುದಂಗನ್ನಿಸಿ ಭಾUರಥಿ ದಾವಣಿಯ ಮೈ ತುಂಬ ಹೊದ್ದುಕೊಂಡಳು. ಗೌರವ್ವಂಗೆ ಆ ಮ್ಯಾಲೂ ಮಾತು ಹುಟ್ಟಿರಲಿಲ್ಲ.
***
ಸಾವಿತ್ರಿ ಸ್ಕೂಲುಗೆ, ಅಪ್ಪ ಅವ್ವ ಇಬ್ಬರೂ ಹೊಲಕ್ಕೋದ ಮ್ಯಾಗೆ ಭಾUರಥಿ ಕಸಮುಸುರೆ ಬಳೀತಿರುವಾಗ ಸಂಜೀವ ಬಂದಿದ್ದ ಅಪ್ಪ ಅವ್ವ ಇಲ್ಲದ ಹೊತ್ತುನಾಗೆ ಇವನ್ಯಾಕೆ ಬಂದ ಅಂಬೊ ಪ್ರಶ್ನೆ ಭಾUರಥಿಗೆ ಹುಟ್ಟುದರೂ ಅದು ದನಿಯಾಗಲಿಲ್ಲ. ಲಗ್ನ ಗೊತ್ತಾದ ದಿನದಿಂದ್ಲೂ ಆವಾಗವಾಗ ಬಂದು ಮೊಕ ತೋರುಸಿ ಹೋಗುತ್ತಿದ್ದ. ಸಂಜೀವ, ಯಾರೂ ಇಲ್ಲದ ಹೊತ್ತುನಾಗೆ ಬಂದುದ್ದು ಇವತ್ತೇ ಮೊದಲು ಅಂತ ಯೋಚಿಸುತ್ತ, ನೀರುಳ್ಳಿ ಉತ್ತರುಸುದ ನೀರು ಮಜ್ಜುಗೆಯ ತಂದ ಭಾUರಥಿ ಕೈನ ಸಂಜೀವ ಹಿಡಕೊಂಡು ನಕ್ಕ. ಭಾUರಥಿ ಎಷ್ಟು ಕೊಸರಾಡುದರೂ ಪಟ್ಟುಬಿಡದ ಸಂಜೀವ ‘ನಿಂಗೆ ನಾನೂಂದ್ರೆ ಇಷ್ಟವಿಲ್ಲವಾ?’ ಅಂದವನು, ಉತ್ತರ ಬರದುದ ನೋಡಿ ಹಿಡುತ ಬಿಗಿ ಮಾಡ್ದ.
‘ಅಪ್ಪ ಅವ್ವಂಗೆ ತಿಳುದರೆ ಸಿಗುದಾಕುತಾರೆ. ಇದು ತಪ್ಪು’ ಅಂತ ಭಾUರಥಿ ಎಷ್ಟು ಬೇಡಕಂಡರೂ ಸಂಜೀವ ಹಟ ಬಿಡಲಿಲ್ಲ. ‘ನಿನ್ನ ಮದುವೆಯಾಗೋ ಗಂಡು ನಾನು. ನನ್ನ ಪ್ರೇಮಕ್ಕೆ ಅವಮಾನ ಮಾಡ್ಬೇಡ’ ಅಂತ ನಾಜೂಕು ಮಾತುಗಳಾಡಿದ ಸಂಜೀವ, ಏನು ನಡೀತದೆ ಅನ್ನೋದು ಭಾUರಥಿ ಅರಿವಿಗೆ ಬರೋ ಮೊದುಲೇ ಅವುಳ ಆಕ್ರಮಿಸಿಕೊಂಡ. ಅವುನು ಹೋದ ತುಂಬಾ ಹೊತ್ತಿನವರೆಗೆ ಭಾUರಥಿ ಅಳುತ್ತಿದ್ದಳು. ಸಂಜೀವ ಮತ್ತೆ ಮೊಕ ತೋರುಸಿರಲಿಲ್ಲ. ವ್ಯವಹಾರದ ಮಾತುಗಳೊಂದಿಗೆ ಅವುನಪ್ಪ ಬಂದಿದ್ದ. ಆಮ್ಯಾಲೆ ಗೌಡನೂ ಬಂದಿದ್ದ.
ಅಪ್ಪ ಶಿವುನ ಪಾದ ಸೇರ‍್ಕೊಂಡ ಮ್ಯಾಲೆ ನರ ಮನುಷ್ಯರುಗೆಲ್ಲ ಮುಖವಾಡಗಳವೆ ಅಂಬೊ ಸತ್ಯ ಅರುತ ಕೊಂಡಿದ್ದ ಭಾUರಥಿಗೆ, ತನ್ನ ಲಗ್ನಕ್ಕೂ ಅಪ್ಪನ ಸಾವುನಿಂದ ಬರೊ ದುಡ್ಡುಗೂ, ಅಪ್ಪನ ಸ್ಥಾನದಾಗಿರೊ ಮುಂದೆ ಮಾವನಾಗೊ ಮನುಷ್ಯ ಸಂಬಂಧ ಕಲ್ಪುಸುದಾಗ ಇಷ್ಟೇನಾ ಮನುಷ್ಯ ಅನ್ನುಸಿತ್ತು. ‘ತ್ವಾಟದಾಗೆ ಬಂದು ಇರ್ರಿ’ ಅಂತ ಗೌಡ ಕರೆಯೊ ಹೊತ್ತುಗೆ ಅವುಗಳ ಮನಸನಾಗಿನ ತ್ಯಾವ ಪೂರಾ ಇಂಗಿ ಹೋಗಿತ್ತು. ತ್ವಾಟದ ಮನೆಯಾಗೆ ಗೌಡ ನಡಸುತ್ತಿದ್ದ ರಾಸಲೀಲೆಗಳ ಕುರುತು ಊರಿನ ನಾಲಗೆಗಳಾಗೆ ಹರದಾಡುತ್ತಿದ್ದ ಕಥೆಗಳು ಭಾUರಥಿಗೂ ಗೊತ್ತಿದ್ದವು. ಆದರೆ, ಬೀಗರು, ಗೌಡರು ಏನು ಮಾತಾಡುದರೂ ಅವ್ವ ಮಾತು ಮರತದ್ದು ಭಾU ರಥಿ ದುಃಖಕ್ಕೆ ಕಾರಣ ವಾಗಿತ್ತು.
‘ಅವ್ವ ಮಾತಾಡವ್ವ. ಏನಾದ್ರೂ ಹೇಳವ್ವ. ಅತ್ತಾದ್ರೂ ಹಗುರಾಗವ್ವ’ ಗರ ಬಡುದಂಗೆ ಕುಂತ ಗೌರವ್ವನ ಅಲ್ಲಾಡುಸುತ ಅಲವತು ಕೊಂಡರೂ, ರೆಪ್ಪೆ ಬಂಡಿ ದಂಗೆ ತನ್ನನ್ನೇ ನೋಡುತಿರೊ ಅವ್ವನ ಕಂಡು ಅಳು ಹೆಚ್ಚಾಗಿ ‘ಮಾತಾಡವ್ವ..’ ಅಂತ ಭಾUರಥಿ ಬೇಡತೊಡಗಿದಳು. ಕೆರೆ ಕೋಡಿ ಹೋದದ್ದೇ ಆಗ. ತೆಕ್ಕೆಗೆ ಬಿದ್ದ ಅವ್ವ ಅಕ್ಕ ದೊಡ್ಡ ದನಿಯಾಗೆ ಅಳುತಿರೋದ ನೋಡಿ, ಅಳೂನಾಗೆ ಸಾವಿತ್ರಿಯೂ ಸೇರಿಕೊಂಡಳು.
***
ಮಳ್ಳು ಕಣ ನೆಲಕ್ಕೆ ಬೀಳಾಕೆ ತಾವಿಲ್ಲದಂಗೆ ಜನ ಸೇರಿತ್ತು. ಮೊದಲು ಹದ್ದಂಗೆ ಕಾಣುಸಕಂಡು ಆಮ್ಯಾಲೆ ದೊಡ್ಡದಾಗುತ ಬಂದ ಹೆಲಿಕ್ಯಾಪ್ಟರು ಡಗಡಗ ಸದ್ದು ಮಾಡುತ ಹಸನು ಮಾಡುದ ನೆಲದ ಮ್ಯಾಕೆ ಇಳೀತಿದ್ದಂಗೆ ‘ಮುಖ್ಯಮಂತ್ರಿಗಳಿಗೆ ಜೈ’ ಎಂಬೋ ಜೈಕಾರ ಮುಗಿಲು ಮುಟ್ಟಿತು. ಎರಡೂ ಕೈಗಳನ್ನು ಜೋಡುಸುಕಂಡೆ ಕೆಳಗಿಳಿದ ಮುಖ್ಯಮಂತ್ರಿಗಳಿಗೆ ಮೊದಲು ಹಾರ ಹಾಕುದವನು ಅಣ್ಣಪ್ಪಗೌಡ. ಕಾದುಕಂಡು ನಿಂತಿದ್ದ ಕಾರುನಾಗೆ ಮುಖ್ಯಮಂತ್ರಿಗಳು ಕುತೊಡನೆ, ಹಿಂದಾರು ಮುಂದಾರು ಕಾರುಗಳ ಬಿಟ್ಟುಕೊಂಡು ಕಾರು ಭರ್ರೋ ಅಂತ ಧೂಳೆಬ್ಬಿಸುತ ಓಡತೊಡಗಿತು.
ಸಾಲು ಕಾರುಗಳು ಕಣ್ಣಿಂದ ಮರೆಯಾಗೋವರೆಗೂ ಸುಮ್ಮಗಿದ್ದ ಜನಗಳು, ಕಾರು ಮರೆಯಾದ ಮ್ಯಾಕೆ ಹೆಲಿಕ್ಯಾಪ್ಟರು ಸುತ್ತ ಮುಕರಿಕೊಂಡರು. ಹಣ್ಣು ಹಸುರುನಿಂದ ತುಂಬಿ ಕೊಂಡಿದ್ದ ಹತ್ತಾರು ಮರಗಳಿಗೆ ಮೋಕ್ಷ ಕಾಣುಸಿ, ಸಪಾಟಾಗಿದ್ದ ಬಯಲುನಾಗೆ ನಿಂತುಕೊಂಡಿದ್ದ ಹೆಲಿಕ್ಟಾಪ್ಟರುಗೆ ಕಾವಲು ನಿಂತಿದ್ದ ಪೋಲಿಸಪ್ಪನೋರು ಜನುಗಳು ಹತ್ತುರ ಬರದಂಗೆ ಕೈಲಿ ಹಿಡುದ ಕೋಲುಗಳ ಠಳಾಯಿಸುತ್ತಿದ್ದರೂ, ಕೆಲುವರು ಚಂಗನೆ ಹಾರಿಹೆಲಿಕ್ಯಾಪ್ಟರು ಮುಟ್ಟಿ ಕಣ್ಣು ಮಿಟುಕಿಸೋದರೊಳಗೆ ಗುಂಪಾಗೆ ಸೇರುಕೊಂಡು ರೋಮಾಂಚನ ಪಡುತ್ತಿದ್ದರು. ಇದೇ ಪ್ರಯತ್ನದಾಗೆ ಪೊಲೀಸು ಮಾವಂದಿರ ಬೆತ್ತದ ರುಚಿನೂ ಕಂಡ ಕೆಲವರು ಹೆಲಿಕ್ಯಾಪ್ಟರೂ ಬ್ಯಾಡ, ಪೊಲಿಸ್ನೋರ ಸವಾಸವೂ ಬ್ಯಾಡ ಅಂತ ಊರ ಮುಂದರ ಸ್ಟೇಜು ಕಡೆ ಕಾಲು ಹಾಕುತ್ತಿದ್ದರು. ಕೆಲವರು ಬೇಯುತ್ತಿದ್ದೂಟ, ಪಾಯಸದ ಘಮಕ್ಕೆ ಹೊಳ್ಳೆ ಅಗಲ ಮಾಡುತ ಸೂರ್ಯ ಪರಮಾತ್ಮ ನೆತ್ತಿ ಮೇಲೆ ಬರೋಕೆ ಕಾಯುತ್ತಿದ್ದರು.
ಟೀವಿ ಪೆಟ್ಟಿಗೆಗಳಂಥ ಎರಡು ಪೆಟ್ಟಿಗೆಗಳ ಹೊದುಕೆ ಸರುಸಿದ ಮುಖ್ಯಮಂತ್ರಿಗಳು, ಸ್ವಿಚ್ಚು ಅಮುಕಿದ್ದೇ ತಡ ಚಪ್ಪಾಳೆಗಳು ಒಂದೇ ಸಮ ಬೀಳತೊಡಗಿದವು. ಸ್ಟೇಜುನ ಮ್ಯಾಲಿಂದ ಪುಷ್ಪ ವೃಷ್ಟಿಯಾಗುತ್ತಿದ್ದರೆ, ತಮ್ಮ ಘನಕಾರ್ಯದ ದೇವತೆಗಳೂ ಆಶೀರ್ವದಿಸುತ್ತಾರೆ ಅಂತ ಭಾವುಸದ ಜನುಗಳ ಚಪ್ಪಾಳೆ ಮತ್ತೂ ಜೋರಾಗಿ ಮುಖ್ಯಮಂತ್ರಿಗಲು ಖುಷಿಯಾದರು. ಅದೇ ಖುಷಿಯಾಗೆ ಅವರು ಮೈಕು ಮುಂದೆ ನಿಂತರು.
‘ಇವತ್ತು ನಿಮ್ಮೂರು ಸ್ಕೂಲುನಾಗೆ ಕಂಪ್ಯೂಟರು ಕೇಂದ್ರ ಶುರುವಾಗೊ ಮೂಲಕ, ಮಾಹಿತಿ ತಂತ್ರಜ್ಞಾನದ ಸವಲತ್ತು ಪ್ರತಿಯೊಂದು ಗ್ರಾಮಕ್ಕೂ ತಲುಪಿಸಬೇಕೆಂಬೊ ಸರಕಾರದ ಕನಸು ನನಸಾಗೈತೆ. ರಾಮರಾಜ್ಯದ ಕನಸು ನನಸಾಗೊ ಹಾದಿಯಾಗೆ ಇದೊಂದು ಮೈಲಿಗಲ್ಲು. ನಮ್ಮ ರೈತರುಗೆಲ್ಲ ತಂತ್ರಜ್ಞಾನದ ಫಲ ದಕ್ಕಬೇಕು. ನಾವೆಲ್ಲ ಸೇರಿ ಹೊಸ ಇತಿಹಾಸ ಬರೆಯಬೇಕು.
ಅಣ್ಣಪ್ಪಗೌಡನಂಥ ಯುವ ನಾಯಕರ ಮಾರ್ಗದರ್ಶನದಾಗೆ ರಾಜ್ಯದಾಗೇನೆ ನಿಮ್ಮೂರು ಆದರ್ಶ ಗ್ರಾಮವಾಗಬೇಕು. ನಮ್ಮ ಸರಕಾರ ನಿಮ್ಮ ಬೆಂಬಲಕ್ಕಿದ್ದು, ಯಾವ ರೈತರೂ ಆತ್ಮಹತ್ಯೆ ಮಾಡ್ಕೊಬೇಕಿಲ್ಲ. ಈ ಊರಾಗೆ ಆತ್ಮಹತ್ಯೆ ಮಾಡ್ಕೊಂಡ ಕೊನೆಯ ರೈತ ರಂಗಪ್ಪನೇ ಆಗಬೇಕು. ಅವುನ ಕುಟುಂಬಕ್ಕೆ ನಮ್ಮೆಲ್ಲರ ಸಾಂತ್ವನವಿದೆ..’
ಮಾತು ಮಾತಿಗೂ ಚಪ್ಪಾಳೆ-ಸಿಳ್ಳೆ ಗಿಟ್ಟಿಸಿದ ಮುಖ್ಯಮಂತ್ರಿಗಳ ಭಾಷಣದ ನಂತರ ಮೈಕುತಾಗೆ ಬಂದ ಅಣ್ಣಪ್ಪಗೌಡ, ‘ಆತ್ಮಹತ್ಯೆ ಮಾಡುಕಂಡ ರೈತನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಸ್ವಹಸ್ತದಿಂದ ಪರಿಹಾರ ವಿತರಣೆ ರಂಗಪ್ಪನ ಹೆಂಡ್ರು ಮಕ್ಕಳು ವೇದಿಕೆಗೆ ಬರಬೇಕು’ ಅಂತ ಘೋಷಿಸಿದ. ಭಾಷಣ ಮಾಡಿ ದಣಿದಿದ್ದ ಮುಖ್ಯಮಂತ್ರಿಗಳು ಬಾಟಲಿ ನೀರು ಕುಡುದು, ಜರಿ ಶಾಲು ಸರಿ ಮಾಡ್ಕೊತಾ ಎದ್ದುನಿಂತರೂ, ಯಾರೂ ಸ್ಟೇಜುಗೆ ಬರಲಿಲ್ಲ. ಇತ್ತ ಸ್ಟೇಜುನ ಪಕ್ಕಕ್ಕೆ ಬಂದ ಅಣ್ಣಪ್ಪಗೌಡ ಅಲ್ಲಿದ್ದ ತಲೆಗಳ ಕೂಡ ಏನೋ ಕೂಗಾಡುದ. ಜನುಗಳು ಓ ಅನ್ನೋಕೆ ಶುರು ಮಾಡಿದ್ದನ್ನು ನೋಡುದ ಮುಖ್ಯಮಂತ್ರಿಗಳು, ಪರಿಹಾರದ ಚೆಕ್ಕನ್ನು ಅಣ್ಣಪ್ಪಗೌಡನ ಕೈಗೆ ಕೊಟ್ಟು ಅದನ್ನು ರಂಗಪ್ಪನ ಕುಟುಂಬದೋರಿಗ ತಲುಪಿಸುವಂತೆ ಹೇಳಿ ತಮ್ಮ ಸಿಂಹಾಸನದಾಗೆ ಮತ್ತೆ ವಿರಾಜಮಾನವಾದರು.
ಇದೇ ಹೊತ್ತುನಾಗೆ ಶ್ರೀಗಂಧ, ರೇಷುಮೆ, ಮಲ್ಲಿಗೆ ಹಾರಗಳ ಹಿಡುಕೊಂಡ ಏಳೆಂಟು ಮಂದಿಯ ಗುಂಪು ಸ್ಟೇಜುಗೆ ಬಂದು, ಹಾರದೊಂದಿಗೆ ಮನವಿ ಪತ್ರವೊಂದನ್ನು ಮುಖ್ಯಮಂತ್ರಿಗಳಿಗೆ ಅರ್ಪಿಸಿತು. ಮೈಕು ಹತ್ತುರಕ್ಕೆ ಬಂದ ಗುಂಪುನ ಮುಂದಾಳು, ‘ಜನಗಳಿಗಾಗಿ ಪ್ರಾಣಾನೆ ಕೊಡೋದಕ್ಕೆ ತಯಾರಾಗಿರೊ ಕಲಿಯುಗದ ದಾನರ ಶೂರ ಕರ್ಣನೂ, ಕ್ಷೇತ್ರದ ಶಾಸಕರೂ ಆದ ಅಣ್ಣಪ್ಪಗೌಡರುಗೆ ಮಂತ್ರಿಸ್ಥಾನ ಕೊಡಬೇಕುಂತ ಸಾವುರಾರು ಜನರ ಪರವಾಗಿ ಈ ನಿಯೋಗ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ. ನಮ್ಮ ಮನವಿಯ ಈಡೇರುಸೊ ಮೂಲಕ, ಈ ಭಾಗದ ಜನುಗಳ ಭಾವನೆಗೆ ಮುಖ್ಯಮಂತ್ರಿಗಳು ಗೌರವ ಕೊಡಬೇಕು’ ಅಂತ ಹೇಳಿ, ‘ಅಣ್ಣಪ್ಪಗೌಡರಿಗೆ ಜೈ’ ಮುಖ್ಯಮಂತ್ರಿಗಳಿಗೆ ಜೈ, ಎಂದು ಜೈಕಾರ ಕೂಗಿದ. ತಕ್ಷಣವೇ ಸಾವುರಾರು ಜೈಕಾರಗಳು ಒಟ್ಟಿಗೆ ದನಿಯಾಗತೊಡಗಿ, ಚಪ್ಪಾಳೆ-ಶಿಳ್ಳೆಗಳೂ ಜೈಕಾರಗಳೊಂದಿಗೆ ಕಲಿತುಕೊಂಡವು. ಮತ್ತೆ ಎರಡೂ ಕೈ ಎತ್ತಿಕೊಂಡು ಎದ್ದುನಿಂತ ಮುಖ್ಯಮಂತ್ರಿಗಳು, ಜನುಗಳ ಸದ್ದಡಗಿದ ನಂತರ, ‘ಈ ಬಾರಿಯ ಸಂಪುಟ ವಿಸ್ತರಣೆ ಸಂದರ್ಭದಾಗೆ ಗೌಡರ ಹೆಸರುನ ಪರಿಶೀಲಿಸುವುದಾಗಿ’ ಭರವಸೆ ನೀಡುದರು. ಮತ್ತೆ ಚಪ್ಪಾಳೆ.
ತೆಪ್ಪೋತ್ಸವಕ್ಕೆ ಶುಭ ಹಾರೈಸಿದ ಮುಖ್ಯಮಂತ್ರಿಗಳು ಹೆಲಿಕ್ಯಾಪ್ಟರುನಾಗೆ ಹಾರಿ ಹೋದರು. ಹೆಲಿಕ್ಯಾಪ್ಟರು ಮೇಲೆ ಹಾರುದಂಗೆ ಏಳುತ್ತಿದ್ದ ಧೂಳು ಮೋಡವ ಕೆಳಗಿದ್ದ ಜನ ಅಚ್ಚರಿಯಿಂದ ನೋಡುತ್ತಿದ್ದರು.
***
ಪುಷ್ಟ ವೃಷ್ಟಿಯಂಗೆ ಮಲೆ ಸಣ್ಣದಾಗಿ ಹನೀತಿತ್ತು.
ಕಣ್ಣುಗಳ ಪಾಪ ತೊಳೆಯುವಷ್ಟು ಚಲುವಾಗಿದ್ದ ಊರದೇವರುನ ಹೊತ್ತಿದ್ದ ತೆಪ್ಪಕ್ಕೆ ಪೂಜೆ ಸಲ್ಲಿಸಿದ ಅಣ್ಣಪ್ಪಗೌಡರು, ಸಂಜೆ ಸೂರ್ಯನ ಕೆಂಪುನಾಗೆ ನಿಗನಿಗಿ ಅಂತಿದ್ದ ಗಂಗವ್ವ ಮತಾಯೀಗೂ ಸಪತ್ನೀ ಕರಾಗಿ ಪೂಜೆ ಸಲ್ಲುಸಿ ಬಾಗಿನ ಒಪ್ಪುಸುದರು. ತೆಪ್ಪ ಕೆರೆಯಾಗೆ ಹೋಗಲು ಶುರು ಮಾಡಿದಂತೆ, ಅದರ ಹಿಂದೆ ಹತ್ತಾರು ದೋಣಿಗಳಾಗೆ ನೂರಾರು ಮಂದಿ ಕೆರೆಗಿಳಿದರು. ಕೆಲವರು ತೆಪ್ಪಕ್ಕಿಂತ ಮುಂದಾಗಿ ಹೋದರು. ದೇವಲೋಕದಿಂದ ಇಳದು ಬಂದೈತೇ ನೋ ಎಂಬಂಗೆ ದೀಪಗಳ ಬೆಳಕುನಾಗೆ ಜಗಮಗಿ ಸುತಿರೊ ತೆಪ್ಪವ ನೋಡಿ, ತೆಪ್ಪದ ಮಧ್ಯದಾಗೆ ವಿರಾಜ ಮಾನನಾಗಿರೊ ಊರ ದೇವುರ ಕಣ್ತುಂಬಿಸಿಕೊಂಡು ಕಟ್ಟೆಯ ಮ್ಯಾಲಿನ ಜನ ತಮ್ಮ ಪಾಪಿ ಜನುಮ ಪಾವನವಾಯ್ತು ಅಂತ ರೋಮಾಂಚನ ಪಟ್ಟುಕೋತಿ ದ್ದರು. ಊರ ದೇವರು ಜೊತೆಯಾಗೆ ಅಣ್ಣಪ್ಪಗೌಡನ ಸಮೇತ ಏಳೆಂಟು ಜನುಗಳ ಹೊತ್ತ ತೆಪ್ಪ, ನೀರುನ ಸೀಳುಕಂಡು ಮುಂದೆ ಮುಂದೆ ಹೋದಂಗೆ, ತೆಪ್ಪದಾಗಿ ದ್ದವರು ದೀಪಗಳನ್ನು ನೀರಾಗೆ ತೇಲಿಬಿಡ ತೊಡಗಿ ದೀವಳಿಗೆ ಸಂಭ್ರಮ ಸೃಷ್ಟಿಸತೊಡಗಿದರು. ಸಣ್ಣ ಸಣ್ಣ ದೋಣಿಗಳಾಗೆ ತೆಪ್ಪವ ಬೆನ್ನಟ್ಟಿದವರೂ ದೀಪಗಳ ತೇಲಿಬಿಡೊ ಸಂಭ್ರಮದಾಗೆ ಕೂಡಿಕೊಂಡು ನರಕಾಸು ರನ ಭೂಮಿಗೆ ಕರೆಯತೊಡಗಿದರು.
ಎಣ್ಣೆ ತುಂಬುದ ದೀಪವ ನಾಜೂಕಾಗಿ ನೀರಿಗೆ ಬಿಡಲು ಹೊರಟ ಅಣ್ಣಪ್ಪಗೌಡನ ಕೈಗೆ ಏನೋ ತಗುಲಿದಂಗನ್ನಿಸ್ತು. ದೀಪವ ಹರಿಬಿಟ್ಟು ಮೇಲೆತ್ತಿ ಕೊಂಡ ಅಣ್ಣಪ್ಪಗೌಡನ ಕೈನಾಗೆ ಬಟ್ಟೆಯೊಂದು ಸುತ್ತಿಕೊಂಡಿತ್ತು. ಕೈಗೆ ಸುತ್ತುಕಂಡ ದಾವಣಿ ಬಟ್ಟೆಯ ನೋಡುತ ನೋಡುತ, ಅದರೊಳಗಿನಿಂದ ಹೆಣ್ಣು ಮಗಳೊಬ್ಬಳು ಎದ್ದು ಬಂದಂತೆನಿಸಿ ಅಣ್ಣಪ್ಪಗೌಡ ನಡುಗತೊಡಗಿದ. ಅವುನ ಕಣ್ಣುಗಳು ನೀರುನ ಜಾಲಿಸತೊಡಗಿದವು.
ತನಗೆ ಸಲ್ಲಬೇಕಾದ್ದು ಸಂದವಳಂತೆ ಯಾವತ್ತೂ ಇಲ್ಲದ ನಿರುಮ್ಮಳತೆಯಿಂದ ಗಂಗವ್ವ ಕಲಕಲ ಅಂತಿದ್ದಳು.
Monday, March 8, 2010
Wednesday, January 13, 2010
ದಾರಂದ (ಕಥೆ)
ಮಂಜುನಾಥ್ ಗೀತಾ
ಕತೆಗಳಲ್ಲಿ ಕಾಣಬರುವ ಊರುಗಳಿಗೆ ಹೆಸರು ಇರಲೇಬೇಕೆಂದೇನೂ ಇಲ್ಲ. ನಮ್ಮದೇ ನಿಮ್ಮದೇ ಯಾರದೇ ಊರಾಗಬಹುದು. ಇಲ್ಲಿ ಕಂಡು ಬರುವ ಊರು ಮತ್ತು ಮುದುಕಿಯ ಹೆಸರು ಕುರಿತಾದರೂ ಹೀಗೆಯೇ. ಅವಳನ್ನು ಮುದುಕಿ ಅಂದರೆ ಸಾಕು. ಯಾಕೆಂದರೆ ಈಗ ಅವಳಲ್ಲಿ ಮುದುಕಿ ಅನ್ನಿಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಇವೆ. ಮೊದಲಿದ್ದ ಎಲ್ಲಾ ಹಲ್ಲುಗಳ ಪ್ರಾತಿನಿಧ್ಯ ವಹಿಸಿಕೊಂಡು ಉಳಿದಿರುವ ಎರಡು ಹಲ್ಲುಗಳು ಬಾಯೊಳಗೆಲ್ಲೋ ಅಲ್ಲಾಡುತ್ತಾ ಇವೆ. ಸುಕ್ಕು ಇಡೀ ದೇಹವನ್ನು ಹಬ್ಬಿ ತಬ್ಬಿ ಸಣ್ಣಗೆ ನಡುಗು ವಂತೆ ಮಾಡಿದೆ. ಹಾಗೆಂದು ಅವಳ ತಿರು ಗಾಟಕ್ಕೋ ಇನ್ನಾವುದೇ ಆಧಾರಕ್ಕೋ ಸದ್ಯಕ್ಕೆ ಕೋಲೇನೂ ಬೇಕಾಗಿಲ್ಲ. ಬೆನ್ನು ಬಾಗಿದೆ. ಕಣ್ಣು ಇನ್ನೂ ಸಾಧ್ಯವಾದಷ್ಟು ಚೆನ್ನಾಗಿ ನೋಡಲು ಪ್ರಯತ್ನಿಸುತ್ತಿವೆ. ತಲೆಯ ಅಷ್ಟು ದಟ್ಟ ಕೂದಲು ಗಳಲ್ಲಿ ಒಂದಾದರೂ ತನ್ನ ಮೂಲವರ್ಣ ಉಳಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಇವೆಲ್ಲವುಗಳ ಆಧಾರದ ಮೇಲೆ ಆ ಮುದುಕಿಯ ವಯಸ್ಸು ಅರವತ್ತೈದರ ಮೇಲಾಗಿರುವುದನ್ನು ಯಾರಾದರೂ ಕಂಡು ಹಿಡಿಯಬಹುದು.
ಅವಳಿಗೆ ಸದ್ಯಕ್ಕೆ ಚಿರಾಸ್ತಿ ಎಂದು ಇರುವುದು ಹಾಲಿ ಸತ್ತುಹೋಗಿರುವ ಅವಳ ಗಂಡ ಬಿಟ್ಟು ಹೋದ ಒಂದು ಮನೆ. ಅದನ್ನು ಹಟ್ಟಿ, ಗುಡಿಸಲು, ಷೆಡ್ಡು, ಗೂಡು ಅಂತ ಯಾವ ಹೆಸರಿನಿಂದಾದರೂ ಕರೆಯಿರಿ. ಅದರ ಆಕೃತಿಗೆ ಮೋಸ ಮಾಡಿದಂತಾ ಗುವುದಿಲ್ಲ. ಅದರೊಳಗೆ ಪ್ರಯಾಸಪಟ್ಟು ಮೂರು ಜನ ಮಲಗಬಹುದು. ಆದರೆ ಇರುವಷ್ಟುದ್ದದ ಕಾಲನ್ನು ಆರಾಮವಾಗಿ ಚಾಚುವಂತಿಲ್ಲ. ಹಾಗೂ ನಿಂತರೆ ಕೈಮೇಲೆತ್ತುವಂತಿಲ್ಲ. ಅವಳನ್ನೂ ಸೇರಿಸಿ ಅಲ್ಲಿರುವ ಸುತ್ತಮುತ್ತಲಿನವರಿಗೆ ತಿಳಿದು ಬಂದಂತೆ ಅವಳ ಆಸ್ತಿಯೆನ್ನುವುದು ಅದೊಂದೇ.
ಕತೆಯ ಮುಂದಿನ ಭಾಗವೆನ್ನುವುದೇನಿದೆಯೋ ಅದರಲ್ಲಿ ಸ್ವಲ್ಪ ಭಾಗವನ್ನು ಅವಳ ಹಿಂದಿನ ಕತೆಯನ್ನು ಹೇಳುವುದಕ್ಕೆ ಬಳಸಿಕೊಳ್ಳುವುದಾದರೆ ಅದು ಹೀಗೆ ಪ್ರಾರಂಭವಾಗುತ್ತದೆ.
ಮದುವೆಯಾಗಿ ಈ ಊರ ಈ ಹಟ್ಟಿಯ ಹೊಸ್ತಿಲು ತುಳಿದಂದಿನಿಂದಲೂ ಅನಾಥವಾಗಿದ್ದ ಅವಳ ಗಂಡನೆಂಬ ಪಾರ್ಟಿನ ಆಸಾಮಿ ದುಡಿದು ತಂದು ಹಾಕಿದ್ದು ಅವಳು ಬೇಯಿಸಿ ಹಾಕಿದ್ದು ಎಂಬುದೇನೂ ಹೇಳಿಕೊಳ್ಳುವಷ್ಟು ದಿನಗಳಲ್ಲಿ ನಡೆದಿಲ್ಲ. ಅವನದೊಂದು ಸಾಧನೆಯೆಂದರೆ ಬೆಳಿಗ್ಗೆಯಿಂದ ಸಂಜೆಯ ತನಕ ದಿನವೊಂದಕ್ಕೆ ಹತ್ತು ಸಾರಾಯಿ ಪಾಕೀಟಾದರೂ ಕುಡಿಯುತ್ತಿದ್ದುದ್ದು. ಯಾರಾದರೂ ಬಾಜಿ ಕಟ್ಟಿದಲ್ಲಿ ಹದಿನೈದಾದರೂ ಸೈ. ತನ್ನ ಸಂಸಾರಕ್ಕಲ್ಲದಿದ್ದರೂ ತನ್ನ ನಿತ್ಯದ ಪಾಕೀಟುಗಳಲ್ಲಿ ಎರಡು ಮೂರುಗಳಿಗಾದರೂ ಸಂಜೆ ತುಂಬುವ ತನಕ ಯಾರ ಕೈಕಾಲಾದರೂ ಹಿಡಿದು ಎಂಥದ್ದಾದರೂ ಮಾಡಿ ಸಂಪಾದಿಸಿ ಬಿಡುತ್ತಿದ್ದ. ಅವಳನ್ನು ಲಗ್ನಗೈದು ಗಂಡನೊಡನೆ ಅಟ್ಟಿದ್ದೇ ಅವಳಪ್ಪನ ಮನೆಯವರು ತಮ್ಮ ಋಣ ತೀರಿತು ಎಂದುಕೊಂಡು ಏನು ಎತ್ತ ಅನ್ನುವುದನ್ನೂ ತೀರಿಸಿ ಇತ್ತ ಮುಖ ಹಾಕಲಿಲ್ಲ.
ಇವಳೂ ತನ್ನ ಕುಡುಕ ಪರಮಾತ್ಮನಾದ ಪತಿಯು ಇಂದು ಸರಿಯಾಗಬಹುದು ನಾಳೆ ಸರಿಹೋಗ ಬಹುದು ಅಂದೆಲ್ಲ ಯೋಚಿಸಿ ಕಾದು ಏನೂ ಪ್ರಯೋಜನವಾಗದೆ ಸಾರಾಯಿಯಲ್ಲಿಯೇ ತನ್ನ ನಿತ್ಯ ಬದುಕನ್ನು ಮುಳುಗಿಸುತ್ತಿರುವ ಅವನನ್ನು ಅನೇಕ ಬಗೆಯಲ್ಲಿ ಗೋಗರೆದು, ಬೇಡಿಕೊಂಡು ಕಿಚ್ಚು ಹೆಚ್ಚಿ ಬೈದು ಉಗಿದು ಅತ್ತು ಕರೆದು ಕೊನೆಗೆ ಅವನ ಮುಂದಲೆ ಹಿಡಿದು ಎಳೆದಾಡಿದರೂ ಅವನು ತನ್ನ ವರಸೆ ಬದಲಿಸಲಿಲ್ಲ. ಇನ್ನು ಏನೇ ಹೇಗೇ ಮಾಡಿದರೂ ಇವನು ತನ್ನ ಬಾಳಿಗೆ ನೆಮ್ಮದಿ ತರಲಾರನೆಂದು ತಿಳಿದುಕೊಂಡವಳೇ ಮುಂದಕ್ಕೆ ತನ್ನ ಹೊಟ್ಟೆಪಾಡಿನ ದಾರಿಯನ್ನು ತಾನೇ ಕಂಡುಕೊಳ್ಳಲು ಯತ್ನಿಸಿದಳು.
ಆ ಸುತ್ತಲ ಜನರಲ್ಲಿ ಕೆಲವರು ತಮ್ಮ ಮನೆ ಮುಂದೆ ಹಿತ್ತಲುಗಳಲ್ಲಿ ಬದನೆ, ಬೆಂಡೆ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಇನ್ನೂ ಏನೇನೋ ಮನೆ ಬಳಕೆಯ ತರಕಾರಿ ಸೊಪ್ಪುಗಳನ್ನು ಬೆಳೆಯು ತ್ತಿದ್ದುದು ಸರಿಯಷ್ಟೆ. ಅವನ್ನು ಕೆ.ಜಿ.ಗೆ ಇಂತಿಷ್ಟು ಅಂತ ಮಾತಾಡಿ ಕುಯ್ದು ಕುಕ್ಕೆಗೆ ತುಂಬಿಕೊಂಡು ಸುತ್ತಮುತ್ತಲ ಸಣ್ಣಪುಟ್ಟ ಹಳ್ಳಿ ಊರುಗಳಲ್ಲಿ ಹೊತ್ತು ಮಧ್ಯಾಹ್ನದವರೆಗೆ ಕೂಗಿಕೊಂಡು ಮಾರಿ ಬಂದು ಮೊದಲೇ ಮಾತಾಡಿದಷ್ಟು ಅವರಿಗೆ ಕೊಟ್ಟು ಮೇಲೆ ಬಂದ ಲಾಭವಾ ಇಪ್ಪತ್ತೋ ಇಪ್ಪತ್ತೈದೋ ರೂಪಾಯಿಗಳನ್ನು ತನ್ನ ನಿತ್ಯ ಹೊಟ್ಟೆಪಾಡಿಗೆ ಮಾಡಿಕೊಳ್ಳುವುದನ್ನು ಕಂಡುಕೊಂಡಳು. ಹಗಲು ಪೂರಾ ಊರೊಳಗೆಲ್ಲೋ ಇದ್ದು ಬಿದ್ದು ಕುಡಿದು ವಾಲಾಡಿ ಸಂಜೆ ತುಂಬಿಸಿ ಬರುವ ಗಂಡನೆಂಬವ ನಿಗೂ ಒಂದು ಮುದ್ದೆ ಇಕ್ಕುತ್ತಿದ್ದಳು. ಆ ಗಂಡ ಅವಳಿಗೇನೂ ಮಾಡುವುದು ಬೇಕಿರಲಿಲ್ಲ. ತಾವಿರುವ ಗುಡಿಸಲಿಗೆ ಭದ್ರವಾದ ಮರದ ದಾರಂದವೊಂದನ್ನು ಮಾಡಿಸಿದ್ದರೆ ಸಾಕಾಗಿತ್ತು. ಆ ಗುಡಿಸಲು ಸೃಷ್ಟಿಯಾದ ಕಾಲದಿಂದಲೂ ತೆಂಗಿನ ಗರಿ ನೇಯ್ದು ಮಾಡಿಕೊಂಡ ದಾರಂದದಾಕಾರದ ನೆರಕೆಗೇ ಹಗ್ಗದ ಹುರಿ ಕಟ್ಟಿಕೊಂಡು ಬಾಗಿಲು ಅಂತನ್ನುವ ಒಳಕ್ಕೆ ಹೋಗುವ ಇಷ್ಟಗಲ ಜಾಗಕ್ಕೆ ಅದನ್ನು ಅಡ್ಡಲಾಗಿ ನಿಲ್ಲಿಸಿಕೊಂಡು ಬಹಳ ದಿನಗಳ ತನಕ ಬಾಳಿದ್ದಾಯಿತು. ಆ ನೆರಕೆ ಬದಲಾಗಲಿಲ್ಲ. ಆ ನೆರಕೆ ಕಿತ್ತು ಹಾಕಿ ಅಲ್ಲಿಗೊಂದು ದಾರಂದ ನಿಲ್ಲಿಸಬೇಕು ಅನ್ನಿಸುವಷ್ಟು ಗಂಡನೂ ಬದಲಾಗಲಿಲ್ಲ.
ಯಥಾ ಪ್ರಕಾರವಾಗಿ ಅವಳ ಗಂಡ ಕುಡಿದು ಕುಡಿದು ಸತ್ತ ಅನ್ನುವಾಗ ಅವಳು ಏಳು ತಿಂಗಳ ಬಸುರಿ. ಅಪ್ಪನ ಮನೆಯ ಜನ ಬಂದು ಮನೆ ತುಂಬಿಸಲು ಕರೆದುಕೊಂಡು ಹೋಗುತ್ತಾರೆನ್ನುವ ಅವಳ ಆಸೆ ಆಸೆಯಾಗಿಯೇ ಸತ್ತು ಹೋಯಿತು. ಅವಳಿಗೂ ಗೊತ್ತು ಅಪ್ಪನ ಮನೆಯಲ್ಲಿ ಮೈನೆರೆದು ಮದುವೆಯಾಗದೆ ನಿಂತ ಮೂರು ಜನ ತಂಗಿಯರು ಲಕ್ವಾ ಹೊಡೆದು ತೆವಳುವ ಅವ್ವ ನಾಕು ದಿನ ಕೂಲಿ ಇದ್ದರೆ ಮೂರು ದಿನ ಇಲ್ಲದೆ ಹಟ್ಟಿಯ ಮುಂದೆ ಆಕಾಶ ನೋಡುತ್ತಾ ಕೂರುವ ಅಪ್ಪ. ಬಾಣಂತಿಯೆಂದು ಅವಳು ಹಟ್ಟಿಯೊಳಗೆ ಕುಂತಿದ್ದು ಒಂದೇ ತಿಂಗಳು.
ಹುಟ್ಟಿದ ಮಗನಾದರೂ ಬೆಳೆ ಬೆಳೆಯುತ್ತಾ ಒಳ್ಳೆ ಬುದ್ದಿ ಕಲಿಯುತ್ತಾನೆಂದುಕೊಂಡರೆ ಅವನೂ ನೆಟ್ಟಗಾಗಲಿಲ್ಲ. ಅಪ್ಪನೇ ಮೇಲೆ ಬಂದು ಮೈದುಂಬಿ ಕೊಂಡವನಂತೆ ಹದಿನಾರು ವರ್ಷಕ್ಕೇ ಅಪ್ಪ ಕಲಿತಿದ್ದ ಎಲ್ಲಾ ಕಲೆಗಳನ್ನೂ ಅಪ್ಪನಿಗಿಂತ ಚೆನ್ನಾಗಿಯೇ ಕಲಿತುಕೊಂಡಿದ್ದ. ಬೀದಿಯ ಹೈಕಳೊಂದಿಗೆ ಸೇರಿ ಶಾಲೆಯ ಮೆಟ್ಟಿಲು ಹತ್ತಿದಷ್ಟೇ ಸರಾಗವಾಗಿ ಇಳಿದುಬಂದ. ಅವನು ಪ್ರಾಯಕ್ಕೆ ಬಂದು ದುಡಿದು ತಂದು ಕೈಗೆ ಹಾಕುವುದಿರಲಿ ತಾನು ಅಷ್ಟು ಇಷ್ಟು ಉಳಿಸಿದ ಪುಡಿಗಾಸನ್ನಾದರೂ ಅದರ ಪಾಡಿಗೆ ಇಟ್ಟಿದ್ದರೆ ಚೆನ್ನಾಗಿತ್ತು ಅಂತ ಅವಳಿಗೆ ಅನಿಸುವಷ್ಟರ ಮಟ್ಟಿಗೆ ಆದ.
ಮಗನಿಗೆ ಪ್ರಾಯ ತುಂಬುತ್ತಾ ಬಂತು ಅನ್ನುವಾಗ ಅವನ ಕುಡಿತ ಜೂಜಿನ ಖಯಾಲಿಗಳು ಹೆಚ್ಚುತ್ತಾ ಹೋದಂತೆ ಅವನಿಗೊಂದು ಹೆಣ್ಣು ತಂದು ಮದುವೆ ಮಾಡಿದರೆ ಆತ ದಾರಿ ಹತ್ತಬಹುದು ಅಂತ ನಾಕಾರು ಜನಗಳ ಮೇಲೆ ಅಂದಾಜಿಸಿ ಕಂಡು ಕೇಳಿದ ಜನರ ಕೋರಿಕೊಂಡು ಅವರ ಜೊತೆ ಮಾಡಿಕೊಂಡು ಊರು ಕೇರಿ ಸುತ್ತಾಡಿ ಹೆಣ್ಣು ಪತ್ತೆ ಮಾಡಿ ತಾನು ಗಂಟು ಮಾಡಿ ಮಡಗಿದ್ದ ಕ್ಕೊಂದಷ್ಟು ಸಾಲ ಮಾಡಿ ಲಗ್ನ ಮಾಡಿದಳು. ಆ ಮೂದೇವಿ ಮಗ ಮದುವೆಯಾದ ಸಂಭ್ರಮಕ್ಕೋ ಏನೋ ಅನ್ನುವಂತೆ ಇಷ್ಟು ದಿನಗಳಿಗಿಂತ ಇನ್ನೂ ಮೂರು ಪಾಕೀಟು ಜಾಸ್ತಿ ಸೇರಿಸಿ ಏರಿಸಿ ಹಟ್ಟಿ ಮುಂದಿನ ಅಂಗಳದಲ್ಲಿ ಕಾಲು ಚಾಚಿಕುಂತು ವಾಂತಿ ಶುರು ಮಾಡಿದಾಗ ತನ್ನ ಮಗನಿನ್ನೂ ಯಾವ ವಿಧವಾದ ವಿಧಾನ ಬಳಸಿದರೂ ನೆಟ್ಟಗಾಗುವದಿಲ್ಲ ವೆನ್ನುವುದು ಅವಳಿಗೆ ಖಾತರಿಯಾಯಿತು. ಅವನ ಹೆಂಡತಿ ಎನ್ನುವ ಆ ಹೆಣ್ಣು ಅವನ ಗಬ್ಬು ಬಾಯಿಗೆ ವಾಕರಿಕೆ ಉಮ್ಮಳಿಸಿ ಅವನ ಮಗ್ಗುಲನ್ನೇ ತೊರೆ ಯಿತು. ಹೆಣ್ಣ ಮಗ್ಗುಲ ಚಿಂತೆಯೇನೂ ಅವನಿಗೆ ಅಷ್ಟಾಗಿ ಬಾಧಿಸದೆ ಪಾಕೀಟು ಚೀಪುವುದರಲ್ಲಿಯೇ ಸ್ವರ್ಗಸುಖ ಕಾಣುತ್ತಿದ್ದ ಅವನ ಸ್ಥಿತಿ ಇಂದು ನಾಳೆ ನಾಳಿದ್ದು ಸುಧಾರಿಸುವುದೆಂದೂ ನೀನು ಒಂದಷ್ಟು ದಿನ ಸೈರಿಸಿಕೊಂಡು ಹೋಗಬೇಕೆಂದೂ ನಾಳೆಗಳ ಮೇಲೆ ನಾಳೆಗಳ ಕಳೆದೂ ಕಳಿಕೊಳ್ಳುತ್ತಿದ್ದ ಅತ್ತೆಯ ಯಾವ ಗೋಗರೆತವನ್ನೂ ಕಿವಿಗೆ ಇಟ್ಟುಕೊಳ್ಳದೆ ಸೊಸೆ ತನ್ನೆಲ್ಲ ಬಟ್ಟೆಗಳ ಬ್ಯಾಗು ಹಿಡಿದು ಅಪ್ಪನ ಹಾದಿ ಹಿಡಿದು ಹೋದಳು.
ತನ್ನ ಗಂಡನ ಆಸೆ ಅವ ಸತ್ತಾಗಲೇ ಸಾಯಿತು. ಮಗನ ಆಸೆ ಇವ ಬದುಕಿರುವಾಗಲೇ ಸತ್ತು ಗಾಳಿಯಾಗಿ ಕಾಡುತ್ತಿದೆ. ಇವನ ಮೇಲೆ ಅವಳಿಗೆ ಇನ್ನಾವ ಆಸೆಯೂ ಉಳಿದಿಲ್ಲ. ಅವಳಿಗೆ ತನ್ನೊಳಗೆ ಈಗ ಉಳಿದುಕೊಂಡಿರುವ ಆಸೆಯೊಂದೇ. ಅದು ತಾನು ಬಾಳಿದ ಈ ಹಟ್ಟಿಗೆ ಒಂದು ಮರದ ದಾರಂದ ಮಾಡಿಸಿ ನಿಲ್ಲಿಸುವುದು. ಗಂಡನ ಮನೆಗೆ ಮೊದಲ ದಿನ ಕಾಲಿಟ್ಟಾಗಲೇ ಅವಳು ಆ ದಾರಂದದ ಬಗ್ಗೆಯೇ ಯೋಚಿಸಿದ್ದಳು. ಈಗ ಅದೊಂದು ಪೂರೈಸಿದರೆ ತನಗೆ ಈ ಹಟ್ಟಿ ಋಣ ಇಳಿದಂತೆ. ಆಮೇಲೆ ಈ ಪಾಪಿ ಮುಂಡೆ ಮಗ ಏನಾದರೂ ಮಾಡಿಕೊಂಡು ಹೋಗಲಿ ತಾನು ನೋಡುವುದಕ್ಕೆ ತನಗೆ ಇನ್ನೆಷ್ಟು ಕಾಲವಿದೆ?
ಹಾಗೆ ಆ ಕಾಲದಿಂದಲೂ ಅಂದಂದುಕೊಂಡೇ ಈಗ ಕತೆಯ ಮೊದಲಿಗೆ ಕಾಣಿಸಿದ ಸ್ಥಿತಿಗೆ ಬಂದು ನಿಂತಿದ್ದಾಳೆ. ಮಗ ಕುಡಿದು ಕುಡಿದು ಅವನ ಅಪ್ಪ ಸಾಯುವ ಕ್ಷಣಗಳಲ್ಲಿದ್ದ ಅವತಾರವನ್ನು ತಲುಪಿದ್ದಾನೆ. ಅವನನ್ನು ನೋಡಿದರ ಅವಳ ಕರುಳಿಗೆ ಕೊಳ್ಳಿ ತಿವಿದಂತಾಗುತ್ತದೆ. ಏನೇ ಆದರೂ ತನ್ನ ಹೊಟ್ಟೆ ಯಿಂದ ಬಿದ್ದವನು. ಎಷ್ಟೋ ಸಲ ಬೆಳಗ್ಗೆಯಿಂದಲೂ ಹೊಟ್ಟೆಗಿಲ್ಲದ ಬರಿ ಸಾರಾಯಿ ಕುಡಿದೇ ಬಚ್ಚಲ ಬದಿ, ಬೀದಿ, ಗಲ್ಲಿ ಸಂದಿಯಲ್ಲೆಲ್ಲ ಬಿದ್ದಿದ್ದವನನ್ನು ಅವರಿವರ ಸಹಾಯದಿಂದ ಹಟ್ಟಿಗಳೆದುಕೊಂಡು ಬಂದು ಮೈ ತೊಳೆದು ಉಣ್ಣಲಿಕ್ಕೆ ಕೊಟ್ಟು ಕಣ್ಣೀರು ತೊಟ್ಟಿಸುತ್ತ ಶೋಕಾಡಿದೆ ಮುದುಕಿ. ತಾನು ವ್ಯಾಪಾರಕ್ಕೆ ಹೋದಾಗ ಹಟ್ಟಿಯ ನೆರಕೆ ಬಿಚ್ಚಿ ಹಟ್ಟಿಯ ಮೂಲೆ ಸಂದಿಗೊಂದಿ, ಗೂಡು ಮಾಡುಗಳನ್ನೆಲ್ಲ ಸೋಸಿ ಕೊಂಡು ಹೋಗಿ ಕುಡಿದು ಬಂದು ಬೀದಿಯಲ್ಲಿ ವಾಲಾಡುವಾಗ ಅವನ ಬುರುಡೆ ಒಡೆದು ಸಾಯಿ ಸುವಷ್ಟು ಸಿಟ್ಟು ಬಂದು ನೆಟಿಕೆ ಮುರಿದು ಬಗೆ ಬಗೆಯಾಗಿ ಶಪಿಸಿ ಸಾಕಾಗಿದೆ ಅದಕೆ. ಅವನ ಕಳ್ಳತನ ಕಂಡುಕೊಂಡ ಮೇಲೆ ತನ್ನ ಹಣವನ್ನು ಅವಳು ತನ್ನ ಹಟ್ಟಿಯಲ್ಲಿ ಇಟ್ಟಿಲ್ಲ. ಪಕ್ಕದ ಮನೆ ಕೆಂಪೀರಿಗೆ ಕೊಟ್ಟು ಮಡಗಿಸಿದ್ದಾಳೆ. ಅದು ಮುನ್ನೂರು ರೂಪಾಯಿಯೇನೋ ಇರಬಹುದು. ತನ್ನೊಬ್ಬಳ ದಿನ ನಿತ್ಯದ ಹೊಟ್ಟೆಪಾಡಿನ ಖರ್ಚಿನ ಬಾಬ್ತು ಚಿಲ್ಲರೆಯಲ್ಲ ಅವಳ ಸೀರೆ ನೆರಿಗೆಯಲ್ಲಿ ತುರುಕಿಕೊಂಡು ಅಡಿಕೆ ಎಲೆ ಚೀಲದಲ್ಲಿದೆ.
ಇಷ್ಟು ವಯಸ್ಸಾಗಿದ್ದರೂ ತನ್ನ ವ್ಯಾಪಾರ ನಿಲ್ಲಿಸಲು ಅವಳಿಂದ ಆಗಿಲ್ಲ. ಆದರೆ ಮೊದಲಿನಂತೆ ಊರೂರು ತಿರುಗುವುದೂ ಆಗುವುದಿಲ್ಲ. ತನ್ನ ಹಟ್ಟಿಯ ಮುಂದೆಯೇ ಚಿಕ್ಕದೊಂದು ಹಾಳೆ ಸೋಗಿನ ನೆರಳು ಮಾಡಿಕೊಂಡು ಕೆಳಗೆರಡು ಗೋಣಿಚೀಲ ಹಾಸಿ ಗುಡ್ಡೆ ಹಾಕಿಕೊಂಡು ತರಕಾರಿ ಮಾರುತ್ತಾಳೆ. ಸೀಬೆಹಣ್ಣು, ಬೇರಿಕಾಯಿ, ಎಲಚಿ ಹಣ್ಣು ಅಂತ ಆಯಾಯ ಋತುಮಾನಗಳಿಗೆ ತಕ್ಕ ಎಲ್ಲವೂ ಅವಳ ಮಿನಿ ಹಣ್ಣು ಮತ್ತು ತರಕಾರಿ ಅಂಗಡಿಯಲ್ಲಿ ಲಭ್ಯ.
ಇನ್ನು ಅವಳಿಂದ ತಡಮಾಡುವುದು ಸಾಧ್ಯವಾಗುತ್ತಿಲ್ಲ. ಈಗೀಗ ಹಟ್ಟಿಯಲ್ಲಿ ಕಾಸು ಸಿಕ್ಕುವುದಿಲ್ಲವೆನ್ನುವುದು ಗೊತ್ತಾದ ಮೇಲೆ ಒಳಗೆ ಇಟ್ಟ ಬೋಸಿ, ತಪ್ಪಲೆ, ತಣಿಗೆಗಳನ್ನೇ ಎತ್ತಿಕೊಂಡು ಮಾರಲು ಶುರುಮಾಡಿದ್ದಾನೆ. ಮೊನ್ನೆ ಹಳೆಕಾಲದ್ದೊಂದು ಕಂಚಿನ ತಪ್ಪಲೆಯನ್ನು ಪಂಚೆಯೊಳಗೆ ಮರೆಮಾಡಿಕೊಂಡು ಹಟ್ಟಿಯಿಂದ ಈಚೆಗೆ ಮೆಲ್ಲಗೆ ಬರುವಾಗ ಅವಳು ಬಂದು ಬಿಟ್ಟಿದ್ದಳು. ‘ನಿನ್ ಕೈ ಸೇದ್ವಾಗ! ಇನ್ನೂ ನನ್ ಹೊಟ್ಟ ಉರಿಸ್ತಿದ್ದಯಲ್ಲ ನಿನಗ್ ಸಾವು ಬರವ್ನ!’ ಅಂತ ಕೆನ್ನೆಗೆ ತಿವಿದು ತಪ್ಪಲೆ ಕಿತ್ತುಕೊಳ್ಲು ಬಂದವಳನ್ನು ತಳ್ಳಿ ಕೆಳಕ್ಕೆ ಬೀಳಿಸಿ ‘ನನ್ ತಂಟುಗ್ ಬಂದ್ರ ಮೆಟ್ರ ಚಿಮುಕ್ ಬುಡ್ತಿನಿ’ ಅಂದುಬಿದ್ದು ಗೋಳಾಡುತ್ತಿದ್ದವಳನು ತಿರುಗಿಯೂ ನೋಡದೆ ವಾಲಾಡುತ್ತ ಹೋಗಿಬಿಟ್ಟಿದ್ದ. ತನ್ನ ಹಟ್ಟಿಗೊಂದು ಭದ್ರವಾದ ದಾರಂದ ಮಾಡಿಸಿ ಬಂದೋಬಸ್ತು ಮಾಡಿಕೊಳ್ಳಬೇಕೆಂದು ಅವಳು ಬಯಸುತ್ತಿರುವುದಕ್ಕೆ ಮಗನ ಈ ಬಗೆಯ ಪ್ರಕರಣಗಳೂ ಕಾರಣವಿರಬಹುದೆಂದು ಊಹಿಸಬಹುದು.
ತಾನು ಬದುಕಿರುವ ತನಕವಾದರೂ ಹಿಟ್ಟುಸೊಪ್ಪು ಬೇಯಿಸಿಕೊಂಡು ಬದುಕುವುದಕ್ಕಾದರೂ ಈಗ ಏನಾದರೂ ಸರಿ ದಾರಂದವೊಂದನ್ನು ಮಾಡಿಸಿ ಬೀಗ ಹಾಕಿಕೊಂಡರೆ ಅವನ ಕೋಟಲೆ ನಿಲ್ಲಬಹುದು ಅಂತ ಚಿಂತಿಸತೊಡಗಿದಳು. ತಾನು ಬದುಕುವ ಕಾಲದ ಯೋಚನೆ ತಲೆಗೆ ಬಂದುದೇ ತಡ ತಾನು ಈ ದಾರಂದ ‘ಮಾಡಿಸಬೇಕು ಮಾಡಿಸಬೇಕು’ ಅನ್ನುವ ಚಿಂತೆಯಲ್ಲಿಯೇ ಸತ್ತರೆ ಸ್ವರ್ಗಕ್ಕೂ ಹೋಗದೆ ನರಕಕ್ಕೂ ಹೋಗದೆ ಅಂತರ ಪಿಶಾಚಿಯಾಗಿ ಈ ಹಟ್ಟಿಯ ಸುತ್ತಲೇ ಸುತ್ತಬೇಕಾಗುವುದೆಂದು ಅನಿಸಿ ಅಂಜಿಕೆ ಶುರುವಾಗಿ ಏನಾದರಾಗಲೀ ದಾರಂದದ ಕೆಲಸವೊಂದು ಆಗಿಯೇ ಹೋಗಲಿ ಅಂತ ತೀರ್ಮಾನಿಸಿಕೊಂಡು ಆಚಾರಿ ಲಾಲಿಂಗಪ್ಪನ ಮನೆಗೆ ಹೊರಟು ನಿಂತಳು.
‘ಮರದ ದುಡ್ಡು ಕೂಲಿ ಎಲ್ಲಾ ಸೇರಿ ಏಳ್ನೂರ್ ರೂಪಾಯಿ ಆಯ್ತದಕಾ ಮುದ್ಕಿ’ ಅಂತ ಲಾಲಿಂಗಪ್ಪ ಅಂದಾಗ ಅವಳ ದೊಡ್ಡ ಉಸಿರು ಹೊದಂತಾ ಯಿತು. ಅಷ್ಟು ದುಡ್ಡನ್ನು ಸೇರಿಸಬೇಕೆಂದರೆ ಸುಮಾರು ವರ್ಷಗಳೇ ಆಗಬಹುದು. ಅಲ್ಲಿತನಕ ತಾನು ಬದುಕುವುದುಂಟಾ? ಅಂತ ಉಸಿರುಯ್ದುಕೊಂಡು ‘ಅದಿಕಿಂತ ಕಮ್ಮಿ ಆಗಲ್ವ ಅಳಿ’ ಅಂದಳು ಆಸೆಯಿಂದ.
‘ಅಗಲ್ಲಕಮ್ಮ ಅಗಕ್ಕಮ್ಮಿ ಆಗಲ್ಲ’
‘ಯಾವ್ದಾದ್ರೂ ಹಳೆಮರ ಹಲ್ಗ ಇದ್ರ ನೋಡಿ ಮಾಡ್ಕೊಡಿ..ನಂತಾವು ಇರೋದಿನ್ನೂರು ರೂಪಾಯಿ..ನಾನೂ ಬಡವಿ ಯೆಂಗೇಯೋ ಬದಿಕತ್ತಿನಿ ನಿಮ್ ದಮ್ಮಯ್ಯ...’
‘ಅಷ್ಟುಕ ಯಾವ್ ಮರವೂ ಬರಲ್ಲಕಾ ಮುದ್ಕಿ ಸುಮ್ನ ನಿಂಗೂ ಚಪ್ಲ! ಅದೇ ದುಡ್ಗ ಬಿದಿರ್ ತಡ್ಕ ಬತ್ತದ ತಂದ್ ನಿಲ್ಲುಸ್ಕ’ ಅಂತ ಲಾಲಿಂಗಪ್ಪನು ಸುಲಭವಾದ ಮಾರ್ಗವೊಂದನ್ನು ಹೇಳಿಕೊಟ್ಟನು.
ಆ ಬಿದಿರು ತಡಿಕೆಗೂ ಚಿಲಕ ಮಾಡಿಸಿ ಬೀಗ ಹಾಕಿಟ್ಟುಕೊಳ್ಳಬಹುದೆಂಬುದ್ನು ಲಾಲಿಂಗಪ್ಪನವರಿಂದ ಎರಡು ಸಲ ಕೇಳಿ ಖಾತರಿಪಡಿಸಿಕೊಂಡು ‘ಮರದ ದಾರಂದನಂತೂ ಮಾಡ್ಸಕ ನನ್ನ ಹಣೇಲಿ ಬರ‍್ದಿಲ್ಲ ಇದನ್ನಾದ್ರೂ ಮಾಡ್ಸಂವು’ ಅಂತ ಮುದುಕಿ ನಿಟ್ಟುಸಿರೊಂದಿಗೆ ತೀರ್ಮಾನಿಸಿಕೊಂಡು ಮೆತ್ತ ಮೆತ್ತಗೆ ಹಟ್ಟಿ ಸೇರಿಕೊಂಡಳು.
ಮೂರು ದಿನ ಕಳೆದರೆ ಗೋನಳ್ಳಿ ಸಂತೆ. ಬಿದಿರು ತಡಿಕೆ ತರಲು ಹೋಗುವುದು ತನ್ನಿಂದಾಗದು. ಮಗನ ಕೈಗೆ ದುಡ್ಡು ಹಾಕಿ ತರುತ್ತಾನೆಂದುಕೊಂಡು ಕುಂತರೆ ತಾನು ಸತ್ತಾಗಲೇ ಅವ ಬರುವುದು.
ಕೊನೆಗೆ ಕೆಂಪೀರಿಯ ಮಗ ಮಾರನ ಕೈಲಿ ತಡಿಕೆಗೆ ಮತ್ತು ಅದಕ್ಕೊಂದು ಬೀಗಕ್ಕೆ ಹಣಕೊಟ್ಟು ಕಳಿಸಿದಳು. ಅಂತಹವುಗಳಲ್ಲೆಲ್ಲ ಮಾರ ಚೆನ್ನಾಗಿ ಪಳಗಿದವನು. ದಾರ ತಂದು ಬಾಗಿಲ ಅಳತೆ ಹಿಡಿದುಕೊಂಡು ಹೋದ.
ಮಾರ ಸಂಜೆ ಐದು ಗಂಟೆಯ ಬಸ್ಸಿಗೆ ತಡಿಕೆ ಹಾಕಿಕೊಂಡು ಬಂದು ಇಳಿಸಿ ತಾನೇ ಹೊತ್ತು ಹಟ್ಟಿ ಮುಂದೆ ಬಿದಿರ ತಡಿಕೆಯನ್ನು ಇಳಿಸಿದಾಗ ಮುದುಕಿ ರಾತ್ರಿ ಏನಾದರೂ ಮಾಡುವ ಅಂತ ತಯಾರಾಗುತ್ತಿತ್ತು. ಬಿಗಿಭದ್ರವಾಗಿದ್ದ ತಡಿಕೆ ಬಂದದ್ದು ಮುದುಕಿಗೆ ಬಹಳ ಸಂತೋಷವಾಗಿ ಚೀಲದಿಂದ ಇಪ್ಪತ್ತು ರೂಪಾಯಿ ತೆಗೆದು ಮಾರನ ಕೈಗಿತ್ತು “ಖರ್ಚಿಗ ಮಡಿಕಾ...ಹಾಗೇ ಇದನ್ನ ನಿಲ್ಸಕ ಬಿಗಿಯಾದ್ದೊಂದು ಕಂಬ ತರ‍್ಕ ಬಾ ನಾಳಕ..ನೀನೇ ನಿಲ್ಲುಸ್ಕೊಟ್ಟುಡಯಿ” ಅಂತು.
ಮೇಲೆ ಒಂದಾಳು ಕುಂತರೂ ತಡಿಕೆ ಅಲ್ಲಾಡುತ್ತಿರಲಿಲ್ಲ. ಅಷ್ಟು ಬಿಗಿಯಾಗಿದ್ದ ತಡಿಕೆಯನ್ನು ಮೆಚ್ಚಿಕೊಂಡು ಕಬ್ಬಿಣದ ಚಿಲಕವನ್ನು ಅದಕ್ಕೆ, ಬೆಳಿಗ್ಗೆ ಜೋಡಿಸಿಕೊಂಡರಾಯಿತು ಅಂತಂದುಕೊಂಡು ಅದನ್ನು ತಂದು ಒಳಕ್ಕೆ ನಿಲ್ಲಿಸಿಕೊಂಡು ಆ ರಾತ್ರಿ ಕಣ್ತುಂಬ ನಿದ್ದೆ ಮಾಡಿತು.
ನಾಳೆ ಆಗಿ ಮಾರ ಕಂಬ ತಂದು ನೆರಕೆ ಬಿಚ್ಚಿ ಹಾಕಿ ಗುಳಿ ತೋಡಿ ಕಂಬ ನೆಟ್ಟು ತಂತಿಗಳನ್ನು ಕಂಬಕ್ಕೆ ಕಟ್ಟಿ ತಡಿಕೆಗೆ ಸೇರಿಸಿ ಬಿಗಿದು ನಿಲ್ಲಿಸಲು ಸಿದ್ಧವಾಗುವಾಗಲೇ ಏನನ್ನೋ ನೆನಪಿಸಿಕೊಂಡಂತೆ ಮುದುಕಿ ‘ಇವತ್ತು ನಿಲ್ಸದ್ ಬ್ಯಾಡ... ಸ್ಯಾನಿ ವರ್ಷಗಳ ಮ್ಯಾಲ ಈ ಹಟ್ಟಿ ದಾರಂದ ಬದಲಾಯಿಸ್ತ ಅವ್ನಿ...ನಾಳಕ ಮನ ತೊಳ್ದು ಅಚ್ಕಟ್ಟು ಮಾಡಿ ತಡ್ಕನೂ ತಾರ‍್ಸಿ ಪಂಚಾಮೃತ ಮಾಡಿ ಪೂಜ ಮಾಡ್ಸಿ ಎಲ್ರಗೂ ಪ್ರಸಾದ ಹಂಚಿ ಆಮ್ಯಾಲ ನಿಲ್ಸಂವು’ ಅಂತ ಸಡಗರದಿಂದ ಹೇಳಿ ಮಾರನಿಗೆ ನಾಳೆ ಬರುವಂತೆ ಹೇಳಿ ಕೈಗೆ ಇನ್ನೂ ಹತ್ತುಕೊಟ್ಟು ಕಳಿಸಿತು.
ಎಲ್ಲೆಲ್ಲಿಂದಲೋ ಹಳೆ ಕಾಗದಗಳನ್ನೆಲ್ಲ ತಂದು ಮೆಂತ್ಯೆದೊಂದಿಗೆ ನೆನೆಹಾಕಿ ಒರಳುಕಲ್ಲಿನಲ್ಲಿ ರುಬ್ಬಿ ತೆಳ್ಳಗೆ ಮಾಡಿಕೊಂಡು ತಡಿಕೆಯನ್ನು ನಾಕಾರು ಸಲ ಅದರಿಂದ ಹಿಂದೆ ಮುಂದೆ ನುಣುಪಾಗಿ ಸಾರಿಸಿ ಗೋಡೆಗೊರಗಿಸಿ ಒಣಗಲು ನಿಲ್ಲಿಸಿ ತನ್ನ ಗುಡಿಸಲಿನೊಳಗೆಲ್ಲ ತೊಪ್ಪೆ ಸಾರಿಸಿ ಗೋಡೆಗಳಿಗೆ ಸುಣ್ಣ ತುಂಬಿ ಹಬ್ಬದ ಸಂಭ್ರಮವನ್ನು ತರುವಲ್ಲಿಗೆ ಸಂಜೆ ನಾಕು ತಲುಪಿತ್ತು. ಆವತ್ತು ಮಾತ್ರ ಆ ಮುದುಕಿಗೆ ಇಷ್ಟೂ ದಿನವೂ ಹಿಂಸಿಸುತ್ತಿದ್ದ ಮಂಡಿ, ಸೊಂಟನೋವು ಏನೊಂದೂ ತೋರಲಿಲ್ಲ. ಇದ್ದ ನೋಟುಗಳೆಲ್ಲ ಖರ್ಚಾಗಿ ನಾಳೆಯ ಸಣ್ಣಪುಟ್ಟ ಖರ್ಚುಗಳಿಗೆ ಚಿಲ್ಲರೆ ಬಿಟ್ಟರೆ ಬೇರೇನೂ ಚೀಲದಲ್ಲಿ ಉಳಿದಿರಲಿಲ್ಲ. ನಾಕಾರು ಸಲ ಸಾರಿಸಿದ್ದರಿಂದ ಸಂಜೆಯಾಗಿದ್ದರೂ ತಡಿಕೆ ಒಣಗಿರಲಿಲ್ಲ. ಅದನ್ನು ಒಳಗೆ ಇಡಲು ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಈಚೆ ಗೋಡೆಗೆ ಹಾಗೆಯೇ ಅದನ್ನು ಒರಗಿಸಿ ಯಾರಾದರೂ ಕದ್ದಾರು ಅಂದುಕೊಂಡು ಮುದುಕಿ ಹೊಸ್ತಿಲಿಗೇ ದಿಂಬು ಹಾಕಿಕೊಂಡು ಬಾಗಿಲಲ್ಲೇ ಮಲಗಿತು. ಬೆಳಗ್ಗೆಯಿಂದಲೂ ಓಡಾಡಿ ಕೆಲಸ ಮಾಡಿ ದಣಿದಿದ್ದ ಮುದುಕಿಯ ಜೀವವನ್ನು ಮಾಯದ ನಿದ್ದೆ ಕ್ಷಣಾರ್ಧದಲ್ಲಿ ಕಬಳಿಸಿತ್ತು.
ಮುಂಜಾನೆ ಇನ್ನೂ ಬಳಕು ಅರೆಬರೆಯಾಗಿ ಶುರುವಾಗುತ್ತಿದ್ದಾಗ ಎಚ್ಚರವಾದ ಮುದುಕಿ ಎದ್ದು ನೋಡಿತು. ತಡಿಕೆಯೂ ಇಲ್ಲ! ಅದು ಇದ್ದ ಗುರುತೂ ಇಲ್ಲ! ಚಿಲಕ ಮತ್ತು ಬೀಗಗಳು ಮಾತ್ರ ತನ್ನ ಕಾಲದೆಸೆಯಲ್ಲಿಯೇ ಬಿದ್ದಿವೆ. ಮುದಿ ಉಸಿರು ಧಸಕ್ಕೆಂದಿತ್ತು. ತತ್ತರ ಬಿತ್ತರನೆ ಎದ್ದು ಹಿಂದೆ ಮುಂದೆ ಅವರ ಹಿತ್ತಲು ಇವರ ಅಂಗಳ ಎಲ್ಲಾ ಹುಡುಕಿ ಹುಡುಕಿ ತೊಡೆಗಳಿಗೆ ನೋವು ಬಂದು ‘ಹೋಯ್ತಲ್ಲವೋ ನನ್ನ ತಡ್ಕಾ... ನನ್ನ ದಾರಂದ!’ ಅಳು ಅರಚುತ್ತಾ ಮುದುಕಿ ತನಗೆ ಗೊತ್ತಿರುವ ಬೈಗುಳಗಳನ್ನೆಲ್ಲ ಉಗುಳುತ್ತಾ ಶಾಪಗಳನ್ನೆಸೆಯುತ್ತ ದಿಕ್ಕು ದಿಕ್ಕುಗಳಿಗೆ ಧೂತ್ತ್ತಿ ತೂರುತ್ತ ಸುಸ್ತಾಗುತ್ತಿತ್ತು. ಮುದುಕಿಗೆ ತನ್ನ ಮಗ ನೆನಪಾಗಲಿಲ್ಲ.
ತಡಿಕೆ ಮಾರಿ ನೆನ್ನೆಯಿಂದಲೂ ಕುಡಿದು ತಿಂದು ಹೇತು ಉಚ್ಚೆ ಹುಯ್ದು ಖಾಲಿಯಾಗಿ ಇನ್ನೂ ಸರಾಪಿನ ಗಮಲಿನಲ್ಲೇ ಇದ್ದ ಮಗ ಊರ ದಾರಿ ಹಿಡಿದು ತಲುಪಿ ಹಟ್ಟಿಯ ದಿಕ್ಕಿಗೆ ಮುಖ ಹಾಕಿದವನ ದೃಷ್ಟಿಗೆ ಹಟ್ಟಿಯ ಮುಂದೆ ಮುದುಕಿಯ ಅದೇ ವ್ಯಾಪಾರದ ನೆರಳಾಗಿದ್ದ ಹಾಳೆ ಸೋಗಿನ ಚಿಕ್ಕ ಚಪ್ಪರದ ನೆರಳಿನಲ್ಲಿ ಮುದುಕಿಯ ಹೆಣ ಮಡಗಿಕೊಂಡು ಅಂಗಳದಲ್ಲಿ ಸೌದೆ ಕೊಂಟಿಗೆ ಬೆಂಕಿ ಹಾಕಿ ಉರಿಸುತ್ತ ಇವನ ಹಾದಿಯನ್ನೇ ಕಾಯುತ್ತ ಕುಂತಿದ್ದ ಅಕ್ಕಪಕ್ಕದ ಒಂದಷ್ಟು ಜನ ಕಾಣಿಸಿದರು.

Tuesday, December 8, 2009
ಒಲವಿನ ಮಾಲೆಗೆ ನನ್ನೆರಡು ಮಲ್ಲಿಗೆ
ರಾಜೀವ ನಾರಾಯಣ ನಾಯಕ
ಇದನ್ನೆಲ್ಲ ಎಲ್ಲಿಂದ ನೆನೆಯಲಿ? ಮನೆ ಮುಂದಿನ ಗುಲ್ ಮೊಹರ್ ವರ್ಷದಿಂದ ಹೃದಯದಲ್ಲಿಟ್ಟು ಕೊಂಡಿದ್ದ ಹೂವನ್ನು ನೀಲಾಕಾಶದತ್ತ ಚಿಮ್ಮಿಸ ತೊಡಗಿದ್ದೆ ಪ್ರಾರಂಭವಿರಬಹುದೇ? ಅಥವಾ ಹಳದಿ ಬಣ್ಣದ ಕೊರಳ ಸುತ್ತ ಕಂದು ಪಟ್ಟಿಯ ಪುಟ್ಟ ಹಕ್ಕಿ ಗುಲ್‌ಮೊಹರ್‌ನಿಂದ ಬಿಟ್ಟ ಬಾಣದಂತೆ ಪಕ್ಕದ ಹೂದೋಟಕ್ಕೆ ಹಾರದಿದ್ದರೆ ಅಲ್ಲಿ ಗುಲಾಬಿ ಗಿಡಗಳಿಗೆಲ್ಲ ನೀರುಣಿಸುತ್ತ ನಿಂತಿರುತ್ತಿದ್ದ ನಿನ್ನನ್ನು ದಿನಾ ಗಮನಿಸುವ ಪ್ರಸಂಗ ಬರುತ್ತಿತ್ತೆ? ಯಾವು ದೋ ಧ್ಯಾನದಲ್ಲಿದ್ದಂತೆ ಕಾಣುತ್ತಿದ್ದ, ಸದಾ ಏನಾ ದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ ನೀನೂ ಹೆತ್ತವರಿಂದ ನೂರಾರು ಮೈಲಿ ದೂರದಲ್ಲಿದ್ದ ನನ್ನ ಒಬ್ಬಂಟಿತನದ ಮನಕ್ಕೆ ತುಸು ಮುದ ನೀಡುತ್ತಿದ್ದ ಗುಲ್ ಮೊಹರ್ ಮತ್ತು ಬಣ್ಣದ ಹಕ್ಕಿಯ ಜತೆ ಸೇರಿಬಿಟ್ಟೆ ಸ್ವಾತಿ.
ಗುಲ್‌ಮೊಹರೊ ಗುಬ್ಬಚ್ಚಿಯೊ ಆ ಕ್ಷಣವನ್ನು ಮಾತ್ರ ಹೇಗೆ ಮರೆಯಲು ಸಾಧ್ಯ? ಬೆಳಗ್ಗೆ ಸ್ನಾನ ಮುಗಿಸಿ ತಲೆ ಒರೆಸುತ್ತ ಬಾಗಿಲಿಗೆ ಬಂದರೆ ಸೂರ್ಯನ ಎಳೆಯ ಕಿರಣಗಳು ಎಲ್ಲೆಡೆ ಬೀರಿವೆ. ಮುಂಜಾನೆಯ ಮಂಜಿನ್ನೂ ಪೂರ್ತಿ ಕರಗಿಲ್ಲ. ಪಕ್ಕದ ಮನೆಯಿಂದ ನಿತ್ಯದಂತೆ ಮಂತ್ರ ಪಠನ ಕೇಳಿಸುತ್ತಿದೆ. ಆಗಷ್ಟೇ ಮಿಂದು ಬಂದಂತಿದ್ದ ನೀನು ಹೂಗಿಡಗಳಿ ಗೆಲ್ಲ ನೀರೆರೆಯುತ್ತಿದ್ದೆ. ಭುಜದ ತುಂಬ ಹರಡಿ ಕೊಂಡ ದಟ್ಟನೆಯ ಕಪ್ಪು ಕೂದಲು. ಹೊಂಬಣ್ಣದ ಸೂರ್ಯ ಕಿರಣಗಳಲ್ಲಿ ಇಡೀ ದೃಶ್ಯವೇ ಮನೋಹರವಾಗಿದೆ. ಅಪರೂಪಕ್ಕೆ ಈ ಕಡೆ ಹಾದು ಬಂದ ಆ ನೋಟ ನನ್ನೆದೆಯಲ್ಲಿ ಮಿಂಚು ಮೂಡಿ ಸಿತು. ಮುಗುಳುನಗೆ ತುಂಬಿದ ಮೊಗ. ನೀನು ನನ್ನೊಡನೆಯೆ ನಕ್ಕಿದ್ದು? ನಾನು ಕನಸು ಕಾಣುತ್ತಿ ರುವೆನೆ? ಎಂಥ ಮೋಹಕ ನಗು ಅದು! ಆ ಮುಗುಳ್ನಗುವೇ ಇಳಿಯಿತೆ ನನ್ನಲಿ ಬೀಜವಾಗಿ?
ಆ ದಿನವಿಡೀ ಮುಗುಳ್ನಗುವಿನದೇ ಮೆಲುಕು. ವಿಚಿತ್ರ ಖುಷಿಯಲ್ಲಿದ್ದ ನನಗೆ ಅದನ್ನು ನಾನು ಕೆಲಸ ಮಾಡುತ್ತಿದ್ದ ಲ್ಯಾಬ್‌ನಲ್ಲಿ ಇತರರಿಗೆ ತಿಳಿಯದಂತೆ ನಿಯಂತ್ರಿಸಬೇಕಾದರೆ ಬಹಳ ಶ್ರಮ ಪಡಬೇಕಾ ಯಿತು. ಅಂತೂ ಕೊಂಚ ತಡವಾಗಿಯೇ ಏಳುತ್ತಿದ್ದ ನನಗೆ ನಸುಕಿನಲ್ಲಿಯೇ ನೆನಪಾಗತೊಡಗಿತು. ನಾನೂ ಮನೆ ಮುಂದೆ ಪುಟ್ಟ ತೋಟ ಬೆಳೆಸುವ ಬಗ್ಗೆ ಯೋಚಿಸಿದೆ. ಎಲ್ಲಿಂದಲೋ ಕೆತ್ತನೆಯಿದ್ದ ಕುಂಡವನ್ನು ತಂದು ಅದರಲ್ಲಿ ಮಣ್ಣು ತುಂಬಿ ಗುಲಾಬಿ ಕುಡಿಯೊಂದನ್ನು ಊರಿ ಮನೆ ಮುಂದೆ ಇಟ್ಟೆ. ದಿನಾ ನೀರುಣಿಸುತ್ತ ಅದು ಚಿಗುರೊಡೆವ ಪರಿಗೆ ಪುಳಕಗೊಳ್ಳ ತೊಡಗಿದೆ. ಹೀಗೆ ಅದೆಷ್ಟೋ ದಿನಗಳು.
ಅಂದು ಯಾವುದೋ ಹಬ್ಬವಾದ್ದರಿಂದ ನಮಗೆ ರಜೆ ಇತ್ತು. ನೀನು ಸಂಭ್ರಮದಿಂದ ಇದ್ದೆ. ಕಡು ನೀಲಿ ಬಣ್ಣದ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದೆ. ಹಾಗೆಂದು ನಿನಗೆ ಕೈ ಮಾಡಿದೆ. ಖುಷಿಯಾಗಿ ನಕ್ಕೆ ನೀನು. ನಾನು ಬೆರಳುಗಳನ್ನು ಹೆಣೆದು ಕಿಂಡಿ ಮಾಡಿ ಕಣ್ಣ ಹತ್ತಿರ ಇಟ್ಟು ಫೋಟೊ ತೆಗೆಯುವವನಂತೆ ನಟಿಸಿದೆ. ನೀನು ನಡೆದಾಡುತ್ತಿದ್ದೆಯೋ ನೃತ್ಯವಾ ಡುತ್ತಿದ್ದೆಯೋ ನನಗೆ ತಿಳಿಯದಾಯಿತು. ನಿನ್ನನ್ನು ನೋಡುತ್ತಿರುವುದೇ ನನಗೆ ಹಬ್ಬವಾಯಿತು.
ಹಬ್ಬದ ನಿಮಿತ್ತ ಬಂದ ನಿನ್ನ ಅಕ್ಕನ ಮಗನನ್ನು ತೋರಿಸಿ ಅವನ ಕೈಯಲ್ಲಿ ಏನೋ ಕೊಡುತ್ತ ಅದನ್ನು ನಾನು ದರ್ಗಾದ ಹಿಂದೆ ಹೋಗಿ ಪಡೆಯಬೇಕೆಂದು ನೀನು ಸನ್ನೆ ಮಾಡಿದೆ. ನಾವಿಷ್ಟರಲ್ಲೇ ಸನ್ನೆಗಳ ಮೂಲಕ ಸಂಭಾಷಿಸುವುದನ್ನು ಕಲಿತಿದ್ದೆವು. ಮನೆಯವರ, ಅಕ್ಕಪಕ್ಕದವರ ಕಣ್ತಪ್ಪಿಸಿ ಹೀಗೆ ಮಾಡುವುದರಲ್ಲಿ ನೀನು ತುಂಬಾ ಜಾಣೆ ಸ್ವಾತಿ.
ಹುಡುಗ ನನಗಾಗಿ ದರ್ಗಾದ ಹಿಂದೆ ಕಾದಿದ್ದ. ನನ್ನ ಕೈಯಲ್ಲಿ ಪುಟ್ಟ ಪೊಟ್ಟಣವೊಂದನ್ನು ಇಟ್ಟು ಓಡಿ ಹೋದ. ನೋಡಿದರೆ ಏನೋ ಸಿಹಿ ತಿಂಡಿ, ಜತೆಯಲ್ಲಿ ಒಂದು ಪತ್ರ! ನನಗೊ ರೋಮಾಂಚನ. ನನ್ನ ಜೀವಮಾನದಲ್ಲೇ ಪಡೆದ ಇಂಥ ಪ್ರಥಮ ಪತ್ರ! ಕೈ ಬರಹ ಅಷ್ಟೇನೋ ಚೆನ್ನಾಗಿರಲಿಲ್ಲ. ನಿನ್ನ ಅಂಕುಡೊಂಕು ಅಕ್ಷರಗಳೆ ನನ್ನ ಹೃದಯದ ತಂತಿ ಮೀಟಿ ಸಂUತ ನುಡಿಸತೊಡಗಿದವು. ಓದಿದೆ. ಪುನಃ ಪುನಃ ಓದಿದೆ. ನನ್ನೆದೆಯ ಭಾವನೆಗಳಿಗೂ ಶಬ್ದ ರೂಪು ಕೊಡಲು ಅನುವಾದೆ. ಪ್ರೇಮದ ದಾರಿಗೆ ಎಷ್ಟೊಂದು ಮೆಟ್ಟಿಲುಗಳು!
ಮತ್ತೆ ನಿನ್ನ ಅಕ್ಕನ ಮಗ, ಅವನ ಹೆಸರು ಸಮರ್ಥ ಅಂತೆ, ಭೆಟ್ಟಿಯಾದ. ಈ ಸಲ ಅವನನ್ನು ತುಸು ದೂರ ಕರೆದೊಯ್ದು ಐಸ್‌ಕ್ರೀಮ್ ಕೊಡಿಸಿದೆ. ನಿನ್ನ ಬಗ್ಗೆ ಕೇಳಿದೆ. ಸ್ವಾತಿ ಯಾವಾಗಲೂ ನನ್ನನ್ನೇ ನೆನೆಯುತ್ತಾಳೆಂದು ಹೇಳಿದ. ‘ಎಷ್ಟು ಚೆನ್ನಾಗಿದ್ದಾನಲ್ಲ’ ಎಂದು ನನ್ನನ್ನು ತೋರಿಸಿ ಕೇಳುತ್ತೀಯಂತೆ. ನನ್ನ ರೂಪಿನ ಬಗ್ಗೆ ಕಂಡಾಪಟ್ಟೆ ಕೀಳರಿಮೆ ಇದ್ದ ನನಗೆ ನೀನು ಹೀಗನ್ನುವುದು ಕೇಳಿ ಖುಷಿಯೋ ಸಂಶಯವೋ ತಿಳಿಯದ ಭಾವನೆಗಳು. ಆ ದಿನವಿಡೀ ಕನ್ನಡಿಯೆದುರು ನಾನು ಚೆಲುವನೆಂದು ನಂಬಿಸಿಕೊಳ್ಳಲು ಪ್ರಯತ್ನಿಸಿದ್ದೇ ಪ್ರಯತ್ನಿಸಿದ್ದು!
ನಿನ್ನನ್ನು ಹತ್ತಿರದಿಂದ ಕಾಣಬೇಕು, ನಿನ್ನೊಡನೆ ಮನಬಿಚ್ಚಿ ಮಾತಾಡಬೇಕು ಎಂದು ಎಷ್ಟೋ ದಿನಗಳಿಂದ ಕಾತರಿಸುತ್ತಿದ್ದೆ. ಆ ದಿನವೂ ಬಂತು. ದರ್ಗಾದ ಹಿಂದಿನ ಗುಡ್ಡದ ಮರುಕಲಲ್ಲಿ ಜನ ರ‍್ಯಾರೂ ಅಷ್ಟಾಗಿ ಇರುತ್ತಿರಲಿಲ್ಲ. ನಿನ್ನನ್ನು ಅಲ್ಲಿಗೆ ಬರಲು ಒಪ್ಪಿಸಿದೆ. ನಾನೂ ಲ್ಯಾಬ್‌ನಲ್ಲಿ ಏನೋ ಹೇಳಿ ರಜೆ ಪಡೆದೆ. ಕಾಲುದಾರಿಗುಂಟ ನಡೆಯುತ್ತ ಗುಡ್ಡದ ತುದಿ ತಲುಪಿದೆ. ಇನ್ನೊಂದು ಮರುಕಲಲ್ಲಿ ಸಮುದ್ರದ ಮೊರೆತ. ಮೋಡವಿಲ್ಲದ ನೀಲಾಕಾಶ. ನನಗೆ ಸಂಕೋಚ, ಭಯ, ಉನ್ಮಾದ ಎಲ್ಲ ಕಲಸಿ ಕೊಂಡ ಸ್ಥಿತಿ. ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ. ಇಡೀ ದೇಹವೇ ಜ್ವರ ಬಂದಂತಾಗಿತ್ತು. ಬಹುಶಃ ನಿನ್ನ ಸ್ಥಿತಿಯೂ ಹೀಗೆ ಆಗಿರಬೇಕು. ನಿನ್ನ ಹಣೆಯ ಮೇಲೆಲ್ಲ ಬೆವರ ಹನಿಗಳ ಸಾಲು. ನಿನ್ನನ್ನು ಅಷ್ಟು ಹತ್ತಿರದಿಂದ ಕಂಡದ್ದು ಅದೇ ಮೊದಲ ಸಲ. ಸುಂದರ ತುಟಿಗಳು. ಹೊಳಪಿನ ಕಣ್ಣುಗಳು. ಮಾತು ಯಾರು ಹೇಗೆ ಪ್ರಾರಂಭಿಸಬೇಕೆಂದು ತಿಳಿಯದಾ ಯಿತು. ನಾನು ಏನೋ ಕೇಳಿದೆ. ನೀನು ಏನೋ ಅಂದೆ. ಪ್ರಯತ್ನಿಸಿ ಪ್ರಯತ್ನಿಸಿ ನಿನ್ನ ಕೋಮಲ ಬೆರಳುಗಳನ್ನು ನನ್ನವುಗಳಲ್ಲಿ ಹೆಣೆದುಕೊಂಡೆ. ಇಳಿ ಬಿಸಿಲ ಕಿರಣಗಳಲ್ಲಿ ನೀನು ಮಂದವಾಗಿ ಉರಿ ಯುವ ದೀಪದಂತೆ ಕಾಣುತ್ತಿದ್ದೆ. ಬಹುಶ ನಿನ್ನನ್ನು ಕಣ್ಣಲ್ಲೇ ಕುಡಿಯುವವನಂತೆ ನೋಡುತ್ತಿದ್ದೆ. ನೀನು ನನ್ನಿಂದ ಬಿಡಿಸಿಕೊಂಡು ‘ಹೊತ್ತಾಯ್ತು’ ಎಂದು ಎದ್ದು ನಿಂತೆ. ‘ಇಲ್ಲ, ಇರು’ ಎಂದರೂ ನೀನು ಓಡಿಯೇ ಬಿಟ್ಟೆ, ನನ್ನಲ್ಲಿ ಬೆಂಕಿಯನ್ನು ಹೊತ್ತಿಸಿ. ತಿರುವಲ್ಲಿ ನಿಂತು ಕೈ ಬೀಸಿ ಮಾಯವಾದೆ. ನಾನೋ ಕಾಲೆಳೆಯುತ್ತ ಇಳಿದು ಬಂದೆ.
ಇಂಥ ಸ್ನೇಹಕ್ಕಾಗಿ ಎಷ್ಟು ವರ್ಷಗಳಿಂದ ಕಾದಿದ್ದೆ! ಹೃದಯದಲ್ಲಿ ಮಡುಗಟ್ಟಿದ ಹರೆಯದ ಭಾವನೆಗಳು ಹರಿವ ದಿಕ್ಕು ಕಾಣದೆ ಏನೋ ಕಾತರ. ಏನೋ ಕಳಚಿಕೊಂಡಂತೆ. ಕಾಲೇಜಿನಲ್ಲಿ ಕೋಗಿಲೆ ಕಂಠದ ಲಾಲಿತ್ಯಳನ್ನು ಮನದಲ್ಲಿ ಆರಾಧಿಸುತ್ತ ಅವಳ ಅಗಲ ಕಣ್ಣುಗಳಲ್ಲಿ ಪ್ರೀತಿಯನ್ನರಸುತ್ತ ಸವೆದ ದಿನಗಳು. ಮನದಾಸೆಯನ್ನು ಮಾತಾಗಿಸಬೇಕೆಂದರೆ ಎದುರು ಬಂದಾಗ ಗಂಟಲ ಪಸೆಯೇ ಆರಿ ಹೋದಂತೆ ಕೈ ಕಾಲುಗಳಲ್ಲಿ ನಡುಕ ಶುರವಾದಂತೆ ಇತ್ಯಾದಿ.ಆದರೆ ಲಾಲಿತ್ಯಳಾಗಲಿ, ಮೋಹಕ ಕೆನ್ನೆಗಳ ಸಿಂಚನಳಾಗಲಿ ಅಥವಾ ಮಾದಕ ನಗುವಿನ ಸುಮನಳಾಗಲಿ ಯಾರೂ ನಿನ್ನಷ್ಟು ಆಳಕ್ಕೆ ನನ್ನೊಳಗೆ ಇಳಿಯಲಿಲ್ಲ ಅನಿಸುತ್ತದೆ. ಸ್ವಾತಿಯಲ್ಲಿ ನನಗೆ ಪ್ರೇಮವೇ? ಅವಳೊಡನೆ ಏನೀ ಅನು ಬಂಧ? ಅಥವಾ ಇವೆಲ್ಲ ಹುಚ್ಚು ಭಾವನೆಗಳೇ? ಛೇ ಇವೆಲ್ಲ ತಾಪತ್ರಯ ಬೇಡ. ಮನೆಯಿಂದ ನೂರಾರು ಮೈಲಿ ದೂರದಲ್ಲಿದ್ದೇನೆ. ಏನಾದರೂ ಹೆಚ್ಚು ಕಮ್ಮಿ ಆದರೆ ಕೇಳುವವರಿಲ್ಲ. ಸ್ವಾತಿಯ ಅಪ್ಪ ಬೇರೆ ಕಠೋರವಾಗಿ ಕಾಣುತ್ತಿದ್ದಾನೆ. ಅವನಿಗೇನಾ ದರೂ ಹೀಗೆ ಎಂದು ಗೊತ್ತಾದರೆ ಕಥೆ ಮುಗಿದಂತೆಯೇ. ಇನ್ನು ಇದೆಲ್ಲ ಸಾಕು. ಆ ಕಡೆ ಮತ್ತೆ ನೋಡಲೇಬಾರದು. ಸ್ವಾತಿಗೂ ಹೇಳಿಬಿಡುತ್ತೇನೆ ಎಂದು ಎಷ್ಟು ಸಲ ನಿರ್ಧಾರ ಕೈಗೊಂಡೆನೋ. ಅದೆಲ್ಲ ನಿನ್ನನ್ನು ಕಂಡ ಗಳಿಗೆಯಲ್ಲಿ ಎಲ್ಲೋ ತೂರಿ ಹೋಗು ತ್ತಿದ್ದವು. ಮತ್ತೆ ಯಥಾಪ್ರಕಾರ ಮನಸ್ಸು ಅತ್ತ ಒಲಿಯುತ್ತಿತ್ತು.
ರಸ್ತೆ ತಿರುವಲ್ಲಿ ಮನೆಯಿಂದ ನನ್ನದೇ ವಯಸ್ಸಿನ ವಿಕಾಸ್ ಆಗಾಗ ನನ್ನಲ್ಲಿಗೆ ಬರು ತ್ತಿದ್ದ. ಮಂಗಳೂರ ಕಡೆಯ ಅವರ ಕುಟುಂಬ ಸಾಕಷ್ಟು ವರ್ಷದಿಂದಲೇ ಅಲ್ಲಿ ತೆಂದು ಕಾಣುತ್ತದೆ. ಸುತ್ತಮುತ್ತಲಿನವರೆಲ್ಲ ಬಹಳ ಪರಿಚಯ. ನಿನ್ನೊಡನೆ ವಿಕಾಸ್ ಒಂದೆರಡು ಬಾರಿ ಮಾತಾಡುತ್ತಿದ್ದುದನ್ನು ಎಂದೋ ನೋಡಿದ್ದೆ. ನನ್ನ ಪರಿಚಯವಾ ದೊಡನೆ ಸಮಯ ಕಳೆಯಲು ಬರುತ್ತಿದ್ದ. ಬಂದಾಗಲೆಲ್ಲ ಗೋಡೆಗೆ ತೂಗು ಹಾಕಿರು ತ್ತಿದ್ದ ಗಿಟಾರ್ ಎತ್ತಿಕೊಂಡು ಸಂUತ ನುಡಿಸುವವನಂತೆ ಫೋಸ್ ಕೊಡುತ್ತ ಆಗಾಗ ನಿಮ್ಮ ಮನೆಯತ್ತ ಕಣ್ಣು ಹಾಯಿಸುತ್ತ ಹೀರೋ ಆಗಲು ಪ್ರಯತ್ನಿಸುತ್ತಿದ್ದುದು ನನಗೆ ಕೋಪವನ್ನು ತರಿಸುತ್ತಿತ್ತು. ಸೌಜನ್ಯಕ್ಕಾಗಿ ಅದನ್ನು ಸಹಿಸಿದ್ದೆ.
ಒಮ್ಮೆ ಈತ ಇದ್ದಾಗ ನೀನು ಕಿಟಕಿಯಲ್ಲಿ ಮಿಂಚಿ ಮಾಯವಾದೆ. ನಿನ್ನನ್ನು ತೋರಿಸುತ್ತ ಆತ ‘ಅವ ಳುಂಟಲ್ಲ, ನನ್ನ ಕಂಡ್ರೆ ಪ್ರಾಣ ಬಿಡ್ತಾಳೆ’ ಎಂದ. ನನಗೆ ಶಾಕ್ ಆಯಿತು. ಸುಧಾರಿಸಿಕೊಳ್ಳುತ್ತಿರು ವಾಗಲೇ ‘ಅವಳಪ್ಪ ಉಂಟಲ್ಲ. ಅದೊಂದು ಮಾರಾಯ ಮಂಡೆಬಿಸಿ. ಅದು ಇಲ್ಲಾಂದ್ರೆ ಇಷ್ಟೊತ್ತಿಗೆ..’ ಎಂದು ಕಣ್ಣು ಪಡಚಿದ. ನಾನು ಬೆವರತೊಡಗಿದ್ದೆ. ಬಾಯಿ ಒಣಗಿಹೋಗಿತ್ತು. ನೀನು ಅವನೊಡನೆ ಮಾತಾಡುತ್ತ ನಿಂತಿದ್ದ ದೃಶ್ಯಗಳು ನೆನಪಾಗಿ ಅಲ್ಲಿ ಹೊಸ ಅರ್ಥಗಳೇ ಕಾಣತೊಡಗಿದವು. ಹಾಗಾದರೆ ನಾನು ಸ್ವಾತಿಯ ಬಗ್ಗೆ ಕನಸಿದ್ದು ಮೂರ್ಖತನವೇ? ಸ್ವಾತಿ ಎಂಥ ಹೆಣ್ಣು? ನನ್ನನ್ನು ಗಾಳಕ್ಕೆ ಸಿಲುಕಿಸಿ ಆಟ ಆಡುತ್ತಿರು ವಳೆ? ಹೃದಯ ಯಾರಿಗೊ ಕೊಟ್ಟು ನನ್ನಲಿ ನಾಟ ಕವೆ? ಥತ್! ಈ ಹುಡುಗಿಯರನ್ನೇ ನಂಬಬಾರದು. ಮತ್ತೆ ನಿನ್ನತ್ತ ನೋಡಿದರೆ ಹೇಳು ಸ್ವಾತಿ!
‘ಯಾಕೆ, ಮೈಯಲ್ಲಿ ಸೌಖ್ಯವಿಲ್ಲವೆ?’ ಎಂದು ವಿಕಾಸ್ ಕೇಳಿದ. ‘ಹಾಗೇನಿಲ್ಲ, ಸ್ವಲ್ಪ ತಲೆನೋವು’ ಎಂದು ನಗಲು ಪ್ರಯತ್ನಿಸಿದೆ. ನಗಲಾಗಲಿಲ್ಲ. ನನ್ನ ನಿರಾಸಕ್ತಿ ನೋಡಿ ಎದ್ದು ಹೋದ. ಆತ ಹೋದರೆ ಸಾಕಾಯಿತು.
ಬಾಗಿಲು ಹಾಕಿ ಹೊರ ಹೋಗುವಾಗ ನೀನು ನಗುತ್ತ ನಿಂತಿರುವುದು ಕಂಡಿತು. ನಿನ್ನ ನಗು ಕೂಡ ಕಪಟವೆನಿಸಿ ಮುಖ ತಿರುಗಿಸಿ ನಡೆದೆ, ಎಲ್ಲಿಗೆಂದು ಗೊತ್ತಿಲ್ಲದೆ.
ಬಸ್‌ಸ್ಟಾಪಿಗೆ ಬಂದಾಗ ಯಾವುದೋ ಬಸ್ಸು ಹೊರಡುವುದರಲ್ಲಿತ್ತು. ಬಸ್ ಹತ್ತಿ ಮಾರುತಿ ಮಂದಿರ ಸ್ಟಾಪ್‌ನಲ್ಲಿಳಿದು ಸಮುದ್ರ ತೀರದತ್ತ ನಡೆಯತೊಡಗಿದೆ. ಮರಳ ಮೇಲೆ ಅಲ್ಲಷ್ಟು ಇಲ್ಲಷ್ಟು ಜನ. ಅಲ್ಲೆಲ್ಲೋ ಕಣ್ಣು ಮುಚ್ಚಿ ಕೂತೆ. ಹೃದಯ ಭಾರವಾಗಿತ್ತು. ಬೀಸುವ ತಂಗಾಳಿ ಕೂಡ ಮನದ ಬಿಸಿಯನ್ನು ತಂಪು ಮಾಡಲಾರದು. ಸೂರ್ಯ ಮುಳುಗಲು ಹೊರಟಿದ್ದ. ಸೂರ್ಯಾಸ್ತದ ಸೊಬ ಗನ್ನು ಸವಿಯಲು ಮನಸ್ಸು ಎಂದಿನಂತಿರಲಿಲ್ಲ. ಯಾಕೋ ಊರ ಕಡೆ ನೆನಪಾಯಿತು. ಅವ್ವ ಕಣ್ಣ ಮುಂದೆ ಬಂದಳು. ಮುಂದಿನ ತಿಂಗಳು ರಜೆ ಪಡೆದು ಊರಿಗೆ ಹೋಗಬೇಕೆಂದುಕೊಂಡೆ. ಸಾವಕಾಶವಾಗಿ ದಡಕ್ಕೆ ಬರುತ್ತಿದ್ದ ತೆರೆಗಳು ಮುಳುಗುವ ಸೂರ್ಯನ ಕೆಂಪನ್ನು ಕಲಸಿಕೊಂಡು ಬರುತ್ತಿದ್ದವು. ನೋಡ ನೋಡುತ್ತಿದ್ದಂತೆ ಸೂರ್ಯ ಸಮುದ್ರದಲ್ಲಿ ಇಳಿದು ಹೋದ, ಇನ್ನೆಂದೂ ಬರ ಲಾರದವನಂತೆ. ನನ್ನ ಕಣ್ಣುಗಳು ಹನಿಗೂಡಿದವು.
ರಾತ್ರಿ ಮರಳಿ ಬಂದಾಗ ಎಲ್ಲರೂ ದೀಪ ಆರಿಸಿ ಮಲಗಿದ್ದರು. ಬಾಗಿಲು ತೆರೆಯುವಾಗ ಊಟ ತರುವ ಹುಡುಗ ರಾತ್ರಿಯೂಟವನ್ನು ಅಲ್ಲೆ ಇಟ್ಟು ಹೋಗಿರುವುದು ಕಂಡಿತು. ಉಣ್ಣುವ ಮನಸ್ಸಾ ಗಲಿಲ್ಲ. ಬಟ್ಟೆ ಕೂಡ ಕಳಚದೆ ಹಾಗೇ ಮಲಗಿ ಕೊಂಡೆ.
ಮರುದಿನ ಮುಂಜಾನೆ ಎಂದಿನಂತಿರಲಿಲ್ಲ. ನಿನ್ನನ್ನು ಕಣ್ಣೆತ್ತಿ ಕೂಡ ನೋಡಬಾರದಂದು ಕೊಂಡಿದ್ದೆನಾದರೂ ಅಪ್ರಯತ್ನಪೂರ್ವಕವಾಗಿ ದೃಷ್ಟಿ ಅತ್ತ ಹರಿಯುತ್ತಿತ್ತು. ನಿನ್ನ ಮುಖ ಬಾಡಿರುವುದನ್ನೂ ಎಂದಿನ ಲವಲವಿಕೆ ಇಲ್ಲದಿರುವುದನ್ನೂ ಗುರುತಿಸಿದ್ದೆ. ನಿನ್ನನ್ನು ಮತ್ತೆ ಮಾತಾಡಿಸಬಾರದಂಬ ನಿರ್ಧಾರ ಮಾತ್ರ ಸಡಿಲಗೊಂಡಿರಲಿಲ್ಲ. ಆದರೆ ಅದೂ ಆಗಲು ಬಹಳ ದಿನ ಹಿಡಿಯಲಿಲ್ಲ.
ಆ ರಾತ್ರಿ ಬಹಳ ಹೊತ್ತಿನವರೆಗೆ ಓದುತ್ತ ಎಚ್ಚರವಿದ್ದೆ. ಕಾಲನಿಯಲ್ಲಿ ಎಲ್ಲರೂ ಮಲಗುವ ಹೊತ್ತು. ರಸ್ತೆಯಲ್ಲಿ ಜನ ಸಂಚಾರ ನಿಂತು ಹೋಗಿದೆ. ತುಸುವೇ ತೆರೆದ ಕಿಟಕಿಯಿಂದ (ಈಚೆಗೆ ಕಿಟಕಿಯನ್ನು ಮುಚ್ಚಿರುತ್ತಿದ್ದೆ) ನಿಮ್ಮ ಮನೆಯತ್ತ ನೋಡಿದೆ. ಹೂ ಗಿಡದ ಪಕ್ಕ ಏನೋ ಚಲಿಸಿದಂತಾಗಲು ದಿಟ್ಟಿಸಿದರೆ ನೀನು ಅಲ್ಲಿದ್ದೆ. ಮನೆಯಲ್ಲಿ ದೀಪ ಆರಿಸಿದ್ದರೂ ಹುಣ್ಣಿಮೆ ಚಂದ್ರನ ಮಂದ ಬೆಳಕಲ್ಲಿ ನಿನ್ನ ಮುಖ ಬಾಡಿರುವುದನ್ನು ಕಂಡೆ. ಒಡಲಲ್ಲಿ ಅವ್ಯಕ್ತ ಸಂಕಟ. ಸದಾ ಉಲ್ಲಾಸವನ್ನು ಸೂಸುತ್ತಿದ್ದ ನಿನ್ನನ್ನು ನೆನಪಿಸಿ ಕೊಂಡು ಕರುಳು ಹಿಂಡಿದಂತಾಯಿತು. ಏನು ಮಾಡು ತ್ತಿರುವೆನೆಂಬುದರ ಅರಿವು ಇಲ್ಲದೆ ಹೊರ ಬಂದು ಕೈ ಬೀಸಿದೆ. ತುಸು ತಡೆದು ನೀನೂ ಮೆಲ್ಲಗೆ ಕೈ ಮಾಡಿದೆ. ನೀನು ಅಳುತ್ತಿರುವಂತೆ ನನಗೆ ಅನಿಸಿತು. ಚಂದ್ರನ ಬೆಳಕಲ್ಲಿ ಎಷ್ಟೊ ಹೊತ್ತು ಹಾಗೆ ನಿಂತಿದ್ದೆವು.
ಮತ್ತೆ ನಿತ್ಯದ ಗುಲ್‌ಮೊಹರು, ಗುಲಾಬಿ ಮತ್ತು ನೀನು. ‘ನೀನ್ಯಾಕೆ ಕೋಪ ಮಾಡಿಕೊಂಡೆ? ಹೀಗೆ ಮಾಡಿದರೆ ನಿನ್ನ ಹತ್ತಿರ ಮಾತಾಡುವುದಿಲ್ಲ’ ಎಂದು ಸಣ್ಣ ಮಕ್ಕಳ ಹಾಗೆ ‘ಟೂಟು’ ಅಂದೆ ನೀನು. ನಾನು ‘ತಪ್ಪಾಯ್ತು. ಇನ್ನು ಹೀಗೆ ಮಾಡುವುದಿಲ್ಲ’ ಎಂದು ಕೈ ಮಾಡಿ ತಿಳಿಸಿದೆ. ಸಮಾಧಾನವಾಗಲಿಲ್ಲ. ಮುನಿಸಿ ಕೊಂಡಂತೆ ನಟಿಸಿದೆ ನೀನು. ನಾನು ಕಿವಿ ಹಿಡಿದು ಒಂದೆರಡು ಊಠ್‌ಬೈಸ್ ಹೊಡೆದೆ. ನಿನ್ನ ಕೋಪ ಕರಗಿ ನಗು ಅರಳಿತು. ಇಂಥ ಹುಚ್ಚಾಟಗಳಿಗೆ ಕೊನೆ ಎಲ್ಲಿ?
ಎಂದಿನಂತೆ ನಿನ್ನ ದರುಶನ ಪಡೆದು ಲ್ಯಾಬ್‌ಗೆ ಬಂದರೆ ಡೆಪ್ಯೂಟಿ ಡೈರೆಕ್ಟರ್ ಡಾ. ರಂದ್ರ ಗುಪ್ತ ಯಾರ ಮೇಲೋ ಕೂಗಾಡುತ್ತಿದ್ದರು. ಈಚೆಗೆ ಸಣ್ಣ ಕಾರಣಕ್ಕೂ ಅವರು ಹೀಗೆ ಮಾಡುತ್ತಿದ್ದರು. ತಿಂಗಳ ಹಿಂದಷ್ಟೇ ನನ್ನ ಮೇಲೂ ಸಿಡಿಮಿಡಿಗೊಂಡಿದ್ದರು. ಸಾರ್ವಜನಿಕ ಪೂರೈಕೆಯ ಮೊದಲು ಕೆಲವು ಆಹಾರ ವಸ್ತುಗಳನ್ನು ನಮ್ಮ ಪ್ರಯೋಗಾಲಯದಲ್ಲಿ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ಅವು ನಿಗದಿತ ಗುಣಮಟ್ಟ ಹೊಂದಿವೆಯೇ ಎಂದು ಪರೀಕ್ಷಿಸಲಾಗುತ್ತಿತ್ತು. ಹಾಗೇ ನಾದರೂ ನಿಗದಿತ ಮಟ್ಟಕ್ಕೆ ಬರದಿದ್ದರೆ ಅದನ್ನು ಮಾರಾಟದಿಂದ ನಿಷೇಧಿಸಲಾಗುತ್ತಿತ್ತು. ಹಾಗೇನಾದರೂ ನಿಗದಿತ ಮಟ್ಟಕ್ಕೆ ಬರದಿದ್ದರೆ ಅದನ್ನು ಮಾರಾಟದಿಂದ ನಿಷೇಧಿಸಲಾಗುತ್ತಿತ್ತು. ಹಾಗಾಗುವ ಮೊದಲೆ ಕೆಲವು ಉತ್ಪಾದಕರು ಡಾ. ಗುಪ್ತರನ್ನು ಸಂಪರ್ಕಿಸಿ ತಮ್ಮ ವಸ್ತುಗಳು ನಿಷೇಧಗೊಳ್ಳದಂತೆ ನೋಡಿಕೊಳ್ಳುತ್ತಾರೆಂದು ಸುದ್ದಿ ಕೂಡ ಇತ್ತು. ತಿಂಗಳ ಹಿಂದೆ ಸ್ಯಾಂಪಲ್ಲೊಂದನ್ನು ಪರೀಕ್ಷಿಸಿ ಸೂಚಿತ ಗುಣಮಟ್ಟ ಇಲ್ಲ ಎಂದು ರಿಪೋರ್ಟ್ ತಯಾರಿಸಿದ್ದೆ. ಆ ದಿನ ಸಂಜೆ ಡಾ. ಗುಪ್ತ ನನ್ನನ್ನು ಕರೆಸಿ ಸುತ್ತು ಬಳಸಿ ಮಾತಾಡುತ್ತ ಅದನ್ನು ತಿದ್ದುವಂತೆ ಹೇಳಿದರು. ‘ನಾನು ಹಾಗೆ ಮಾಡಲಾರೆ ಸರ್’ ಎಂದಿದ್ದೆ.
ಲ್ಯಾಬ್‌ನಲ್ಲಿ ಕೆಲವರು ಡಾ. ಗುಪ್ತರ ವಿರುದ್ಧವಾಗಿ ಹೋಗಬೇಡವೆಂದೂ ಅವರು ತುಂಬಾ ಪ್ರಭಾವಶಾಲಿ ಯೆಂದೂ ಮನಸ್ಸು ಮಾಡಿದರೆ ಕೆಲಸದಿಂದ ಕಿತ್ತು ಹಾಕಬಹುದೆಂದೂ ಹೆದರಿಸಿದ್ದರು. ನನಗೆ ಆಶ್ಚರ್ಯ ವಾಗಿತ್ತು. ನೋವು ಕೂಡ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕೆಲಸ ಏಕೆ ಕಳಕೊಳ್ಳಬೇಕು? ಇದೆಲ್ಲಿಯ ನ್ಯಾಯ? ಮನಸ್ಸು ಖಿನ್ನವಾಯಿತು. ಆದರೆ ಕೆಲಸ ಉಳಿಸಿಕೊಳ್ಳುವುದಕ್ಕಾಗಿ ಡಾ. ಗುಪ್ತರ ಇಚ್ಛೆಯಂತೆ ಸುಳ್ಳು ರಿಪೋರ್ಟ್‌ಗಳನ್ನು ನೀಡಲೆ? ನಾನು ನಂಬಿದ ಮೌಲ್ಯಗಳನ್ನು ಮಾರಿಬಿಡಲೇ? ಇಲ್ಲ ಅದನ್ನೆಂದೂ ಮಾಡಲಾರೆ. ಅದು ನಾನು ಇಲ್ಲಿವರೆಗೆ ಕಲಿತದ್ದಕ್ಕೆ ಅಪಚಾರ ಎಸಗಿದಂತೆ.
ಲ್ಯಾಬ್‌ಗೆ ಬಂದವನೆ ಸ್ಯಾಂಪಲ್ಲೊಂದರ ವಿಶ್ಲೇಷಣೆ ಗಾಗಿ ರಾಸಾಯನಿಕಗಳನ್ನು ತಯಾರಿಸುತ್ತಿರ ಬೇಕಾದರೆ ಡಾ. ಗುಪ್ತ ನನಗೆ ಬರ ಹೇಳಿದರು. ನಾನು ಅವರ ಕೋಣೆ ಪ್ರವೇಶಿಸಿ ಅವರಿಗೆ ನಮಸ್ಕರಿಸಿ ಅವರು ತೋರಿದ ಕುರ್ಚಿಯಲ್ಲಿ ಕೂತೆ. ಅವರು ಏನನ್ನೋ ಹೇಳಲು ಅಂಜುವಂತಿದ್ದರು.
ಪ್ರಯತ್ನಿಸಿ ಕೊನೆಗೆ ‘ಮಿ. ನಾಯಕ್ ನಿಮಗೆ ಇಲ್ಲಿಂದ ವರ್ಗವಾಗಿದೆ. ಈಗಷ್ಟೇ ಡೈರೆಕ್ಟರ್ ಆಫಿಸಿನಿಂದ ಆರ್ಡರ್ ಬಂತು’ ಎಂದರು. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ‘ನಿಮ್ಮಂತೆ ಡೈನಮಿಕ್ ಆಗಿ ಕೆಲಸ ಮಾಡುವವರು ನಮ್ಮ ಲ್ಯಾಬ್‌ನಲ್ಲಿ ಇರಬೇಕಿತ್ತು’ ಎಂದೂ ಇನ್ನೂ ಏನೇನೋ ಹೇಳುತ್ತಿದ್ದರು. ನಾನು ಮೌನವಾಗಿ ಹೊರಗೆ ಬಂದೆ. ನನಗೆ ಕಲ್ಕತ್ತಾಗೆ ವರ್ಗವಾಗಿತ್ತು.
ಹೊರಗೆ ಬರುತ್ತಿದ್ದಂತೆ ಎಲ್ಲರೂ ನನ್ನನ್ನು ಮುತ್ತಿಕೊಂಡರು. ಕೈಲಿದ್ದ ಟ್ರಾನ್ಸ್‌ಫರ್ ಆರ್ಡರ್ ನೋಡಿ ಆತ್ಮೀಯರು ಕೆಲವರು ಬೇಜಾರು ಪಟ್ಟರು. ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದರು. ನನಗೆ ಮಾತ್ರ ತಲೆ ತುಂಬ ನೀನು. ಸ್ವಾತಿಗೆ ಏನೆಂದು ಹೇಳಲಿ? ಅವಳಿಗೆ ಹೇಗೆ ಮುಖ ತೋರಿಸಲಿ?
ನೀನು ಪ್ರಯತ್ನಿಸಿ ಸೋತೆ. ನನ್ನನ್ನು ನಗಿಸಬೇಕೆನ್ನುವ ನಿನ್ನ ಪ್ರಯತ್ನಗಳೆಲ್ಲ ಇಂಗಿ ಹೋದವು. ನಾನು ನಗುವ ಸ್ಥಿತಿಯಲ್ಲಿರಲಿಲ್ಲ. ನಿನಗೆ ಇನ್ನೂ ಸುದ್ದಿ ತಿಳಿದಿಲ್ಲ. ನಿನ್ನನ್ನೇ ನೋಡುತ್ತ ಕೂತುಬಿಟ್ಟೆ.
ಸಂಜೆ ಲ್ಯಾಬ್‌ನ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಾವಂತ ಮನೆಗೆ ಬಂದು ಮೊಸಳೆ ಕಣ್ಣೀರು ಸುರಿಸತೊಡಗಿದ. ನಾನು ಅಷ್ಟೆಲ್ಲ ದೂರಕ್ಕೆ ವರ್ಗವಾಗಿ ಹೋಗಬೇಕಾದುದಿಲ್ಲವೆಂದೂ, ತಾನು ಡಾ. ಗುಪ್ತರ ಮನವೊಲಿಸಿ ಟ್ರಾನ್ಸ್‌ಫರ್ ಆರ್ಡರನ್ನು ಹಿಂದೆಗೆದುಕೊಳ್ಳುವಂತೆ ಮಾಡುತ್ತೇ ನೆಂದೂ ಹೇಳಿದ. ಮತ್ತೆ ನಾನು ಡಾ. ಗುಪ್ತರ ಇಚ್ಛೆಯಂತೆ ನಡೆಯಬೇಕೆಂದೂ ಅದರಿಂದ ನನಗೂ ಲಾಭವಿದೆ ಎಂದೂ ಸೇರಿಸಿದ. ನನಗೆ ತಲೆ ಸಿಡಿಯತೊಡಗಿತು. ಇದೆಲ್ಲ ಈತ ಮತ್ತು ಡಾ. ಗುಪ್ತ ಕೂಡಿ ಮಾಡುತ್ತಿರುವ ನಾಟಕ ಅನಿಸಿತು, ಇವರ ಹುನ್ನಾರಕ್ಕೆ ಸಿಕ್ಕಬಾರದು ಎಂದುಕೊಂಡೆ. ಯಾವುದೋ ದುರ್ಬಲ ಗಳಿಗೆಯಲ್ಲಿ ಕೂಡ ಇಂಥದಕ್ಕೆ ಮನಸ್ಸು ಸೋಲದಿರಲು ಅವನನ್ನು ಹೊರಗೆ ಹೋಗುವಂತೆ ಕಠೋರವಾಗಿ ನುಡಿದೆ. ‘ನಾನೀಗಾಗಲೇ ಹೊಸ ಜಾಗಕ್ಕೆ ಹಾಜರಾಗಲು ನಿರ್ಧರಿಸಿದ್ದೇನೆ’ ಎಂದು ಕೂಗಿದೆ. ನನ್ನ ಧ್ವನಿಯಲ್ಲಿಯ ನಿಷ್ಠುರತೆ ನನಗೇ ಆಶ್ಚರ್ಯವುಂಟು ಮಾಡಿತು.
ಅಷ್ಟರಲ್ಲೇ ನೀನು ಹೇಗೋ ಸುದ್ದಿ ಸಂಗ್ರಹಿಸಿದ್ದೆ. ಪೂರ್ತಿ ಭೂಮಿಗೇ ಇಳಿದು ಹೋಗಿದ್ದೆ. ನಗುವಿಲ್ಲ. ನಲಿವಿಲ್ಲ. ಎಷ್ಟೋ ದಿನಗಳಿಂದ ನೇಯುತ್ತಿದ್ದ ಕಸೂತಿ ಮುಂದುವರಿಸುವ ನೆಪದಲ್ಲಿ ಕಿಟಕಿಯಲ್ಲಿ ಕಾಣುವೆ. ಒಡಲಲ್ಲಿ ಎಂಥ ತಳಮಳ! ನಿನ್ನೊಡನೆ ಕಳೆದ ದಿನಗಳು ಕನಸಿನಂತೆ ಕಾಣುತ್ತಿದೆ. ಈ ನವಿರು ಸಂಬಂಧಕ್ಕೆ ಏನರ್ಥ? ನಮ್ಮ ಪ್ರೇಮ ಪರಿಪೂರ್ಣ ಗೊಳ್ಳುವ ಮೊದಲೆ...? ಅಥವಾ ಇದು ಸತ್ವ ಪರೀಕ್ಷೆಯೇ? ಪ್ರೇಮದ ತೀವ್ರತೆ ನಮ್ಮನ್ನು ಪುನಃ ಒಂದುಗೂಡಿಸಬಲ್ಲದೆ? ಉತ್ತರ ಎಲ್ಲಿ ಹುಡುಕಲಿ?
ನಾನು ನಿನ್ನನ್ನು ಭೇಟಿಯಾಗಲು ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡವು. ನಿಮ್ಮ ತಂದೆ ನಾಲ್ಕು ದಿನಗಳಿಂದ ಮನೆಯಲ್ಲೆ ಇದ್ದರು. ನೀನೂ ಮನೆಯಿಂದಾಚೆಗೆ ಸುಳಿವೇ ಇಲ್ಲ. ಹೊಸ ಜಾಗಕ್ಕೆ ಹಾಜರಾಗುವ ಮೊದಲು ಒಂದು ವಾರದ ಮಟ್ಟಿಗೆ ಊರಿಗೆ ಹೋಗಲು ತೀರ್ಮಾನಿಸಿದ್ದೆ. ನಾಳೆಯೇ ಹೊರಡುವುದು. ಎಲ್ಲಾ ಪ್ಯಾಕ್ ಮಾಡತೊಡಗಿದೆ. ಒಯ್ಯಲು ಬೇಸರವಾಗಿ ಹಲವಾರು ವಸ್ತುಗಳನ್ನು ಲ್ಯಾಬ್‌ನಲ್ಲಿಯ ನನ್ನ ಸಹಾಯಕರಿಗೆ ಕೊಟ್ಟುಬಿಟ್ಟೆ. ತಲೆ ತುಂಬ ಸ್ವಾತಿ, ಸ್ವಾತಿ, ಸ್ವಾತಿ. ರಾತ್ರಿಯಿಡೀ ಚಿತ್ರ ವಿಚಿತ್ರ ಕನಸುಗಳು.
ರಾತ್ರಿ ಸರಿ ನಿದ್ದೆಯಿಲ್ಲದ್ದರಿಂದ ಏಳಲು ತಡವೇ ಆಯಿತು. ಗಡಿಬಿಡಿಯಿಂದ ಸ್ನಾನ ಮುಗಿಸಿ ಬರುವಷ್ಟರಲ್ಲಿ ಗುಬ್ಬಚ್ಚಿ ಕೂಡ ಹೊರಟು ಹೋಗಿತ್ತು. ನೀನು ಗುಲಾಬಿಗೆ ನೀರು ಹಾಕುತ್ತಿದ್ದೆ ಎಂದಿನಂತೆ. ಆದರೆ ನಿನ್ನ ನಗು, ಗೆಲುವನ್ನೆಲ್ಲ ಗುಲಾಬಿ ಹೂಗಳೆ ನುಂಗಿದ್ದವು. ನಿಮ್ಮ ತಂದೆ ಅಲ್ಲೇ ತಿರುಗಾಡಿಕೊಂಡಿದ್ದರು.
ಕೊನೆಗೂ ನಿನ್ನನ್ನು ಭೇಟಿಯಾಗಲೇ ಬೇಕೆಂದು ತೀರ್ಮಾನಿಸಿದೆ. ನನಗೇನು ಮೈಯಲ್ಲಿ ಆವೇಶ ಹೊಕ್ಕಿತ್ತೊ ಏನೋ. ಕುಂಡದಲ್ಲಿಯ ಗುಲಾಬಿ ಗಿಡವನ್ನು ಎರಡೂ ಕೈಗಳಲ್ಲಿ ಹಿಡಿದು ನಡೆದೆ, ನನ್ನ ಹೃದಯ ಹಿಡಿದುಕೊಂಡಂತೆ. ಇಡೀ ಜಗತ್ತೇ ಸ್ತಬ್ಧವಾಗಿದೆ. ನನಗೆ ಬೇರೇನೂ ಕಾಣದು. ಅಲ್ಲಿ ಸ್ವಾತಿ ಮಾತ್ರ ಪ್ರಜ್ವಲಿಸುತ್ತಿದ್ದಾಳೆ. ಭಾರವಾದ ಹೃದಯದಿಂದ ನಿನ್ನ ಹೂದೋಟವನ್ನು ದಾಟಿ ಮನೆ ಮೆಟ್ಟಲೇರಿ ಬಾಗಿಲ ಬಳಿ ನಿಂತೆ. ನನ್ನನ್ನು ನೋಡಿ ನೀನು ಓಡಿ ಬಂದೆ. ನಿನ್ನ ಕೈಗಳಲ್ಲಿ ಇನ್ನೂ ಪೂರ್ತಿ ಗೊಳ್ಳಬೇಕಾಗಿರುವ ಕಸೂತಿ ಕಲೆ. ಗುಲಾಬಿಯನ್ನು ನಿನ್ನ ಎರಡೂ ಕರಗಳಲ್ಲಿಟ್ಟೆ, ಹಗುರ ನನ್ನ ಹೃದಯ ಇಟ್ಟ ಹಾಗೆ. ನಿನ್ನ ಅಗಲ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬಕ್ಕಾಗಿ ಇಣುಕಿದೆ. ಅದೆಲ್ಲ ಒಂದೆರಡೇ ಕ್ಷಣ. ವಿಗ್ರಹ ಗಳಂತೆ ನಿಂತಿದ್ದ ನಿನ್ನ ಅಪ್ಪ ಅಮ್ಮರಿಗೆ ಏನಾಗುತ್ತಿದೆ ಎಂದು ಅರಿವಾಗುವ ಮೊದಲೆ ನಾನು ಮೆಟ್ಟಲಿಳಿಯ ತೊಡಗಿದ್ದೆ, ಖಾಲಿ ದೇಹದೊಂದಿಗೆ.
***
ಅವ್ವನ ಸಂಭ್ರಮ ಹೇಳತೀರದು. ಬೆಳಗಾಗುವಷ್ಟರಲ್ಲಿ ಹಿರಿಯಣ್ಣನಿಗೆ ಯಾವುದೋ ನಂಟಸ್ತಿಕೆ ಬಂದಿರೋದನ್ನೂ, ಎರಡನೆ ಅಕ್ಕ ಅಮಾಸಿಪಾಡ್ಯಕ್ಕೆ ಮೂರನೆ ಬಾಣಂತನಕ್ಕಾಗಿ ಬರಲಿರುವುದನ್ನೂ ಅಪ್ಪನ ಬಗ್ಗೆ ಒಂದಿಷ್ಟು ಹೊಸ ಪುಕಾರುಗಳನ್ನೂ, ಅಮ್ಮನೋರ ದೇವರಿಗೆ ಅಷ್ಟಬಂಧ ಆದದ್ದನ್ನೂ ವರದಿ ಒಪ್ಪಿಸಿ ಹಗುರಾದ ಮೇಲೆ ಹೋಗ್ ಹೋಗ ಮಿಂದಕಾ ಬಾ ಎನ್ನುತ್ತಾ ಹಂಡೆಗೆ ಬೆಂಕಿ ಮಾಡಲು ಹೋದಳು. ನಾನು ಅಟ್ಟದ ಮೇಲಿರುವಾಗ ಪಕ್ಕದ ಮನೆಯ ಗಂಗಕ್ಕನೊಡನೆ ನನಗೆ ಊಟ ಸೇರದೇ ಇದ್ದದ್ದು, ಪೂರ್ತಿ ಸೊರಗಿ ಹೋದದ್ದು ಎಲ್ಲವನ್ನು ಬಣ್ಣಿಸುತ್ತಿದ್ದಳು. ನಾನು ಕೆಲ ವಸ್ತುಗಳನ್ನು ತರದೇ ಇದ್ದದ್ದು ಕಂಡು ‘ಎಲ್ಲ ಕೊಟ್ಟ ಬಂದ್ಯ’ ಎಂದು ಅರ್ಧ ದುಃಖದಿಂದ ಇನ್ನರ್ಧ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಕೇಳಿ ನನಗೆ ನಗು ಬಂತು. ‘ಹೌದು, ಎಲ್ಲ ಎಲ್ಲವನ್ನೂ ಕೊಟ್ಟು ಬಂದಿದ್ದೇನೆ, ಈ ಹೃದಯವನ್ನೂ ಕೂಡ’ ಎಂದು ಕೂಗಿ ಹೇಳಬೇಕೆನಿಸಿತು. ಎದ್ದು ಹೊರಗೆ ಬಂದೆ.
ಹಿತ್ತಲಲ್ಲಿ ಅಪ್ಪ ಏನೋ ನಡೆಸಿದ್ದ. ಅಡಿಕೆ ಸಸಿ ಗಳಿಗೆ ಯಾವುದೋ ರಾಸಾಯನಿಕ ಸಿಂಪಡಿಸು ತ್ತಿದ್ದ. ಅಪ್ಪನ ಪ್ರಯೋಗಶೀಲತೆಗೆ ಮೆಚ್ಚಬೇಕು. ಏನಾದರೊಂದು ಹೊಸತನ್ನ ಮಾಡುತ್ತ ಕ್ರಿಯಾಶೀಲನಾಗಿರುತ್ತಾನೆ. ಹಿತ್ತಲ ಮುಂದೆ ಹರಿವ ಹಳ್ಳ. ಇನ್ನೂ ಮಂಡಿಸರಿ ನೀರಿತ್ತು. ನೀರಿನಲ್ಲಿ ಹಾದು ಆಚೆ ಬಂದರೆ ಗದ್ದೆ ಬಯಲು. ಗೇಣುದ್ದ ಬಂದ ಕಾರ್ ಬತ್ತದ ಸಸಿಗಳು. ಬೇಲಿಯಾಚೆ ಬೆಳಗಿನ ಚಳಿಗೆ ಮೈಕಾಸಿಕೊಳ್ಳುತ್ತಿದ್ದ ದನಕರುಗಳು. ದಣಪೆ ದಾಟಿ ದಿಬ್ಬದತ್ತ ನಡೆದವನು ಕಟ್ಟಕಡೆ ಬಂದವನೇ ತಿರುಗಿದೆ. ಇಡೀ ಬಯಲು ಹಸಿರೋ ಹಸಿರು. ಅಂಚಲ್ಲಿ ತೂಗಾಡುವ ಅಡಿಕೆ, ತೆಂಗು. ಕೆರೆಯಲ್ಲಿ ಅರಳಿದ ಕಮಲಗಳು. ಹಸಿರು ಗದ್ದೆ ತುಂಬಾ ಬೆಳ್ಳಕ್ಕಿಗಳು, ಬೀರಿದ ಮಲ್ಲಿಗೆ ಹಾಗೆ. ನೋಡುತ್ತಿದ್ದಂತೆ ಮನಸು ತುಂಬಿ ಬಂದಂತಾ ಯಿತು. ಬೆಳ್ಳಕ್ಕಿಗಳ ನಡುವೆ ರೇಖೆಯನ್ನೆಳೆಯುತ್ತ ವಿವಿಧ ಆಕಾರಗಳನ್ನು ಕಲ್ಪಿಸುತ್ತಾ ನಿಂತೆ. ಇನ್ನೂ ಹಾಗೇ ನಿಂತಿದ್ದೇನೆ.

Saturday, October 31, 2009
ಬ್ಲಾಗ್ ತೆರೆಯುವುದು ಹೇಗೆ?
ಕಳೆದ ವಾರ ಬ್ಲಾಗ್‌ಗಳ ಉಪಯೋಗದ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ಪರಿಚಯ ಮಾಡಿಕೊಂಡಿದ್ದೆವು. ಈ ವಾರ ಅದೇ ವಿಚಾರವನ್ನು ಮುಂದುವರಿಸಿ ಅಂತರ್ಜಾಲ ತಾಣಗಳಲ್ಲಿ ನಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ನಮ್ಮದೇ ಆದ ಬ್ಲಾಗ್ ರಚಿಸಿಕೊಳ್ಳುವುದು ಎಂದರೆ ಹೆಚ್ಚೂ ಕಡಿಮೆ ನಮ್ಮದೇ ಅಂತರ್ಜಾಲ ತಾಣವೊಂದನ್ನು ರಚಿಸಿಕೊಳ್ಳುವುದು ಎಂದರ್ಥ. ದೊಡ್ಡ ದೊಡ್ಡ ಕಂಪೆನಿ, ಸಂಘಸಂಸ್ಥೆ, ಶಿಕ್ಷಣ ಸಂಸ್ಥೆ ಮುಂತಾದವುಗಳಿಗಾದರೆ ತಮ್ಮದೇ ಆದ ಅಂತ ರ್ಜಾಲ ತಾಣ (ವೆಬ್‌ಸೈಟ್) ರೂಪಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್ ಸ್ಥಳ ಬೇಕಾಗು ತ್ತದೆ. ಹಾಗಾಗಿ, ಆ ಸ್ಥಳವನ್ನು ಮಾರಾಟ ಮಾಡುವ ಇಂಟರ್‌ನೆಟ್ ಸಂಸ್ಥೆಗಳಿಂದ ಅವುಗಳನ್ನು ಅವರು ಕೊಂಡುಕೊಳ್ಳುತ್ತಾರೆ. ನಮಗೆ ನಮ್ಮದೇ ಬ್ಲಾಗ್ ರಚಿಸಿಕೊಳ್ಳುವುದಕ್ಕೆ ಅಷ್ಟೊಂದು ಆನ್‌ಲೈನ್ ಸ್ಥಳಾವ ಕಾಶದ ಅವಶ್ಯಕತೆಯಿಲ್ಲವಾದ್ದರಿಂದ ಕೆಲವು ಇಂಟರ್ ನೆಟ್ ಕಂಪೆನಿಗಳು ಉಚಿತ ಸ್ಥಳಾವಕಾಶ ಕೊಡುತ್ತವೆ. ಅದನ್ನೇ ಉಪಯೋಗಿಸಿಕೊಂಡು ನಮ್ಮದೇ ಆದ ಬ್ಲಾಗ್ ಅನ್ನು ನಾವು ರೂಪಿಸಿಕೊಳ್ಳಬಹುದು. ನಮ್ಮದೇ ಸ್ವಂತ ಅಂತರ್ಜಾಲ ಸ್ಥಳವನ್ನು ಖರೀದಿಸಿ ರೂಪಿಸುವ ವೆಬ್‌ಸೈಟುಗಳಿಗೂ ಹಾಗೂ ವಿವಿಧ ಕಂಪೆನಿಗಳು ಉಚಿತವಾಗಿ ಒದಗಿಸುವ ಸ್ಥಳದಲ್ಲಿ ರೂಪಿಸುವ ಉಚಿತ ಬ್ಲಾಗ್‌ಗಳಿಗೂ ಒಂದು ವ್ಯತ್ಯಾಸವಿದೆ. ಸ್ವಂತ ವೆಬ್‌ಸೈಟ್‌ಗೆ ತಮಗಿಷ್ಟ ಬಂದ, ಆದರೆ ಲಭ್ಯವಿರುವ ವೆಬ್ ವಿಳಾಸವನ್ನು ಕೊಡಬಹುದು (ಉದಾಹರಣೆಗೆ www. infosys.com). ಆದರೆ ಉಚಿತ ಬ್ಲಾಗ್ ಆದರೆ ಅದರ ಅಂತರ್ಜಾಲ ತಾಣದ ವಿಳಾಸದಲ್ಲಿ ಆನ್‌ಲೈನ್ ಸ್ಥಳವನ್ನು ಉಚಿತವಾಗಿ ಕೊಟ್ಟಿರುವ ಕಂಪೆನಿಯ ಹೆಸರೂ ಸೇರಿಕೊಂಡಿರುತ್ತದೆ (ಉದಾಹ ರಣೆಗೆ www.salman.blogspot. com). ಮೊದಲನೇ ಉದಾಹರಣೆಯಲ್ಲಿ ಇನ್ಫೋ ಸಿಸ್ ಕಂಪೆನಿ ನೇರವಾಗಿ ತನ್ನದೇ ಹೆಸರಿನಲ್ಲಿ ವೆಬ್‌ಸೈಟ್ ತೆರೆದಿದ್ದರೆ ಎರಡನೇ ಉದಾಹರಣೆ ಯಲ್ಲಿ ಸಲ್ಮಾನ್ ಎಂಬ ವ್ಯಕ್ತಿ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಎಂಬ ಕಂಪೆನಿಯ ವೆಬ್ ಸೈಟಿನಲ್ಲಿ ಉಚಿತ ವಾಗಿ ಬ್ಲಾಗ್ ತೆರೆದಿದ್ದಾರೆ ಎಂದರ್ಥ.
ಅಂತರ್ಜಾಲ ಲೋಕದಲ್ಲಿ ನಮ್ಮದೇ ಆದ ಬ್ಲಾಗ್ ಗಳನ್ನು ರೂಪಿಸಿಕೊಳ್ಳುವುದಕ್ಕೆ ಹಲವಾರು ಕಂಪೆನಿಗಳು ಉಚಿತ ಆನ್‌ಲೈನ್ ಸ್ಥಳಾವಕಾಶಗಳನ್ನು ಒದಗಿಸು ತ್ತಿವೆ. ಅವುಗಳಲ್ಲಿ ಸದ್ಯಕ್ಕೆ ಭಾರತದಲ್ಲಿ ಜನಪ್ರಿಯವಾಗಿ ರುವವುಗಳೆಂದರೆ www.blogspot.com ಅಥವ www.blogger.com ಮತ್ತು www.wordpress.com. ಇವುಗಳಲ್ಲಿ ಯಾವುದರಲ್ಲಿ ಬೇಕಾದರೂ ನಾವು ಉಚಿತವಾಗಿ ನಮ್ಮದೇ ಬ್ಲಾಗ್ ರಚಿಸಿಕೊಳ್ಳಬಹುದು.
ಮೊದಲನೆಯದಾಗಿ blogspot.com (www.blogger.com) ಅನ್ನೇ ಪ್ರಾಯೋ ಗಿಕವಾಗಿ ತೆಗೆದುಕೊಂಡು ಅದರಲ್ಲಿ ನಮ್ಮ ಬ್ಲಾಗ್ ರಚಿಸುವುದು ಹೇಗೆಂಬುದನ್ನು ನೋಡೋಣ. ಮೂಲತಃ ಪ್ಯಾರಾ ಲ್ಯಾಬ್ಸ್ ಎಂಬ ಕಂಪೆನಿ ರೂಪಿ ಸಿದ್ದ ಈ ಅಂತರ್ಜಾಲ ಬ್ಲಾಗ್ ಪ್ರಕಟಣಾ ವ್ಯವಸ್ಥೆಯನ್ನು ೨೦೦೩ರಲ್ಲಿ ಗೂಗಲ್ ಸಂಸ್ಥೆ ಕೊಳ್ಳು ವುದರೊಂದಿಗೆ ಅದೂ ಕೂಡ ಗೂಗಲ್ ಅಂತ ರ್ಜಾಲ ಸೇವಾ ಸಾಮ್ರಾಜ್ಯದ ಭಾಗವಾಗಿ ಹೋ ಯಿತು. ಅಲ್ಲಿಂದಾಚೆಗೆ ಗೂಗಲ್ ಸಂಸ್ಥೆಯ ಪ್ರಯೋಗಶೀಲ ಮತ್ತು ನನ ಸೌಕರ್ಯ ಗಳೊಂದಿಗೆ ಇಂದು ಅದು ವಿಶ್ವದ ಅತ್ಯಂತ ಪ್ರಮುಖ ಬ್ಲಾಗ್ ಸೇವೆಗಳಲ್ಲಿ ಒಂದೆಂಬ ಶ್ರೇಯಸ್ಸಿಗೆ ಪಾತ್ರವಾಗಿದೆ.
ಈಗ ನೇರವಾಗಿ ಈ www.blogger. comನಲ್ಲಿ ನಮ್ಮದೇ ಆದ ಬ್ಲಾಗ್ ತೆರೆದುಕೊಳ್ಳು ವುದು ಹೇಗೆಂಬ ವಿಚಾರಕ್ಕೆ ಬರೋಣ. ಇಲ್ಲಿ ಬ್ಲಾಗ್ ತೆರೆಯಬೇಕೆಂದರೆ ಮೊದಲು ಗೂಗಲ್ ಸಂಸ್ಥೆಯ ವೆಬ್‌ಮೇಲ್ ಸೇವೆಯಾದ ಜಿ-ಮೇಲ್‌ನಲ್ಲಿ ನಾವು ಒಂದು ಇ-ಮೇಲ್ ಅಕೌಂಟ್ ಹೊಂದಿರಬೇಕು. (ಇ-ಮೇಲ್ ಹೇಗೆ ತೆರೆಯಬೇಕೆಂಬುದನ್ನು ಈ ಹಿಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿಸಲಾಗಿದೆ). ನಿಮ್ಮ ವೆಬ್‌ಬ್ರೌಸರ್ (ಉದಾಹರಣೆಗೆ, ಇಂಟರ್ ನೆಟ್ ಎಕ್ಸ್‌ಪ್ರೋ ಅಥವ ಮೊಜಿಲ್ಲಾ ಫೈರ್‌ಫಾಕ್ಸ್) ಬಳಸಿ ಬ್ಲಾಗರ್ ಡಾಟ್ ಕಾಮ್‌ನ ಮುಖಪುಟಕ್ಕೆ ಬನ್ನಿ. ಅದರ ವೆಬ್‌ಸೈಟ್ ವಿಳಾಸ: www. blogger.com. ಅದರ ಮುಖಪುಟದಲ್ಲೇ ಬಲಭಾಗದಲ್ಲಿ CREAT A BLOG ಎಂಬ ಒಂದು ಬಟನ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ. ಈಗ ತೆರೆದುಕೊಳ್ಳುವ ಫಾರ್ಮ್ ರೂಪದ ಪುಟದಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ಮೊದಲು ಮತ್ತು ಎರಡನೇ ಕಾಲಂಗಳಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನೂ, ಆ ನಂತರದ ಎರಡು ಕಾಲಂಗಳಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನೂ ಟೈಪ್ ಮಾಡಿ. ಆಮೇಲೆ ಡಿಸ್‌ಪ್ಲೇ ನೇಮ್ ಎಂಬ ಕಾಲಂನಲ್ಲಿ ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಬ್ಲಾಗ್‌ಗೆ ಸಂಬಂಧಪಟ್ಟಂತೆ ಭವಿಷ್ಯದಲ್ಲಿ ನಡೆಯುವ ಬೆಳವಣಿಗೆಗಳನ್ನು ಇ-ಮೇಲ್ ಮೂಲಕ ಸ್ವೀಕರಿ ಸಲು ಇಚ್ಛಿಸುತ್ತೀರಾದರೆ ಇ-ಮೇಲ್ ನೋಟಿಫಿ ಕೇಶನ್ಸ್ ಎಂಬ ಆಯ್ಕೆಯ ಮುಂದಿನ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದುಕೊಳ್ಳಿ. ನಂತರ ಕೆಳಗಡೆ Word Verification ಎದುರಿಗೆ ಕಾಣುವ ಸಂಕೇತ ರೂಪದ ಇಂಗ್ಲೀಷ್ ಅಕ್ಷರಗಳನ್ನು ಸರಿಯಾಗಿ ಗುರುತಿಸಿ ಅದರಡಿ ಯಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ. ಆಮೇಲೆ I accept the Terms of Service ಎಂಬ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದು ಕೊಳ್ಳಿ. ಎಲ್ಲ ಮುಗಿಸಿದ ಮೇಲೆ ಪುಟದ ಕೊನೆ ಯಲ್ಲಿರುವ Continue ಎಂಬ ಬಟನ್ ಮೇಲೆ ಕ್ಲಿಕ್ಕಿಸಿ. ಅಲ್ಲಿಗೆ ಮೊದಲ ಹಂತದ ಕೆಲಸ ಮುಗಿಯುತ್ತದೆ.
Continue ಎಂಬ ಬಟನ್ ಮೇಲೆ ಕ್ಲಿಕ್ಕಿಸು ತ್ತಿದ್ದಂತೆಯೇ ಎರಡನೇ ಹಂತದ ಕೆಲಸಕ್ಕಾಗಿ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ಪ್ರಧಾನವಾಗಿ ಎರಡು ವಿಚಾರಗಳನ್ನು ಭರ್ತಿ ಮಾಡಬೇಕು. ಮೊದಲನೆಯದು Blog title ಎಂಬ ಕಾಲಂನಲ್ಲಿ ನಿಮ್ಮ ಬ್ಲಾಗ್‌ಗೆ ಒಂದು ಶೀರ್ಷಿಕೆಯನ್ನು ಕೊಡಬೇಕು. ಉದಾಹರಣೆಗೆ, ನಿಮ್ಮ ಅಪ್ರಕಟಿತ ಕವನಗಳನ್ನು, ಚಿಂತನಗೆಳನ್ನು, ಬರಹಗಳನ್ನು ಪ್ರಕಟಿಸುವ ಉದ್ದೇಶದಿಂದ ಬ್ಲಾಗ್ ತೆರೆಯುತ್ತಿದ್ದೀರಾದರೆ My Unpublished Thoughts ಎಂದು ಹೆಸರಿಡಬಹುದೇನೋ. ಇದೊಂದು ಉದಾಹರಣೆಯಷ್ಟೆ. ನಿಮಗೆ ಬೇಕಾದ ಶೀರ್ಷಿಕೆಯನ್ನು ಇಟ್ಟುಕೊಳ್ಳಬಹುದು. ಇನ್ನು ಎರಡನೆಯದೆಂದರೆ ವಿಶಾಲವಾಗಿರುವ ಅಂತ ರ್ಜಾಲ ಲೋಕದಲ್ಲಿ ನಿಮ್ಮ ಬ್ಲಾಗ್ ತಲುಪುವುದಕ್ಕೆ ಅವಶ್ಯವಾಗಿ ಬೇಕಿರುವ ಬ್ಲಾಗ್ ವಿಳಾಸವನ್ನು ಭರ್ತಿ ಮಾಡಬೇಕು. ಇದನ್ನು ಇಂಟರ್‌ನೆಟ್ ಪರಿಭಾಷೆ ಯಲ್ಲಿ URL (Uniform Resource Locator) ಎಂದು ಕರೆಯಲಾಗುತ್ತದೆ. ನಿಮ್ಮ ಹೆಸರನ್ನು, ನಿಮ್ಮ ಬ್ಲಾಗ್‌ಗೆ ಕೊಟ್ಟಿರುವ ಶೀರ್ಷಿಕೆ ಯನ್ನು - ಏನನ್ನು ಬೇಕಾದರೂ ಕೊಡಬಹುದು. ಶಬ್ದಗಳ ನಡುವೆ, ಅಕ್ಷರಗಳ ನಡುವೆ ಸ್ಪೇಸ್ ಬಿಡಬಾರದು. ಅಂತೆಯೇ ಎಲ್ಲವೂ ಇಂಗ್ಲೀಷಿನ ಚಿಕ್ಕ ಅಕ್ಷರಗಳಲ್ಲಿ ಇರಬೇಕು. ಉದಾಹರಣೆಗೆ, mythoughts ಎಂಬುದನ್ನೇ URL ಆಗಿ ಬಳಸುತ್ತೀರಾದರೆ ಆಗ ನಿಮ್ಮ ಬ್ಲಾಗ್‌ನ ಸಂಪೂರ್ಣ ವಿಳಾಸ www.mythoughts.blogspot. com ಎಂದಾಗುತ್ತದೆ. ಕೆಲವೊಮ್ಮೆ ನೀವು ಕೊಡುವ ಯುಆರ್‌ಎಲ್ ಅನ್ನು ಈಗಾಗಲೇ ಯಾರಾದರೂ ಬಳಸಿಬಿಟ್ಟಿದ್ದರೆ ಅದು ನಿಮಗೆ ಲಭ್ಯವಾಗುವುದಿಲ್ಲ. ಹಾಗಾಗಿ ಲಭ್ಯವಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅದನ್ನು ಟೈಪ್ ಮಾಡಿ ಕೆಳಗಡೆಯಿರುವ Check Availability ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿ. ಲಭ್ಯವಿದ್ದರೆ ಮುಂದುವರಿಯಬಹುದು, ಇಲ್ಲದಿದ್ದರೆ ಬೇರೆ ಹೆಸರನ್ನು ಕೊಡಬೇಕಾಗುತ್ತದೆ. ಲಭ್ಯವಿರುವ ಯುಆರ್‌ಎಲ್ ಸಿಕ್ಕ ಮೇಲೆ ಕೆಳಗಡೆಯಿರುವ Continue ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
ಈಗ ಬ್ಲಾಗ್ ರಚನೆಯ ಮೂರನೇ ಹಂತಕ್ಕೆ ಬರುತ್ತೀರಿ. ಇಲ್ಲಿ ನಿಮ್ಮ ಬ್ಲಾಗ್ ಹೇಗೆ ಕಾಣಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ಹಲವು ರೀತಿಯ ಬ್ಲಾಗ್ ವಿನ್ಯಾಸಗಳು ಇರುತ್ತವೆ. ಅವುಗಳಲ್ಲಿ ಯಾವುದು ಇಷ್ಟವೋ ಅದರ ಕೆಳಗಿರುವ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದುಕೊಂಡು ನಂತರ ಮತ್ತೆ ಕೆಳಗಡೆಯಿರುವ Continue ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ಬ್ಲಾಗ್ ಸೃಷ್ಟಿಯಾಗುತ್ತದೆ. ಅದನ್ನು ಖಚಿತಪಡಿಸುವ ಪುಟವೊಂದು ತೆರೆದುಕೊಳ್ಳುತ್ತದೆ. ಈ ಪುಟದಲ್ಲಿರುವ Start Blogging ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ನಿಮ್ಮ ಬ್ಲಾಗ್‌ಗೆ ಹೋಗುತ್ತೀರಿ.
ಬ್ಲಾಗ್‌ನಲ್ಲಿ ಬರೆಯುವುದು ಹೇಗೆ, ಬರೆದ ವಿಚಾರಗಳನ್ನು ಪ್ರಕಟಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬ್ಲಾಗುಗಳು -ಒಂದು ಪರಿಚಯ
ಕಳೆದ ಕೆಲವು ವಾರಗಳಿಂದ ಉಚಿತ ಆನ್‌ಲೈನ್ ಸ್ಟೋರೇಜ್ ವ್ಯವಸ್ಥೆಯ ಬಗ್ಗೆ ಮೂಲಭೂತ ಅಂಶ ಗಳನ್ನು ತಿಳಿದುಕೊಂಡಿದ್ದೇವೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೂಲಭೂತ ಅಂಶಗಳನ್ನಷ್ಟೇ ವಿವರಿಸಲಾ ಗಿದ್ದು ಉಳಿದಂತೆ ನೀವೇ ಪ್ರಾಕ್ಟೀಸ್ ಮಾಡುತ್ತಾ ಹೋದಂತೆ ಇನ್ನೂ ಹಲವು ವಿಚಾರಗಳನ್ನು ಸ್ವಂತ ವಾಗಿ ತಿಳಿದುಕೊಳ್ಳುತ್ತಾ ಹೋಗಬಹುದು. ಅಲ್ಲದೇ, ಎಡ್ರೈವ್ ಮಾತ್ರವಲ್ಲದೇ ಉಚಿತ ಸ್ಟೋರೇಜ್ ಸ್ಥಳಾವಕಾಶ ಕೊಡುವ ಇನ್ನಿತರ ವೆಬ್‌ಸೈಟುಗಳನ್ನೂ ಗೂಗಲ್ ಹುಡುಕಾಟದ ಮೂಲಕ ಕಂಡುಕೊಳ್ಳ ಬಹುದು. ಹೀಗಾಗಿ, ಸದ್ಯಕ್ಕೆ ಆನ್‌ಲೈನ್ ಸ್ಟೋರೇಜ್ ವಿಚಾರವನ್ನು ಮುಗಿಸಿ ಈ ವಾರದಿಂದ ಇಂಟರ್ ನೆಟ್ ಲೋಕದ ಮತ್ತೊಂದು ಬಹುಮುಖ್ಯ ವಿಚಾರ ವಾಗಿರುವ ಬ್ಲಾಗ್ ಬಗ್ಗೆ ತಿಳಿದುಕೊಳ್ಳೋಣ.
ಈಗಾಗಲೇ ಇಂಟರ್‌ನೆಟ್ ಬಳಸುತ್ತಿ ರುವ ಜನರು ಆಗಾಗ ಬ್ಲಾಗ್ ಬಗ್ಗೆ ಮಾತ ನಾಡುತ್ತಿರುತ್ತಾರೆ. ನನ್ನದೂ ಒಂದು ಬ್ಲಾಗ್ ಇದೆ, ಅದರಲ್ಲಿ ನನ್ನ ಕವಿತೆ ಹಾಕಿದ್ದೇನೆ, ಫೋಟೊ ಹಾಕಿದ್ದೇನೆ, ಒಂದು ಲೇಖನ ಬರೆದಿದ್ದೇನೆ, ಒಂದು ವರದಿ ಪ್ರಕಟಿಸಿದ್ದೇನೆ ಎಂದೆಲ್ಲಾ ಹೇಳುತ್ತಿರುತ್ತಾರೆ. ಆದರೆ, ಅವರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ, ಬ್ಲಾಗ್ ಎಂದರೇನು ಎಂಬಿತ್ಯಾದಿ ವಿಚಾರ ಗಳು ಈಗತಾನೆ ಇಂಟರ್‌ನೆಟ್ ಲೋಕಕ್ಕೆ ಕಾಲಿಡು ತ್ತಿರುವ ಹೊಸಬರಿಗೆ ಅರ್ಥವೇ ಆಗುವುದಿಲ್ಲ. ಇತ್ತೀಚೆಗಂತೂ ಬ್ಲಾಗ್ ಬಳಕೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿರುವುದರಿಂದ ಅದು ಇಂಟರ್‌ನೆಟ್ ಲೋಕದ ಮಹತ್ವಪೂರ್ಣ ಅಭಿವ್ಯಕ್ತಿ ಮಾಧ್ಯಮ ವಾಗಿ ಹೊರಹೊಮ್ಮುತ್ತಿದೆ. ಹೀಗಾಗಿ, ಈ ವಾರ ಬ್ಲಾಗ್‌ನ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
ನಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಗೊಳಿಸು ವುದಕ್ಕೆ ಹತ್ತು ಹಲವು ರೀತಿಯ ದಾರಿಗಳನ್ನು ಕಂಡು ಕೊಳ್ಳುತ್ತೇವೆ. ಕೆಲವರು ಕಥೆ-ಕವನಗಳನ್ನು ಬರೆಯು ತ್ತಾರೆ. ಕೆಲವರು ಸುಮ್ಮನೇ ತಮಗನ್ನಿಸಿದ್ದನ್ನು ಒಂದು ಬರಹದ ರೂಪಕ್ಕಿಳಿಸುತ್ತಾರೆ. ಇನ್ನು ಕೆಲವರು ತಾವು ಭೇಟಿ ಕೊಟ್ಟ ಅಪರೂಪದ ಪ್ರದೇಶ, ಪ್ರವಾಸಿ ತಾಣ, ಚಾರಿತ್ರಿಕ ಸ್ಥಳಗಳ ಬಗ್ಗೆ ಬರೆಯುತ್ತಾರೆ. ಕೆಲವರು ತಮ್ಮ ಜೀವನದಲ್ಲಿ ಅಪರೂಪಕ್ಕೆ ಭೇಟಿಯಾದ ಮಹತ್ವಪೂರ್ಣ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಾರೆ. ಕೆಲವರಿಗೆ ತಮ್ಮ ಜೀವನದಲ್ಲಿ ಘಟಿ ಸಿದ ಬಹಳ ಮುಖ್ಯವಾದ ತಿರುವು ಘಟನೆಗಳ ಬಗ್ಗೆ ಬರೆದು ದಾಖಲಿಸಿಟ್ಟುಕೊಳುತ್ತಾರೆ. ಕೆಲವರು ತಮ್ಮ ಜೀವನದ ಅತ್ಯಮೂಲ್ಯ ಅನುಭವಗಳನ್ನು ಬರೆದಿಡು ತ್ತಾರೆ. ಚಿತ್ರಕಲಾಕಾರರಾದರೆ ತಮ್ಮ ಭಾವನೆಗಳನ್ನು ಕಾರ್ಟೂನ್ ರೂಪದಲ್ಲೋ, ರೇಖಾಚಿತ್ರಗಳ ರೂಪ ದಲ್ಲೋ ಅಥವಾ ಪೆಯಿಂಟಿಂಗ್ ರೂಪದಲ್ಲೋ ಅಭಿವ್ಯಕ್ತಿಗೊಳಿಸಿ ಇಟ್ಟುಕೊಂಡಿರುತ್ತಾರೆ. ಹೀಗೆ ಹಲವು ರೀತಿಯ ಜನ ಹಲವು ಕಲಾ ಪ್ರಕಾರಗಳನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡಿರು ತ್ತಾರೆ. ಅವರಲ್ಲಿ ಬಹುತೇಕರು ತಾವು ಅಭಿವ್ಯಕ್ತಿ ಗೊಳಿಸಿದ ಈ ಕಲಾಕೃತಿಗಳು ಯಾವುದಾದರೂ ಪತ್ರಿಕೆಗಳಲ್ಲೋ, ಮ್ಯಾಗಜಿನ್‌ಗಳಲ್ಲೋ, ಅಥವ ಪುಸ್ತಕ ರೂಪದಲ್ಲೋ ಪ್ರಕಟವಾಗಬೇಕೆಂದು ಹಂಬಲಿಸುಮದೂ ಉಂಟು. ಆ ಮೂಲಕ ತನ ಗಾದ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳು ವುದಕ್ಕೆ ಇಷ್ಟಪಡುತ್ತಾರೆ. ಅವು ಪ್ರಕಟವಾದರೆ ಏನೋ ತನ್ನ ಕಲಾಕೃತಿಯನ್ನು, ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡ ತೃಪ್ತ ಭಾವ ಹೊಂದುತ್ತಾರೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಹಲವಾರು ಕಾರಣಗಳಿಗಾಗಿ ಎಲ್ಲರ ಕಲಾಕೃತಿಗಳು, ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. ನೀವು ಸೃಷ್ಟಿಸಿದ ಕೃತಿ ಪತ್ರಿಕೆ ಸಂಪಾದಕರಿಗೆ ಇಷ್ಟವಾಗದೇ ಹೋಗಬಹುದು, ಪತ್ರಿಕೆಗಳಲ್ಲಿ ಜಾಗವಿರದಿರಬಹುದು- ಹೀಗೆ ಹಲವು ಕಾರಣಗಳಿಂದಾಗಿ ನಿಮ್ಮ ಕಲಾಕೃತಿ ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟವಾಗದೇ ಕೇವಲ ನಿಮ್ಮ ಮನೆ ಮತ್ತು ಸೀಮಿತ ಸ್ನೇಹಿತರ ವಲಯಕ್ಕಷ್ಟೇ ಸೀಮಿತವಾಗಿಬಿಡುತ್ತವೆ. ಅಂಥ ಸಂದರ್ಭದಲ್ಲಿ ಬ್ಲಾಗ್‌ಗಳು ನಿಮ್ಮ ಸಹಾಯಕ್ಕೆ ಬರುತ್ತವೆ.
ಅಲ್ಲದೇ, ಸಣ್ಣಪುಟ್ಟ ಸಂಘ ಸಂಸ್ಥೆಗಳನ್ನು ನಡೆಸು ವವರು ಅಥವಾ ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ ಸುಧಾರಣೆಗಾಗಿ ಹೋರಾಟ ಮಾಡುವವರು ತಮ್ಮ ಸಂಘ ಸಂಸ್ಥೆಯ ಧ್ಯೇಯೋ ದ್ದೇಶಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಹತ್ತು ಹಲವು ವಿಧಾನಗಳನ್ನು ಬಳಸುತ್ತಾರೆ. ಅವುಗಳಲ್ಲಿ ಪತ್ರಿಕೆ, ಟೀವಿ, ಪುಸ್ತಕ, ಕರಪತ್ರ-ಮುಂತಾದವು ಗಳೂ ಉಂಟು. ಅದರ ಜೊತೆಗೆ ಇತ್ತೀಚೆಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಲೋಕ ವಿಸ್ತಾರವಾಗುತ್ತಾ ಹೋದಂತೆ ಈ ಉದ್ದೇಶಗಳಿ ಗಾಗಿ ಬ್ಲಾಗ್‌ಗಳನ್ನೂ ಬಳಸಿಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಒಂದೊಂದು ಸಂಘಸಂಸ್ಥೆಯೂ ತನ್ನದೇ ಆದ ಬ್ಲಾಗ್ ರೂಪಿಸಿಕೊಂಡು ಅದರಲ್ಲಿ ತನ್ನ ಧ್ಯೇಯೋದ್ದೇಶಗಳನ್ನು, ತಾನು ನಡೆಸಿರುವ ಸಾಮಾಜಿಕ ಚಟುವಟಿಕೆಗಳ ವರದಿಗಳನ್ನು, ಅಪ ರೂಪದ ಫೋಟೊಗಳನ್ನು, ವಿವಿಧ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸುತ್ತಾರೆ.
ಹಾಗಾದರೆ ಬ್ಲಾಗ್ ಎಂದರೇನು? ಬಹಳ ಸಿಂಪಲ್ಲಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಬ್ಲಾಗ್ ಕೂಡ ಒಂದು ರೀತಿಯಲ್ಲಿ ವೆಬ್‌ಸೈಟ್. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು, ಮಾಧ್ಯಮ ಸಂಸ್ಥೆಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರಕಾರಿ ಇಲಾಖೆಗಳು- ಮುಂತಾದ ಸಂಘಟಿತ ಸಂಸ್ಥೆಗಳು ತಮ್ಮ ಧ್ಯೇಯೋದ್ದೇಶ, ಉತ್ಫನ್ನ, ಸೇವೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ತಮ್ಮದೇ ಆದ ವೆಬ್‌ಸೈಟುಗಳನ್ನು ಹೊಂದಿರುತ್ತಾರೆ. ಅದಕ್ಕಾಗಿ ಬಹಳಷ್ಟು ಆನ್‌ಲೈನ್ ಸ್ಥಳಾವಕಾಶ ಬೇಕಾಗಿರುವುದರಿಂದ ಅದನ್ನು ವರ್ಷಕ್ಕೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಕೊಂಡುಕೊಂಡಿರುತ್ತಾರೆ. ಆದರೆ, ಬ್ಲಾಗ್ ಗಳಿಗೆ ಅಷ್ಟೊಂದು ಸ್ಥಳಾವಕಾಶದ ಅವಶ್ಯಕತೆಯಿಲ್ಲ ವಾದ್ದರಿಂದ ಹಲವಾರು ಕಂಪೆನಿಗಳು ಉಚಿತವಾಗಿ ಆನ್‌ಲೈನ್ ಸ್ಥಳಾವಕಾಶವನ್ನು ನೀಡುತ್ತಿವೆ. ಯಾರು ಬೇಕಾದರೂ ಅಂಥ ಅವಕಾಶವನ್ನು ಬಳಸಿ ಕೊಂಡು ತಮ್ಮದೇ ಆದ ಬ್ಲಾಗ್ ತೆರೆದು ಕೊಂಡು ಅದರಲ್ಲಿ ತಮ್ಮ ಕಲಾಕೃತಿಗಳನ್ನು, ಸಾಹಿತ್ಯ ಸೃಷ್ಟಿಗಳನ್ನು, ಫೋಟೊಗಳನ್ನು, ಅನುಭವಗಳನ್ನು, ಅಭಿಪ್ರಾಯಗಳನ್ನು, ಬರಹ ಗಳನ್ನು ಪ್ರಕಟಿಸಬಹುದು. ಇದನ್ನು ವೈಯುಕ್ತಿಕ ಆನ್‌ಲೈನ್ ಡೈರಿ ಎಂತಲೂ ಬೇಕಾದರೆ ಕರೆಯಬಹುದು, ನಿಮ್ಮ ವೈಯುಕ್ತಿಕ ವೆಬ್ ಸೈಟ್ ಅಂತ ಬೇಕಾದರೆ ಕರೆಯಬಹುದು. ಪುಸ್ತಕ ರೂಪದಲ್ಲಿರುವ ಪಾರಂಪರಿಕ ಡೈರಿಯಾದರೆ ಅದರಲ್ಲಿ ನಾವು ಬರೆದಿರುವ ವಿಚಾರಗಳು ಕೇವಲ ನಮಗೆ ಅಥವಾ ನಮಗೆ ತೀರಾ ಹತ್ತಿರದ ಸೀಮಿತ ಜನರಿಗೆ ಮಾತ್ರವೇ ಓದುವುದಕ್ಕೆ ಲಭ್ಯವಿರುತ್ತವೆ. ಬ್ಲಾಗ್ ಎಂಬುದು ಓಪನ್ ಆನ್‌ಲೈನ್ ಡೈರಿ. ಅದನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ಯಾವುದೇ ವ್ಯಕ್ತಿ ಬೇಕಾದರೂ ಓದಬಹುದು. ಹೀಗಾಗಿ, ಬ್ಲಾಗ್‌ನಲ್ಲಿ ಎಂಥ ವಿಚಾರಗಳನ್ನು ಬರೆದು ಪ್ರಕಟಿಸಬೇಕು ಎಂಬುದನ್ನು ಬಹು ಎಚ್ಚರಿಕೆಯಿಂದ ನಿರ್ಧರಿಸಬೇಕು. ನಿಮ್ಮ ಜೀವನದ ತೀರಾ ಖಾಸU ಮತ್ತು ಗೌಪ್ಯ ವಿಚಾರಗಳನ್ನು ಬರೆಯುವುದನ್ನು ಆದಷ್ಟು ತಪ್ಪಿಸ ಬೇಕು. ಪರಿಚಿತರಿರಲಿ ಅಥವ ಅಪರಿಚಿತರಿರಲಿ, ಸ್ನೇಹಿತರಿರಲಿ ಅಥವ ಶತ್ರುಗಳಿರಲಿ - ಯಾರು ಬೇಕಾದರೂ ಓದಿಕೊಂಡರೂ ಏನೂ ತೊಂದರೆಯಿಲ್ಲ ಅನ್ನುವಂಥ ವಿಚಾರಗಳನ್ನು ಮಾತ್ರವೇ ಬ್ಲಾಗ್‌ನಲ್ಲಿ ಪ್ರಕಟಿಸುವುದು ಉತ್ತಮ.
ಬ್ಲಾಗ್ ರಚನೆಗಾಗಿ ಉಚಿತ ಆನ್‌ಲೈನ್ ಸ್ಥಳಾವಕಾಶ ಒದಗಿಸುವ ಕಂಪೆನಿಗಳು ಯಾವುದು ಹಾಗೂ ಬ್ಲಾಗ್‌ಗಳನ್ನು ತೆರೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Thursday, October 8, 2009
ಲಾಟರಿ
-ಟಿ. ಎಸ್. ಗೊರವರ
ಗೌಡರ ಮನೆಯ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ರಂಗಜ್ಜ ಕನಸುಗಳ ಲೋಕದಲ್ಲಿ ವಿಹರಿಸತೊಡಗಿದ್ದ. ಟಿ.ವಿ.ಯಲ್ಲಿ ಮೂಡಿಬರುತ್ತಿದ್ದ ಜಾಹೀರಾತು ಅವನನ್ನು ವಾಸ್ತವ ಲೋಕದಿಂದ ಕನಸುಗಳ ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಹೋಗಿತ್ತು.
ಆ ಜಾಹೀರಾತಿನಲ್ಲಿ ಗುಡಿಸಲ ಮನೆಯ ಬಡವನಿಗೆ ಕೋಟಿ ರೂಪಾಯಿಯ ಬಂಪರ್ ಲಾಟರಿ ಹೊಡೆದು, ಅವ ಮಹಡಿ ಮನೆ ಕಟ್ಟಿಸುತ್ತಾನೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾನೆ. ಈ ರಂಜನೀಯ ಜಾಹೀರಾತನ್ನು ಕಣ್ಣ ತುಂಬಾ ತುಂಬಿಕೊಂಡು ರಂಗಜ್ಜ ಮನೆ ಕಡೆ ಮುಖ ಮಾಡುತ್ತಾನೆ.
ರಂಗಜ್ಜ ಗುಡಿಸಲಿಗೆ ಬಂದಾಗ ಆಗಲೇ ರಾತ್ರಿ ಒಂಬತ್ತಾಗಿತ್ತು. ಅಡ್ಡಗೋಡೆಯ ಮೇಲಿಟ್ಟಿದ್ದ ಬುಡ್ಡಿ ಚಿಮಣಿ ಹೊಗೆಯಿಂದ ಅಲುಗಾಡತೊಡಗಿತ್ತು. ಮಗಳು ಹನುಮಿ ಒಲೆ ಊದುತ್ತಿರುವ ಸದ್ದು ಕೇಳಿ, ‘ಕಟ್ಟಿಗೆ ಹಸಿ ಅದಾವನು. ಗುಡಿಸಲ ತುಂಬಾ ಹೊಗಿ ಅಡರಿ ಕುಂದ್ರುಸ್ಯ ಕೊಡಾವಲ್ದು. ಸ್ವಲ್ಪ ಚಿಮಣಿ ಎಣ್ಣಿ ಹಾಕಿ ಒಲಿ ಹಚ್ಚು’ ಅಂದ.
ಹನುಮಿ ಒಲಿಯೊಳಗ ಕಟ್ಟಿಗೆ ತುರುಕುತ್ತಾ, ಹೆಂಚಿನಲ್ಲಿ ಬೇಯಿಸುತ್ತಿದ್ದ ರೊಟ್ಟಿಯನ್ನು ತಿರುವಿ ಹಾಕಿ, ಗುಡಿಸಲ ತುಂಬಾ ದಟ್ಟವಾಗಿ ಕವಿದಿದ್ದ ಹೊಗೆಯಿಂದಾಗ ಕಣ್ಣಲ್ಲಿ ತೆಳ್ಳಗೆ ಆಡುತ್ತಿದ್ದ ನೀರನ್ನು ಸೆರಗಿನ ಚುಂಗಿನಿಂದ ಒರೆಸಿಕೊಳ್ಳುತ್ತಾ, ‘ಚಿಮಣಿ ಎಣ್ಣೆ ಆಗೈತಿ. ಕಟಗಿ ನೋಡಿದರ ಹಸಿ ಆದಾವು. ರೊಟ್ಟಿ ಮಾಡೋದರಾಗ ಜೀವ ಸಣ್ಣ ಆಕ್ಕೆತಿ. ನಾಳೆ ಎಮ್ಮಿ ಮೇಸಿಕೊಂಡು ನೀನು ಬರುವಾಗ ಅಲ್ಲೇ ಗೌಡರ ಹೊಲದಾಗ ಒಂದು ಹೊರಿ ಒಣ ಕಟಗಿ ತಗೊಂಡು ಬಾ...’ ಅಂತ ಹನುಮಿ ಒಂದು ಕೇಳಿದರ ಒಂಬತ್ತು ಹೇಳಿದಳು.
“ಇನ್ನೊಂದು ವರ್ಷವೊಪ್ಪತ್ತು ಹ್ಯಾಂಗರ ಮಾಡು, ಕೊಟ್ಟ ಮನಿಗೆ ಹೋಗಿ ಅಂತ. ದೇವರು ನಮ್ಮ ಪಾಲಿಗೆ ಅದಾನು.”
“ಅಲ್ಲೋ ಎಪ್ಪಾ. ಒಂದು ಹೊತ್ತಿಗೇ ತಿನ್ನಾಕ ಸರಿಯಾಗಿ ಕೂಳಿಲ್ಲ. ಇನ್ನ ಮದುವಿ ಹ್ಯಾಂಗ ಮಾಡುಸ್ತೀ.”
“ಮಗಳ ನೀನೇನು ಹೆದರಬೇಡವ. ನಿನ್ನೆ ಗೌಡರ ಮನಿಗೆ ಹೋಗಿದ್ನಲ ಅಲ್ಲಿ ಟಿ.ವಿ. ನೋಡಿದೆ. ಅದರಾಗ ಲಾಟರಿ ಲಕ್ಷ್ಮಿ ಒಲಿದು ಬಡುವ ಮನುಷ್ಯ ಮಹಡಿ ಕಟ್ಟಿಸಿದ. ನಾನೂ ನಾಳೆ ಲಾಟರಿ ತಗೊಂತಿನಿ. ಆ ಲಾಟರಿ ಲಕ್ಷ್ಮಿ ನನಗೂ ಒಲಿದ ಒಲಿತಾಳ. ಅದರಾಗ ನಿನ್ನ ಮದುವಿ ಮಾಡುತಿನಿ”. ಅಂತ ರಂಗಜ್ಜ ಲಾಟರಿ ಹೊಡೆದವನಂತೆ ಬಹು ಹಿಗ್ಗಿನಿಂದ ನುಡಿದ.
“ಅಪ್ಪ, ನಾವು ದುಡಿದಿದ್ದ ನಮಗೆ ಇಲ್ಲ. ಇನ್ನು ಲಾಟರಿ ಹೊಡೆಯುತ್ತ ಅನ್ನೋದು ಕನಸಿನ ಮಾತು. ಎಮ್ಮೆ ಹೈನ ಸರಿಯಾಗಿ ಮಾಡಿಕೊಂಡು ಹಾಲು, ಮೊಸರು ಮಾರಿ ನಾಲ್ಕು ಕಾಸು ಉಳಿಸೋಣಂತ” ಹೀಗೆ ಹನುಮಿ ತನ್ನ ಎದೆಯಾಗಿನ ತಳಮಳವನ್ನು ರಂಗಜ್ಜನ ಮುಂದೆ ಇಡಿಯಾಗಿ ಸುರುವಿದಳು.
“ನಿನಗೆ ತಿಳಿಯಾಕಿಲ್ಲ. ಮಳ್ಳ ಪಡಿಸೆಂಟು ನೀನು. ಸುಮ್ನೆ ರೊಟ್ಟಿ ತಾ. ಹಸಿ ಮೆಣಸಿನಕಾಯಿ ಹಿಂಡಿ ಇದ್ರ ತಟಗು ಹಚ್ಚು” ಎಂದು ಹನುಮಿಯ ಮಾತಿಗೆ ಕ್ಯಾರೆ ಅನ್ನದೆ ಗಾಳಿಗೆ ತೂರಿದ. ಆಕೆ ಬುಡ್ಡಿ ಚಿಮಣಿಯ ಬತ್ತಿ ಏರಿಸ ರಂಗಜ್ಜನಿಗೆ ರೊಟ್ಟಿ ಹಚ್ಚಿ ಕೊಟ್ಟಳು.
ರಂಗಜ್ಜ ರೊಟ್ಟಿ ತಿಂದು, ಎಮ್ಮೆಗೆ ಮೇವು ಹಾಕಿ ಅಂಗಳದಲ್ಲಿ ಚಾಪೆ ಹಾಸಿ ಮುಗಿಲ ಕಡೆ ಮುಖ ಮಾಡಿ ಮಲಗಿದ. ಆಕಾಶದಲ್ಲಿ ಚುಕ್ಕಿ ಚಂದ್ರಮರ ರಾಸಲೀಲೆ ನಡೆದಿತ್ತು. ತಣ್ಣಗೆ ಗಾಳಿ ಚಾಮರ ಬೀಸತೊಡಗಿತ್ತು. ರಂಗಜ್ಜನ ಕಣ್ಣ ತುಂಬಾ ಕನಸುಗಳ ಮೆರವಣಿಗೆ ನಡೆದಿತ್ತು.
ಗುಡಿಸಲ ಒಳಗೆ ಮಲಗಿದ್ದ ಹನುಮಿ ಪದೆ ಪದೆ ಮಗ್ಗುಲ ಬದಲಿಸತೊಡಗಿದ್ದಳು. ಅದು ಹರೆಯದ ಹೆಣ್ಣೆಂಗಸು. ಅವಳ ವಾರಿಗೆಯ ಗೆಳತಿಯರು ಆಗಲೇ ಮದುವೆಯಾಗಿ ಮಕ್ಕಳನ್ನೂ ಕಂಡಿದ್ದಾರೆ. ಅವರು ಯುಗಾದಿ ಹಬ್ಬಕ್ಕೋ, ಪಂಚಮಿ ಹಬ್ಬಕ್ಕೊ ಊರಿಗೆ ಬಂದಾಗ ಅವರನ್ನು ನೋಡಿದ ಹನುಮಿಯ ಹೊಕ್ಕುಳದಾಳದಲ್ಲಿ ಚಿಟಮುಳ್ಳು ಆಡಿಸಿದಂತಾಗುತ್ತದೆ. ‘ನನ್ನ ಹಣೆಬರಹದಾಗ ಲಗ್ನ ಆಗೋದು ಬರದಿದ್ದಂಗಿಲ್ಲ..’ ಅಂತ ಅದೆಷ್ಟೋ ಸಲ ಪೇಚಾಡಿದ್ದಾಳೆ.
ಈ ಕಡೆ ರಂಗಜ್ಜನಿಗೆ ಕನಸಿನಲ್ಲಿ ಲಾಟರಿ ದೇವತೆ ಒಲಿದು ಹರ್ಷದ ಶಿಖರದ ತುತ್ತ ತುದಿಯಲ್ಲಿ ನಿಂತಿದ್ದಾನೆ. ಗುಡಿಸಲು ಮಾಯವಾಗಿ ಅಲ್ಲಿ ಬಣ್ಣದ ಮನೆ ತಲೆಯೆತ್ತಿ ನಿಂತಿದೆ. ಮಗಳ ಮದುವೆಯಲ್ಲಿ ಹೊಸ ಮಲ್ಲು ದೋತಿ ಉಟ್ಟು ಸಂಭ್ರಮದಿಂದ ಓಡಾಡುತ್ತಿದ್ದಾನೆ. ಇನ್ನೇನು ಮಗಳಿಗೆ ಅಕ್ಕಿ ಕಾಳು ಹಾಕಬೇಕು ಅನ್ನುವಷ್ಟರಲ್ಲಿ ನಿದ್ರಾದೇವತೆ ರಂಗಜ್ಜನೊಂದಿಗೆ ಮುನಿಸಿಕೊಂಡವಳಂತೆ ಓಟ ಕೀಳುತ್ತಾಳೆ.
ಮಂದಹಾಸ ಬೀರುತ್ತಾ ಎದ್ದ ರಂಗಜ್ಜ ಮಗಳಿಗೆ ಎಮ್ಮೆ ಹಾಲು ಹಿಂಡಲು ಅವಸರಿಸಿದ. ಆಕೆ ಚಮತು ಮಾಡಿ ಎಲ್ಡು ಸಿಲವಾರ ತಂಬಿಗೆ ತುಂಬಾ ಹಾಲು ಕರೆದಳು. ಹಾಲು ತೆಗೆದುಕೊಂಡು ನಿತ್ಯವೂ ಕೊಡುವ ಮನೆಗಳಿಗೆ ಹಾಲು ಹಾಕಿ,“ಈ ವಾರ ಮುಂಗಾಡನ ರೊಕ್ಕ ಕೊಡ್ರೀ. ಮನಾಗ ಮುಕ್ಕು ಜ್ವಾಳದ ಕಾಳಿಲ್ಲ. ಸಂತಿ ಮಾಡಬೇಕು. ಕಿರಾಣಿ ಅಂಗಡಿ ಬಾಕಿ ಹರೀಬೇಕು” ಅಂತ ಬುರುಡಿ ಬಿಟ್ಟ. ಅವರು ಹಾಲು ತೆಗೆದುಕೊಂಡು ರಂಗಜ್ಜನ ಆಣತಿಯಂತೆ ದುಡ್ಡು ಕೊಟ್ಟರು.
ರಂಗಜ್ಜ ಖುಷಿಯಿಂದ ಊರಗಲ ಮುಖ ಮಾಡಿಕೊಂಡು ಮನೆಗೆ ಬಂದ. ಹನುಮಿ ಯಾರದೊ ಹೊಲದಲ್ಲಿ ಕಳೆ ತೆಗೆಯಲು ಹೋಗಲು ಬುತ್ತಿ ಕಟ್ಟತೊಡಗಿದ್ದಳು. “ನೀನು ಹೊಲಕ್ಕ ಹೋಗು. ನಾನು ಪಟ್ಟಣಕ್ಕೆ ಹೋಗಿ ಲಾಟರಿ ತಗೊಂಡು ಬರ‍್ತೀನಿ. ಇಳಿ ಹೊತ್ತಿನ್ಯಾಗ ಒಂದೆರಡು ತಾಸು ಎಮ್ಮಿ ಮೇಸ್ತಿನಂತ. ಅಲ್ಲೇ ಬರುವಾಗ ತಲಿಮ್ಯಾಗ ಒಂದು ಹೊರಿ ಹಸೆ ಮೇವು ಹೊತುಗೊಂಡು ಬಾ” ಅಂದ.
‘ಅಪ್ಪ ನಿನಗ ತಿಳಿಯಾಕಿಲ್ಲ. ಆ ಲಾಟರಿ ಗಿಟರಿ ನಂಬಬ್ಯಾಡ. ಅವು ಮೋಸದಾಟ. ಕುಡಗೋಲು ಕುಂಬಳಕಾಯಿ ಎರಡು ನಿನ್ನ ಕೈಯಾಗ ಅದಾವು. ಹ್ಯಾಂಗ ಮಾಡ್ತಿಯೋ ಏನೋ. ನಿನ್ನ ಚಿತ್ತಕ್ಕ ಬಿಟ್ಟಿದ್ದು’ ಎಂದು ಆಕಿ ಹೊಲದ ಕಡೆ ಹೆಜ್ಜೆ ಬೆಳೆಸಿದಳು.
ಅವಳ ಮಾತಿಗೆ ಕ್ಯಾರೆ ಅನ್ನದ ರಂಗಜ್ಜ ಪಟ್ಟಣಕ್ಕೆ ಹೋಗಲು ಚಹಾದ ಅಂಗಡಿ ಮುಂದ ನಿಂತಿದ್ದ ಕೆಂಪು ಬಸ್ಸು ಹತ್ತಿದ. ಇಂವ ಪಟ್ಟಣಕ್ಕೆ ಹೋಗುವುದು ಕೆಲವರಿಗೆ ಅಚ್ಚರಿಯೆನಿಸಿತು. ಮನಬಿಚ್ಚಿ ಕೇಳಿಯೂ ಬಿಟ್ಟರು. ಸಂತೆ ಮಾಡಲು ಎಂದು ಹೇಳಿ ಗುಟ್ಟನ್ನು ಬಿಟ್ಟು ಕೊಡಲಿಲ್ಲ.
ರಂಗಜ್ಜ ಪಟ್ಟಣಕ್ಕೆ ಬಂದಾಗ ಬಿಸಿಲಿನ ಜಳ ರಣರಣ ಹೊಡೆಯತೊಡಗಿತ್ತು. ಪಟ್ಟಣದ ಬಜಾರು ಟಾರು ರಸ್ತೆಯ ತುಂಬಾ ಜನವೋ ಜನ. ಇವರೆಲ್ಲರೂ ಲಾಟರಿಕೊಳ್ಳಲು ಬಂದಿರಬೇಕೆಂದು ಊಹಿಸಿದ. ಲಾಟರಿ ಟಿಕೇಟು ಆಗಿ ಬಿಟ್ಟಾವು ಎಂಬ ಭಯದಿಂದ ಲಾಟರಿ ಅಂಗಡಿ ಹುಡುಕಲು ಸನ್ನದ್ಧಗೊಂಡ.
ಲಾಟರಿ ಮಾರುವ ಟ್ಯಾಕ್ಸಿ ಗಾಡಿಯೊಂದು ಮೈಕಿನಲ್ಲಿ ಅನೌನ್ಸು ಮಾಡುತ್ತ ರಂಗಜ್ಜನ ಕಡೆಗೇ ಬಂತು. ‘ಬಂಪರ್ ಲಾಟರಿ. ಇಂದೇ ಡ್ರಾ. ಹತ್ತು ರೂಪಾಯಿ ಟಿಕೇಟಿಗೆ ಒಂದು ಲಕ್ಷ. ಐವತ್ತು ರೂಪಾಯಿಗೆ ಒಂದು ಕೋಟಿ ರೂಪಾಯಿ ಡ್ರಾ ಇದೆ. ಅದೃಷ್ಟದ ಲಕ್ಷ್ಮೀ ನಿಮಗೆ ಒಲಿಯಲಿದ್ದಾಳೆ. ಖರೀದಿಸಿ. ಮರೆಯದೆ ಟಿಕೇಟಿನ ಜೊತೆಗೆ ಶ್ಯಾಂಪೂ ಪಡೆಯಿರಿ.’ ಎಂದು ಆ ಮೈಕು ಪಟ್ಟಣದ ಕಿವಿಯಲ್ಲಿ ಕೂಗತೊಡಗಿತ್ತು.
ರಂಗಜ್ಜ ಉತ್ತೇಜನಗೊಂಡ. ಲಾಟರಿ ಹೊಡೆದವನಂತೆ ಖುಷಿಗೊಂಡ. ಒಳ ಜೇಬಿನಿಂದ ಅರವತ್ತು ರೂಪಾಯಿ ತೆಗೆದು ಹತ್ತು ಮತ್ತು ಐವತ್ತು ರೂಪಾಯಿಯ ತಲಾ ಒಂದೊಂದು ಟಿಕೇಟು, ಎರಡು ಶ್ಯಾಂಪೂ ಪಾಕೇಟ್ ಪಡೆದುಕೊಂಡು ಹಿಗ್ಗಿನಿಂದ ಊರ ಕಡೆ ನಡೆದ.
ರಾತ್ರಿ ಗುಡಿಸಲದಲ್ಲಿ ಹನುಮಿ ಸೆಟಗೊಂಡು, ಆ ಎಲ್ಲ ಸಿಟ್ಟನ್ನು ಅರೆಯುತ್ತಿದ್ದ ಹಿಂಡಿಯ ಮೇಲೆ ತೀರಿಸಿಕೊಳ್ಳತೊಡಗಿದ್ದಳು. ‘ಹನುಮವ್ವ ನೋಡಿಲ್ಲಿ. ಟಿಕೇಟಿನ ಸಂಗಡ ಶ್ಯಾಂಪೂ ಕೊಟ್ಟಾರ. ಇವು ಮಲ್ಲಗಿ ಹೂವಿನಂಗ ಘಮ ಘಮ ಅಂತಾವಂತೆ. ಇನ್ನ ಲಾಟರಿಯಂತೂ ನನಗ ಹೊಡೆದ ಹೊಡೆಯುತ್ತಾ...’ಅಂತ ರಂಗಜ್ಜ ಅವಳ ಕೋಪವನ್ನು ಆರಿಸಲು ನೋಡಿದ.
ಹನುಮಿ ಖುಷಿಯಾಗಿ ಚೆಂಡು ಹೂವಿನಂತೆ ಮುಖ ಅರಳಿಸಿದಳು. ಅವಳು ಟಿ.ವಿ.ಯಲ್ಲಿ ಶ್ಯಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದ ಉದ್ದ ಕೇಶರಾಶಿಯ ಚೆಲುವೆಯರನ್ನು ಕಂಡು ಮತ್ಸರ ಪಟ್ಟಿದ್ದಳು. ಸಕ್ಕರಿ, ಚಾಪುಡಿ ತರಲು ಶೆಟ್ಟರ ಕಿರಾಣಿ ಅಂಗಡಿಗೆ ಹೋದಾಗ ಅಲ್ಲಿ ಇಳಿಬಿಟ್ಟಿದ್ದ ಶ್ಯಾಂಪೂ ಚೀಟುಗಳನ್ನು ನೋಡಿದ್ದಳು. ಆದರೆ ತರಲು ಅದ್ಯಾಕೋ ಹಿಂಜರಿಕೆ ಅನಿಸಿ ಶ್ಯಾಂಪೂ ತರುವುದಕ್ಕೆ ಎಳ್ಳುನೀರು ಬಿಟ್ಟಿದ್ದಳು. ಈಗ ತಾನು ಶ್ಯಾಂಪೂ ಹಚ್ಚಿಕೊಳ್ಳುವ ಭಾಗ್ಯವನ್ನು ಈ ಲಾಟರಿ ಕರುಣಿಸುತ್ತಿರುವುದನ್ನು ಸ್ವಾಗತಿಸಿದಳು. ಶ್ಯಾಂಪೂವಿನ ಘಮಕ್ಕೆ ಮನಸೋತ ಅವಳ ಮನಸಿನ ಹೊಲದ ತುಂಬಾ ಕನಸಿನ ಸಸಿಗಳು ಮೊಳಯತೊಡಗಿದ್ದವು.
ಇವತ್ತು ಎಂದಿಗಿಂತ ಬೇಗನೆ ಎದ್ದು ಕಸ ಮುಸುರೆ ಮಾಡಿದ ಹನುಮಿ ಜಳಕ ಮಾಡಲು ಒಲೆಯ ಮೇಲೆ ಗಡಗಿಯಲ್ಲಿ ನೀರು ಕಾಯಿಸಲು ಇಟ್ಟಳು. ಅವಳಿಗೆ ಶ್ಯಾಂಪೂ ಹಚ್ಚಿಕೊಳ್ಳುವ, ಅದರ ಘಮ ಸವಿಯುವ ಕುತೂಹಲ ಒಳಗೊಳಗೆ ಹೆಡೆಯಾಡತೊಡಗಿತ್ತು.
ನಿನ್ನೆ ಕೊಂಡಿರುವ ಲಾಟರಿ ಕತೆ ಏನಾಗಿದೆ ಅನ್ನುವುದನ್ನು ಮನಗಾಣಲು ರಂಗಜ್ಜ ಪತ್ರಿಕೆ ನೋಡಲು ಚಹಾದಂಗಡಿ ಕಡೆ ಹೋಗಲು ಮುಂದಾದ. ಹನುಮಿ ತಲೆಗೆ ನೀರು ಹನಿಸಿಕೊಂಡು ಅಂಗೈಯಲ್ಲಿ ಶ್ಯಾಂಪೂ ಹಾಕಿಕೊಂಡು ಕೂದಲಿಗೆ ಸವರಿದಾಗ ಏಳುವ ನೊರೆಯಾದ ಬುರುಗು ಅವಳನ್ನು ಆಹ್ಲಾದಗೊಳಿಸಿತ್ತು. ಅದ್ಯಾಕೊ ಎದುರು ಮನೆಯ ದನ ಕಾಯುವ ಸುಬ್ಬ ನೆನಪಾದ. ಅವಳು ಮೈ ತುಂಬಾ ಮಾದಕತೆ ತುಂಬಿಕೊಂಡು ಮಧುರ ಯಾತನೆಯಿಂದ ನರಳತೊಡಗಿದಳು. ಮೊದಲ ಮಳೆಗೆ ಸಿಕ್ಕ ಮಣ್ಣಿನ ಹೆಂಟೆಯಂತೆ ಅರಳತೊಡಗಿದಳು. ‘ಆ’ ಭಾಗ್ಯ ತನಗೆ ಅದ್ಯಾವಗ ಒಲಿಯುವುದೊ ಎಂದು ಮನಸಲ್ಲಿ ಮಂಡಿಗೆ ತಿನ್ನುತ್ತಾ ವಿರಹ ವೇದನೆಯಿಂದ ಬಳಲತೊಡಗಿದಳು.
ರಂಗಜ್ಜ, ಪಂಚಾಯಿತಿ ಸಿಪಾಯಿ ಸಂಗನಿಗೆ ಲಾಟರಿಕೊಟ್ಟು ಪತ್ರಿಕೆಯಲ್ಲಿ ತನ್ನ ನಂಬರು ಹತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಲು ನೋಡಿದ. ಚಹಾದಂಗಡಿಯಲ್ಲಿ ನೆರೆದಿದ್ದ ಜನರೆಲ್ಲರೂ ಕುತೂಹಲದಿಂದ ಅದನ್ನೆ ದಿಟ್ಟಿಸತೊಡಗಿದ್ದರು. ಸಂಗ ಹುಡುಕಿ ನೋಡಿದ. ಆ ನಂಬರ್ ಎಲ್ಲೂ ಕಾಣುತ್ತಿಲ್ಲ. ರಂಗಜ್ಜ ಪೇಚು ಮಾರಿ ಹಾಕಿಕೊಂಡು ಗುಡಿಸಲು ಕಡೆ ಹೆಜ್ಜೆ ಕಿತ್ತ.
ರಂಗಜ್ಜ ಹಾಲು ಮಾರಿದ ಹಣವನ್ನು ನೀರಿನಂತೆ ಲಾಟರಿಗೆ ಖರ್ಚು ಮಾಡತೊಡಗಿದ. ಲಾಟರಿ ಲಕ್ಷ್ಮೀ ಇನ್ನೂ ಇವನಿಗೆ ಒಲಿದಿಲ್ಲ. ರಂಗಜ್ಜ ಮಾತ್ರ ನಿತ್ಯವೂ ಪ್ಯಾಟೆಗೆ ಹೋಗಿ ಲಾಟರಿ ತರುವುದನ್ನು ವ್ರತದಂತೆ ಪಾಲಿಸತೊಡಗಿದ. ಹನುಮಿ ತಪ್ಪದೆ ದಿನವೂ ಶ್ಯಾಂಪೂ ಹಚ್ಚಿಕೊಂಡು ಜಳಕ ಮಾಡುತ್ತಾಳೆ. ತಲೆಗೆ ಹನಿಸಿಕೊಂಡಾಗ ಬೀಳುತ್ತಿದ್ದ ನೀರಲ್ಲಿ ಸಣ್ಣಗೆ ಜಿನುಗುತ್ತಿದ್ದ ಅವಳ ಕಣ್ಣೀರು ಯಾರಿಗೂ ಕಾಣದೆ ಹೋದವು.

Sunday, September 6, 2009
ಉಡುಪಿ: ಆಡು ಸಾಕಣೆಗೊಂದು ಮಾದರಿ: ‘ನಡೂರು ಆಡು ಸಾಕಾಣಿಕಾ ಕೇಂದ್ರ’
ಚಿತ್ರ-ವರದಿ: ಬಿ.ಬಿ.ಶೆಟ್ಟಿಗಾರ್, ಉಡುಪಿನಾಡಿನ ಮಾಂಸಾಹಾರ ಪ್ರಿಯರ ಬೇಡಿಕೆಗಳನ್ನು ಪೂರೈಸಲು ಇಂದು ಗ್ರಾಮ ಗ್ರಾಮಗಳ ಲ್ಲೊಂದರಂತೆ ‘ಕೋಳಿ ಫಾರ್ಮ್’ಗಳು ಕಂಡು ಬಂದರೂ ಬಹುಬೇಡಿಕೆಯಲ್ಲಿರುವ ಅಡಿನ ಮಾಂಸಗಳಿಗಾಗಿ ಉತ್ತಮ ಗುಣಮಟ್ಟದ ಆರೋಗ್ಯಕರ ಆಡುಗಳು ಲಭಿಸುವುದು ದುರ್ಲಭ. ಇವುಗಳನ್ನು ಸಾಂಪ್ರದಾಯಿಕವಾಗಿ ನೊಂದಾಯಿಸಿಕೊಳ್ಳದ ಮೂಲಗಳಿಂದಲೇ ಪಡೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಆಡು ಸಾಕಾಣಿಕ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಮೂಡಿಸುವಲ್ಲಿ ‘ನಡೂರು ಆಡು ಸಾಕಾಣಿಕಾ ಕೇಂದ್ರ’ (ನಡೂರು ಗೋಟ್ ಫಾರ್ಮ್) ಕಳೆದ ಐದು ವರ್ಷಗಳಿಂದ ಸದ್ದಿಲ್ಲದೇ ಶ್ರಮಿಸುತ್ತಿದೆ.ಉಡುಪಿಯಿಂದ ಉತ್ತರಕ್ಕೆ 29 ಕಿ.ಮೀ. ದೂರದಲ್ಲಿ ಹಾಗೂ ಬ್ರಹ್ಮಾವರದಿಂದ 12 ಕಿ.ಮೀ. ದೂರದಲ್ಲಿ ಬಾರಕೂರು-ಕೂರಾಡಿ ರಸ್ತೆಯಲ್ಲಿರುವ ಅತ್ಯಂತ ಗ್ರಾಮೀಣ ಪ್ರದೇಶವಾದ ನಡೂರಿನ 65 ಎಕರೆ ವಿಶಾಲ ಪ್ರದೇಶದಲ್ಲಿ ಈ ಆಡು ಸಾಕಾಣಿಕಾ ಕೇಂದ್ರವಿದೆ. ಸುಮಾರು ಒಂದು ಲಕ್ಷ ಚದರ ಅಡಿ ವಿಶಾಲ ಸ್ಥಳಾವಕಾಶವಿರುವ ನಾಲ್ಕು ಬೃಹತ್ ಕೊಟ್ಟಿಗೆಗಳಲ್ಲಿ ಧಾರಾಳವಾಗಿ ಬರುವ ಶುದ್ಧ ಗಾಳಿ-ಬೆಳಕಿನ ಪರಿಸರದಲ್ಲಿ ಸದ್ಯಕ್ಕೆ ೨,೫೦೦ಕ್ಕೂ ಅಧಿಕ ಆಡುಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲ್ಲಿ ಬೆಳೆಸಲಾಗುತ್ತಿದೆ.೨೦೦೨ರ ಸುಮಾರಿಗೆ ಆಡುಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಬೆಳೆಸುವ ಕನಸುಗಳೊಂದಿಗೆ ಮುಂಬಯಿಯಿಂದ ನಡೂರಿಗೆ ಬಂದ ಜಯಕರ ಕೈರನ್ನ (೬೯) ಇಂದು ಕನಸುಗಳೆಲ್ಲಾ ನನಸಾದ ತೃಪ್ತಿಯನ್ನು ಹೊಂದಿದ್ದಾರೆ. ೧೯೫೮ರಿಂದ ಮುಂಬಯಿಯಲ್ಲಿದ್ದ ಮೂಲತ: ಕಾಪುವಿನವರಾದ ಜಯಕರ ಕೈರನ್ನ, ೨೦೦೪ರಲ್ಲಿ ಮುಂಬಯಿ ತೊರೆದು ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸಿಕೊಂಡರು. ೧೨೦ ಆಡುಗಳೊಂದಿಗೆ ಆರಂಭಗೊಂಡ ಈ ಫಾರ್ಮ್ ಇಂದು ಕೋಟ್ಯಾಂತರ ರೂ.ವಹಿವಾಟಿನ ಕೇಂದ್ರವಾಗಿ ಬೆಳೆದು ನಿಂತಿದೆ. ಇಂದು ಅವರ ಇಬ್ಬರು ಮಕ್ಕಳಾದ ಸ್ಟಿಫನ್ ಕೈರನ್ನ ಹಾಗೂ ಸಿಡ್ನಿ ಕೈರನ್ನ ಉದ್ದಮಿಯಲ್ಲಿ ಅವರಿಗೆ ಸಹಕರಿಸುತ್ತಿದ್ದಾರೆ.ನಡೂರು ಫಾರ್ಮ್‌ನಲ್ಲಿ ಆಡುಗಳನ್ನು ಕ್ರಾಂತಿಕಾರಿ ಮಾದರಿಯಲ್ಲಿ ಕೊಟ್ಟಿಗೆಯಲ್ಲಿ ಮೇಯಿಸಿ ಇವುಗಳನ್ನು ಸಾಕಲಾಗುತ್ತಿದೆ. ಇಂದು ಆಡು ಸಾಕಾಣಿಕೆಯನ್ನು ಒಂದು ಉದ್ದಿಮೆಯಾಗಿ ಪರಿಗಣಿಸಲಾಗುತಿದ್ದು, ಈ ಮಾದರಿಯ ಸಾಕಾಣಿಕೆಗೆ ಅನೇಕ ಪಶುಪಾಲಕರ ಪ್ರೋತ್ಸಾ ಹವೂ ದೊರೆತಿದೆ ಎಂದವರು ಹೇಳುತ್ತಾರೆ.ನಡೂರು ಫಾರ್ಮ್‌ನಲ್ಲಿ ಇಂದು ದೇಶ-ವಿದೇಶಗಳ ೨೦ಕ್ಕೂ ಅಧಿಕ ತಳಿಗಳಿವೆ. ಅವುಗಳನ್ನು ವಂಶಾಭಿವೃದ್ಧಿಗೆ ಹಾಗೂ ಮಾಂಸಕ್ಕಾಗಿ ಉಪಯೋಗಿಸಲಾಗುತ್ತಿದೆ. ಇಲ್ಲಿನ ಆಡುಗಳಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಾತ್ರವಲ್ಲದೇ, ಜರ್ಮನಿ ಹಾಗೂ ಕೊಲ್ಲಿ ರಾಷ್ಟ್ರಗಳಿಂದಲೂ ಬೇಡಿಕೆಗಳು ಬರುತ್ತಿವೆ. ಮುಂದಿನ ಬಕ್ರೀದ್ ಹಬ್ಬಕ್ಕಾಗಿ ೫೦೦ ಆಡುಗಳನ್ನು ಪೂರೈಸಲು ಈಗಾಗಲೇ ಬೇಡಿಕೆ ಬಂದಿದೆ ಎಂದು ಜಯಕರ ಕೈರನ್ನ ಹೇಳುತ್ತಾರೆ.ಕರ್ನಾಟಕದ ಜನರಿಗಾಗಿ ಇಲ್ಲೇ ಆಡುಗಳನ್ನು ಬೆಳೆಸುವುದು ಈ ಕೇಂದ್ರದ ವೈಶಿಷ್ಯವಾಗಿದೆ. ರಾಜ್ಯದ ಎಲ್ಲಾ ೨೯ ಜಿಲ್ಲೆಗಳಲ್ಲೂ ಸಣ್ಣ ಪ್ರಮಾಣದ ಆಡು ಸಾಕಾಣಿಕಾ ಕೇಂದ್ರಗಳನ್ನು ಸ್ಥಾಪಿಸಲು ಸಹಕರಿಸುವುದು ಈ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಸ್ಟಿಫನ್ ಮತ್ತು ಸಿಡ್ನಿ ಕೈರನ್ನ ಹೇಳುತ್ತಾರೆ.ಈ ಕೇಂದ್ರದಲ್ಲಿ ಆಡುಗಳನ್ನು ಕ್ರಮಬದ್ಧವಾಗಿ ಹಾಗೂ ಶುಚಿಕರ ವಾತಾವರಣದಲ್ಲಿ ಸಾಕಲಾಗುತ್ತದೆ. ನಿಯತಕಾಲಿಕ ಆರೋಗ್ಯ ತಪಾಸಣೆ ಹಾಗೂ ಮುಂಜಾಗ್ರತಾ ಲಸಿಕೆಗಳಿಂದ ಆಡುಗಳನ್ನು ಆರೋಗ್ಯಕರ ಹಾಗೂ ರೋಗರಹಿತ ಸ್ಥಿತಿಯಲ್ಲಿ ಕಾಪಾಡಲಾಗುತ್ತದೆ. ಆಡುಗಳಿಗೆ ಬೇಕಾಗುವ ಮೇವನ್ನು ಕೇಂದ್ರದಲ್ಲೇ ಬೆಳೆದು ಒದಗಿಸಲಾಗುತ್ತದೆ. ಆಡುಗಳಿಗೆ ಪ್ರೋಟೀನುಯುಕ್ತ ಹಾಗೂ ಪೌಷ್ಠಿಕಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ ಎಂದು ಜಯಕರ ಕೈರನ್ನ ವಿವರಿಸುತ್ತಾರೆ.ಆಡುಗಳಲ್ಲಿ ಗಂಡು ಆಡು -ಹೋತ-ಗಳಿಗೆ ಬೇಡಿಕೆ ಹೆಚ್ಚು. ಇಲ್ಲಿನ ಹೋತಗಳಲ್ಲಿ ಕೆಲವು ೮೦ರಿಂದ ೧೦೫ ಕೆ.ಜಿಯವರೆಗೂ ತೂಗುತ್ತಿವೆ ಎಂದು ಕೈರನ್ನ ಹೆಮ್ಮೆಯಿಂದ ಹೇಳುತ್ತಾರೆ. ಹೆಣ್ಣು ಆಡೊಂದಕ್ಕೆ ಕನಿಷ್ಠ ನಾಲ್ಕು ಸಾವಿರ ರೂ. ದರವಿದ್ದರೆ, ಗಂಡು ಆಡಿನ ಕನಿಷ್ಠ ಬೆಲೆ ಹತ್ತು ಸಾವಿರ ರೂ. ಎಂದು ತಿಳಿಸಿದರು.ಆಡು ಸಾಕಾಣಿಕೆಯಲ್ಲಿ ಆಸಕ್ತಿ ಇರುವ ದೊಡ್ಡ, ಸಣ್ಣ ಹಾಗೂ ಅತೀಸಣ್ಣ ರೈತರಿಗೆ ಉತ್ತಮ ಗುಣಮಟ್ಟದ ಆಡುಗಳನ್ನು ಕೊಳ್ಳಲು ನಡೂರು ಆಡು ಸಾಕಾಣಿಕಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಯಕರ ಹೇಳುತ್ತಾರೆ. ಆಡು ಸಾಕಾಣಿಕೆಗೆ ಬೇಕಾದ ಸಲಹೆ-ತರಬೇತಿಯನ್ನು ಸ್ವಾನುಭವದಿಂದ ನಾವು ನೀಡುತ್ತೇವೆ ಎಂದರು. ಆಡು ಸಾಕಾಣಿಕೆಯ ಇತರ ಉತ್ಪನ್ನಗಳಾದ ಮಾಂಸ, ಹಾಲು, ಗೊಬ್ಬರ ಹಾಗೂ ಚೀಸ್ ಇವುಗಳ ಸಂಸ್ಕರಣೆಗೆ ಸಂಬಂಧಿತ ಘಟಕಗಳ ಸ್ಥಾಪನೆಗೆ ಸಹ ಅವಕಾಶಗಳಿವೆ ಎಂದವರು ವಿವರಿಸುತ್ತಾರೆ. ಆಡಿನ ಹಾಲು ಅತ್ಯುತ್ತಮ ಪೌಷ್ಠಿಕ ಆಹಾರ. ಇದು ಗಾಂಧೀಜಿಯವರ ಆಹಾರ ಕೂಡಾ ಆಗಿತ್ತು. ಸದ್ಯಕ್ಕೆ ಆರೋಗ್ಯಕರವಾದ ಆಡಿನ ಹಾಲನ್ನು ಈ ಫಾರ್ಮಿನಲ್ಲಿ ಬಳಸುತ್ತಿಲ್ಲ. ಅದನ್ನು ಸಂಪೂರ್ಣವಾಗಿ ಮರಿಗಳಿಗೆ ಕುಡಿಯಲು ಬಿಡಲಾಗುತ್ತಿದೆ. ಮುಂದೆ ಆಡಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಸ್ಥಾಪಿಸಿ ಜನರಿಗೆ ಅವುಗಳನ್ನು ಪರಿಚಯಿಸುವ ಯೋಜನೆಯೂ ಇದೆ ಎಂದು ಸ್ಟಿಫನ್ ಮತ್ತು ಸಿಡ್ನಿ ಹೇಳುತ್ತಾರೆ. ಈ ಫಾರ್ಮ್‌ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ -www.nadurgoatfarm.com- ಹಾಗೂ ಈಮೈಲ್- nadurgoatfarm@gmail.com- ಅನ್ನು ಸಂಪರ್ಕಿಸಬಹುದು.
Subscribe to:
Posts (Atom)
IMP....web.jpg)