| ಸಾವಯವದಲ್ಲಿ ಬಂಪರ್ ಶುಂಠಿ (prajavani-november-4-2010) | |||
| ಡಾ. ವಿನಯ್.ಬಿ. ರಾಘವೇಂದ್ರ | |||
| ಶುಂಠಿ ಬೆಳೆಯುವ ರೈತರು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಹೇರಳವಾಗಿ ಬಳಸುತ್ತಾರೆ. ಕುಶಾಲನಗರ ತಾಲ್ಲೂಕಿನ ರೈತರೊಬ್ಬರು ಸಾವಯವ ಬೇಸಾಯ ಪದ್ಧತಿಯಲ್ಲಿ ಅರ್ಧ ಎಕರೆಯಲ್ಲಿ ಸುಮಾರು 220 ಚೀಲ ಶುಂಠಿ ಬೆಳೆದಿದ್ದಾರೆ. ಈ ಶುಂಠಿಗೆ ಹೆಚ್ಚು ಬೆಲೆ ಸಿಕ್ಕಿದೆ! | |||
|
| |||
Sunday, November 14, 2010
Monday, October 11, 2010
ಅಯೋಧ್ಯೆ: ಕಾನೂನಿನ ಮೇಲೆ ಧರ್ಮದ ಸವಾರಿ
ಸಿದ್ಧಾರ್ಥ ವರದರಾಜನ್
(ಕೃಪೆ: ದಿ ಹಿಂದೂ)
ಹೊಸದಿಲ್ಲಿ, ಆ. ೨: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ‘ಹಿಂದೂಗಳ ಶ್ರದ್ಧೆ ಹಾಗೂ ನಂಬಿಕೆ’ಯನ್ನೇ ಆಧಾರವಾಗಿಟ್ಟುಕೊಂಡು, ದುರ್ಬಲ ಸಾಕ್ಷಗಳನ್ನು ಉಲ್ಲೇಖಿಸಿ ತೀರ್ಪು ನೀಡಿದೆ. ಈ ತೀರ್ಪು ಇದೀಗ ಭಾರತದಲ್ಲಿ ಹೊಸ ನ್ಯಾಯಾಂಗ ಇತಿಹಾಸವನ್ನು ಸೃಷ್ಟಿಸಿದೆ.
ನ್ಯಾಯಾಲಯದ ವಿವೇಚನಾ ರಹಿತ ಈ ತೀರ್ಪಿನಿಂದಾಗಿ ಇಂತಹುದೇ ರೀತಿಯ ರಾಜಕೀಯ ಚಳವಳಿ ಹುಟ್ಟು ಹಾಕಲು ನೇರವಾಗಿ ಎಡೆ ಮಾಡಿಕೊಟ್ಟಿದೆ. ಕಾನೂನು ಮತ್ತು ಭಾರತ ಸಂವಿಧಾನವನ್ನು ಉಲ್ಲಂಘಿಸಲು ರಾಜಕೀಯ ಚಳವಳಿಗಳು ನೇರವಾಗಿ “ನಂಬಿಕೆ” ಮತ್ತು “ಶ್ರದ್ಧೆ”ಯನ್ನು ಆಧಾರವನ್ನಾ ಗಿಟ್ಟುಕೊಳ್ಳಲು ಅನುಕೂಲ ಮಾಡಿಕೊಟ್ಟಿರುವುದು ವಿಪರ್ಯಾಸವಾಗಿದೆ.
೫೦೦ ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಧ್ವಂಸಗೊಳಿಸಿ, ೧೯೯೨ರಲ್ಲಿ ಇಂತಹುದೇ ಉಲ್ಲಂಘನೆ ನಡೆದಿದೆ. ಅಕ್ರಮ ಪ್ರವೇಶ, ಧ್ವಂಸದ ಅಪರಾಧಗಳಿಗೆ ಭಾರತದ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯು ಅಂದು ಮೂಕ ಸಾಕ್ಷಿಯಾಯಿತು. ಕಾನೂನನ್ನು ಕೈಗೆತ್ತಿಕೊಂಡವರ “ಶ್ರದ್ಧೆ” ಮತ್ತು “ನಂಬಿಕೆ”ಯನ್ನು ಕಾನೂನು ಬದ್ಧಗೊಳಿಸುವ ಮೂಲಕ ೧೮ ವರ್ಷಗಳ ಬಳಿಕ ದೇಶವು ಮತ್ತೊಂದು ಪಾಪ ಮಾಡಿದೆ.
ಬಾಬರಿ ಮಸೀದಿ-ರಾಮ ಜನ್ಮ ಭೂಮಿ ಭೂ ವಿವಾದ ಪ್ರಕರಣದ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ. ಆದರೆ ನ್ಯಾಯಮೂರ್ತಿ ಎಸ್. ಯು. ಖಾನ್, ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಧರ್ಮರ ಶರ್ಮಾ ಮೂವರೂ ಒಂದು ಪ್ರಮುಖ ಅಂಶವನ್ನು ಗುರುತಿಸಿದ್ದಾರೆ.
“ಹಿಂದೂಗಳ ಶ್ರದ್ಧೆ ಮತ್ತು ನಂಬಿಕೆಯ”ಯ ಪ್ರಕಾರ ಬಾಬರಿ ಮಸೀದಿಯ ಕೇಂದ್ರ ಗೋಪುರದಲ್ಲಿ ೧೯೪೯ರಲ್ಲಿ ರಾಮಲಲ್ಲಾನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿರುವ ಸ್ಥಳವು ಶ್ರೀ ರಾಮನ ಜನ್ಮ ಭೂಮಿ ಎಂಬುದಾಗಿ ನಂಬಲಾಗುತ್ತದೆ ಎಂದು ವಿವಾದಿತ ಭೂಮಿಯ ಹಿಂದೂ ದಾವೆದಾರರು ಪ್ರತಿಪಾದಿಸು ತ್ತಿರುವುದಾಗಿ ಮೂವರು ನ್ಯಾಯಾಧೀಶರೂ ಗುರುತಿಸಿದ್ದಾರೆ.
ಬಾಬರಿ ಮಸೀದಿಯ ಕೇಂದ್ರ ಗೋಪುರದ ಪ್ರದೇಶವು ರಾಮ ಜನ್ಮ ತಳೆದ ಭೂಮಿಯೆಂದು ಪ್ರತಿಯೊಬ್ಬ ಹಿಂದೂವೂ ನಂಬು ತ್ತಾನೆ ಎನ್ನಲಾಗಿದೆ. ಆದರೆ ನ್ಯಾಯಾಲಯವು ಕಾನೂನು ಕಾರಣ ಗಳು ಮತ್ತು ಸತ್ಯಾಂಶಗಳನ್ನು ಆಧಾರವಾಗಿಟ್ಟುಕೊಳ್ಳು ವುದಕ್ಕೆ ಹೆಚ್ಚು ಆದ್ಯತೆ ನೀಡುವುದನ್ನು ಹೊರತಾಗಿಸಿ, ಧರ್ಮ ಶಾಸ್ತ್ರಕ್ಕೆ ಹೇಗೆ ಹೆಚ್ಚಿನ ಆದ್ಯತೆ ನೀಡಿತು ಎಂಬ ಪ್ರಶ್ನೆಯೊಂದು ಉದ್ಭವಿಸಿದೆ.ತುಳಸಿದಾಸ್, ಅಯೋಧ್ಯೆಯಲ್ಲಿ ೧೬ನೆ ಶತಮಾನದಲ್ಲಿ ರಾಮಚರಿತ ಮಾನಸ ಗ್ರಂಥವನ್ನು ರಚಿಸಿದ್ದಾರೆ. ಆದರೆ ಇದೀಗ ಐದು ಶತಮಾನಗಳ ಬಳಿಕ ನ್ಯಾಯಾಲಯವು ಸ್ಪಷ್ಟವಾಗಿ ಗುರುತಿಸಿರುವ ಪ್ರದೇಶವು ರಾಮ ಜನ್ಮ ಭೂಮಿ ಎಂದು ತುಳಸಿದಾಸ್ ತನ್ನ ಗ್ರಂಥದಲ್ಲಿ ಎಲ್ಲೂ ತಿಳಿಸಿಲ್ಲ.
“ಜನ್ಮ ಸ್ಥಾನ”ಕ್ಕೆ “ಮುಕ್ತಿ” ನೀಡುವುದಕ್ಕಾಗಿ ಬಿಜೆಪಿ ಮತ್ತು ವಿಎಚ್‌ಪಿ ೧೯೮೦ರ ದಶಕದಲ್ಲಿ ರಾಜಕೀಯ ಹೋರಾಟ ಆರಂಭಿಸಿದ ಬಳಿಕ ಇದೀಗ ನ್ಯಾಯಾಲಯವು “ಶ್ರದ್ಧೆ ಮತ್ತು ನಂಬಿಕೆ”ಯ ಮಾತುಗಳನ್ನಾಡುತ್ತಿದೆ.
ಭಾರತದಲ್ಲಿ ಎಲ್ಲ ವಿಷಯಗಳಲ್ಲೂ ನಂಬಿಕೆಗೆ ಪ್ರಧಾನ ಸ್ಥಾನವಿದೆ. ಆದರೆ ಕಾನೂನು ನಿರ್ವಹಣೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ನಂಬಿಕೆ ಮುಖ್ಯ ಆಧಾರವಾಗದು. ಮಾತ್ರವಲ್ಲದೆ ಚರಿತ್ರೆಯ ತಪ್ಪುಗಳೂ ಇಂದಿನ ನ್ಯಾಯ ನಿರ್ಧಾರಕ್ಕೆ ಆಧಾರವಾಗುವುದಿಲ್ಲ.
ಬಾಬರಿ ಮಸೀದಿ ಪ್ರದೇಶದಲ್ಲಿ ಹಿಂದೂ ಮಂದಿರವಿತ್ತೇ ಎಂಬ ಕುರಿತಾದ ಪ್ರಶ್ನೆಗೆ ಸಂಬಂಧಿಸಿ ೧೯೯೩ರಲ್ಲಿ ನರಸಿಂಹ ರಾವ್ ಸರಕಾರವು ಸುಪ್ರೀಂ ಕೋರ್ಟ್‌ಗೆ ಮಾಡಿದ್ದ ಮನವಿಗೆ ಉತ್ತರಿಸಲು ಸರ್ವೋಚ್ಚ ನ್ಯಾಯಾಲಯವು ಹಿಂದೇಟು ಹಾಕಿತ್ತು. ಈ ಸಂಬಂಧ ಉತ್ತರಿಸುವುದರಿಂದ ಸುಪ್ರೀಂ ಕೋರ್ಚ್ ಬುದ್ಧಿವಂತಿಕೆಯಿಂದ ನುಣುಚಿಕೊಂಡಿತ್ತು. ಆದರೂ ಹೈಕೋರ್ಟ್ ಮಾತ್ರ ಭೂ ಒಡೆತನಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧವಿರದ ಪ್ರಶ್ನೆಗಳನ್ನು ಕಲೆ ಹಾಕಿ ತೀರ್ಪು ನೀಡಿದೆ.
“ಹಿಂದೂ ಮಂದಿರವಿತ್ತೆನ್ನಲಾದ ಪ್ರದೇಶದಲ್ಲಿ ಅದನ್ನು ನಾಶಪಡಿಸಿ ಪ್ರಸ್ತುತ ಕಟ್ಟಡ ನಿರ್ಮಿಸಲಾಗಿದೆಯೇ?” ಎಂಬುದು ನ್ಯಾಯಾಲಯ ಹುಟ್ಟು ಹಾಕಿರುವ ಪ್ರಶ್ನೆಗಳಲ್ಲೊಂದಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತಾಣದಲ್ಲಿ ಉತ್ಖನನ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ೨೦೦೩ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ನಡೆಸಲಾಯಿತು. ಹೀಗಾಗಿ ಅಲ್ಲಿ “ಹಿಂದೂ ಧಾರ್ಮಿಕ ಕಟ್ಟಡ”ವಿದ್ದ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯು ವರದಿ ನೀಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅದನ್ನು ಹೊರತಾಗಿಸಿಯೂ ಆ ವರದಿಯ ಬಗ್ಗೆ ಹಲವಾರು ಇತಿಹಾಸಕಾರರು ಮತ್ತು ಪುರಾತತ್ವ ಶಾಸ್ತ್ರಜರಿಗೆ ಭಿನ್ನಾಭಿಪ್ರಾಯವಿದೆ.
ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಯನ್ನು ಹೊಂದಿರುವ ಭಾರತದ ಭೂ ವ್ಯಾಪ್ತಿಯಲ್ಲಿ ಹಲವಾರು ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸುವ ಮೊದಲು ಅದಕ್ಕೂ ಮೊದಲು ಅಲ್ಲಿದ್ದ ಕಟ್ಟಡಗಳನ್ನು ನಾಶ ಪಡಿಸಿಯೇ ನಿರ್ಮಿಸಲಾಗಿದೆ.
ಬಹುತೇಕ ಬೌದ್ಧ ವಿಹಾರಗಳಲ್ಲಿ ಹಿಂದೂ ಮಂದಿರಗಳನ್ನು ನಿರ್ಮಿಸಲಾಗಿದೆ. ಮಂದಿರಗಳನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಗಳನ್ನು ಒಡೆದು ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ೧೬ನೆ ಶತಮಾನದಲ್ಲಿ ಮಂದಿರವನ್ನು ಒಡೆದು ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದ್ದರೂ, ಅದಕ್ಕೆ ೨೧ನೆ ಶತಮಾನದಲ್ಲಿ ಯಾವ ಕಾನೂನು ಸಮರ್ಥನೆ ಇರಲು ಸಾಧ್ಯ? ಆಸ್ತಿ ವಿವಾದವನ್ನು ಇತ್ಯರ್ಥಗೊಳಿಸಲು ಇಂತಹ ಧ್ವಂಸಗಳೇ ಆಧಾರವಾದರೆ, ಇದು ಎಲ್ಲಿಗೆ ಹೋಗಿ ನಿಲ್ಲಬಹುದು? ವಾರಣಾಸಿಯಲ್ಲಿನ ಗ್ಯಾನ್‌ವಪಿ ಮಸೀದಿಯಲ್ಲಿ ಹಿಂದೂ ಮಂದಿರದ ಅವಶೇಷಗಳಿವೆ. ಮೂಲತ: ಅದೊಂದು ವಿಶ್ವನಾಥ ಮಂದಿರವೆಂದು ವಾದಿಸಲಾಗುತ್ತಿದೆ.
ತಮಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿರುವ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಬಹುತೇಕ “ಹಿಂದೂ”ಗಳ “ನಂಬಿಕೆ”ಯಾಗಿದೆ. ಬಾಬರಿ ಮಸೀದಿಯ ಧ್ವಂಸಕ್ಕೆ ಸಂಬಂಧಿಸಿ ಸೃಷ್ಟಿಸಲಾದ ಚಳವಳಿಯು ಭಾರತದಲ್ಲಿ ಸುಲಭವಾಗಿ ಅಧಿಕಾರಕ್ಕೆ ಬರಲು ಮತ್ತು ತೀವ್ರಗತಿಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ರಾಜಕೀಯ ಪಕ್ಷಗಳಿಗೆ ಹಿಂದೆಂದೂ ಕಂಡರಿಯದ ಮಾರ್ಗವಾಗಿತ್ತು.
ಬಾಬರಿ ಮಸೀದಿಯ ಅಡಿಯಲ್ಲಿ ಮಂದಿರವಿತ್ತೆಂಬ ಭಾರತೀಯ ಪುರಾತತ್ವ ಇಲಾಖೆಯ ದೋಷಪೂರಿತ ವರದಿಯನ್ನು ಊಹೆಯ ಆಧಾರದಲ್ಲಿ ನಿರ್ಮಿಸಲಾಗಿದೆಯೇ ಹೊರತು, ಯಾವುದೇ ವೈಜ್ಞಾನಿಕ ಆಧಾರದಲ್ಲಿ ಅಲ್ಲ. ಭಾರ ತೀಯ ಪುರಾತತ್ವ ಇಲಾಖೆಯಾಗಲೀ ಅಥವಾ ಇತರ ಯಾವುದೇ ತಜ್ಞರಾಗಲೀ ಈ ಕುರಿತಾದ ವೈಜ್ಞಾನಿಕ ವಿವರಣೆ ಗಳನ್ನು ನೀಡಿಲ್ಲ. ಮಂದಿರವನ್ನು ಧ್ವಂಸಗೊಳಿಸಿದ ಬಳಿಕ ಮಸೀದಿ ಯನ್ನು ನಿರ್ಮಿಸಲಾಗಿದೆ ಎಂದು ಮೂವರು ನ್ಯಾಯಾಧೀಶರ ಪೈಕಿ ಇಬ್ಬರು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
೧೯ನೆ ಶತಮಾನಕ್ಕೆ ಮುನ್ನ ಆ ಸ್ಥಳದ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ, ಆನಂತರ ಈ ವಿವಾದಿತ ತಾಣದಲ್ಲಿ ಹಿಂದೂ ಮತ್ತು ಮುಸ್ಲಿಮರು ಆರಾಧಿಸುತ್ತಿದ್ದ ಬಗ್ಗೆ ನಮಗೆ ತಿಳಿದಿದೆ.
ಮುಸ್ಲಿಮರು ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಹಿಂದೂಗಳು ರಾಮ ಚಬೂತ್ರದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಅವೆರಡೂ ಮಸೀದಿ ಆವರಣದಲ್ಲಿದ್ದವು.
ಈ ಸಂಪ್ರದಾಯವು ೧೯೪೯ರಲ್ಲಿ ರಾಜಕೀಯ ದುರುದ್ದೇಶ ಪೂರಿತ ವ್ಯಕ್ತಿಗಳು ಮಸೀದಿಯೊಳಗೆ ನುಗ್ಗಿ ರಾಮಲಲ್ಲಾನ ಪ್ರತಿಮೆಯನ್ನು ಪ್ರತಿಷ್ಠಾಪಿಸುವವರೆಗೂ ಸಹಜವಾಗಿ ನಡೆದುಕೊಂಡು ಬಂದಿತ್ತು. ೧೯೪೯ರ ಬಳಿಕ ೧೯೮೬ರಲ್ಲಿ ಹಿಂದೂಗಳಿಗೆ ದರ್ಶನಕ್ಕೆ ಅವಕಾಶ ನೀಡುವವರೆಗೂ ಎರಡೂ ಸಮುದಾಯಗಳಿಗೂ ಅಲ್ಲಿ ಪ್ರವೇಶಿಸುವ ಅವಕಾಶವಿರಲಿಲ್ಲ.
ವಿವಾದಿತ ಭೂಮಿಯನ್ನು ಮೂರು ಪಾಲುಗಳನ್ನಾಗಿ ಮಾಡುವ ಮೂಲಕ ಈ ಬಿಕ್ಕಟ್ಟಿನಲ್ಲಿ ರಾಜಕಾರಣಿಗಳು ಮೂಗು ತೂರಿಸುವ ಮೊದಲು ಇದ್ಧಂತಹ ಧಾರ್ಮಿಕ ಯಥಾಸ್ಥಿತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೈಕೋರ್ಟ್ ಪುಟ್ಟ ಹೆಜ್ಜೆಯೊಂದನ್ನು ಇರಿಸಿದೆ.
ಈ ಕುರಿತಾದ ತರ್ಕ ಅಪಾಯಕಾರಿಯಾಗಿದೆ. ಆದರೆ ಸುಪ್ರೀಂ ಕೋರ್ಟ್ ಈ ತಪ್ಪನ್ನು ಸರಿ ಪಡಿಸದಿದ್ದಲ್ಲಿ, ತೀರ್ಪಿನ ಪರಿಣಾಮವು ದೇಶದ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ತೀವ್ರ ಅಪಾಯವನ್ನು ತಂದೊಡ್ಡಲಿದೆ.

ಅಯೋಧ್ಯೆ ತೀರ್ಪಿನಿಂದ ಇತಿಹಾಸಕ್ಕೆ ಅಪಚಾರ
ರೋಮಿಲಾ ಥಾಪರ್
ಖ್ಯಾತ ಇತಿಹಾಸ ತಜ್ಞೆ.
ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು ನಿಜಕ್ಕೂ ಒಂದು ರಾಜಕೀಯ ದೃಷ್ಟಿಕೋನದ ತೀರ್ಪು ಎಂದೇ ಹೇಳಬಹುದು. ಈ ತೀರ್ಪಿನಲ್ಲಿ ಹೇಳಿದ್ದೆಲ್ಲವನ್ನೂ ಸ್ವತಃ ಸರಕಾರವೇ ಹಲವು ವರ್ಷಗಳ ಹಿಂದೆಯೇ ಕೈಗೊಳ್ಳಬಹುದಾಗಿತ್ತು. ವಿವಾದಿತ ನಿವೇಶನವನ್ನು ಸ್ವಾಧೀನಪಡಿಸಿಕೊಂಡು, ಧ್ವಂಸಗೊಂಡಿರುವ ಮಸೀದಿಯ ಜಾಗದಲ್ಲಿ ನೂತನ ದೇಗುಲವನ್ನು ನಿರ್ಮಿಸುವ ಬಗ್ಗೆಯೇ ನ್ಯಾಯಾಲಯ ಗಮನಹರಿಸಿದಂತಿದೆ. ಧಾರ್ಮಿಕ ಗುರುತುಗಳನ್ನು ಐತಿಹಾಸಿಕ ಸಾಕ್ಷಾಧಾರಗಳೆಂದು ಹೇಳಿಕೊಂಡು ನಡೆಸಲಾಗುತ್ತಿರುವ ಆಧುನಿಕ ರಾಜಕೀಯವೇ ಈ ಎಲ್ಲ ಸಮಸ್ಯೆಗಳಿಗೆ ಮೂಲ.
ನಿರ್ದಿಷ್ಟ ಸ್ಥಳವೊಂದರಲ್ಲಿ ದೈವಿಕ ಅಂಶದ ಅಥವಾ ಅರೆ ದೈವಿಕ ಅಂಶದ ವ್ಯಕ್ತಿಯೊಬ್ಬ ಜನಿಸಿದ್ದನೆಂದೂ, ಆತನ ಜನನದ ನೆನಪಿಗಾಗಿ, ಆ ಜಾಗದಲ್ಲಿ ನೂತನ ದೇಗುಲವೊಂದನ್ನು ನಿರ್ಮಿಸಲಾಯಿತೆಂದೂ ನ್ಯಾಯಾಲಯ ಘೋಷಿಸಿದೆ. ಹಿಂದೂಗಳ ಶ್ರದ್ಧೆ ಹಾಗೂ ನಂಬಿಕೆಗೆ ಸಂಬಂಧಿಸಿದ ವಿಷಯ ಇದಾಗಿದೆಯೆಂಬ ಮನವಿಗೆ ನ್ಯಾಯಾಲಯದ ಪ್ರತಿಕ್ರಿಯೆ ಇದಾಗಿದೆ. ಆದರೆ ಈ ವಾದವನ್ನು ಬೆಂಬಲಿಸುವಂತಹ ಸಾಕ್ಷಾಧಾರ ಗಳಿಲ್ಲದೆ ನೀಡಿರುವ ಈ ತೀರ್ಪನ್ನು ಕಾನೂನು ನ್ಯಾಯಾಲಯದಿಂದ ನಿರೀ ಕ್ಷಿಸಲು ಸಾಧ್ಯವಿಲ್ಲ. ಶ್ರೀರಾಮನನ್ನು ಹಿಂದೂಗಳು ಭಕ್ತಿಭಾವದಿಂದ ಆರಾಧಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಆತನ ಜನ್ಮಸ್ಥಳದ ಕುರಿತ ಹಕ್ಕುಸ್ಥಾಪನೆಯ ವಾದವನ್ನು ಬೆಂಬಲಿಸುವ ತೀರ್ಮಾನವನ್ನು ನ್ಯಾಯಾಂಗ ಕೈಗೊಳ್ಳಲು ಸಾಧ್ಯವೇ?.
ವಿವಾದಿತ ಸ್ಥಳದಲ್ಲಿ ೧೨ನೆ ಶತಮಾನದಲ್ಲಿ ದೇವಾಲಯವೊಂದಿತ್ತು. ಆದನ್ನು ನಾಶಪಡಿಸಿ, ಅಲ್ಲಿ ಮಸೀದಿಯೊಂದನ್ನು ನಿರ್ಮಿಸಲಾಗಿತ್ತು ಎಂದು ನ್ಯಾಯಾಲಯದ ತೀರ್ಪು ಹೇಳುತ್ತದೆ. ಹಾಗಾಗಿ ಆ ನಿವೇಶನದಲ್ಲಿ ನೂತನ ದೇಗುಲವನ್ನು ನಿರ್ಮಿಸುವುದು ನ್ಯಾಯಬದ್ಧವೆಂದು ತೀರ್ಪು ಪ್ರತಿಪಾದಿಸಿದೆ. ವಿವಾದಿತ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ನಡೆಸಿದ ಉತ್ಖನನ ಹಾಗೂ ಅದರ ವರದಿಗಳನ್ನು ನ್ಯಾಯಾಲಯ ಸಂಪೂರ್ಣವಾಗಿ ಒಪ್ಪಿಕೊಂಡಿದೆ. ಆದರೆ ಈ ವರದಿಗಳ ಬಗ್ಗೆ ಇತರ ಪುರಾತತ್ವ ಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ಪ್ರಬಲವಾದ ಆಕ್ಷೇಪಗಳನ್ನೆತ್ತಿದ್ದರು. ಆದರೆ ಇದೊಂದು ವೃತ್ತಿಪರ ಪರಿಣತಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ, ಯಾವುದೇ ಒಂದು ಅಭಿಪ್ರಾಯದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದು ಸಹಜ.
ತೀರ್ಪು ನೀಡಿದ ಒಬ್ಬ ನ್ಯಾಯಾಧೀಶರಂತೂ ತಾನು ಇತಿಹಾಸಕಾರ ನಾಗಿರದಿರುವುದರಿಂದ ಐತಿಹಾಸಿಕ ಅಂಶಗಳನ್ನು ಪರಾಮರ್ಶಿಸಿಲ್ಲವೆಂದು ಹೇಳಿದ್ದಾರೆ. ಮಾತ್ರವಲ್ಲದೆ, ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರದ ನೆರವು ಖಂಡಿತವಾಗಿಯೂ ಅಗತ್ಯವಿಲ್ಲವೆಂದು ಸಾರಿದ್ದಾರೆ.
ನಮ್ಮ ಪರಂಪರೆಯ ಒಂದು ಭಾಗವಾಗಿದ್ದ ೫೦೦ ವರ್ಷಗಳಷ್ಟು ಹಿಂದಿನ ಮಸೀದಿಯೊಂದನ್ನು, ರಾಜಕೀಯ ನಾಯಕತ್ವವೊಂದರ ಕುಮ್ಮಕ್ಕಿನ ಮೇರೆಗೆ ಜನರ ಗುಂಪೊಂದು ನಾಶಪಡಿಸಿತ್ತು. ಆದರೆ ಅಲಹಾಬಾದ್ ನ್ಯಾಯಾಲಯದ ತೀರ್ಪಿನ ಸಾರಾಂಶದಲ್ಲಿ ಈ ಬರ್ಬರ ವಿನಾಶಕಾರಿ ಘಟನೆಯ ಬಗ್ಗೆ ಪ್ರಸ್ತಾಪವೇ ಇಲ್ಲ. ನಮ್ಮ ಪರಂಪರೆಯ ಮೇಲೆ ನಡೆದ ಈ ಅಪರಾಧವನ್ನು ಖಂಡಿಸಲೇಬೇಕಾಗಿದೆ. ಮಸೀದಿಯ ಅವಶೇಷಗಳ ಪ್ರದೇಶದಲ್ಲಿ, ನೂತನ ದೇವಾಲಯವು ನಿರ್ಮಾಣವಾಗಲಿದೆ.
ಹೀಗಿರುವಾಗ ಆ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಇತ್ತೆನ್ನಲಾದ ದೇವಾಲಯದ ನಾಶವನ್ನು ಖಂಡಿಸಲು ಹಾಗೂ ಅಲ್ಲೀಗ ನೂತನ ದೇವಾಲಯವನ್ನು ನಿರ್ಮಿಸುವುದನ್ನು ಹೇಗೆ ಸಮರ್ಥಿಸಲು ಸಾಧ್ಯ?. ಬಹುಶಃ ಮಸೀದಿ ಧ್ವಂಸದ ಘಟನೆಯನ್ನು ಅನುಕೂಲತೆ ಗಾಗಿ, ಪ್ರಕರಣದ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಯೆಂದೇ ಹೇಳಬಹುದು.
ದೇವಾಂಶ ಸಂಭೂತ ಅಥವಾ ಅರೆದೈವಿಕ ಅಂಶದ ವ್ಯಕ್ತಿಯೊಬ್ಬನ ಜನ್ಮಸ್ಥಳವೆಂದು ಘೋಷಿಸುವ ಮೂಲಕ ಯಾವುದೇ ಒಂದು ಗುಂಪು ಆ ನಿವೇಶನದ ಮೇಲೆ ಹಕ್ಕುಸ್ಥಾಪನೆಯ ವಾದ ಮಂಡಿಸಬಹುದೆಂಬುದನ್ನು ಈ ತೀರ್ಪು ಇತರ ನ್ಯಾಯಾಲಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ಇದಕ್ಕೆ ಪೂರಕವಾದಂತಹ ನಿವೇಶನಗಳು ಇರುವಲ್ಲೆಲ್ಲಾ ಹಲವಾರು ಜನ್ಮಸ್ಥಾನಗಳು ತಲೆಯೆತ್ತಲಿವೆ ಮತ್ತು ಅದಕ್ಕೆ ಬೇಕಾದ ವಿವಾದಗಳನ್ನು ಕೂಡಾ ಸೃಷ್ಟಿಯಾಗುತ್ತವೆ. ಐತಿಹಾಸಿಕ ಸ್ಮಾರಕಗಳ ನಾಶವನ್ನು ಖಂಡಿಸಲಾಗದಿದ್ದರೆ, ಇನ್ನಿತರ ಕಟ್ಟಡಗಳನ್ನು ನಾಶಗೊಳಿಸದಂತೆ ಜನರನ್ನು ತಡೆಯುವುದರಲ್ಲಿ ಯಾವ ಅರ್ಥವಿದೆ?. ಆರಾಧನಾ ಸ್ಥಳಗಳ ಸ್ಥಾನಮಾನವನ್ನು ಬದಲಿಸುವ ವಿರುದ್ಧ ೧೯೯೩ರಲ್ಲಿ ಅಂUಕರಿಸಲಾದ ಶಾಸನವು ನಿಷ್ಕ್ರಿಯವಾಗಿರುವುದು ನಮ್ಮ ಕಣ್ಮೆದುರೇ ಗೋಚರಿಸುತ್ತಿದೆ.
ಇತಿಹಾಸದಲ್ಲಿ ಏನೆಲ್ಲ ನಡೆಯಿತೋ. ಅವೆಲ್ಲ ಆಗಿ ಹೋದ ಸಂಗತಿಗಳು. ಅದನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ವಿಶ್ವಸನೀಯ ಸಾಕ್ಷಗಳ ಆಧಾರದಲ್ಲಿ ಅವುಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿರಬೇಕು. ಪ್ರಸಕ್ತ ರಾಜಕೀಯವನ್ನು ಸಮರ್ಥಿಸುವುದಕ್ಕಾಗಿ ಇತಿಹಾಸವನ್ನು ಬದಲಾಯಿಸಲು ನಮಗಾಗದು. ಈ ತೀರ್ಪು ಇತಿಹಾಸದ ಮೇಲಿನ ಗೌರವವನ್ನು ತೊಡೆದುಹಾಕಿದೆ ಹಾಗೂ ಇತಿಹಾಸದ ಜಾಗದಲ್ಲಿ ಧಾರ್ಮಿಕ ನಂಬುಗೆಯು ಆಕ್ರಮಿಸಬೇಕೆಂದು ಅದು ಬಯಸುತ್ತಿದೆ. ಈ ದೇಶದ ಕಾನೂನು ಕೇವಲ ನಂಬಿಕೆ ಹಾಗೂ ಶ್ರದ್ಧೆಯನ್ನು ಮಾತ್ರವಲ್ಲ, ಸಾಕ್ಷಗಳನ್ನು ಕೂಡಾ ಆಧರಿಸಿದೆಯೆಂಬ ಬಗ್ಗೆ ವಿಶ್ವಾಸ ಮೂಡಿದಾಗ ಮಾತ್ರ ನೈಜ ಮರುಸಂಧಾನ ಸಾಧ್ಯ.

ಈ ತೀರ್ಪು ನ್ಯಾಯವೇ?
೬ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಬಗ್ಗೆ ಕೊನೆಗೂ ಒಂದು ತೀರ್ಪು ಹೊರ ಬಿದ್ದಿದೆ. ಆದರೆ ಈ ತೀರ್ಪು ನಿಜಕ್ಕೂ ನ್ಯಾಯವನ್ನು ನೀಡಿದೆಯೇ? ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದಿ ದೆಯೇ? ಮೇಲ್ನೋಟಕ್ಕೆ ನೋಡಿದರೆ ಪ್ರಮುಖ ವಾದಿ-ಪ್ರತಿವಾದಿಗಳಾಗಿದ್ದ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ಹಿಂದೂತ್ವವಾದಿ ಸಂಘಟನೆಗಳ ಪ್ರತಿನಿಧಿಗಳಿಗೆ ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ಹಂಚಲಾಗಿದೆ. ಇದರಿಂದಾಗಿ ಎಲ್ಲರಿಗೂ ನ್ಯಾಯ ಒದಗಿಸ ಲಾಗಿದೆ ಎಂಬ ಸಮಾಧಾನವನ್ನು ಕೆಲವರು ತೋರುತ್ತಾರೆ. ನ್ಯಾಯವೋ? ಅನ್ಯಾಯ ವೋ ಒಟ್ಟಿನಲ್ಲಿ ಇಡೀ ದೇಶಕ್ಕೆ ಬೆಂಕಿ ಹಚ್ಚಿದ ವಿವಾದವೊಂದು ಹೇಗೋ ಬಗೆಹರಿಯಿತಲ್ಲ ಎಂಬ ನಿಟ್ಟುಸಿರನ್ನು ಬಿಡುತ್ತಾರೆ. ಇನ್ನು ಮುಂದಾ ದರೂ ಶಾಂತಿ ಉಳಿದರೆ ಸಾಕು ಎಂಬ ಹತಾಶ, ಅಸಹಾಯಕತೆಯಿಂದ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಈ ತೀರ್ಪು ನಿಜಕ್ಕೂ ನ್ಯಾಯಾಧಾರಿತವಾದ ಶಾಂತಿ ಯನ್ನು ಎತ್ತಿ ಹಿಡಿದಿದೆಯೇ ಎಂಬುದನ್ನು ಗಮನಿಸಲೇಬೇಕಾಗಿದೆ.
ಈ ವಿವಾದದಲ್ಲಿ ಇದ್ದ ಪ್ರಮುಖ ವಾದ ಅಂಶಗಳ ಬಗ್ಗೆ ಯಾವ ಬಗೆಯ ನಿಲುವನ್ನು ನ್ಯಾಯಾಲಯ ತೆಗೆದು ಕೊಂಡಿದೆ? ಮೊದಲನೆಯದಾಗಿ ಇದು ರಾಮಜನ್ಮಭೂಮಿ ಎಂಬ ಪ್ರಮುಖವಾದ ವಿವಾದ ಒಂದು ಪುರಾಣದ ವಿಷಯವನ್ನು ಇತಿಹಾಸಿಕ ವಿಷಯವಾಗಿ ಪರಿಗಣಿಸಿದೆ. ದಾವೆ ಯನ್ನು ಪರಿಗಣಿಸಿದ್ದೆ ನ್ಯಾಯಕ್ಕೆ ಮಾಡಿದ ಅಪಚಾರ. ೧೯೮೯ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಅಲಹಾಬಾದ್ ಹೈಕೋರ್ಟ್‌ನ ಮುಂದೆ ಹಾಕಿದ ದಾವೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರ ನನ್ನೆ ದಾವೆದಾರನನ್ನಾಗಿ ಮಾಡಿದ್ದವು. ಮತ್ತು ಆ ದೇವನು ಬಾಲ ರಾಮನಾಗಿರುವುದರಿಂದ ಅವನ ಗಾರ್ಡಿಯನ್‌ನಂತಾಗಿ ತಾವು ವಾದ ಮಾಡಿದ್ದೇವೆಂದು ಕೋರ್ಟ್ ಮುಂದೆ ಅಂUಕರಿಸಿದ್ದವು. ಇಂತಹ ಹಾಸ್ಯಾಸ್ಪದ ದಾವೆಯನ್ನು ಕೋರ್ಟ್ ಪರಿಗಣಿಸಿ ದ್ದಲ್ಲದೆ ಆ ಜಾಗವನ್ನು ರಾಮಜನ್ಮ ಭೂಮಿಯೆಂದು ಹಿಂದುಗಳು ಭಾವಿಸು ತ್ತಾದ್ದರಿಂದ ಮತ್ತೆ ಒಂದು ದೈವ ಸ್ವರೂಪವು ಯಾವುದೇ ಆಕಾರದಲ್ಲಾದರೂ ಇರಬಹುದಾದ್ದರಿಂದ ಅದು ರಾಮಜನ್ಮ ಭೂಮಿಯೇ ಎಂದು ಪರಿಗಣಿಸಿದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇದಕ್ಕೆ ದಾವೆದಾರರ ಶ್ರದ್ಧೆಯೊಂದು ಪುರಾವೆಯೇ ಹೊರತು ಕಕ್ಷಿದಾರರು ಬೇರೆ ಯಾವುದೇ ಸಾಕ್ಷಿ ಪುರಾವೆಗಳನ್ನು ಒದಗಿಸಿಲ್ಲ. ಪುರಾಣ ಮತ್ತು ನಂಬಿಕೆ ವಿಷಯವೊಂದಕ್ಕೆ ಭೌತಿಕ ಸಾಕ್ಷಿ ಪುರಾವೆಗಳನ್ನು ಒದಗಿಸಲು ಬರುವುದಿಲ್ಲ. ಭಾರತದ ನ್ಯಾಯ ಸನ್ನಿಧಿಯಲ್ಲಿ ಸಾಕ್ಷಿ ಪುರಾವೆ ಇಲ್ಲದೆ ನ್ಯಾಯದಾನ ಸಾಧ್ಯವೇ ಇಲ್ಲ. ಆದರೂ ಇಲ್ಲಿ ಬಾಲ ರಾಮನೆಂಬ ನಂಬಿಕೆಯ ವಿಷಯವನ್ನು ಭೌತಿಕ ಅಸ್ತಿತ್ವವುಳ್ಳ ಕಕ್ಷಿದಾರ ರನ್ನಾಗಿ ನ್ಯಾಯಾಲಯ ಪರಿಗಣಿಸಿರುವುದು ಮಾತ್ರವಲ್ಲದೇ ನಂಬಿಕೆ ವಿಷಯವನ್ನೇ ಪ್ರಮುಖವಾಗಿ ಪರಿಗಣಿಸಿ ವಿವಾದಿತ ಸ್ಥಳವನ್ನು ರಾಮಜನ್ಮ ಭೂಮಿಯೆಂದು ಘೋಷಿಸಿದೆ. ಇದು ಸತ್ಯಕ್ಕೆ, ನ್ಯಾಯಕ್ಕೆ, ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ ವಾಗಿದೆ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಈ ನ್ಯಾಯಾದೇಶ ಅಪಾಯಗಳ ಹುತ್ತವನ್ನೇ ಹುಟ್ಟಿಸಿ ಹಾಕಲಿದೆ. ಏಕೆಂದರೆ ಒಂದು ಸ್ಥಳವು ಮಸೀದಿಯೋ ಮಂದಿರವೋ ಎಂಬುದು ಪುರಾವೆಗಳಿಲ್ಲದ ಬಹುಸಂಖ್ಯಾತರ ನಂಬಿಕೆಯೊಂದರ ಮೇಲೆ ತೀರ್ಮಾನವಾಗಿ ಬಿಟ್ಟರೆ ಅದು ದೇಶಾದ್ಯಂತ ಇಂತಹುದೇ ಹಲವಾರು ವಿವಾದಗಳನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗುವು ದಿಲ್ಲವೇ? ಈಗಾಗಲೇ ಸಂಘಪರಿವಾರ ದವರೇ ದೇಶಾದ್ಯಂತ ೨೦೦೦ಕ್ಕೂ ಹೆಚ್ಚಿನ ಜಾಗಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ ಎಂದು ಸಾಕ್ಷಿ ಪುರಾವೆಗಳಿಲ್ಲದೆ ಗಲಭೆಗಳನ್ನು ಹುಟ್ಟ್ಟು ಹಾಕಿದ್ದಾರೆ. ಅಲ್ಲಿಯೂ ಕೂಡ ಸಂಘ ಪರಿವಾರದವರು ಶ್ರದ್ಧೆಯ ವಿಷಯವನ್ನೇ ಮುಂದು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಂದಿರುವ ಆದೇಶ ಮುಂದೆ ಎಂತಹ ಸಂಕ್ಷೋಭೆಗಳನ್ನು ಹುಟ್ಟು ಹಾಕಬಹುದು? ಎರಡನೆಯದಾಗಿ ನ್ಯಾಯಾಲಯದ ಮುಂದಿದ್ದ ಮತ್ತೊಂದು ಪ್ರಶ್ನೆ ೧೫೨೮ರಲ್ಲಿ ಅಲ್ಲಿ ಬಾಬರಿ ಮಸೀದಿಯನ್ನು ಕಟ್ಟಿದಾಗ ಮಂದಿರವಿತ್ತೇ? ಮತ್ತು ಇದ್ದ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಯಿತೇ? ಎಂಬ ಪ್ರಶ್ನೆಗಳು. ಇದರ ಬಗ್ಗೆ ಮೂರು ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ಗಳನ್ನು ಹೊಂದಿದ್ದಾರೆ. ಇಬ್ಬರು ನ್ಯಾಯಾ ಧೀಶರು ಬಾಬರಿ ಮಸೀದಿ ಕಟ್ಟುವ ಮುನ್ನ ಅಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ನ್ಯಾಯಾಧೀಶರು ಅಲ್ಲಿ ಮಂದಿರ ತರಹದ ಧಾರ್ಮಿಕ ಸ್ಥಳವೊಂದು ಇದ್ದಿರಬಹುದಾ ದರೂ ಅದನ್ನು ಕೆಡವಿ ಬಾಬರಿ ಮಸೀದಿ ಯನ್ನು ಕಟ್ಟಲಾಗಿದೆಯೆಂದು ಹೇಳಲಾಗುವು ದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇದ್ದರೂ ಸಾರಾಂಶ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಕ್ಕೆ ಬರಲು ಅರ್ಕಿಯಾಲಜಿಕಲ್ ಸರ್ವೇ ಅಫ್ ಇಂಡಿಯಾ ನಡೆಸಿದ ಉತ್ಖನನದ ಪುರಾವೆಗಳನ್ನು ಆಧರಿಸಿದ್ದಾರೆ. ಆದರೆ ಆ ವರದಿ ಖಡಾಖಂಡಿತವಾಗಿ ಉತ್ಖನನದಲ್ಲಿ ಸಿಕ್ಕ ಅವಶೇಷಗಳು ಮಂದಿರವೇ ಎಂದೇನೂ ಹೇಳುವುದಿಲ್ಲ. ಆದರೂ ನ್ಯಾಯಾಲಯ ಅದು ಮಂದಿರವೇ ಎಂಬ ತೀರ್ಮಾನಕ್ಕೆ ಹೇಗೇ ಬಂದಿತೆಂಬುದನ್ನು ಎಂಟುವರೆ ಸಾವಿರ ಪುಟಗಳ ಆದೇಶದಲ್ಲಿ ಹುಡುಕ ಬೇಕಾಗಿದೆ. ಅದೇನೇ ಇರಲಿ ೪೦೦ ವರ್ಷಕ್ಕೂ ಹಿಂದೆ ನಡೆದು ಹೋದ ಅಥವಾ ನಡೆಯದೇ ಇರಬಹುದಾದ ಸಂಗತಿಯೊಂದನ್ನು ವರ್ತಮಾನದ ವಿವಾದವನ್ನು ಬಗೆಹರಿಸಲು ಸೂಕ್ತ ಮಾನದಂಡವಾಗಿ ಇಟ್ಟುಕೊಂಡಿರು ವುದನ್ನೆ ಪ್ರಾಯಶಃ ಪ್ರಪಂಚದ ಯಾವುದೇ ಪ್ರಜಾಪ್ರಭುತ್ವವು ಮಾಡಿ ರುವುದಿಲ್ಲ. ಇಂತಹ ಐತಿಹಾಸಿಕ ಸಂಗತಿಗಳನ್ನು ನಿರ್ಧರಿಸಲು ಇತಿಹಾಸ ಪರಿಣಿತರೇ ಬೇಕೆ ವಿನಃ ಅದರ ಬಗ್ಗೆ ಯಾವುದೇ ತರಬೇತಿ ಪಡೆಯದ ನ್ಯಾಯಾಧೀಶರಲ್ಲ. ಹೀಗಾಗಿ ಯಾವುದೇ ಸಾಕ್ಷಿ ಪುರಾವೆಯಿಲ್ಲದೆ ಅದು ಮಂದಿರವೆಂಬ ತೀರ್ಮಾನಕ್ಕೆ ಬಂದಿ ದ್ದಾರೆ. ಅಲ್ಲಿ ಕಟ್ಟಿದ್ದ ಮಸೀದಿಯು ಇಸ್ಲಾಮಿಕ್ ಶಾಸ್ತ್ರಗಳ ಅನುಸಾರವಾಗಿ ಇರುವ ಮಸೀದಿಯಾಗಲು ಸಾಧ್ಯವಿಲ್ಲ ಎಂಬ ತೀರ್ಮಾನವನ್ನು ನ್ಯಾಯಾಲಯ ನೀಡಿ ಬಿಟ್ಟಿದೆ.
ಇದರಲ್ಲಿ ಗಮನಿಸಬೇಕಾದ ಮುಖ್ಯಾಂಶವೇನೆಂದರೆ ಮಂದಿರ ಕೆಡವಿ ಮಸೀದಿಯನ್ನು ಕಟ್ಟಿದರು ಎಂಬ ಐತಿಹ್ಯ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ ಭಾರತದ ಇತಿಹಾಸವನ್ನು ಉತ್ಖನನ ಮಾಡುತ್ತಾ ಹೋದರೆ ಮಸೀದಿಗಳ ಅವಶೇಷಗಳು ಸಿಗುತ್ತವೆ. ಬೌದ್ಧ ವಿಹಾರಗಳ ಅವಶೇಷಗಳು ದೊರೆಯುತ್ತವೆ. ಇನ್ನೂ ಆಳಕ್ಕೆ ತೋಡಿದರೆ ಈ ದೇಶದ ಮೂಲ ನಿವಾಸಿಗಳ ದೇವಸ್ಥಾನಗಳನ್ನೆಲ್ಲಾ ಆರ್ಯರು ನಾಶ ಮಾಡಿದ ಅವಶೇಷಗಳು ಸಿಗುತ್ತವೆ. ಆದುದರಿಂದಲೇ ವರ್ತಮಾನದ ವಿವಾದಗಳನ್ನು ಬಗೆಹರಿಸಲು ಆಧುನಿಕ ಪ್ರಜಾಪ್ರಭುತ್ವಗಳು ಇತಿಹಾಸದ ಅವಘಡ ಗಳನ್ನು ಯಾವ ಕಾರಣಕ್ಕೂ ಪುರಾವೆಯಾಗಿ ಪರಿಗಣಿಸಬಾರದು. ಆದರೆ ಈ ವಿವಾದದಲ್ಲಿ ಇತಿಹಾಸವಿರದ ಪುರಾಣವೇ ಪುರಾವೆ ಯಾಗಿಬಿಟ್ಟಿದೆ.
ಮೂರನೆಯದಾಗಿ ಮಂದಿರದ ಗೊಮ್ಮಟವಿದ್ದ ಜಾಗದಲ್ಲೇ ರಾಮಜನ್ಮವಾಗಿದೆ ಎಂದು ದಾವೆದಾರರು ಭಾವಿಸುವುದರಿಂದ ಈ ಜಾಗವನ್ನು ಮೂರು ಪಾಲು ಮಾಡಿ ಹಂಚುವಾಗ ಗೋಮ್ಮಟವಿದ್ದ ಕೆಳ ಭಾಗವನ್ನು ಅವರಿಗೆ ಬಿಟ್ಟು ಕೊಡಬೇಕೆಂದು ಆದೇಶಿಸಲಾಗಿದೆ. ಇಲ್ಲಿ ಮೂರು ಪಾಲು ಹಂಚಿಕೆಯಾಗುವ ಮುನ್ನ ಸುನ್ನಿ ವಕ್ಫ್ ಬೋರ್ಡ್ ಆಗಲಿ, ನಿರ್ಮೋಹಿ ಅಖಾಡವಾಗಲಿ ತಾವೇ ನಿಜವಾದ ವಾರಸುದಾರರೆಂದು ಸಾಬೀತು ಮಾಡಲು ವಿಫಲರಾಗಿದ್ದಾರೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಆದರೂ ನಿರ್ಮೋಹಿ ಅಖಾಡಕ್ಕೆ ಹಿಂದುತ್ವ ಸಂಘಟನೆಗಳಿಗೆ ಮೂರನೆ ಎರಡು ಭಾಗದಷ್ಟು ಸ್ಥಳ ದಾನ ಮಾಡಿದ್ದಾರೆ. ಮತ್ತು ಅನ್ಯಾಯವೆಂದು ಕಾಣದಂತೆ ಮಾಡಲು ರಾಜಿ ನ್ಯಾಯ ಮಾಡಿ ಮೂರನೆ ಒಂದು ಭಾಗದಷ್ಟು ಮುಸ್ಲಿಮ್ ಸಂಘಟನೆಗೆ ನೀಡಲಾಗಿದೆ. ಈ ಆದೇಶದ ಹಿಂದೆ ಕೆಲಸ ಮಾಡಿರುವುದು ಯಾವುದೇ ಬಗೆಯ ನ್ಯಾಯಿಕ ಮಾನದಂಡವಲ್ಲ. ಬದಲಿಗೆ ಸಂಘಪರಿವಾರವು ರಾಷ್ಟ್ರದ್ಯಾಂತ ಧಾರ್ಮಿಕ ದಳ್ಳುರಿ ಹಚ್ಚಿ ಪರೋಕ್ಷವಾಗಿ ತಂದ ಒತ್ತಡವೇ ಇಲ್ಲಿ ಒಂದು ಮಾನದಂಡವಾಗಿ ಕೆಲಸ ಮಾಡಿದೆ.
ಅದುದರಿಂದಲೇ ಸಂಘಪರಿವಾರದ ಶಕ್ತಿಗಳು ಈ ಆದೇಶದ ಬಗ್ಗೆ ಸಂಭ್ರಮ ಪಡುತ್ತಿವೆ. ಉಳಿದಂತೆ ಮುಸ್ಲಿಮರ ಹಕ್ಕು ಪರಿಗಣಿಸದೆ ನ್ಯಾಯಾಲಯ ಔದರ್ಯದಿಂದ ನೀಡಿದ ಮೂರನೆ ಒಂದು ಭಾಗದಷ್ಟು ಜಾಗವನ್ನು ನೀಡಿರುವುದನ್ನೇ ನ್ಯಾಯದಾನವೆಂದು ಮತ್ತೆ ಕೆಲವರು ಭಾವಿಸುತ್ತಿದ್ದಾರೆ.
ಈ ಆದೇಶ ಏನೇ ಬಂದಿದ್ದರೂ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗುವ ಅವಕಾಶವಿರುವುದರಿಂದಲೇ ಈಗಲೇ ಹತಾಶರಾಗುವ ಅಗತ್ಯವಿಲ್ಲ. ಶಾಂತಿಯನ್ನು, ಸಂಯಮವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂಬುದು ಸರಿಯಾದುದೆ. ಆದರೆ ನ್ಯಾಯಾಲಯವು ಸತ್ಯಕ್ಕೆ ಮತ್ತು ನ್ಯಾಯಕ್ಕೆ ಮಾಡಿರುವ ಅಪಚಾರವನ್ನು ಅನ್ಯಾಯ ಎಂದು ಹೇಳಲು ನಿಜವಾದ ನಾಗರಿಕರ‍್ಯಾರು ಹಿಂಜರಿಯಬಾರದು.
೧೯೪೭ಕ್ಕೂ ಹಿಂದೆ ಈ ದೇಶದಲ್ಲಿ ಧರ್ಮಗಳ ನಡುವೆ, ಶ್ರದ್ಧೆಗಳ ನಡುವೆ ಸಾಕಷ್ಟು ಕಲಹಗಳು ನಡೆದು ಹೋಗಿವೆ. ೪೭ರ ಆಗಸ್ಟ್ ೧೫ರ ನಂತರ ಈ ದೇಶದ ನಾಗರಿಕರಿಂದಲೂ ಸಾಮಾನತೆ ಮತ್ತು ಭ್ರಾತೃತ್ವದಿಂದ ಬಾಳಲು ಸಂಕಲ್ಪ ತೊಟ್ಟಿದ್ದೇವೆ. ಆದುದರಿಂದ ಇತಿಹಾಸಗಳ ಸಂಗತಿಗಳನ್ನು ಇತಿಹಾಸಕ್ಕೆ ಬಿಟ್ಟು ಹೊಸದಾಗಿ ಬದುಕು ಕಟ್ಟುವ ಭವಿಷ್ಯ ಮುಖಿ ರಾಜಕೀಯ ಮತ್ತು ನ್ಯಾಯಸಂಹಿತೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ೧೯೯೧ರಲ್ಲಿ ಸಂಸತ್ತಿನಲ್ಲಿ mZಛಿ ಟ್ಛ ಡಿಟ್ಟoeಜಿm (omಛ್ಚಿಜಿZ mಟqಜಿoಜಿಟ್ಞo) Zಠಿ೧೯೯೧ ಎಂಬ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಶ್ರದ್ಧಾ ಕೇಂದ್ರಗಳ ಬಗ್ಗೆ ವಿವಾದವಿದ್ದರೂ ಅದನ್ನು ಆ ಶ್ರದ್ಧಾ ಕೇಂದ್ರಗಳನ್ನು ೧೯೪೭ರ ಆಗಸ್ಟ್ ೧೫ರಂದು ಯಾವ ಸ್ಥಿತಿಯಲ್ಲಿತ್ತೋ, ಯಾವ ಧಾರ್ಮಿಕ ಸ್ವರೂಪದಲ್ಲಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಬೇಕೆಂದು ನಿರ್ದೇಶಿಸಲಾಗಿದೆ. ದುರದೃಷ್ಟವಶಾತ್ ಬಾಬರಿ ಮಸೀದಿ ವಿವಾದವೊಂದನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಈ ಕಾಯಿದೆಯ ಹಿಂದಿನ ತರ್ಕ ಅಂದರೆ ೪೭ರ ಹಿಂದಿನ ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಆಯಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡ ಬರಬೇಕು ಎಂಬ ತರ್ಕ ಅತ್ಯಂತ ನ್ಯಾಯೋಚಿತವಾದುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಬಾಬರಿ ಮಸೀದಿ ವಿವಾದವು ನ್ಯಾಯೋಚಿತವಾಗಿ ಬಗೆಹರಿಯಲು ಇದೇ ಸರಿಯಾದ ಭೂಮಿಕೆಯನ್ನು ಒದಗಿಸುತ್ತದೆ. ಆಗಿಲ್ಲದೆ ಅಲಹಾಬಾದ್ ಕೋರ್ಟ್ ನೀಡಿರುವ ಆದೇಶದ ಹಿಂದಿನ ತರ್ಕವನ್ನು ಬಳಸಿದರೆ ಇಡೀ ದೇಶದಲ್ಲೇ ಧಾರ್ಮಿಕ ಕಲಹಗಳನ್ನು ಉತ್ತೇಜಿಸಿದಂತಾಗುತ್ತದೆ.
ಆದುದರಿಂದ ಸುಪ್ರಿಂ ಕೋರ್ಟ್ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆಶಿಸೋಣ. ಯಾಕೆಂದರೆ ಶಾಂತಿ ಅತ್ಯಂತ ಮುಖ್ಯವಾದುದು. ಆದರೆ ಅದು ಅನ್ಯಾಯದ ನೆಲೆಗಟ್ಟಿನಿಂದ ಸೇರಿದ ಶಾಂತಿಯಾದರೆ ಅದರ ಬಾಳು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ನ್ಯಾಯದ ನೆಲೆಗಟ್ಟಿನಿಂದ ಆರಳುವ ಶಾಂತಿಯೇ ಶಾಶ್ವತವಾದದು ಮತ್ತು ಸೌಹಾರ್ದಯುತವಾದುದು.
ಹುಸಿ ಶಾಂತಿಯನ್ನು ಬೆಳೆಸಲು ನಿಜವಾದ ಶಾಂತಿಯ ಪರವಾಗಿ ನಾಗರಿಕರೆಲ್ಲರೂ ಶಾಂತಿ ಮತ್ತು ಸಂಯಮದಿಂದ ಪ್ರಯತ್ನಿಸಬೇಕಾದ ಸವಾಲು ನಮ್ಮೆದುರಲ್ಲಿದೆ.
-ಶಿವಸುಂದರ್

ಉತ್ತಮ ಆದಾಯ ತರುವ ಶುಂಠಿ ಬೆಳೆ
ಸಂಯುಕ್ತ ಕರ್ನಾಟಕ, ಮಾಚ್, ೧೦, ೨೦೧೦
ಶುಂಠಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಈ ವರ್ಷ ಇಳುವರಿ ಪ್ರಮಾಣ ಕಡಿಮೆ ಇದ್ದ ಕಾರಣ, ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ದರ ಇದೆ. ವರ್ತಕರು ಮಾರುಕಟ್ಟೆ ಬೆಲೆ ಆಧರಿಸಿ ಗದ್ದೆಗೆ ಬಂದು ಖರೀದಿ ಮಾಡುತ್ತಿರುವುದರಿಂದ ಉತ್ತಮ ಆದಾಯ ಪಡೆಯುತ್ತಿರುವ ಪ್ರಸನ್ನ ಹೆಗಡೆ ಶುಂಠಿ ಜೊತೆ ತರಕಾರಿಯನ್ನು ಬೆಳೆಸುತ್ತಿದ್ದಾರೆ.
ಶಿರಸಿಯಿಂದ ಬನವಾಸಿಗೆ ಹೋಗುತ್ತಿರುವಾಗ ನವಣಗೇರಿ ಕ್ರಾಸ್‌ನಿಂದ ಎಂಟು ಕಿಲೋಮೀಟರ್ ಅಂತರದಲ್ಲಿರುವ ಬೆಂಗಳಿಯಲ್ಲಿ ವಾಹನ ನಿಲ್ಲಿಸಿ ಗದ್ದೆ ಕಡೆ ಕಣ್ಣು ಹಾಯಿಸಿದಾಗ, ಶುಂಠಿ ಬೆಳೆದ ಗದ್ದೆಯೊಂದು ಗಮನ ಸೆಳೆಯಿತು. ಹತ್ತಿರ ಹೋಗಿ ಕೆಲಸದಲ್ಲಿ ನಿರತರಾದ ಕೃಷಿಕ ಪ್ರಸನ್ನ ಹೆಗಡೆ ಅವರನ್ನು ಮಾತನಾಡಿಸಿದಾಗ, “ನೋಡಿ, ಕೇವಲ ಹತ್ತು ಗಂಟೆ ಜಮೀನಿನಲ್ಲಿ ಈ ವರ್ಷ ಕನಿಷ ಮೂವತ್ತು ಕ್ವಿಂಟಾಲ್ ಶುಂಠಿ ಬೆಳೆಯುತ್ತೇನೆ” ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾ ತಮ್ಮ ಗದ್ದೆಯತ್ತ ಬೊಟ್ಟು ಮಾಡಿ ತೋರಿಸಿದರು.
ಕೆಲವೊಂದು ಹಳ್ಳಿಗಳಲ್ಲಿರುವಂತೆ ಪರಸ್ಪರ ಕೊಡುಕೊಳ್ಳುವ (ತಮ್ಮ ಹತ್ತಿರ ಇರುವ ಧವಸಧಾನ್ಯ, ಕಾಳುಕಟ್ಟಿ, ಬೀಜ ಮುಂತಾದವುಗಳನ್ನು ಬೇರೆಯವರಿಗೆ ಕೊಡುವುದು. ಅವರಿಂದ ತಮಗೆ ಬೇಕಾದ ಬೀಜ, ಗೊಬ್ಬರ, ಧಾನ್ಯಗಳನ್ನು ತೆಗೆದುಕೊಂಡು ಬರುವುದು) ವಿನಿಮಯ ಪದ್ಧತಿ ಬೆಂಗಳಿಯಲ್ಲಿಯೂ ಕಾಣಬರುತ್ತದೆ. ಹೀಗೆ ವಿನಿಮಯ ಪದ್ಧತಿಯಿಂದ ತಂದ ಕೇರಳ ಮೂಲದ ಶುಂಠಿಯನ್ನು ಎರಡರಿಂದ ಎರಡುವರೆ ಅಡಿಗೊಂದರಂತೆ ಮಡಿ ಮಾಡಿ, ಹತ್ತು ಗುಂಟೆ ಜಮೀನಿನಲ್ಲಿ ಮೂರುವರೆ ಕ್ವಿಂಟಾಲ್ ಶುಂಠಿ ಬಿತ್ತನೆ ಮಾಡಿದ್ದಾರೆ. ಉತ್ತಮ ಫಸಲು ಬರಲು ಹತ್ತು ಟ್ರಾಕ್ಟರ್ ಕಪ್ಪು ಮಣ್ಣಿನ ಜೊತೆ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಹರಡಿದ್ದಾರೆ.
ತಮ್ಮ ಗದ್ದೆಯಲ್ಲಿರುವ ಕೊಳವೆ ಬಾವಿಯಿಂದ ಪಿವಿಸಿ ಪೈಪಿನ ಮುಖಾಂತರ ಹತ್ತು ಮಿಲಿಮೀಟರ್ ವ್ಯಾಸದ (ಸುತ್ತಳತೆ) ಲ್ಯಾಟ್ರಲ್ ವೈರ್ ಬಳಸಿ ಹತ್ತು ಅಡಿಗೊಂದರಂತೆ ಮೈಕ್ರೊಜೆಟ್‌ಗಳನ್ನು ಅಳವಡಿಸಿ ಬೆಳೆಗೆ ನೀರುಣಿಸುವ ವ್ಯವಸ್ಥೆ ಮಾಡಿದ್ದಾರೆ.
ಬಿತ್ತನೆಯಿಂದ ಹಿಡಿದು ಬೆಳೆ ಕೊಯ್ಲು ಆಗುವವರೆಗೆ ಕನಿಷ್ಠ ನಲವತ್ತು ಆಳುಗಳ ಅವಶ್ಯಕತೆ ಇದೆ. ಇತ್ತೀಚೆಗೆ ಕೂಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲವಾದ್ದರಿಂದ ತಮ್ಮ ಮನೆಯಲ್ಲಿರುವ ಕೂಲಿ ಕೆಲಸದವನ ಸಹಾಯದಿಂದ ತಾವೇ ಗದ್ದೆ ಕೆಲಸ ನಿರ್ವಹಿಸುತ್ತಿದ್ದಾರೆ.
ಶುಂಠಿ ಬೀಜ ನೆಟ್ಟು ಗಿಡ ಬೆಳೆಯಲು ಎರಡು ತಿಂಗಳು ಬೇಕು. ಆ ಸಮಯದಲ್ಲಿ ಮೆಣಸಿನಕಾಯಿ ಗಿಡ, ಬಳ್ಳಿ ಬೀನ್ಸ್, ಹೀರೇಕಾಯಿ ಬಳ್ಳಿ, ಅರಿಶಿಣವನ್ನು ಬೆಳೆಯುತ್ತಾರೆ. ತರಕಾರಿಯನ್ನು ಮನೆಗೆ ಬಳಸುವುದರ ಜೊತೆಗೆ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಬಿಸಿ ಊಟಕ್ಕೆ ಉಚಿತವಾಗಿ ಕೊಡುತ್ತಾರೆ ಪ್ರಸನ್ನ. ಈ ವರ್ಷ ಮೆಣಸಿನಕಾಯಿಯ ಇಳುವರಿ ಒಂದರಿಂದ ಎರಡು ಕ್ವಿಂಟಾಲ್‌ನಷ್ಟು ಬರಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.
ಶುಂಠಿ ಬೆಳೆಯನ್ನು ಕಾಡುವ ಬೂಸ್ಟ್ ರೋಗಕ್ಕೆ ವರ್ಷಕ್ಕೆ ೨೦ರಿಂದ ೨೫ರ ಸಲ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಇದು ಅಪಾಯಕಾರಿ ಅಲ್ಲವೇ ಎಂದಾಗ, ಶುಂಠಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ಗಿಡಕ್ಕೆ ಬೂಸ್ಟ್ ರೋಗ ಕಾಣಿಸಿಕೊಂಡ ನಂತರ ಕೀಟನಾಶಕ ಸಿಂಪರಣೆ ಮಾಡುತ್ತೆನೆ ಎನ್ನುತ್ತಾರೆ.
ಬಿತ್ತನೆ ಮಾಡಿದ ೬ರಿಂದ ೮ ತಿಂಗಳಿಗೆ ಶುಂಠಿ ಫಸಲು ಬರುತ್ತದೆ. ಉತ್ತಮ ಬೆಲೆ ಬರುವವರೆಗೂ ಶುಂಠಿಯನ್ನು ಭೂಮಿಯಲ್ಲಿ ಬಿಡುವುದರಿಂದ ಯಾವುದೇ ತೊಂದರೆ ಇಲ್ಲ. ಫಸಲು ಬಂದ ಒಂದು ವರ್ಷದ ಒಳಗೆ ಕೊಯ್ಲು ಮಾಡಿ ನಂತರ ಅದೇ ಭೂಮಿಯಲ್ಲಿ ಶುಂಠಿಯ ಬದಲಾಗಿ ಭತ್ತ ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು. ಪ್ರತಿ ವರ್ಷ ಶುಂಠಿಯನ್ನೇ ಬೆಳೆದರೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದು ಪ್ರಸನ್ನ ಅವರ ಅನುಭವದ ಮಾತು.
ಇತ್ತೀಚೆಗೆ ಮಾರುಕಟ್ಟೆ ಬೇಡಿಕೆ ಆಧರಿಸಿ ವರ್ತಕರು ಗದ್ದೆಗೆ ಬಂದು ಶುಂಠಿಯನ್ನು ಖರೀದಿ ಮಾಡುತ್ತಿದ್ದಾರೆ. ಈ ವರ್ಷ ಒಟ್ಟಾರೆ ಇಳುವರಿ ಪ್ರಮಾಣ ಕಡಿಮೆ ಇದ್ದ ಕಾರಣ ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ದರ ಇದೆ. ಅಲ್ಲದೆ ಶುಂಠಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ ಎನ್ನುತ್ತಾರೆ ಪ್ರಸನ್ನ ಹೆಗಡೆ. (೯೮೮೬೫೩೭೫೭೦)
ತನ್ನು ಹಸಿ
ಪ್ರಸನ್ನ ತಮ್ಮ ಇನ್ನೊಂದು ಗದ್ದೆಯಲ್ಲಿ ಶುಂಠಿ ಬೆಳೆದಿದ್ದಾರೆ. ಗದ್ದೆಯಿಂದ ಅನತಿ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಮಳೆಗಾಲದಲ್ಲಿ ನೀರು ಹರಿಯುತ್ತಿದ್ದು, ತಮ್ಮ ಗದ್ದೆಯಲ್ಲಿರುವ ಶುಂಠಿ ಬೆಳೆಗೆ ಬೇಕಾಗುವ ನೀರಿಗೋಸ್ಕರ ಸಣ್ಣ ಝರಿಯೊಂದನ್ನು ನಿರ್ಮಿಸಿ ಗದ್ದೆ ತುಂಬ ಹರಿಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಭೂಮಿ ಸ್ವಲ್ಪ ಕೆಳಭಾಗದಲ್ಲಿರುವುದರಿಂದ ಸಾಕಷ್ಟು ನೀರು ಹರಿದುಬರುತ್ತದೆ. ಶುಂಠಿ ನಾಟಿ ಮಾಡಿ ಮೊಳಕೆ ಬಂದ ನಂತರ ಎಷ್ಟು ನೀರು ಹರಿದರೂ ಶುಂಠಿ ಬೆಳೆಗೆ ಏನೂ ಆಗುವುದಿಲ್ಲ. ಭೂಮಿ ಸಾಕಷ್ಟು ಪ್ರಮಾಣದಲ್ಲಿ ನೀರು ಹೀರಿಕೊಂಡಿರುವುದರಿಂದ ಹಾಗೂ ಮಣ್ಣಿನ ಗುಣವು ನೀರು ಹೀರಿಕೊಳ್ಳುವುದಕ್ಕೆ ಸಹಕಾರಿಯಾಗಿರುವುದರಿಂದ ಬೆಳೆಯ ಕಾಂಡ ಹಾಗೂ ಬೇರಿನ ಭಾಗದಲ್ಲಿ ಯಾವಾಗಲೂ (ತೇವ) ಹಸಿಯಾಗಿರುತ್ತದೆ. ಇದಕ್ಕೆ ತನ್ನು ಹಸಿ ಎನ್ನುತ್ತಾರೆ. ಬೇಸಿಗೆ ಕಾಲದಲ್ಲಿ ಈ ಕಾಲುವೆಯಲ್ಲಿ ನೀರು ಇರುವುದಿಲ್ಲ. ಆಗ ಈ ತನ್ನು ಹಸಿಯೇ ಬೆಳೆಗೆ ಆಧಾರ. ಬೆಳೆಯ ಇಳುವರಿಯೂ ಉತ್ತಮವಾಗಿ ಬರುತ್ತದೆ.
ಚಿತ್ರ ಲೇಖನ:
ಸುರೇಶ ನಿ. ಧಾರವಾಡಕರ್
ಕೃಷಿ ಮಾಧ್ಯಮ ಕೇಂದ್ರದ ವಿದ್ಯಾರ್ಥಿ, ಮಾದರಿ
೫-೬೪, ರಾ.ಶಾ.ವಿ.ಕೇ. ವಸಾಹತು, ಶಕ್ತಿನಗರ್-೫೮೪೧೭೦, ರಾಯಚೂರು ಜಿಲ್ಲೆ, ಮೊ.೯೯೦೦೭೭೬೧೩೫

ಭಾರತವು ನಿಜವಾಗಿಯೂ ಬಲಾಢ್ಯ ಶಕ್ತಿಯಾಗಿ ರೂಪುಗೊಳ್ಳುತ್ತಿದೆಯೇ
ಅರುಂಧತಿ ರಾಯ್
ಭಾರತದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ಯ ಶೇ.೨೫ರಷ್ಟು ಸಂಪತ್ತು ಬರೀ ೧೦೦ ಮಂದಿ ಕೋಟ್ಯಾಧಿಪತಿಗಳ ಹಿಡಿತದಲ್ಲಿದೆ. ಭಾರತದ ೮೩ ಕೋಟಿ ಜನರ, ಸರಾಸರಿ ದೈನಂದಿನ ಜೀವನವೆಚ್ಚ ಈಗಲೂ ಕಡಿಮೆ. ಇಂತಹ ಅಸಮಾನತೆಯಿರುವ ಭಾರತದಲ್ಲಿ ಬಂಡವಾಳಶಾಹಿವಾದವು ಹೇಗೆ ದಿನಗಳೆದಂತೆ ಬಲಿಷ್ಠವಾಗುತ್ತಿದೆ ಮತ್ತು ಜನಸಾಮಾನ್ಯರ ಆಶೋತ್ತರಗಳನ್ನು ಹೊಸಕಿಹಾಕುತ್ತದೆ ಎಂಬುದನ್ನು ಅರುಂಧತಿ ರಾಯ್ ವಿವರಿಸಿದ್ದಾರೆ.
ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಅವರ ಲೇಖನದ ಭಾವಾನುವಾದ ಇಲ್ಲಿ.
ಭಾರತದ ೬೪ನೆ ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ಮನಮೋಹನ್‌ಸಿಂಗ್, ಕೆಂಪುಕೋಟೆಯ ಮೇಲೆ, ಗುಂಡು ನಿರೋಧಕ ಆವರಣದೊಳಗೆ ನಿಂತು,ಯಾವುದೇ ಭಾವೋದ್ವೇಗವಿಲ್ಲದೆ, ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೊಸತೇನೂ ಇರಲಿಲ್ಲ. ಆದರೆ ಅವರ ಭಾಷಣವನ್ನು ಕೇಳಿದರೆ, ಭಾರತವು ಜಗತ್ತಿನಲ್ಲೇ ಎರಡನೆ ಅತ್ಯಧಿಕ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ರಾಷ್ಟ್ರವಾದ ಹೊರತಾಗಿಯೂ, ಅದು ಆಫ್ರಿಕದ ೨೬ ಕಡುಬಡತನದ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಅಧಿಕ ಬಡವರನ್ನು ಹೊಂದಿದೆಯೆಂದು ಯಾರಾದರೂ ಭಾವಿಸಿಯಾರೇ ?.
ಮನಮೋಹನ್‌ಸಿಂಗ್ ಪ್ರಧಾನಿಯಾಗಿ ತನ್ನ ೭ ವರ್ಷಗಳ ಸೇವೆಯುದ್ದಕ್ಕೂ ಸೋನಿಯಾಗಾಂಧಿಯ ವಿನಮ್ರಪೂರ್ವಕ ಹಾಗೂ ಮೃದು ವ್ಯಕ್ತಿತ್ವದ ಸಹಾಯಕನಂತೆ ವರ್ತಿಸಿದ್ದಾರೆ. ಪಶ್ಚಿಮಬಂಗಾಳದ ಮಾಜಿ ಹಣಕಾಸು ಸಚಿವ ಅಶೋಕ್ ಮಿತ್ರಾ ತನ್ನ ಆತ್ಮಕಥೆಯಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಅಧಿಕಾರದ ರಾಜಕೀಯದಲ್ಲಿ ಹೇಗೆ ಮೇಲೆ ಬಂದರೆಂಬುದನ್ನು ವಿವರವಾಗಿ ಬರೆದಿದ್ದಾರೆ. ೧೯೯೧ರಲ್ಲಿ ಭಾರತದ ವಿದೇಶಿ ವಿನಿಮಯವು ಅಪಾಯಕಾರಿ ಮಟ್ಟದಲ್ಲಿ ಕುಸಿದಿದ್ದಾಗ, ಆಗಿನ ನರಸಿಂಹರಾವ್ ಸರಕಾರವು ತುರ್ತು ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯನ್ನು ಸಂಪರ್ಕಿಸಿತ್ತು. ಆಗ ಐಎಂಎಫ್ ಎರಡು ಶರತ್ತುಗಳನ್ನು ಒಡ್ಡಿತ್ತು. ಅವುಗಳಲ್ಲಿ ಒಂದನೆಯದು ಸಂರಚನಾತ್ಮಕ ಹೊಂದಾಣಿಕೆ ಹಾಗೂ ಆರ್ಥಿಕ ಸುಧಾರಣೆ. ಎರಡನೆಯದು ತಾನು ಹೆಸರಿಸಿದ ವ್ಯಕ್ತಿಯನ್ನು ಕೇಂದ್ರ ಹಣಕಾಸು ಸಚಿವನಾಗಿ ನೇಮಕಗೊಳಿಸುವುದು. ಆ ವ್ಯಕ್ತಿಯೇ ಮನಮೋಹನ್‌ಸಿಂಗ್.
ಅರ್ಥಸಚಿವನಾಗಿ, ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದ ಹಲವು ವರ್ಷಗಳಿಂದ ಮನಮೋಹನ್‌ಸಿಂಗ್ ತನ್ನ ಸಂಪುಟದಲ್ಲಿ ಮತ್ತು ಅಧಿಕಾರವರ್ಗದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳ ರಕ್ಷಣೆಗೆ ಬದ್ಧರಾಗಿರುವ ವ್ಯಕ್ತಿಗಳನ್ನೇ ನುಗ್ಗಿಸುತ್ತಾ ಬಂದರು. ಜಲ,ವಿದ್ಯುತ್, ಖನಿಜಗಳು, ಕೃಷಿ, ಭೂಮಿ,ದೂರಸಂಪರ್ಕ, ಶಿಕ್ಷಣ, ಆರೋಗ್ಯ ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಪೊರೇಟ್‌ರಂಗದ ಹಿತಾಸಕ್ತಿಯನ್ನು ಯಾರು ಸಂರಕ್ಷಿಸುತ್ತಾರೋ ಅವರೆಲ್ಲರನ್ನೂ ಪ್ರಧಾನಿ ಪೋಷಿಸಿದರು.
ಸೋನಿಯಾಗಾಂಧಿ ಹಾಗೂ ಅವರ ಪುತ್ರ ಈ ಎಲ್ಲದರಲ್ಲೂ ಪ್ರಮುಖ ಪಾತ್ರವನ್ನು ವಹಿಸಿದರು. ಸಹಾನುಭೂತಿ ಹಾಗೂ ವರ್ಚಸ್ಸಿನ್ನೇ ಬಂಡವಾಳವಾಗಿಟ್ಟುಕೊಂಡು, ಚುನಾವಣೆಗಳಲ್ಲಿ ಜಯಗಳಿಸುವುದೇ ಇವರಿಬ್ಬರ ವೃತ್ತಿಯಾಗಿದೆ. ಪ್ರಗತಿಪರವೆಂಬಂತೆ ತೋರುವ, ಆದರೆ ನಿಜವಾಗಿಯೂ ತಂತ್ರಗಾರಿಕೆಯ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಅವಕಾಶವಿದೆ. ಸರಕಾರದ ನಿರ್ಧಾರಗಳ ವಿರುದ್ಧ ಭುಗಿಲೇಳುವ ಜನಾಕ್ರೋಶವನ್ನು ತಣಿಸಿ, ಸರಕಾರದ ರಥವು ಸುಗಮವಾಗಿ ನಡೆಯುವಂತೆ ಮಾಡುವುದೇ ಇವರ ತಂತ್ರಗಾರಿಕೆಯಾಗಿದೆ. ಒರಿಸ್ಸಾದ ನ್ಯಾಮಗಿರಿ ಪ್ರದೇಶದಲ್ಲಿ ಬಾಕ್ಸೆಟ್ ಗಣಿಗಾರಿಕೆಗೆ ಅನುಮತಿ ರದ್ದುಗೊಂಡ ಪ್ರಯುಕ್ತ ರಾಹುಲ್‌ಗಾಂಧಿಯ ನೇತೃತ್ವದ ಆಯೋಜಿಸಲಾದ ರ‍್ಯಾಲಿ ಈ ತಂತ್ರಗಾರಿಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ರ‍್ಯಾಲಿಯಲ್ಲಿ ರಾಹುಲ್‌ಗಾಂಧಿ ತಾನು ಬುಡಕಟ್ಟು ಜನರ ಸೈನಿಕನೆಂದು ಘೋಷಿಸಿಕೊಂಡಿದ್ದರು. ತನ್ನ ಪಕ್ಷದ ಆರ್ಥಿಕ ನೀತಿಗಳೇ, ಬುಡಕಟ್ಟು ಜನರ ಸಾಮೂಹಿಕ ಸ್ಥಳಾಂತರಕ್ಕೆ ಮುಖ್ಯ ಕಾರಣವೆಂಬುದನ್ನು ಅವರು ತನ್ನ ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ. ಮಾತ್ರವಲ್ಲದೆ ನ್ಯಾಮಗಿರಿಯ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಬಾಕ್ಸೆಟ್ ಗಣಿಗಾರಿಕೆಯ ಬಗ್ಗೆ ಈ ‘ಬುಡಕಟ್ಟು ಯೋಧ’ ಚಕಾರ ಎತ್ತಲಿಲ್ಲ.
ಇನ್ನೂ ಕೇಂದ್ರ ಸಂಪುಟದ ಹಿರಿಯ ಸದಸ್ಯರಾದ ಪಿ.ಚಿದಂಬರಂ ಪ್ರತಿಪಕ್ಷೀಯರಲ್ಲೂ ಎಷ್ಟು ಜನಪ್ರಿಯರಾಗಿದ್ದಾರೆಂದರೆ, ಒಂದು ವೇಳೆ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ, ಅವರು ಮಾತ್ರ ಗೃಹ ಸಚಿವರಾಗಿಯೇ ಮುಂದುವರಿಯಬಹುದಾಗಿದೆ. ಅವರಿಗೆ ನಿಯೋಜಿಸಲಾದ ಕಾರ್ಯವೊಂದನ್ನು ಪೂರ್ಣಗೊಳಿಸಲು ಅವರಿಗೆ ತನ್ನ ಅಧಿಕಾರಾವಧಿಯಲ್ಲಿ ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಅಕ್ಟೋಬರ್ ೨೦೦೭ರಲ್ಲಿ ಹಾರ್ವರ್ಡ್ ವಿ.ವಿ.ಯಲ್ಲಿ ಅವರು “ಬಡತನದಲ್ಲಿರುವ ಶ್ರೀಮಂತ ರಾಷ್ಟ್ರಗಳು: ಅಭಿವೃದ್ಧಿಯ ಸವಾಲುಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ಆ ಕಾರ್ಯದ ರೂಪುರೇಷೆಗಳನ್ನು ಬಿಚ್ಚಿಟ್ಟಿದ್ದರು. ಅದರ ಸಾರಾಂಶ ಹೀಗಿದೆ.
“ ಭಾರತವು ಕಬ್ಬಿಣದ ಆದಿರು, ಮ್ಯಾಂಗನೀಸ್,ಮೈಕಾ, ಬಾಕ್ಸೆಟ್, ಟೈಟಾನಿಯಂ ಆದಿರು, ಕ್ರೊಮೈಟ್, ವಜ್ರಗಳು,ನೈಸರ್ಗಿಕ ಅನಿಲ, ಪೆಟ್ರೋಲಿಯಂ ಹಾಗೂ ಸೀಮೆಸುಣ್ಣ ಸೇರಿದಂತೆ ಜಗತ್ತಿನಲ್ಲೇ ನಾಲ್ಕನೆ ಅತ್ಯಧಿಕ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ದೇಶವಾಗಿದೆ. ನಾವು ಈ ಸಂಪನ್ಮೂಲಗಳನ್ನು ತ್ವರಿತವಾಗಿ ಹಾಗೂ ದಕ್ಷತೆಯಿಂದ ಗಣಿಗಾರಿಕೆ ನಡೆಸಬೇಕಾಗಿದೆ. ಅದಕ್ಕೆ ಭಾರೀ ಬಂಡವಾಳದ ಅಗತ್ಯವಿದೆ. ಮಾರುಕಟ್ಟೆಯ ಶಕ್ತಿಗಳು ಕಾರ್ಯನಿರ್ವಹಿಸುವಂತಹ ದಕ್ಷ ಸಂಘಟನೆಗಳು ಹಾಗೂ ನೀತಿಯ ಅಗತ್ಯವಿದೆ. ಇಂದಿನ ಗಣಿಗಾರಿಕಾ ವಲಯದಲ್ಲಿ ಅಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ. ಆ ಕುರಿತ ಕಾನೂನುಗಳು ತೀರಾ ಹಳೆಯದಾಗಿವೆ. ಗಣಿಗಾರಿಕೆಯಲ್ಲಿ ಬೃಹತ್ ಪ್ರಮಾಣದಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಮ್ಮ ಪ್ರಯತ್ನಗಳು ವಿಫಲವಾಗಿವೆ. ಏತನ್ಮಧ್ಯೆ ಗಣಿಗಾರಿಕೆ ವಲಯವು ರಾಜ್ಯ ಸರಕಾರಗಳ ಕಪಿಮುಷ್ಟಿಯಲ್ಲಿ ಬಂಧಿತವಾಗಿದೆ. ಅರಣ್ಯ , ಪರಿಸರ ಅಥವಾ ಬುಡಕಟ್ಟು ಜನರ ಹಿತಾಸಕ್ತಿಗಳನ್ನು ಪ್ರತಿಪಾದಿಸುವ ಗುಂಪುಗಳು, ಪ್ರಸಕ್ತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ವಿರೋಧಿಸುತ್ತಿವೆ. ಗಣಿಗಾರಿಕೆಯು ರಾಜ್ಯದ ಏಕಸ್ವಾಮ್ಯವೆಂದು ಭಾವಿಸುವ ರಾಜ್ಯ ಸರಕಾರಗಳಿವೆ ಮತ್ತವು ಖಾಸಗಿ ವಲಯದ ಪ್ರವೇಶವನ್ನು ತಾತ್ವಿಕವಾಗಿ ವಿರೋಧಿಸುತ್ತಿವೆ. ಇದಕ್ಕಾಗಿ ಅವು ಕಾರ್ಮಿಕ ಸಂಘಟನೆಗಳ ಬೆಂಬಲವನ್ನು ಪಡೆಯುತ್ತಿವೆ. ಇವೆಲ್ಲದರ ಪರಿಣಾಮವಾಗಿ ಗಣಿಗಾರಿಕೆಯಲ್ಲಿ ನೈಜ ಹೂಡಿಕೆ ತೀರಾ ಕಡಿಮೆ”.
ಮಾರುಕಟ್ಟೆ ಶಕ್ತಿಗಳಿಗೆ, ಗಣಿ ಸಂಪನ್ಮೂಲಗಳನ್ನು ದಕ್ಷವಾಗಿ ಹಾಗೂ ತ್ವರಿತವಾಗಿ ಬಳಸಿಕೊಳ್ಳಲು ಅವಕಾಶ ನೀಡುವ ಕ್ರಮವನ್ನು ಒಂದು ಕಾಲದಲ್ಲಿ ವಸಾಹತುಶಾಹಿ ಶಕ್ತಿಗಳು ತಮ್ಮ ವಸಾಹತುಗಳಲ್ಲಿ ಅನುಸರಿಸಿದ್ದವು. ಸ್ಪೇನ್ ಹಾಗೂ ಉತ್ತರ ಅಮೆರಿಕಗಳು ದಕ್ಷಿಣ ಅಮೆರಿಕದಲ್ಲಿ,ಯುರೋಪಿಯನ್ ರಾಷ್ಟ್ರಗಳು ಆಫ್ರಿಕದಲ್ಲಿ ಮಾಡಿದ್ದು ಕೂಡಾ ಇದೇ.
ಬುಡಕಟ್ಟು ಜನತೆಯ ಹಕ್ಕುಗಳ ದಮನಕ್ಕೆ ಸಂವಿಧಾನವನ್ನೇ ಉಲ್ಲಂಘಿಸುತ್ತಿರುವ ಸರಕಾರ
ಗಣಿಗಾರಿಕೆಗಾಗಿ ಏರ್ಪಟ್ಟ ತಿಳುವಳಿಕಾ ಒಪ್ಪಂದಗಳನ್ನು ಮರುಪರಿಶೀಲಿಸಬೇಕೆಂದು ಸರಕಾರಿ ವರದಿಯೊಂದು ಆಗ್ರಹಿಸಿತ್ತು. ಆದರೆ ಈ ವರದಿಗೆ ಸರಕಾರದಿಂದ ದೊರೆತ ಪ್ರತಿಕ್ರಿಯೆಯಾದರೊ ನಿರಾಶಾದಾಯಕವಾಗಿತ್ತು. ಎಪ್ರಿಲ್ ೨೪,೨೦೧೦ರಲ್ಲಿ ಔಪಚಾರಿಕ ಸಮಾರಂಭವೊಂದರಲ್ಲಿ ಪ್ರಧಾನಿಯು ಈ ವರದಿಯನ್ನು ಬಿಡುಗಡೆಗೊಳಿಸಿದರು. ಆದರೆ ಅದು ಕೆಲವೇ ದಿನಗಳಲ್ಲಿ ಮೂಲೆಗುಂಪಾಯಿತು.
೨೦೦೯ರಲ್ಲಿ ಮನಮೋಹನ್‌ಸಿಂಗ್ ಸಂಸತ್‌ನಲ್ಲಿ ಮಾತನಾಡುತ್ತಾ “ಎಡಪಂಥೀಯ ತೀವ್ರವಾದವು, ದೇಶದಲ್ಲಿ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಬೆಳೆಯುತ್ತಿದೆ. ಇದು ಹೂಡಿಕೆಯ ವಾತಾವರಣದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತದಲ್ಲಿ ಸದ್ಯದ ಸನ್ನಿವೇಶದಲ್ಲಿ ನಡೆಯುತ್ತಿರುವ ವಿವಿಧ ಹೋರಾಟಗಳ ಬಗ್ಗೆ ಗಮನಹರಿಸಿದಲ್ಲಿ, ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದಾರೆಯೇ ಹೊರತು ಬೇರ‍್ಯಾವುದಕ್ಕೂ ಅಲ್ಲವೆಂಬುದು ಮನದಟ್ಟಾಗುತ್ತದೆ. ಆದರೆ ಭಾರತ ಸರಕಾರವು ಮಾತ್ರ ಭಾರತದ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಕಾಳಜಿಯನ್ನು ವಹಿಸಿಲ್ಲ. ಅದು ಸಂವಿಧಾನವನ್ನು ಜನತೆಯ ರಕ್ಷಣೆಗಾಗಿ ಬಳಸುತ್ತಿಲ್ಲ. ಅದಕ್ಕೆ ಬದಲಾಗಿ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುತ್ತಿರುವ ಜನರನ್ನು ಹತ್ತಿಕ್ಕಲು ಸಂವಿಧಾನವನ್ನೇ ಆಸ್ತ್ರವಾಗಿ ಸರಕಾರ ಬಳಸಿಕೊಳ್ಳುತ್ತಿದೆ.
ಖ್ಯಾತ ಪತ್ರಕರ್ತ ಬಿ.ಜಿ. ವUಸ್,ಔಟ್‌ಲುಕ್ ಪತ್ರಿಕೆಯ ಮೇ ೩ರ ಸಂಚಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಸರಕಾರ ಮತ್ತು ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಬೆಂಬಲಿಸುತ್ತಾ “ಪ್ರಜಾತಾಂತ್ರಿಕ ಭಾರತದಲ್ಲಿ ಮಾವೊವಾದಿಗಳು ಶೀಘ್ರವೇ ಮರೆಯಾಗಲಿದ್ದಾರೆ ಮತ್ತು ಸಂವಿಧಾನವು ವಿಜಯಶಾಲಿಯಾಗಲಿದೆ. ಆದರೆ ಇದಕ್ಕೆ ಸ್ವಲ್ಪ ಸಮಯ ತಗಲಬಹುದು ಹಾಗೂ ನೋವನ್ನು ಅನುಭವಿಸಬೇಕಾಗಬಹುದು” ಎಂದು ಹೇಳಿದ್ದರು.
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮಾವೊವಾದಿ ನಾಯಕ ಆಝಾದ್, ತನ್ನ ಸಾವಿಗೆ ಕೆಲವೇ ತಿಂಗಳುಗಳ ಮುನ್ನ ಈ ಲೇಖನಕ್ಕೆ ಬರೆದ ಉತ್ತರ ಹೀಗಿತ್ತು. ಅದನ್ನು ಔಟ್‌ಲುಕ್ ಪತ್ರಿಕೆಯು ಜುಲೈ ೧೧,೨೦೧೦ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.
“ಶ್ರೀಮಾನ್ ವUಸ್‌ರವರೇ ಭಾರತದ ಯಾವ ಭಾಗದಲ್ಲಿ ಸಂವಿಧಾನವು ಮೇಲುಗೈ ಸಾಧಿಸಿದೆ?. ದಾಂತೆವಾಡ, ಬಿಜಾಪುರ್,ಕಂಕೇರ್, ನಾರಾಯಣ್‌ಪುರ್, ರಾಜಾನಂದ್‌ಗಾಂವ್‌ಗಳಲ್ಲಿಯೇ?, ಜಾರ್ಖಂಡ್, ಒರಿಸ್ಸಾದಲ್ಲೇ?. ಮಣಿಪುರದಲ್ಲೇ?. ೨೫ ವರ್ಷಗಳ ಹಿಂದೆ ಸಾವಿರಾರು ಸಿಖ್ಖರ ಮಾರಣಹೋಮ ನಡೆದಾಗ ನಿಮ್ಮ ಸಂವಿಧಾನವು ಎಲ್ಲಿ ಅಡಗಿತ್ತು?. ಸಾವಿರಾರು ಮುಸ್ಲಿಮರ ಹತ್ಯಾಕಾಂಡವಾದಾಗ ಅದು ಎಲ್ಲಿತ್ತು ?. ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮತ್ತು ಸರಕಾರಿ ಪ್ರಾಯೋಜಿತ ಸಲ್ವಾ ಜುಡುಂ ಗ್ಯಾಂಗ್‌ಗಳು ಸಾವಿರಾರು ಜನರನ್ನು ಕೊಂದುಹಾಕುವಾಗ, ಅಮಾಯಕರನ್ನು ಖಾಕಿ ಸಮವಸ್ತ್ರದ ಗೂಂಡಾಗಳು ಅಪಹರಿಸುವಾಗ ಸಂವಿಧಾನ ಎಲ್ಲಿಗೆ ಹೋಗಿತ್ತು ?” ಎಂದು ಆಜಾದ್ ಸವಾಲು ಹಾಕಿದ್ದರು.
ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರು ಅತ್ಯಧಿಕ ಸಂಖ್ಯೆಯಲ್ಲಿರುವ ಪ್ರಾಂತ್ಯಗಳು, ಭಾರತ ಸರಕಾರಕ್ಕೆ ಮಾತ್ರವಲ್ಲ, ಪ್ರತಿರೋಧ ಚಳವಳಿಗೂ ಸಹ ದೊಡ್ಡ ಸವಾಲಾಗಿ ಪರಿಣಮಿಸಿವೆ.
ಈಗ ಸರಕಾರವು ಭಾವಿಸಿರುವಂತಹ ಪ್ರಗತಿ, ಅಭಿವೃದ್ಧಿ ಮತ್ತು ನಾಗರಿಕತೆಯೆಂಬ ಪದಗಳ ನಿಜವಾದ ಅರ್ಥವೇನೆಂಬುದನ್ನು ಈ ಪ್ರದೇಶಗಳು ಪ್ರಶ್ನಿಸತೊಡಗಿವೆ. ಈ ಬುಡಕಟ್ಟು ಜನರು ಛತ್ತೀಸ್‌ಗಡ ಮುಕ್ತಿ ಮೋರ್ಚಾ, ಕೊಯೆಲ್ ಕರೊ ಹಾಗೂ ಗಂಧಮಾರ್ಧನ ಚಳವಳಿಗಳ ಮೂಲಕ ಹಲವಾರು ವರ್ಷಗಳತನಕ ಶಾಂತಿಯುತವಾಗಿ ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಕೇಳುತ್ತಲೇ ಬಂದಿದ್ದಾರೆ. ನರ್ಮದಾ ಕಣಿವೆಯಲ್ಲಿ ನರ್ಮದಾ ನದಿಗೆ ಕಟ್ಟಲಾಗುವ ಅಣೆಕಟ್ಟನ್ನು ಪ್ರತಿಭಟಿಸಿ ನಡೆಸಲಾದ ನರ್ಮದಾ ಬಚಾವೊ ಆಂದೋಲನದಲ್ಲೂ ಸಂತ್ರಸ್ತ ಬಡ ಬುಡಕಟ್ಟು ಜನರು ನ್ಯಾಯಕ್ಕಾಗಿ ಹಲವು ವರ್ಷಗಳ ಹೋರಾಟ ನಡೆಸಿದ್ದರು. ಆದರೆ ಅವೆಲ್ಲವೂ ನೀರಲ್ಲಿ ಹೋಮವಿರಿಸಿದ ಹಾಗೆ ನಿಷ್ಪಲವಾಯಿತು.
ಈ ಅನ್ಯಾಯಗಳ ವಿರುದ್ಧ ಹೋರಾಡಿದವರಿಗೆ ಭಾರತದಲ್ಲಿ ತುರ್ತು ಪರಿಸ್ಥಿತಿಯೆಂಬ ಭಾವನೆ ಮೂಡಿದೆ. ಕಾಶ್ಮೀರ, ಮಣಿಪುರ, ನಾಗಲ್ಯಾಂಡ್ ಹಾಗೂ ಅಸ್ಸಾಂಗಳ ಜನತೆಯಂತೆ,ತಮ್ಮ ನಾಗರಿಕ ಹಕ್ಕುಗಳನ್ನು ಕೂಡಾ ಕಿತ್ತುಕೊಂಡಿರುವುದು ಬಂಡೆದ್ದ ಬುಡಕಟ್ಟು ಜನರ ಅನುಭವಕ್ಕೆ ಬಂದಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಹಾಗೂ ಛತ್ತೀಸ್‌ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ (ಸಿಎಸ್‌ಪಿಸಿಎ)ಯು ಮಾತು ಹಾಗೂ ಕೃತಿಗಳ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುತ್ತದೆ.
ಮಾವೊವಾದಿಗಳನ್ನು ಸದೆಬಡಿಯುವ ನೆಪದಲ್ಲಿ ಬಡವರ ವಿರುದ್ಧ ಸಮರ
ಕಳೆದ ಕೆಲವು ತಿಂಗಳುಗಳಿಂದ, ಸರಕಾರವು ಮಾವೊವಾದಿಗಳ ಪ್ರಾಬಲ್ಯವಿರುವ ಪ್ರದೇಶಗಳ ದಟ್ಟಾರಣ್ಯಗಳಲ್ಲಿ ಸಾವಿರಾರು ಸಶಸ್ತ್ರ ಅರೆಸೈನಿಕ ಪಡೆಗಳನ್ನು ಜಮಾಯಿಸುತ್ತದೆ. ಇದಕ್ಕೆ ಪ್ರತ್ಯುತ್ತರವಾಗಿ ಮಾವೊವಾದಿಗಳು, ಭದ್ರತಾಪಡೆಗಳ ಮೇಲೆ ಆಕ್ರಮಣಕಾರಿ ದಾಳಿಗಳನ್ನು ನಡೆಸುತ್ತಿದ್ದಾರೆ. ಆ ಸಂದರ್ಭಗಳಲ್ಲಿ ಭುಗಿಲೇಳುತ್ತಿರುವ ಘರ್ಷಣೆಗಳಲ್ಲಿ ೨೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಸಾವಿUಡಾಗಿದ್ದಾರೆ. ಅವರ ಶವಗಳನ್ನು ಅರಣ್ಯದಿಂದ ಹೊರತಂದು, ರಾಷ್ಟ್ರಧ್ವಜದಲ್ಲಿ ಸುತ್ತಿ ಗೌರವಗಳನ್ನು ಸಲ್ಲಿಸುತ್ತದೆ.ಮಾವೊವಾದಿಗಳ ಬರ್ಬರ ಹತ್ಯಾಕಾಂಡಗಳನ್ನು ನಡೆಸಲು ಸರಕಾರಕ್ಕೆ ಇದೊಂದು ಉತ್ತಮ ನೆಪವಾಗಿ ಬಿಡುತ್ತದೆ. ದಟ್ಟಾರಣ್ಯಗಳಲ್ಲಿ ನಡೆದ ಕಾಳಗಳಲ್ಲಿ ಸತ್ತ ಮಾವೊವಾದಿ ಗಳ ವಿಛಿದ್ರಗೊಂಡ, ಶಿರಚ್ಛೇದನಗೊಂಡ ಶವಗಳನ್ನು ಮಣ್ಣುಪಾಲು ಮಾಡಿದಾಗ, ಅವರ ಕುಟುಂಬಗಳಾಗಲಿ, ಬಂಧುಗಳಾಗಲಿ ಇರುವುದಿಲ್ಲ.
ಎಪ್ರಿಲ್ ೬, ೨೦೧೦ರಲ್ಲಿ ಜನತಾ ವಿಮೋಚನಾ ಗೆರಿಲ್ಲಾ ಸೇನೆ(ಪಿಎಲ್‌ಜಿಎ) ಯು ದಾಂತೆವಾಡದಲ್ಲಿ ನಡೆಸಿದ ಅತ್ಯಂತ ಭೀಕರ ದಾಳಿಯೊಂದರಲ್ಲಿ ೭೬ ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಬರ್ಬರವಾಗಿ ಹತ್ಯೆಗೈಯಿತು. ಬಳಿಕ ಪಿಎಲ್‌ಜಿಎ, ತಾನು ನಡೆಸಿದ ಬರ್ಬರ ಹತ್ಯಾಕಾಂಡದ ಬಗ್ಗೆ ಬಹಿರಂಗ ಹೇಳಿಕೆ ನೀಡಿತು.
ಟಿವಿ ಚಾನೆಲ್‌ಗಳು ಈ ಹತ್ಯಾಕಾಂಡದ ಸುದ್ದಿಗಳನ್ನು ರಸವತ್ತಾಗಿ ಪ್ರಸಾರ ಮಾಡಿತು. ಆದರೆ ದುರಂತವೆಂದರೆ ಮಾವೊವಾದಿಗಳ ಪರ ಸಹಾನುಭೂತಿ ಹೊಂದಿದವರಿಗೂ ಕೂಡಾ ಈ ಹತ್ಯಾಕಾಂಡದ ಬೆಂಬಲಿಗರೆಂಬ ಹಣೆಪಟ್ಟಿಯನ್ನು ಸರಕಾರವು ಕಟ್ಟಿರುವುದು.
ಆದರೆ ಅಮಾಯಕ ಗ್ರಾಮಸ್ಥರೇ ತುಂಬಿರುವ ಹಳ್ಳಿಗಳಲ್ಲಿ ಸಿಆರ್‌ಪಿಎಫ್‌ನ ಒಂದು ತುಕಡಿಯು ೨೧ ಎಕೆ೪೭ ರೈಫಲ್‌ಗಳು, ೩೮ ಐಎನ್‌ಎಸ್‌ಎಎಸ್ ರೈಫಲ್‌ಗಳು, ಏಳು ಎಸ್‌ಎಲ್‌ಆರ್‌ಗಳು, ಆರು ಲಘುಮೆಶಿನ್‌ಗನ್‌ಗಳು, ಒಂದು ಸ್ಟೆನ್‌ಗನ್ ಮತ್ತಿತರ ಮಾರಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಗಸ್ತು ತಿರುಗುವ ಅಗತ್ಯವಾದರೂ ಏನಿದೆ ?. ಈ ಪ್ರಶ್ನೆಯನ್ನೇ ಕೇಳಿದರೆ, ಅದೊಂದು ದೇಶದ್ರೋಹದ ಕೃತ್ಯವಾಗಿಬಿಡುತ್ತದೆ.
ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ, ದಿಲ್ಲಿಯ ವಾಹನ ಪಾರ್ಕಿಂಗ್ ಸ್ಥಳವೊಂದರಲ್ಲಿ ಹರಟೆ ಹೊಡೆಯುತ್ತಿದ್ದ ಅರೆಸೈನಿಕ ಪಡೆಗಳ ಕಮಾಂಡೊಗಳ ಸಂಭಾಷಣೆಯನ್ನು ಅಲಿಸುವ ಅವಕಾಶ ನನಗೆ ಒದಗಿತ್ತು. ಅರೆಸೈನಿಕ ಪಡೆಯಲ್ಲಿ ಒಬ್ಬ ಉದ್ಯೋಗ ದೊರೆಯಬೇಕಾದರೆ, ಎಷ್ಟು ಲಕ್ಷ ಸುರಿಯಬೇಕಾಗುತ್ತದೆ ಯೆಂಬ ಬಗ್ಗೆ ಅವರು ಚರ್ಚಿಸುತ್ತಿದ್ದರು. ಉದ್ಯೋಗ ಪಡೆಯಲು ಅವರ ಕುಟುಂಬಗಳು ಸಾಲ ಮಾಡಿಯಾದರೂ ಲಂಚ ಕೊಡುತ್ತಿದ್ದವು. ಆದರೆ ಓರ್ವ ಜವಾನಿಗೆ ದೊರೆಯುವ ಕನಿಷ್ಠ ವೇತನದಲ್ಲಿ ಆ ಸಾಲವನ್ನು ಮರುಪಾವತಿಸು ವುದು ಅಸಾಧ್ಯವೇ ಸರಿ. ಆಗ ಆತ ಹುಡುಕುವ ಇನ್ನೊಂದು ದಾರಿಯೆಂದರೆ, ಉದ್ಯಮಿಗಳಿಗೆ, ಸಂಸ್ಥೆಗಳಿಗೆ ಸುರಕ್ಷತೆಯನ್ನು ಖಾತರಿಪಡಿಸುವ ರ‍್ಯಾಕೆಟ್‌ಗಳನ್ನು ನಡೆಸುತ್ತಾನೆ, ಲಂಚ ಕೇಳುತ್ತಾನೆ. ದಾಂತೆವಾಡದಂತಹ ಹಳ್ಳಿಗಳಲ್ಲಿ ಅರೆಸೈನಿಕ ಯೋಧರು ಗ್ರಾಮಸ್ಥರನ್ನು ದೋಚಲು, ನಗ,ನಗದು ಕದಿಯಲೂ ಹೇಸುವುದಿಲ್ಲ.
ಆದರೆ ಅಂತಹ ಯೋಧರು, ಅಕಾಲಿಕವಾಗಿ ಮರಣವನ್ನಪ್ಪಿದಾಗ ಅವರ ಕುಟುಂಬಗಳು ದಾರಿಗೆ ಬೀಳುತ್ತವೆ.
ಆದರೆ ಮಾವೊವಾದಿಗಳ ವಿರುದ್ಧ ಸಮರ ನಡೆಯುತ್ತಿರುವ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳು ಗಸ್ತುತಿರುಗಲು ನಿರಾಕರಿಸಿದ ಘಟನೆಗಳು ಹೆಚ್ಚೆಚ್ಚು ವರದಿಯಾಗತೊಡಗಿವೆ. ಅವರ ತಮ್ಮ ಪಾಳಿ ಪುಸ್ತಕದಲ್ಲಿ ಸಹಿಹಾಕುತ್ತಾರೆಯೇ ಹೊರತು, ಗಸ್ತು ತಿರುಗುವ ಕರ್ತವ್ಯದಿಂದ ಉಪಾಯವಾಗಿ ನುಣುಚಿಕೊಳ್ಳತೊಡಗಿದ್ದಾರೆ. ಬಹುಶಃ ಅವರಿಗೆ ತಾವು ಶ್ರೀಮಂತರ ಪರವಾಗಿ ನಡೆಯುತ್ತಿರುವ ಯುದ್ಧದಲ್ಲಿ ಬಲಿಪಶುಗಳು ಎಂಬ ಭಾವನೆ ಅವರಿಗುಂಟಾಗತೊಡಗಿದೆ.
ಮೇ ೧೭, ೨೦೧೦ರಲ್ಲಿ ದಾಂತೆವಾಡದಲ್ಲಿ ಮಾವೊವಾದಿಗಳು ಬಸ್ಸೊಂದನ್ನು ಸ್ಫೋಟಿಸಿ, ಸುಮಾರು ೪೪ ಮಂದಿಯನ್ನು ಹತ್ಯೆಗೈದರು. ಅವರಲ್ಲಿ ೧೬ ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ವಾಸ್ತವವಾಗಿ ಅವರು ಸರಕಾರಿ ಕೃಪಾಪೋಷಿತ ಉಗ್ರಗಾಮಿ ಸೇನೆಯಾದ ಸಲ್ವಾಜುಡುಂನ ಸದಸ್ಯರಾಗಿದ್ದರು. ಉಳಿದವರೆಲ್ಲರೂ ಅಮಾಯಕ ಗ್ರಾಮಸ್ಥರಾಗಿದ್ದರು. ಆದರೆ ಮಾವೊವಾದಿಗಳು ನಾಗರಿಕರ ಹತ್ಯಾಕಾಂಡಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು.
ದಾಂತೆವಾಡದಲ್ಲಿ ಮಾವೊವಾದಿಗಳು ನಡೆಸಿದ ನಾಗರಿಕರ ಹತ್ಯಾಕಾಂಡದ ಬಗ್ಗೆ ದೇಶಾದ್ಯಂತ ಮಾಧ್ಯಮಗಳು, ಸುದ್ದಿವಿಶ್ಲೇಷಕರಿಂದ ಖಂಡನೆಗಳ ಸುರಿಮಳೆಯೇ ಹರಿದು ಬಂದಿತು. ಆದರೆ ಇದೇ ಸಮಯದಲ್ಲಿ ಟಾಟಾ, ಜಿಂದಾಲ್ ಮತ್ತು ಪೊಸ್ಕೊ ಮತ್ತಿತರ ಬೃಹತ್ ಕಂಪೆನಿಗಳಿಗಾಗಿ ತಮ್ಮ ಜಮೀನುಗಳನ್ನು ಸರಕಾರವು ಸ್ವಾಧೀನಪಡಿಸಿಕೊಳ್ಳುತ್ತಿರುವುದರ ವಿರುದ್ಧ ಒರಿಸ್ಸಾದ ಕಳಿಂಗನಗರ್ ಹಾಗೂ ಜಾರ್ಖಂಡ್‌ನ ಬಾಳಿತುತಾ ಮತ್ತು ಪೊರ್ಕೊಗಳಲ್ಲಿ, ಪತಿಭಟನೆ ನಡೆಸುತ್ತಿದ್ದ ಸಾವಿರಾರು ಜನರ ಮೇಲೆ ಗುಂಡಿನ ಸುರಿಮಳೆಗರೆದಾಗ ಅದು ದೊಡ್ಡ ಸುದ್ದಿಯಾಗಲೇ ಇಲ್ಲ. ಇಂದಿಗೂ ಕೂಡಾ ಆ ಪ್ರದೇಶಗಳಲ್ಲಿ ಪೊಲೀಸ್ ದಿಗ್ಬಂಧನ ಮುಂದುವರಿದಿದೆ. ಪೊಲೀಸ್ ಗೋಲಿಬಾರ್‌ನಲ್ಲಿ ಗಾಯಗೊಂಡ ಆದಿವಾಸಿಗಳನ್ನು ಆಸ್ಪತ್ರೆಗೆ ಸಾಗಿಸಲೂ ಪೊಲೀಸರು ತಡೆಯೊಡ್ಡಿದ್ದರು.
ಮಾವೊವಾದಿಗಳ ವಿರುದ್ಧ ಸರಕಾರವು ನಡೆಸುತ್ತಿರುವ ‘ಆಪರೇಶನ್ ಗ್ರೀನ್ ಹಂಟ್’ನಿಂದ ಒಂದು ಪ್ರಯೋಜನವಂತೂ ಆಗಿದೆ. ಇದರಿಂದಾಗಿ ಶ್ರೀಸಾಮಾನ್ಯರಿಗೂ ಸಹ ವಾಸ್ತವವಾಗಿ ಈ ಎಲ್ಲ ಕಾರ್ಯಾಚರಣೆಗಳು ಯಾರ ಹಿತವನ್ನು ಕಾಪಾಡಲು ನಡೆಯುತ್ತಿದೆಯೆಂಬುದು ಸ್ಪಷ್ಟವಾಗಿ ಅರಿವಾಗತೊಡಗಿದೆ. ಹಳ್ಳಿಯ ಸಣ್ಣಪುಟ್ಟ ಮಕ್ಕಳಿಗೂ ಸಹ ಪೊಲೀಸರು ದೊಡ್ಡದೊಡ್ಡ ಕಂಪೆನಿಗಳಿಗಾಗಿ ದುಡಿಯುತ್ತಿದ್ದಾರೆ. ಆಪರೇಶನ್ ಗ್ರೀನ್ ಹಂಟ್ ಮಾವೊವಾದಿಗಳ ವಿರುದ್ಧ ನಡೆಸುತ್ತಿರುವ ಸಮರವಲ್ಲ. ಬದಲಿಗೆ ಅದು ಬಡವರ ವಿರುದ್ಧ ಹೂಡಿರುವ ಯುದ್ದವಾಗಿದೆ ಎಂಬ ಸತ್ಯವು ಮನದಟ್ಟಾಗಿದೆ.
ಮಾವೊವಾದವು ನಗರಪ್ರದೇಶದಲ್ಲಿ ದುಡಿಯುವ ವರ್ಗಗಳಿಗೆ, ದಲಿತ ಚಳವಳಿಗೆ, ಅರಣ್ಯ ಪ್ರದೇಶಗಳಿಂದ ಹೊರಗಿರುವ ರೈತರು ಮತ್ತು ಕೃಷಿ ಕಾರ್ಮಿಕರ ಬವಣೆಗಳಿಗೆ ಅಪ್ರಸ್ತುತವಾಗಿ ಬಿಟ್ಟಿದೆಯೆಂಬ ಆರೋಪ ಕೇಳಿಬರುತ್ತಿದೆ. ಪ್ರಾಯಶಃ ಇದು ನಿಜ. ಆರಣ್ಯಗಳ ಹೊದಿಕೆಯಿಲ್ಲದ ಪ್ರದೇಶಗಳಲ್ಲಿ ಮಾವೊವಾದಿಗಳ ಮಿಲಿಟರೀಕರಣಗೊಂಡ ರಾಜಕೀಯವನ್ನು ನಡೆಸುವುದು ಅಸಾಧ್ಯವಾಗಿದೆ.
ಆದಾಗ್ಯೂ, ಕಮ್ಯೂನಿಸ್ಟ್ ಪಕ್ಷಗಳು ರಾಜಕೀಯದ ಮುಖ್ಯವಾಹಿನಿಯಲ್ಲಿ ಬದುಕುಳಿಯುವುದಕ್ಕಾಗಿ ತಮ್ಮ ವಿಚಾರಧಾರೆಗಳ ಜೊತೆ ರಾಜಿಮಾಡಿಕೊಂಡಿವೆ. ಹೀಗಾಗಿ ಅವುಗಳಿಗೂ ಇತರ ರಾಜಕೀಯ ಪಕ್ಷಗಳ ಮಧ್ಯೆ ಯಾವುದೇ ವ್ಯತ್ಯಾಸವುಳಿದಿಲ್ಲ. ಕಮ್ಯೂನಿಸ್ಟ್ ಪಕ್ಷಗಳು ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳಾದ ಕೇರಳ ಮತ್ತು ಪ.ಬಂಗಾಳಗಳನ್ನು ಹೊರತುಪಡಿಸಿ, ಉಳಿದೆಲ್ಲೆಡೆ ಅವು ನೆಲೆಗಳನ್ನು ಕಳೆದುಕೊಳ್ಳಲಾರಂಭಿಸಿವೆ. ಅವುಗಳ ಕಾರ್ಮಿಕ ಸಂಘಟನೆಗಳು ಕೂಡಾ ನೆಲಕಚ್ಟತೊಡಗಿವೆ. ಹೊಸ ಆರ್ಥಿಕ ನೀತಿಗಳ ಪರಿಣಾಮವಾಗಿ ಕಾರ್ಮಿಕರ ಹಕ್ಕುಗಳು ಕಸಿಯಲ್ಪಡುತ್ತಿರುವುದನ್ನು ತಡೆಗಟ್ಟಲು ಸಹ ಅವುಗಳಿಗೆ ಸಾಧ್ಯವಾಗಲಿಲ್ಲ. ಆದಿವಾಸಿ ಹಾಗೂ ದಲಿತ ಸಮುದಾಯಗಳಿಂದ ಅವು ಬಹುತೇಕ ದೂರವಾಗಿಬಿಟ್ಟಿವೆ.ಎಡರಂಗದ ೩೦ ವರ್ಷಗಳ ಆಡಳಿತವು ಪ.ಬಂಗಾಳವನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ನಂದಿಗ್ರಾಮ ಹಾಗೂ ಸಿಂಗೂರ್‌ಗಳಲ್ಲಿ ಮತ್ತು ಇದೀಗ ಜಂಗಲ್‌ಮಹಲ್ ಪ್ರದೇಶದಲ್ಲಿ ಆದಿವಾಸಿಗಳ ಮೇಲೆ ಎಡಪಕ್ಷಗಳು ನಡೆಸಿದ ದೌರ್ಜನ್ಯಗಳಿಂದಾಗಿ ಅವು ಕೆಲವೇ ವರ್ಷಗಳಲ್ಲಿ ಅಧಿಕಾರ ಕಳೆದುಕೊಂಡಲ್ಲಿ ಅಚ್ಚರಿಯೇನೂ ಇಲ್ಲ.
ಆದರೆ ಮಾವೊವಾದಿಗಳು, ವಿಭಿನ್ನ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾರೆ. ಭೂರಹಿತರಿಗೆ ಭೂಮಿಯ ವಿತರಣೆಗಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳುವುದರಲ್ಲಿ ತಪ್ಪಿಲ್ಲವೆಂಬುದು ಅವರ ವಾದವಾಗಿದೆ. ಆದರೆ ತಮ್ಮ ಧ್ಯೇಯದಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದರೆ ಅವರು ಶ್ರೀಸಾಮಾನ್ಯರ ಬೆಂಬಲದೊಂದಿಗೆ, ತಮ್ಮ ಧ್ಯೇಯಸಾಧನೆಗಾಗಿ ನಡೆಸುತ್ತಿರುವ ಸಶಸ್ತ್ರ ಹೋರಾಟವು ಸಾವಿರಾರು ಜೀವಗಳನ್ನು ತೆಗೆದುಕೊಂಡಿರುವುದೇನೂ ನಿಜ. ಈ ಹೋರಾಟವು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ಅನ್ಯಾಯಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದೆ.
ಇಂದಿಗೂ ಸಹ ಪ್ರಧಾನಿಯು ಬುಡಕಟ್ಟು ಪ್ರದೇಶಗಳ ಅಸಮಾನ ಬೆಳವಣಿಗೆ ಹಾಗೂ ಶೋಷಣೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಸರಕಾರ ಕೂಡಾ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಜಂಟಿ ಅರಣ್ಯ ನಿರ್ವಹಣೆ ನಿಧಿಯನ್ನು ಗ್ರಾಮಪಂಚಾಯತ್‌ಗಳಿಗೆ ವರ್ಗಾಯಿಸುವ ಯೋಜನೆಯನ್ನು ಹೊಂದಿದೆ. ಯೋಜನಾ ಆಯೋಗ ಕೂಡಾ ಬುಡಕಟ್ಟು ಜನರ ಅಭಿವೃದ್ಧಿಗಾಗಿ ೧೪ ಸಾವಿರ ಕೋಟಿ ರೂ. ನೀಡುವುದಾಗಿ ಪ್ರಕಟಿಸಿದೆ. ಈ ಹಣವನ್ನು ಮಧ್ಯವರ್ತಿಗಳ ಜೇಬಿಗೆ ಸೇರದೆ, ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾದರೆ, ಆಗ ಖಂಡಿತವಾಗಿಯೂ ಮಾವೊವಾದಿ ಚಳವಳಿಗೆ ಒಂದು ಬಗೆಯ ಬೆಲೆ ದೊರೆಯಿತೆಂದು ಅರ್ಥ. ಅರಣ್ಯ ಪ್ರದೇಶಗಳ ಹೊರಗೆ ರಾಜಕೀಯ ಮಟ್ಟದಲ್ಲಿ ಮಾವೊವಾದಿಗಳ ಉಪಸ್ಥಿತಿ ಕಂಡುಬರದಿದ್ದರೂ,ಅವರ ಪರವಾಗಿ ಸಹಾನುಭೂತಿ ಹೊಂದಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಮಾವೊವಾದಿಗಳ ವಿರುದ್ಧ ಕೇಳಿಬರುತ್ತಿರುವ ಇನ್ನೊಂದು ಆರೋಪವೆಂದರೆ, ಅವರ ನಾಯಕರು ತಮ್ಮ ಸ್ವಾರ್ಥಸಾಧನೆಗಾಗಿ ಜನರನ್ನು ಬಡವರನ್ನಾಗಿ ಹಾಗೂ ಅನಕ್ಷರಸ್ಥರನ್ನಾಗಿಯೇ ಇರಿಸಲು ಆಸಕ್ತರಾಗಿದ್ದಾರೆಂಬುದು. ದಂಡಕಾರಣ್ಯ ಪ್ರದೇಶವು ಕಳೆದ ೩೦ ವರ್ಷಗಳಿಂದ ಮಾವೊವಾದಿಗಳ ಭದ್ರಕೋಟೆಯಾಗಿದ್ದರೂ, ಅಲ್ಲಿ ಅದು ಯಾಕೆ ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿಲ್ಲ?. ಯಾಕೆ ಅವರು ಚೆಕ್‌ಡ್ಯಾಂಗಳನ್ನು ಮತ್ತು ಸುಧಾರಿ ಕೃಷಿ ಪದ್ಧತಿಯನ್ನು ಜಾರಿಗೊಳಿಸಿಲ್ಲ?. ಅಲ್ಲಿ ಈಗಲೂ ಯಾಕೆ ಜನರು ಪೌಷ್ಟಿಕ ಆಹಾರದ ಕೊರತೆ ಹಾಗೂ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆಂದು ಟೀಕಿಸುವವರು ಹಲವರಿದ್ದಾರೆ.
ಆದರೆ ನಿಷೇಧಿತ ಸಂಘಟನೆಯೊಂದರ ಸದಸ್ಯರನ್ನು, ಅವರು ವೈದ್ಯರಾಗಿರಲಿ ಅಥವಾ ಶಿಕ್ಷಕರಾಗಿರಲಿ, ಕಂಡಲ್ಲಿ ಗುಂಡಿಕ್ಕಿ ಕೊಲ್ಲಲಾಗುತ್ತಿದೆಯೆಂಬ ವಾಸ್ತವಾಂಶವನ್ನು ಅವರು ಯಾಕೆ ಕಡೆಗಣಿಸುತ್ತಿದ್ದಾರೆ?.
ಒರಿಸ್ಸಾ, ಚತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಾವೊವಾದಿಗಳಿಂದ ಬಾಧಿತವಾಗಿರುವ ೨೦೦ ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ (ಎನ್‌ಆರ್‌ಇಜಿಎ)ಯ ಕಾರ್ಯನಿರ್ವಹಣೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ವಿಶ್ಲೇಷಣಾತ್ಮಕ ವರದಿಯು ಹೀಗೆ ವಿವರಿಸಲಾಗಿದೆ.
ಮಾವೊವಾದಿಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ತಡೆಗಟ್ಟುತ್ತಿದ್ದಾರೆಂಬ ಆರೋಪಕ್ಕೆ ಯಾವುದೇ ಹುರುಳಿಲ್ಲವೆಂಬುದು ಕ್ಷೇತ್ರ ಸಮೀಕ್ಷೆಯು ಬಹಿರಂಗಪಡಿಸಿದೆ. ವಾಸ್ತವಾಗಿ ಇತರ ಕೆಲವು ಪ್ರದೇಶಗಳಿಗಿಂತ ಬಸ್ತಾರ್‌ನಲ್ಲಿ (ಮಾವೊವಾದಿಗಳ ಭದ್ರಕೋಟೆ) ಎನ್‌ಆರ್‌ಇಜಿಎ ಅತ್ಯುತ್ತಮವಾಗಿ ಅನುಷ್ಠಾನಗೊಂಡಿದೆ.ಇವೆಲ್ಲದಕ್ಕೂ ಮಿಗಿಲಾಗಿ ಹಲವಾರು ವರ್ಷಗಳ ಹಿಂದೆ ಕನಿಷ್ಠ ದಿನಗೂಲಿ ಕುರಿತಾಗಿ ಈ ಪ್ರದೇಶಗಳಲ್ಲಿ ನಡೆದಿರುವ ಹೋರಾಟಗಳ ನೇತೃತ್ವವನ್ನು ಮಾವೊವಾದಿಗಳು ವಹಿಸಿದ್ದಾರೆಂಬುದು ನೆನಪಿಡತಕ್ಕ ಅಂಶವಾಗಿದೆ.ಇದರ ಪರಿಣಾಮವಾಗಿ ಈಗ ಮಾವೊವಾದಿಗಳು ಪ್ರಬಲವಾಗಿರುವ ಪ್ರದೇಶಗಳಲ್ಲಿ ತೆಂಡು ಎಲೆ ಕಾರ್ಮಿಕರ ದಿನಗೂಲಿಯಲ್ಲಿ ಎರಡು ಪಟ್ಟು ಏರಿಕೆಯಾಗಿದೆ.
ಮಾವೊವಾದಿಗಳೆಂದರೆ ಕೈಬೆರಳೆಣಿಕೆಯ ಸಂಖ್ಯೆಯಷ್ಟಿರುವ ಹೊರಗಿನವರಿಂದ ನಿಯಂತ್ರಿಸಲ್ಪಡುವ ದುಷ್ಟಕೂಟವಾಗಿದೆಯೆಂದು ಆಪಾದಿಸುವವರಿದ್ದಾರೆ. ಮಾವೊವಾದದ ಕಟುಟೀಕಾಕಾರರಾಗಿರುವ ವಿಶ್ವವಿದ್ಯಾನಿಲಯದ ಉಪನ್ಯಾಸಕರೊಬ್ಬರು, ಮಾವೊವಾದಿಗಳನ್ನು, ಬಡ ಆದಿವಾಸಿಗಳನ್ನು ನೆತ್ತರುಕುಡಿಯುತ್ತಿರುವ ಪರಾವಲಂಭಿಗಳೆಂದು ಜರೆದಿದ್ದರು. ತನ್ನ ವಾದವನ್ನು ಸಮರ್ಥಿಸಲು ಆತ ಮಾವೊವಾದಿಗಳಿಂದ ಬಾಧಿತವಾದ ದಂಡಕಾರಣ್ಯ ಪ್ರದೇಶಕ್ಕೂ, ದಕ್ಷಿಣದಲ್ಲಿರುವ ಕೇರಳ ರಾಜ್ಯವು ಸಾಧಿಸಿರುವ ಪ್ರಗತಿಯನ್ನು ಪರಸ್ಪರ ಹೋಲಿಸಿದ್ದರು. ಆದಿವಾಸಿಯೇತರ ಮಾವೊವಾದಿ ನಾಯಕರು ಅರಣ್ಯದಲ್ಲಿ ಅವಿತುಕೊಂಡಿರುವ ಹೇಡಿಗಳೆಂದು ಅವರು ನಿಂದಿಸಿದ್ದರು.ಆದಿವಾಸಿ ಮಾವೊವಾದಿ ಗೆರಿಲ್ಲಾಗಳು ಹಾಗೂ ಗ್ರಾಮಾಂತರ ಮಾವೊವಾದಿ ಸಶಸ್ತ್ರ ಪಡೆಯು, ಗಾಂಧಿವಾದಿ ನಾಯಕರ ಮುಂದೆ ಶರಣಾಗತರಾಗಬೇಕೆಂದು ಅವರು ಕರೆ ನೀಡಿದ್ದರು.
ಮಾವೊವಾದಿ ಚಳವಳಿಯಲ್ಲಿ ಸಕ್ರಿಯವಾಗಿರುವ ಆದಿವಾಸಿಯೇತರ ನಾಯಕರೆಲ್ಲರನ್ನೂ ಯುದ್ಧಾಪರಾಧಗಳಿಗಾಗಿ ವಿಚಾರಣೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದ್ದರು.
ಆದರೆ ಈ ವಿಚಾರವಾದಿಗೆ ಶರಣಾಗತಿಯ ವಿಷಯದಲ್ಲಿ ಆದಿವಾಸಿಯೇತರ ಗಾಂಧಿವಾದಿಗಳು ಬೇಕಾಗುತ್ತಾರೆ. ಆದರೆ ಆದಿವಾಸಿಯೇತರ ಮಾವೊವಾದಿಗಳು ಯಾಕೆ ಬೇಡವಾಗುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ.
ಹಸಿವಿನಲ್ಲೇ ಬಳಲುತ್ತ್ತಿರುವವರಿಂದ ನಿರಶನ ಸತ್ಯಾಗ್ರಹ ನಿರೀಕ್ಷಿಸಲಾದೀತೇ?
ಒರಿಸ್ಸಾದಲ್ಲಿ ವಿವಿಧ ರೀತಿಯ ನಿಶಸ್ತ್ರ ಪ್ರತಿರೋಧ ಚಳವಳಿಯನ್ನು ನಡೆಸುತ್ತಿರುವ ಸಂಘಟನೆಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿರುವುದು ನಿಜ. ಆದರೂ ಕೂಡಾ ಅವು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಯೋಜನೆಗಳನ್ನು ಮುಂದುವರಿಸುವುದಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿವೆ. ಕಳಿಂಗ ನಗರದಲ್ಲಿ ಟಾಟಾ, ಜಮ್ಶೆದ್‌ಪುರದಲ್ಲಿ ಪೊಸ್ಕೊ, ನಿಯಮ್‌ಗಿರಿಯಲ್ಲಿ ವೇದಾಂತ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಕ್ಕುವಲ್ಲಿ ಈ ಸಂಘಟನೆಗಳು ಯಶಸ್ವಿಯಾಗಿವೆ. ಈ ಸಂಘಟನೆಗಳು ಸಕ್ರಿಯವಾಗಿರುವ ಒರಿಸ್ಸಾ ರಾಜ್ಯವನ್ನು ಮಾವೊವಾದಿಗಳು ಒಂದು ಪಡಸಾಲೆಯಂತೆ ಬಳಸಿಕೊಳ್ಳುತ್ತವೆಯೇ ಹೊರತು, ದೊಡ್ಡ ಪ್ರಮಾಣದ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಭದ್ರತಾ ಪಡೆಗಳು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧ ನಿಶಸ್ತ್ರ ಚಳವಳಿಯಲ್ಲಿ ತೊಡಗಿರುವ ಜನತೆಯನ್ನು ದಮನಿಸುವ ಕಾರ್ಯಾಚರಣೆಯನ್ನು ಮುಂದು ವರಿಸಿದಲ್ಲಿ ಮಾವೊವಾದಿಗಳು ಅಖಾಡಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
೨೦೦೬ರಲ್ಲಿ ಕಂಧಮಲ್ ಜಿಲ್ಲೆಯಲ್ಲಿ ದಲಿತರು ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಆದಿವಾಸಿ ಸಮುದಾಯಗಳ ನಡುವೆ ಉದ್ವಿಗ್ನತೆಯು ತಾರಕಕ್ಕೇರಿದ ಸಂದರ್ಭದಲ್ಲಿ, ಮಾವೊವಾದಿಗಳು ವಿಶ್ವಹಿಂದೂ ಪರಿಷತ್ ನಾಯಕ ಲಕ್ಷ್ಮಣಾನಂದ ಸರಸ್ವತಿಯವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಲಕ್ಷ್ಮಣಾನಂದ ಸರಸ್ವತಿ ಆದಿವಾಸಿಗಳನ್ನು ಹಿಂದೂಧರ್ಮಕ್ಕೆ ಮರಳಿ ಕರೆತರುವ ಉದ್ದೇಶದಿಂದ ಕಂಧಮಲ್ ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾ ಚರಿಸುತ್ತಿದ್ದರು. ಲಕ್ಷ್ಮಣಾನಂದ ಸರಸ್ವತಿಯ ಹತ್ಯೆಯ ಬಳಿಕ ತೀರಾ ಇತ್ತೀಚೆಗೆ ಹಿಂದೂಧರ್ಮಕ್ಕೆ ಮತಾಂತರಗೊಂಡ ಕಂಧಾ ಬುಡಕಟ್ಟು ಜನರಿಗೆ ಹಿಂಸಾಚಾರಕ್ಕಿಳಿಯುವಂತೆ ಕುಮ್ಮಕ್ಕು ನೀಡಲಾಯಿತು. ಈ ಕ್ರೈಸ್ತ ವಿರೋಧಿ ಹಿಂಸಾಚಾರದಲ್ಲಿ ಸುಮಾರು ೪೦೦ ಗ್ರಾಮಗಳು ಸ್ಮಶಾನಗಳಾದವು. ಹಲವು ವಾರಗಳವರೆಗೆ ನಡೆದ ಗಲಭೆಗಳಲ್ಲಿ ೫೪ ಮಂದಿ ಪನ್ನಾ ಬುಡಕಟ್ಟಿನ ದಲಿತ ಕ್ರೈಸ್ತರನ್ನು ಬರ್ಬರವಾಗಿ ಹತ್ಯೆಗೈಯಲಾಯಿತು. ೨೦೦ಕ್ಕೂ ಅಧಿಕ ಚರ್ಚ್‌ಗಳನ್ನು ಸುಟ್ಟು ಹಾಕಲಾಯಿತು, ಸಾವಿರಾರು ದಲಿತ ಕ್ರೈಸ್ತರು ಪ್ರಾಣಭಯದಿಂದ ಮನೆಮಾರು ತೊರೆದು, ಕಾಡಿನಲ್ಲಿ ಆವಿತುಕೊಂಡರು. ಈಗಲೂ ಸ್ವಗ್ರಾಮಕ್ಕೆ ಮರಳುವ ಧೈರ್ಯವಿರದೆ, ನಿರಾಶ್ರಿತ ಶಿಬಿರಗಳಲ್ಲಿ ಉಳಿದುಕೊಂಡವರು ಹಲವರಿದ್ದಾರೆ.
ಆದರೆ ಇದೀಗ ಅಷ್ಟೆ ಅಪಾಯಕಾರಿಯಾದ ಪರಿಸ್ಥಿತಿಯು ಒರಿಸ್ಸಾದ ನಾರಾಯಣಪಟ್ನ ಹಾಗೂ ಕೊರಾಪುಟ್ ಜಿಲ್ಲೆಗಳಲ್ಲಿ ತಲೆಯೆತ್ತಿದೆ. ಈ ಪ್ರದೇಶಗಳಲ್ಲಿ ಚಾಸಿ ಮುಲ್ಯ ಆದಿವಾಸಿ ಸಂಘವು, ಸ್ಥಳೀಯ ಲೇವಾದೇವಿಗಾರರು ಹಾಗೂ ಮದ್ಯದ ದೊರೆಗಳು ಬುಡಕಟ್ಟು ಜನರಿಂದ ಕಸಿದುಕೊಂಡ ಭೂಮಿಯನ್ನು ಮರಳಿ ಪಡೆಯಲು ಪ್ರಬಲವಾದ ಚಳವಳಿಯನ್ನು ನಡೆಸುತ್ತಿದೆ. ಆದರೆ ಪೊಲೀಸರು ಈಗಾಗಲೇ ಚಾಸಿ ಮುಲ್ಯ ಆದಿವಾಸಿ ಸಂಘವನ್ನು, ಮಾವೊವಾದಿಗಳ ಒಂದು ವೇದಿಕೆಯೆಂದು ಹಣೆಪಟ್ಟಿ ಕಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ಈಗ ಪೊಲೀಸ್‌ರಾಜ್ ಸ್ಥಾಪನೆಯಾಗಿದೆ. ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ನಡೆಸಿದ್ದ ನೂರಾರು ಆದಿವಾಸಿಗಳು ಕೊರಾಪುಟ್ ಜೈಲಿನಲ್ಲಿ ಕೊಳೆಯುತ್ತಿದ್ದರೆ, ಸಾವಿರಾರು ಜನರು ತಮ್ಮ ಮನೆಗಳಿಗೆ ಹೋಗಲು ಹೆದರಿಕೊಂಡು, ಕಾಡುಗಳಲ್ಲಿ ದಿನಗಳೆಯುತ್ತಿದ್ದಾರೆ.
ಇಂತಹ ಸನ್ನಿವೇಶಗಳಲ್ಲಿ ಜೀವಿಸುತ್ತಿರುವ ಜನರಿಗೆ ಶಾಂತಿಮಂತ್ರವನ್ನು ಜಪಿಸುವ ಕೈಬೆರಳೆಣಿಕೆಯಷ್ಟು ಮಂದಿಯಿಂದ ಬೋಧನೆಗಳನ್ನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆಗ ಅವರಿಗೆ ಬಂಧೂಕುಗಳನ್ನು ಹಿಡಿದು, ತಮ್ಮ ಆಶೋತ್ತರಗಳನ್ನು ಬೆಂಬಲಿಸುವ ಜನರು ಹೆಚ್ಚು ಅಪ್ಯಾಯವಾಗುತ್ತಾರೆ. ಗಾಂಧಿವಾದಿ ಸತ್ಯಾಗ್ರಹವು ಒಂದು ಬಗೆಯ ರಾಜಕೀಯ ನಾಟಕರಂಗವಾಗಿದೆ. ಈ ಸತ್ಯಾಗ್ರಹವು ಪರಿಣಾಮಕಾರಿಯಾಗಬೇಕಾದರೆ, ಆ ಬಗ್ಗೆ ಸಾವಕಾಶವಾಗಿ ವಿಚಾರವಿಮರ್ಶೆ ಮಾಡುವಂತಹ ಸಹಾನುಭೂತಿಯುಳ್ಳ ಪ್ರೇಕ್ಷಕರ ಅಗತ್ಯ ವಿರುತ್ತದೆ. ಆದರೆ ದಟ್ಟಾರಣ್ಯದ ನಡುವೆ ಜೀವಭಯದಿಂದ ಅಡಗಿರುವ ಆದಿವಾಸಿ ಗಳಿಂದ ಇಂತಹ ತಾಳ್ಮೆಯ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅರಣ್ಯದ ನಡುವೆ ಇರುವ ಗ್ರಾಮದಲ್ಲಿ ೮೦೦ಕ್ಕೂ ಅಧಿಕ ಪೊಲೀಸರು ಗುಂಪುಗುಂಪಾಗಿ ಗುಡಿಸಲುಗಳನ್ನು ಸುಟ್ಟುಹಾಕಿ, ಮನಬಂದಂತೆ ಜನರಿಗೆ ಗುಂಡಿಕ್ಕುತ್ತಿದ್ದರೆ, ಉಪವಾಸ ಸತ್ಯಾಗ್ರಹ ಮಾಡಿ ಏನು ಪ್ರಯೋಜನ?. ಅಷ್ಟಕ್ಕೂ ಪ್ರತಿ ದಿನವೂ ಅರೆಹೊಟ್ಟೆಯಲ್ಲೇ ಇರುವ ಜನರನ್ನು ನಿರಶನ ಸತ್ಯಾಗ್ರಹ ಮಾಡಿ ಎಂದು ಕೇಳುವುದು ಯಾವ ನ್ಯಾಯ?.
ಸರಕಾರವು ತನ್ನನ್ನು ವಿರೋಧಿಸುವ ಪ್ರತಿಯೊಬ್ಬರಿಗೂ ಮಾವೊವಾದಿಗಳೆಂಬ ಹಣೆಪಟ್ಟಿ ಕಟ್ಟುತ್ತಿದೆ. ಹೀಗಾಗಿ ಮಾವೊವಾದಿಗಳು ದೇಶದ ವಿದ್ಯಮಾನಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಮಾವೊವಾದಿಗಳಿಗೆ ಹಫ್ತಾ ದೊರೆಯುವ ತನಕ ಅವರು ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದುವರಿಸಲು ಆಸ್ಪದ ನೀಡುತ್ತಾರೆಂಬ ಭಾವನೆ ಗಣಿಗಾರಿಕೆ ಕಂಪೆನಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅನೇಕ ಜನರಲ್ಲಿದೆ. ಗಣಿಗಾರಿಕೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟವು ಮಾವೊವಾದಿಗಳ ಸಶಸ್ತ್ರ ಚಳವಳಿಗಿಂತ ಹೆಚ್ಚು ಉತ್ತಮವೆಂಬ ಭಾವನೆಯನ್ನು ವ್ಯಕ್ತಪಡಿಸುವ ಹಲವು ಬುದ್ಧಿಜೀವಿ ನಾಯಕರಿದ್ದಾರೆ. ಮಾತ್ರವಲ್ಲ ಪರಿಸರ ಧಾರಣಾಶೀಲ ಗಣಿಗಾರಿಕೆಗೆ ಬೆಂಬಲವನ್ನು ಅವರು ನೀಡುತ್ತಾರೆ. ಅಧಿಕ ಮೊತ್ತದ ರಾಜಧನ, ಸಂತ್ರಸ್ತರಿಗೆ ಉತ್ತಮ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಯನ್ನು ಅವರು ನೀಡುತ್ತಾರೆ.
ನಮ್ಮ ಹಾಲಿ ಗಣಿಗಾರಿಕಾ ಸಚಿವರೂ ಕೂಡಾ ಇಂಥವರ ಸಾಲಿಗೆ ಸೇರುತ್ತಾರೆ. ಸಂಸತ್‌ನಲ್ಲಿ ಅವರು ಇತ್ತೀಚೆಗೆ ಮಾತನಾಡುತ್ತಾ, ಗಣಿಗಾರಿಕೆಯಿಂದ ದೊರೆಯುವ ಲಾಭದ ಶೇ.೨೫ರಷ್ಟು ಪಾಲು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ದೊರಕಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಹೇಳುವ ಇಂತಹ ಭರವಸೆಗಳನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.
ಈಗ ದೇಶದ ಗಣಿಗಾರಿಕಾ ವಲಯಗಳಲ್ಲಿ ನಡೆಯುತ್ತಿರುವ ಬಾಕ್ಸೆಟ್ ಆದಿರಿನ ಗಣಿಗಾರಿಕೆಯಿಂದ ಗಣಿಗಾರಿಕಾ ಕಂಪೆನಿಗಳಿಗೆ ನೂರಾರು ಕೋಟಿ ಡಾಲರ್ ಆದಾಯ ದೊರೆಯುತ್ತದೆ. ಆದರೆ ಪರಿಸರಕ್ಕೆ ಸಹನೀಯವಾದ ರೀತಿಯಲ್ಲಿ ಬಾಕ್ಸೆಟ್‌ನ ಗಣಿಗಾರಿಕೆಯನ್ನು ಮಾಡಿ, ಅದನ್ನು ಆಲ್ಯುಮಿನಿಯಂ ಆಗಿ ಸಂಸ್ಕರಿಸುವಂತಹ ಯಾವ ವಿಧಾನವೂ ಪ್ರಸ್ತುತ ಭಾರತದಲ್ಲಿ ಆಚರಣೆಯಲ್ಲಿಲ್ಲ. ಇದೊಂದು ಅತ್ಯಂತ ವಿಷಕಾರಿಯಾದ ಪ್ರಕ್ರಿಯೆಯಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಂತೂ ಬಾಕ್ಸೆಟ್ ಸಂಸ್ಕರಿಸಿ, ಆಲ್ಯುಮಿನಿಯಂ ಉತ್ಪಾದಿಸುವ ಪ್ರಕ್ರಿಯೆಯನ್ನು ತಮ್ಮ ದೇಶದಲ್ಲಿ ನಡೆಸಲು ಸುತರಾಂ ಒಪ್ಪಿಗೆ ನೀಡುವುದಿಲ್ಲ. ಒಂದು ಟನ್ ಆಲ್ಯುಮಿನಿಯಂ ಉತ್ಪಾದಿಸಬೇಕಾದರೆ, ನಿಮಗೆ ಆರು ಟನ್ ಬಾಕ್ಸೆಟ್, ಸಾವಿರಾರು ಟನ್ ಜಲ ಹಾಗೂ ಬೃಹತ್ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ಹೀಗಾಗಿ ನೀರನ್ನು ಸಂಗ್ರಹಿಸಲು ಮತ್ತು ವಿದ್ಯುತ್ ಉತ್ಪಾದಿಸಲು ದೊಡ್ಡ ಅಣೆಕಟ್ಟು ಗಳು ಬೇಕಾಗುತ್ತವೆ. ಇಷ್ಟಕ್ಕೂ ಉತ್ಪಾದನೆಯಾದ ಅಲ್ಯುಮಿನಿಯಂ ಎಲ್ಲಿಗೆ ಹೋಗುತ್ತದೆಯೆಂಬ ಪ್ರಶ್ನೆಯೇಳುತ್ತದೆ?. ಶಸ್ತ್ರಾಸ್ತ್ರಗಳನ್ನು ತಯಾರಿಕಾ ಉದ್ಯಮದಲ್ಲಿ ಅಲ್ಯುಮಿನಿಯಂ ಪ್ರಧಾನವಾಗಿ ಬಳಕೆಯಾಗುತ್ತಿರುವ ಲೋಹವಾಗಿದೆ. ಅದು ಕೂಡಾ ವಿದೇಶಗಳ ಶಸ್ತ್ರಾಸ್ತ್ರ ಉದ್ಯಮಗಳಿಗಾಗಿ ಈ ಲೋಹವನ್ನು ರಫ್ತ ಮಾಡಲಾಗುತ್ತಿದೆ.
ಭಾರತದಲ್ಲಿ ಇಷ್ಟೆಲ್ಲಾ ಹಿಂಸಾಚಾರ ಹಾಗೂ ದುರಾಸೆಗಳ ಮಧ್ಯೆ, ಆಶಾವಾದದ ಹೊಂಗಿರಣ ಕೂಡಾ ಕಾಣಿಸುತ್ತಿದೆ. ಕೊಳ್ಳುಬಾಕತನ ಸಂಸ್ಕೃತಿಗೆ ಅಡಿಯಾಳಾಗದ ದೊಡ್ಡ ಜನಸಮೂಹ ಈಗಲೂ ಕೂಡಾ ನಮ್ಮ ದೇಶದಲ್ಲಿ ಕಾಣಸಿಗುತ್ತದೆ. ಗಾಂಧೀಜಿ ಪ್ರತಿಪಾದಿಸಿದ ಧಾರಣಾಶೀಲತೆ ಹಾಗೂ ಸ್ವಾವಲಂಬನೆ ತತ್ವಗಳಿಗಾಗಿ ಹೋರಾಟ ನಡೆಸಿದ ಉದಾತ್ತ ಪರಂಪರೆಯ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಹಾಗೆಯೇ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಿದ್ಧಾಂತಕ್ಕೆ ಬದ್ಧವಾಗಿರುವ ಸಮಾಜವಾದಿಗಳು ನಮ್ಮೆದುರಿಗಿದ್ದಾರೆ. ಮಾತ್ರವಲ್ಲದೆ ಈ ಎರಡೂ ವಿಚಾರಧಾರೆಗಳಿಗೆ ಗಂಭೀರ ರೀತಿಯಲ್ಲಿ ಸವಾಲೊಡ್ಡುವ ಅಂಬೇಡ್ಕರ್ ಚಿಂತನೆಯೂ ಭದ್ರ ನೆಲೆಯನ್ನು ಕಂಡುಕೊಂಡಿದೆ. ಈಗ ನಾವು ಅತ್ಯಂತ ಅಭೂತಪೂರ್ವವಾದ ಒಕ್ಕೂಟವನ್ನು ಸಾಧಿಸಿರುವ ಅನುಭವಸ್ಥ, ತಿಳುವಳಿಕೆ ಮತ್ತು ದೂರದೃಷ್ಟಿಯನ್ನು ಹೊಂದಿದ ಪ್ರತಿರೋಧ ಚಳವಳಿಗಳನ್ನು ಕಾಣುತ್ತಿದ್ದೇವೆ.
ಇವೆಲ್ಲದಕ್ಕೂ ಮಿಗಿಲಾಗಿ ಭಾರತದಲ್ಲಿ ಹೆಚ್ಚುಕಮ್ಮಿ ೧೦ ಕೋಟಿಗೂ ಅಧಿಕ ಆದಿವಾಸಿಗಳಿದ್ದಾರೆ. ಧಾರಣಾಶೀಲ ಬದುಕಿನ ರಹಸ್ಯಗಳನ್ನು ಈಗಲೂ ತಿಳಿದಿರುವ ಜನಸಮುದಾಯದಲ್ಲಿ ಅವರು ಕೂಡಾ ಸೇರಿದ್ದಾರೆ. ಒಂದು ವೇಳೆ ಈ ಜನಸಮೂಹವು ಕಣ್ಮರೆಯಾದಲ್ಲಿ ಈ ಮಹತ್ವದ ರಹಸ್ಯಗಳನ್ನು ಅವರು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ. ಆಪರೇಷನ್ ಗ್ರೀನ್ ಹಂಟ್‌ನಂತಹ ಸಮರಗಳು ಈ ಆದಿವಾಸಿಗಳನ್ನು ನಿರ್ಮೂಲನೆ ಮಾಡುತ್ತಿವೆ. ಹೀಗಾಗಿ ಈ ಸಮರದತ ಪ್ರತಿಪಾದಕರು ವಿನಾಶದ ಬೀಜಗಳನ್ನು ಬಿತ್ತುತ್ತಾರೆ. ಮಧ್ಯಭಾರತದಲ್ಲಿ ನಡೆಯುತ್ತಿರುವ ಈ ಸಮರವು ಇಡೀ ಮನುಕುಲಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಈ ಕಾರಣದಿಂದಲಾದರೂ ಯುದ್ಧವನ್ನು ವಿರೋಧಿಸುತ್ತಿರುವ ಎಲ್ಲ ರಾಜಕೀಯ ಸಂಘಟನೆಗಳ ನಡುವೆ ನೈಜ ಹಾಗೂ ತ್ವರಿತ ಮಾತುಕತೆಗಳು ನಡೆಯಬೇಕಾದ ಅಗತ್ಯವಿದೆ.
ಯಾವಾಗ ಬಂಡವಾಳಶಾಹಿವಾದವು, ತನ್ನ ನಡುನೆ ಬಂಡವಾಳಶಾಹಿ ಯೇತರ ಸಮಾಜಗಳನ್ನು ತಾಳಿಕೊಳ್ಳಲು ಸಾಧ್ಯವಾಗುವುದೋ, ಯಾವಾಗ ಬಂಡವಾಳಶಾಹಿ ವಾದಕ್ಕೆ, ತನಗೆ ನಿರಂತರವಾಗಿ ಕಚ್ಚಾವಸ್ತುಗಳು ಪೂರೈಕೆಯಾಗುತ್ತವೆಯೆಂಬ ಭ್ರಮೆಯು ಅಳಿಸಿಹೋಗುವುದೋ, ಆಗ ಹೊಸ ಬದಲಾವಣೆ ಖಂಡಿತವಾಗಿಯೂ ಕಾಣಸಿಗುವುದು.
ಜಗತ್ತಿಗೆ ಯಾವುದಾದರೂ ಆಶಾವಾದವೆಂಬುದಿದ್ದರೆ, ಅದು ನಗರಗಳ ದೊಡ್ಡ ಕಟ್ಟಡಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು, ಹವಾಮಾನ ಬದಲಾವಣೆಯ ಕುರಿತು ಸಮಾವೇಶಗಳನ್ನು ನಡೆಸುವ ಮಂದಿಯಿಂದ ದೊರೆಯಲು ಸಾಧ್ಯವಿಲ್ಲ. ಅದು ತಮ್ಮ ಅರಣ್ಯಗಳನ್ನು, ಪರ್ವತಗಳನ್ನು ಹಾಗೂ ನದಿಗಳನ್ನು ರಕ್ಷಿಸಲು ಹೋರಾಡುತ್ತಿರುವ ಜನರಿಂದ ಮಾತ್ರ ಸಾಧ್ಯ. ಏಕೆಂದರೆ ಈ ಅರಣ್ಯಗಳು, ಪರ್ವತಗಳು ಹಾಗೂ ನದಿಗಳನ್ನು ತಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆಯಿಂದಲೇ ಅವರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡುತ್ತಿದ್ದಾರೆ.
ಪ್ರಸಕ್ತ ಜಗತ್ತಿನ ಬಗ್ಗೆ ವಿಭಿನ್ನ ಕಲ್ಪನೆಯನ್ನು ಹೊಂದಿದವರನ್ನು ನಿರ್ಮೂಲಗೊಳಿಸುವುದನ್ನು ನಿಲ್ಲಿಸುವುದೇ ಈಗಿನ ಪ್ರಪಂಚಕ್ಕೆ ಹೊಸ ವರ್ಚಸ್ಸನ್ನು ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಪ್ರಥಮ ಹೆಜ್ಜೆಯಾಗಿದೆ. ನಮ್ಮ ಪರಂಪರೆಯ ಪಾಲಕರಾಗಿರುವ, ಆದರೆ ನಿಜವಾಗಿ ನಮ್ಮ ಭವಿಷ್ಯದ ಮಾರ್ಗದರ್ಶಕರಾಗಿರುವ ಈ ಜನರ ಉಳಿವಿಗಾಗಿ ಕೆಲವೊಂದು ಭೌತಿಕ ಅವಕಾಶಗಳನ್ನು ಒದಗಿಸುವುದು ತುರ್ತು ಅಗತ್ಯವಾಗಿದೆ. ಹೀಗೆ ಮಾಡಲು ನಾವು ನಮ್ಮನ್ನು ಆಳುವವರಿಗೆ ಕೆಲವೊಂದು ಪ್ರಶ್ನೆಯನ್ನು ಕೇಳಬೇಕಾಗಿದೆ. ನೀವು ನದಿಯಲ್ಲಿ ನೀರನ್ನು, ಕಾಡಲ್ಲಿ ಮರಗಳನ್ನು, ಪರ್ವತಗಳಲ್ಲಿ ಆದಿರನ್ನು ಉಳಿಸಬಲ್ಲಿರಾ?. ಅದು ಅವರಿಗೆ ಸಾಧ್ಯವಿಲ್ಲದಿದ್ದರೆ, ಈ ಸಮರಗಳಲ್ಲಿ ಸಂತ್ರಸ್ತರಾದವರಿಗೆ ನೈತಿಕತೆಯ ಬೋಧನೆ ಮಾಡುವುದನ್ನು ಕೂಡಾ ಅವರು ನಿಲ್ಲಿಸಬೇಕು.

ಹಸಿವಿನ ಮಕ್ಕಳ ಭಾರತ
ಗೆತಿನ್ ಚೇಂಬರ್‌ಲೀನ್
ಕೃಪೆ: ಗಾರ್ಡಿಯನ್
ಮಿರ್ಗಿತಾಂಡ್, ಜಾರ್ಖಂಡ್ ರಾಜ್ಯದ ಒಂದು ಪುಟ್ಟ ಗ್ರಾಮ. ಅಲ್ಲಿನ ಗುಡಿಸಲೊಂದರಲ್ಲಿ ಒಲೆಯ ಮುಂದೆ ನಿಂತುಕೊಂಡಿರುವ ಬಾಲಕ ಸುಖ್‌ಲಾಲ್ ಹೆಂಬ್ರೊಮ್, ತನ್ನ ಬರಿಹೊಟ್ಟೆಯ ಮೇಲೆ ಬಾಳೆ ಎಲೆಯೊಂದನ್ನು ಹಿಡಿದುಕೊಂಡು, ಪಿಳಿಪಿಳಿ ಕಣ್ಣುಗಳಿಂದ, ತನ್ನ ಎದುರು ಕುಳಿತಿರುವ ವೃದ್ಧನೊಬ್ಬನನ್ನೇ ದಿಟ್ಟಿಸುತ್ತಿದ್ದಾನೆ. ಒಮ್ಮಿಂದೊಮ್ಮೆಗೇ ವೃದ್ಧ ಠಾಕೂರ್ ದಾಸ್, ಬೆಂಕಿಯಿಂದ ಧಗಧಗಿಸುತ್ತಿದ್ದ ಒಲೆಯಿಂದ ಕಾದ ಕಬ್ಬಿಣದ ಸರಳನ್ನು ತೆಗೆದು ಹುಡುಗನ ಹೊಟ್ಟೆಗೆ ಬರೆಯಿಡುತ್ತಾನೆ.
ಆಗ ನೋವನ್ನು ಸಹಿಸಲಾಗದೆ ಬಾಲಕ ಜೋರಾಗಿ ಬೊಬ್ಬಿಡುತ್ತಾನೆ. ಹೊಟ್ಟೆಯ ಚರ್ಮದ ಮೇಲೆ ದೊಡ್ಡ ಗುಳ್ಳೆಯೇಳುತ್ತದೆ. ಈ ಕಾದ ಸಲಾಖೆಯಿಂದ ಮತ್ತೆ ಮತ್ತೆ ಬಾಲಕನ ಹೊಟ್ಟೆಗೆ ಬರೆಯೆಳೆಯಲಾಗುತ್ತದೆ. ಬಾಲಕನ ರೋದನ ಹೆಚ್ಚಾದಂತೆ,ಅಲ್ಲಿದ್ದವರಿಗೆ ಸಂತಸವಾಗುತ್ತದೆ. ಏಕೆಂದರೆ, ಮಿರ್ಗಿತಾಂಡ್ ಗ್ರಾಮದ ಜನತೆಗೆ, ತಮ್ಮ ಮಕ್ಕಳನ್ನು ಬಾಧಿಸುತ್ತಿರುವ ಹೊಟ್ಟೆನೋವನ್ನು ಗುಣಪಡಿಸಲು, ಕಾದಕಬ್ಬಿಣದಿಂದ ಬರೆಯೇಳುವುದಷ್ಟೇ ತಮಗಿರುವ ಏಕಮಾತ್ರ ದಾರಿ ಎಂದು ಭಾವಿಸಿದ್ದಾರೆ.
ತನ್ನ ಮಗುವಿನ ಮೇಲೆ ಈ ಅಮಾನುಷ ಆಚರಣೆಯನ್ನು ನಡೆಸಿದ್ದಕ್ಕಾಗಿ ದಾಸ್‌ಗೆ ಕಿಂಚಿತ್ತೂ ಬೇಸರವಿಲ್ಲ. ಅಷ್ಟಕ್ಕೂ,ಇಡೀ ಗ್ರಾಮದಲ್ಲಿ ಹೊಟ್ಟೆಯಲ್ಲಿ ಬರೆಯಿಲ್ಲದ ಒಬ್ಬನೇ ಒಬ್ಬ ವ್ಯಕ್ತಿ ಕಾಣಸಿಗುವುದು ತೀರಾ ಕಷ್ಟ. ಹೀಗೆ ಹೊಟ್ಟೆಗೆ ಬರೆಯೆಳೆಯಲ್ಪಟ್ಟ ಕೆಲವು ಮಕ್ಕಳು ಸತ್ತಿದ್ದರೂ ಸಹ, ಈ ಕ್ರೂರ ಆಚರಣೆಯು ಈಗಲೂ ಮುಂದುವರಿದಿದೆ. ಏಕೆಂದರೆ ತಮ್ಮ ಮಕ್ಕಳಿಗೆ ಸಮರ್ಪಕ ಪೌಷ್ಟಿಕ ಆಹಾರವನ್ನು ಒದಗಿಸಲು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವ ಆರ್ಥಿಕ ಚೈತನ್ಯ ಹೆತ್ತವರಿಗಿಲ್ಲದಿರುವುದರಿಂದಲೇ,ಅವರು ಹೊಟ್ಟೆಗೆ ಬರೆಯೆಳೆಯುವಂತಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆಂಬುದರಲ್ಲಿ ಸಂಶಯವಿಲ್ಲ.
ಕೃಷಿಕ್ಷೇತ್ರದಲ್ಲಿ ಹೂಡಿಕೆಯ ವೈಫಲ್ಯ ಹಾಗೂ ಸಣ್ಣ ಪ್ರಮಾಣದ ಕೃಷಿಗೆ ಸರಕಾರಿ ಬೆಂಬಲದ ಕೊರತೆಯು, ಭಾರತದ ಸುಮಾರು ಅರ್ಧಾಂಶದಷ್ಟು ಮಕ್ಕಳನ್ನು ಪೌಷ್ಟಿಕ ಆಹಾರದ ಅಭಾವದಿಂದ ನರಳುವಂತೆ ಮಾಡಿದೆ. ಜೊತೆಗೆ ದೇಶದ ಸುಮಾರು ೧೦೦ ಕೋಟಿ ಜನಸಂಖ್ಯೆಯ ಐದನೆ ಒಂದಂಶದಷ್ಟು ಜನರನ್ನು ಹಸಿವಿನ ಕೂಪಕ್ಕೆ ತಳ್ಳಿದೆ.
ಜಾಗತಿಕ ಮಕ್ಕಳ ಸೇವಾಸಂಸ್ಥೆ ‘ಆಕ್ಷನ್ ಏಯ್ಡ್’ ಶತಮಾನದ ಅಭಿವೃದ್ಧಿ ಗುರಿಗಳ ಕುರಿತು ನ್ಯೂಯಾರ್ಕ್‌ನಲ್ಲಿ ಮುಂದಿನ ವಾರ ನಡೆಸಲಿರುವ ಶೃಂಗಸಭೆಗೆ ಪೂರ್ವಭಾವಿಯಾಗಿ ಬಿಡುಗಡೆಗೊಳಿಸಿರುವ ವರದಿಯು, ವಿಶ್ವದ ಕಡುಬಡತನದ ರಾಷ್ಟ್ರಗಳ ಜನತೆಯ ಹಸಿವನ್ನು ನೀಗಿಸಬೇಕಾದರೆ ವರ್ಷಕ್ಕೆ ೨೯೦ ಶತಕೋಟಿ ಡಾಲರ್‌ಗಳ ವೆಚ್ಚ ತಗಲುತ್ತದೆ ಎಂದು ಹೇಳಿದೆ. ಇದು ೨೦೧೫ರೊಳಗೆ ಜಾಗತಿಕ ಮಟ್ಟದಲ್ಲಿ ಹಸಿವಿನ ಸಮಸ್ಯೆಯನ್ನು ನೀಗಿಸುವ ಗುರಿಯನ್ನು ಸಾಧಿಸಲು ವಿಶ್ವಸಂಸ್ಥೆಯು ನಿಗದಿಪಡಿಸಿದ ಅಂದಾಜು ಮೊತ್ತಕ್ಕಿಂತ ಹತ್ತು ಪಟ್ಟು ಅಧಿಕವಾಗಿದೆ.
ಆಫ್ರಿಕ ಖಂಡದ ಸಹರಾ ಭೂಭಾಗದ ರಾಷ್ಟ್ರಗಳಿಗಿಂತಲೂ ಅಧಿಕ ಪ್ರಮಾಣದ ಪೌಷ್ಟಿಕ ಆಹಾರದ ಕೊರತೆಯನ್ನು ಭಾರತವು ಎದುರಿಸುತ್ತಿದೆ. ಭಾರತದಲ್ಲಿ ಐದು ವರ್ಷಗಳಿಗಿಂತ ಕೆಳಗಿನ ಶೇ.೪೩.೫ರಷ್ಟು ಮಕ್ಕಳು ದೇಹತೂಕದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಆಫ್ರಿಕದ ದೇಶಗಳಾದ ಸೂಡಾನ್ ಮತ್ತು ಝಿಂಬಾಬ್ವೆಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಕಂಡಂತಹ ವಿನಾಶಕಾರಿ ಮುಂಗಾರು ಮಳೆ , ಆದರ ಬೆನ್ನಿಗೆ ಬಂದ ಬರಗಾಲ ಹಾಗೂ ಬೆಳೆ ವೈಫಲ್ಯಗಳು, ಹಸಿವಿನ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆಯೆಂದು ‘ಆಕ್ಷನ್ ಏಯ್ಡ್’ ವರದಿ ಹೇಳಿದೆ.
ಸುಮಾರು ೧.೯೦ ಲಕ್ಷ ಜನರಿಗೆ ಉಣಿಸಬಹುದಾಗಿದ್ದ ೬೭ ಸಾವಿರ ಟನ್ ಆಹಾರಧಾನ್ಯಗಳು ಸರಕಾರಿ ಗೋದಾ ಮುಗಳಲ್ಲಿ ಕೊಳೆತು ಹೋಗಲು ಆಸ್ಪದ ನೀಡಿದ್ದಕ್ಕಾಗಿ, ಸುಪ್ರೀಂಕೋರ್ಟ್ ಕಳೆದ ತಿಂಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮಾತ್ರವಲ್ಲದೆ ಕಳಪೆ ರೀತಿಯ ದಾಸ್ತಾನಿನಿಂದಾಗಿ ಕೊಳೆತು ಹೋಗುವ ಅಪಾಯದಲ್ಲಿದ್ದ ೧೭.೮ ಟನ್ ಆಹಾರಧಾನ್ಯಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆಯೂ ಅದು ಆದೇಶಿಸಿತು.
ಆದರೆ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಸರಕಾರದ ನೀತಿಯನ್ನು ರೂಪಿಸುವ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ನಡೆಸುತ್ತಿದೆಯೆಂದು ಪ್ರಧಾನಿ ಮನಮೋಹನ್‌ಸಿಂಗ್ ತಗಾದೆ ತೆಗೆದರು. ಬಡತನ ರೇಖೆಗಿಂತ ಕೆಳಗಿರುವ ದೇಶದ ಅಂದಾಜು ೩೭ ಶೇಕಡ ಜನಸಂಖ್ಯೆಗೆ ಆಹಾರವನ್ನು ಉಚಿತವಾಗಿ ವಿತರಿಸುವುದರಿಂದ ರೈತರ ಉತ್ಪನ್ನಗಳಿಗೆ ಯಾವುದೇ ಉತ್ತೇಜಕಗಳನ್ನು ನೀಡಲು ಅಸಾಧ್ಯವಾಗುವುದೆಂದು ಎಚ್ಚರಿಕೆ ನೀಡಿದರು. ಆದರೆ ಸುಪ್ರೀಂಕೋರ್ಟ್‌ನ ನಿಲುವು ಅಚಲವಾಗಿತ್ತು. ತಾನು ನೀಡಿರುವುದು ಆದೇಶವೇ ಹೊರತು, ಸಲಹೆಯಲ್ಲವೆಂದು ಸ್ಪಷ್ಟವಾಗಿ ಸರಕಾರಕ್ಕೆ ತಿಳಿಸಿತು.
‘ಆಕ್ಷನ್ ಏಯ್ಡ್’ ಪ್ರಕಾರ, ೧೯೯೦ರಲ್ಲಿದ್ದಷ್ಟೇ ಮಟ್ಟದಲ್ಲಿ ಜಾಗತಿಕ ಹಸಿವಿನ ಪ್ರಮಾಣವು ೨೦೦೯ರಲ್ಲಿಯೂ ಇತ್ತು. ಹಸಿವಿನ ವಿರುದ್ಧ ಹೋರಾಡಲು ಅಭಿವೃದ್ಧಿ ಹೊಂದಿದ ದೇಶಗಳು ೧೪ ಶತಕೋಟಿ ಡಾಲರ್‌ಗಳನ್ನು ದೇಣಿಗೆಯಾಗಿ ನೀಡುವಂತೆ ಈ ಸೇವಾಸಂಸ್ಥೆಯು ಆಗ್ರಹಿಸಿತ್ತು.
“ಮುಂದಿನ ಐದು ವರ್ಷಗಳಲ್ಲಿ ಸಾಧಿಸಬೇಕಾದ ಅತಿ ಮುಖ್ಯ ಅಭಿವೃದ್ಧಿ ಗುರಿಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಶೃಂಗಸಭೆ ನಡೆಯಲಿರುವ ಈ ಸಂದರ್ಭದಲ್ಲಿ ವಿಶ್ವದಾದ್ಯಂತ ೧೦೦ ಕೋಟಿ ಜನರು ಹೊಟ್ಟೆ ತುಂಬದೆ ನಿದ್ರಿಸುವಂತಹ ಪರಿಸ್ಥಿತಿಯಿದೆಯೆಂದು ಸೇವಾಸಂಸ್ಥೆಯ ನೀತಿ ರಚನಾ ವಿಭಾಗದ ವರಿಷ್ಠ ಮೆರೆಡಿತ್ ಅಲೆಕ್ಸಾಂಡರ್ ತಿಳಿಸಿದ್ದಾರೆ. ವಿಶ್ವದ ಆರನೆ ಒಂದರಷ್ಟು ಜನಸಂಖ್ಯೆಗೆ ಹೊಟ್ಟೆ ತುಂಬಾ ತಿನ್ನುವಷ್ಟು ಆಹಾರ ದೊರೆಯುತ್ತಿಲ್ಲ. ಆದರೆ ನಾವು ಭೂಗ್ರಹದಲ್ಲಿರುವ ಪ್ರತಿಯೊಬ್ಬ ಪುರುಷ, ಮಹಿಳೆ ಹಾಗೂ ಮಗುವಿಗೆ ಸಾಕಾಗುವಷ್ಟು ಆಹಾರವನ್ನು ಬೆಳೆಸುತ್ತಿದ್ದೇವೆ. ಆದರೆ ಹಸಿವಿನ ಸಮಸ್ಯೆಗೆ ಆಹಾರದ ಕೊರತೆ ಮುಖ್ಯ ಕಾರಣವಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ” ಎಂದವರು ಹೇಳಿದ್ದಾರೆ.
೨೦೦೯ರಲ್ಲಿ ವಿಶ್ವದಾದ್ಯಂತ ೯೨.೫೦ ಕೋಟಿ ಜನರು ಹಸಿವಿನಿಂದ ಬಾಧಿತರಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ೯.೮೦ ಕೋಟಿಯಷ್ಟು ಕಡಿಮೆಯಾಗಿದೆಯೆಂದು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯು ಪ್ರಕಟಿಸಿದೆ. ಆದರೆ ಎರಡು ವರ್ಷಗಳಿಂದ ಕಂಡುಬಂದಿರುವ ಪೂರಕ ಹವಾಮಾನ ಪರಿಸ್ಥಿತಿ ಹಾಗೂ ಅದೃಷ್ಟ ಕಾರಣವೇ ಹೊರತು ಜಾಗತಿಕ ನಾಯಕರು ಕೈಗೊಂಡ ಕ್ರಮಗಳಿಂದಾಗಿ ಅಲ್ಲವೆಂದು ‘ಓಕ್ಸ್‌ಫಾಮ್’ ಎಚ್ಚರಿಕೆ ನೀಡಿದೆ.
ಮಿರ್ಗಿತಾಂಡ್ ಗ್ರಾಮವು ಜಾರ್ಖಂಡ್ ರಾಜಧಾನಿ ರಾಂಚಿಯಿಂದ ೧೯೫ ಕಿ.ಮೀ. ದೂರದ ಪೂರ್ವದಲ್ಲಿದೆ. ಒಂದರ್ಥದಲ್ಲಿ ಈ ಗ್ರಾಮವು ಭಾರತ ದೇಶದಲ್ಲಿದ್ದೂ ಇಲ್ಲದಂತಿದೆ. ಮಿರ್ಗಿತಾಂಡ್ ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಪ್ರಬಲವಾಗಿರುವ ಮಾವೊವಾದಿಗಳು, ಭದ್ರತಾಪಡೆಗಳನ್ನು ಈ ಪ್ರದೇಶದೊಳಗೆ ಕಾಲಿಡಲೂ ಅವಕಾಶ ನೀಡುತ್ತಿಲ್ಲ.
ಈ ಗ್ರಾಮದಲ್ಲಿ ಪ್ರತಿಯೊಂದು ಮಗುವಿನ ಹೊಟ್ಟೆಯ ಮೇಲಿರುವ ಬರೆಯ ಗುರುತುಗಳನ್ನು ನೋಡಿದಾಗ ಹೊರಗಿನವರ‍್ಯಾರಾದರೂ ದಂಗಾಗುತ್ತಾರೆ. ಆದರೆ ಬಡತನದಲ್ಲೇ ಬೇಯುತ್ತಿರುವ ಇಲ್ಲಿನ ಜನತೆಗೆ ಇದು ಸಹಜವಾಗಿಬಿಟ್ಟಿದೆ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರು ಈ ಬಗ್ಗೆ ವಿಚಾರಿಸಿದಾಗ, ಗ್ರಾಮಸ್ಥರು ಮಕ್ಕಳಿಗೆ ಬರೆಯ ಗುರುತುಗಳನ್ನು ತೋರಿಸುವಂತೆ ಹೇಳಿದರು. ಐದು ವರ್ಷದ ಬಾಲಕ ಮೋಲಿಲಾಲ್ ಕಿಸ್ಕು, ಶರ್ಟ್ ಎತ್ತಿ ದೊಡ್ಡದಾಗಿ ಉಬ್ಬಿರುವ ತನ್ನ ಉದರವನ್ನು ತೋರಿಸಿದಾಗ, ಅದರ ಮೇಲೆ ವೃತ್ತಾಕಾರದಲ್ಲಿ ಬರೆ ಎಳೆದ ಗುರುತುಗಳಿದ್ದವು. ಅಂದ ಹಾಗೆ ಈ ಗ್ರಾಮದಲ್ಲಿ ಹೊಟ್ಟೆಯಲ್ಲಿ ಬರೆಯ ಗುರುತುಗಳಿರದ ಮಕ್ಕಳ್ಯಾರೂ ಇಲ್ಲವೆಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.
ಅಂಚೆಕಚೇರಿಯಲ್ಲಿ ದುಡಿಯುತ್ತಿರುವ ೪೪ರ ಹರೆಯದ ಮನೋರಂಜನ್ ಮೆಹ್ತಾ, ಇವೆಲ್ಲವನ್ನೂ ಮರದ ದಿಮ್ಮಿಯೊಂದರ ಮೇಲೆ ಕುಳಿತು ನೋಡುತ್ತಿದ್ದ. ಆತನು ಕೂಡಾ ಈ ಮೂಢನಂಬಿಕೆಯಿಂದ ಹೊರತಾಗಿಲ್ಲ.ವಿದ್ಯಾವಂತನಾಗಿದ್ದರೂ ಸಹ, ತಾನು ಮಗ ಹೇಮಂತ್‌ನನ್ನು ಈ ಆಚರಣೆಗೆ ಒಳಪಡಿಸಿದ್ದಾಗಿ ಆತ ಹೇಳುತ್ತಾನೆ.
“ನನ್ನ ಮಗನ ಹೊಟ್ಟೆ ದೊಡ್ಡದಾಗಿ ಉಬ್ಬಿತ್ತು. ನಾವು ಹಲವಾರು ವೈದ್ಯರ ಬಳಿ ಹೋದೆವು. ಅವರಿಗೆ ಗುಣಪಡಿಸಲು ಸಾಧ್ಯವಾಗಲಿಲ್ಲ” ಎಂದಾತ ಹೇಳುತ್ತಾನೆ. “ಈ ಗ್ರಾಮದಲ್ಲಿ, ಮಗುವಿನ ಹೊಟ್ಟೆಯು ಮಡಕೆಯಾಕಾರದಲ್ಲಿ ಉಬ್ಬಿದರೆ, ನಾವು ಮಗುವಿನ ಹೊಟ್ಟೆಯ ಮೇಲೆ ಬಾಳೆಎಲೆಯ ತುಂಡನ್ನು ಇರಿಸುತ್ತೇವೆ. ನಂತರ ನಾವು ಎಲೆಯ ಮೇಲೆ ಸುಡುತ್ತಿರುವ ಕಲ್ಲಿದ್ದಲು ಅಥವಾ ಕಾದ ಕಬ್ಬಿಣವನ್ನು ಇಡುತ್ತೇವೆ. ಒಂದು ವೇಳೆ ಮಗುವು ನೋವಿನಿಂದ ಅರಚುತ್ತಿದ್ದರೆ, ಹೊಟ್ಟೆಯಲ್ಲಿರುವ ಹುಳುಗಳು ಸಾಯುತ್ತವೆಯೆಂದು ಅರ್ಥ.
ಆದರೆ ಮೆಹ್ತಾನ ಪುತ್ರ ಹೇಮಂತ್‌ನ ಹೊಟ್ಟೆಗೆ ಎಳೆದ ಬರೆಯೇ ಅವನಿಗೆ ಮೃತ್ಯುವಾಗಿ ಪರಿಣಮಿಸಿತು. ಬರೆಯಿಂದಾದ ಗಾಯಕ್ಕೆ ರೋಗಾಣುಗಳ ಸೋಂಕು ತಗಲಿತು ಮತ್ತು ಆತ ೨೧ ಡಿಸೆಂಬರ್ ೨೦೦೭ರಲ್ಲಿ ಕೊನೆಯುಸಿರೆಳೆದ. ಆಗ ಅವನಿಗೆ ಕೇವಲ ೭ ವರ್ಷ ವಯಸ್ಸು.
ಉಳಿವಿಗಾಗಿ ಹೋರಾಟ
ಭಾರತವು ಆರ್ಥಿಕ ರಂಗದಲ್ಲಿ ಪ್ರಗತಿಯೆಡೆಗೆ ದಾಪುಗಾಲಿನ ಹೆಜ್ಜೆಯನ್ನಿಡುತ್ತಿದೆ. ವಿಪರ್ಯಾಸವೆಂದರೆ, ಈ ದೇಶವು ಇಂದಿಗೂ ಬಡತನ ಹಾಗೂ ಹಸಿವುನಿಂದ ನರಳುತ್ತಲೇ ಇದೆ.
ಭಾರತದ ಕೇವಲ ೮ ರಾಜ್ಯಗಳಲ್ಲಿ ೪೧ ಕೋಟಿ ಜನರು,ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಇದು ಆಫ್ರಿಕ ಖಂಡದ ಸಹರಾ ಭೂಖಂಡದಲ್ಲಿ ೨೬ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಅಧಿಕ.
ಕಳೆದ ವರ್ಷದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು“ಆತಂಕಕಾರಿ ಪರಿಸ್ಥಿತಿ”ಯನ್ನು ಎದುರಿಸುತ್ತಿರುವ ೮೫ ರಾಷ್ಟ್ರಗಳ ಪಟ್ಟಿಯಲ್ಲಿ ೬೫ನೆ ಸ್ಥಾನದಲ್ಲಿದ್ದು, ಉ.ಕೊರಿಯಾಗಿಂತಲೂ ಕೆಳಗಿದೆ.
ಜೊತೆಗೆ ಭಾರತಾದ್ಯಂತ ಲಕ್ಷಾಂತರ ಮಂದಿ ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ದಿಲ್ಲಿಯ ಕೊಳೆಗೇರಿಗಳಲ್ಲಿ ಆರು ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇ.೬೬ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಾಧಿತರಾಗಿದ್ದಾರೆಂದು, ಮೇಯಲ್ಲಿ ಬಿಡುಗಡೆಗೊಂಡ ಅಧ್ಯಯನ ವರದಿಯೊಂದು ತಿಳಿಸಿದೆ. ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ,ದೊರೆಯಬೇಕಾಗಿದ್ದ ಸರಕಾರಿ ಕಾರ್ಯಕ್ರಮಗಳು ತಲುಪದಿರುವುದು, ಹಸಿವಿನ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.
ಜಾರ್ಖಂಡ್ ರಾಜ್ಯದ ೨೦ ಹಳ್ಳಿಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಹಸಿವಿನಿಂದಾಗಿ ಅಲ್ಲಿ ೧೩ ಮಂದಿ ಸಾವನ್ನಪ್ಪಿರುವುದನ್ನ್ನು ಹಾಗೂ ೧ ಸಾವಿರ ಕುಟುಂಬಗಳು, ಹಸಿವಿಗೆ ಸಂಬಂಧಿಸಿ ರೋಗಲಕ್ಷಣಗಳಿಂದ ನರಳುತ್ತಿರುವುದನ್ನು ಬೆಳಕಿಗೆ ತಂದಿತ್ತು. ಜಾರ್ಖಂಡ್ ರಾಜ್ಯದಲ್ಲಿ ಪ್ರತಿ ವರ್ಷವೂ ಸುಮಾರು ೫೦ ಸಾವಿರ ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಮುನ್ನವೇ ಸಾವನ್ನಪ್ಪುತ್ತವೆ. ಭಾರತದಲ್ಲಿ ಅತ್ಯಂತ ಕಳಪೆ ವೇತನವನ್ನು ಪಡೆಯುತ್ತಿರುವವರಲ್ಲಿ ಜಾರ್ಖಂಡ್‌ನ ಸರಕಾರಿ ವೈದ್ಯರೂ ಸೇರಿದ್ದಾರೆ. ರಾಜಧಾನಿ ಹೊಸದಿಲ್ಲಿಯ ಸರಕಾರಿ ವೈದ್ಯರ ಸಂಪಾದನೆಯ ಅರ್ಧಾಂಶದಷ್ಟು ವೇತನ ಮಾತ್ರವೇ ಜಾರ್ಖಂಡ್‌ನ ವೈದ್ಯರಿಗೆ ದೊರೆಯುತ್ತಿದೆ. ಐದು ವರ್ಷಗಳ ರಾಜ್ಯ ಸರಕಾರವು ನೇಮಿಸಿದ ೨೪೬೮ ವೈದ್ಯರ ಪೈಕಿ ೨೨೦೦ ಮಂದಿ,ಯಾಕೆ ಉದ್ಯೋಗವನ್ನು ತೊರೆದಿದ್ದಾರೆಂಬ ಪ್ರಶ್ನೆಗೆ ಉತ್ತರ ಇಲ್ಲಿ ಅಡಗಿದೆ. ಜಾರ್ಖಂಡ್‌ಗೆ ೮೦೦ಕ್ಕೂ ಅಧಿಕ ಆರೋಗ್ಯ ಕೇಂದ್ರಗಳ ಅಗತ್ಯವಿದೆಯಾದರೂ,ಅಲ್ಲಿ ಈಗ ಇರುವುದು ಕೇವಲ ೩೩೦.
ಇನ್ನು ಮಧ್ಯ ಭಾರತದ ರಾಜ್ಯವಾದ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಕಳೆದ ಐದು ವರ್ಷಗಳಲ್ಲಿ ಐದಕ್ಕಿಂತಲೂ ಕೆಳಗಿನ ವಯಸ್ಸಿನ ೫ ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ಶೇ.೬೦ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ರಾಜ್ಯದ ಶೇ. ೩೭ರಷ್ಟು ಜನತೆ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕವಾಗಿ ೩೨೭ ರೂ. ಹಾಗೂ ನಗರ ಪ್ರದೇಶಗಳಲ್ಲಿ ೫೭೦ ರೂ.ಗೂ ಕಡಿಮೆ ವರಮಾನದಲ್ಲಿ ಬದುಕುತ್ತಿದ್ದಾರೆ.
ಬಡವರೇ ಅಧಿಕಸಂಖ್ಯೆಯಲ್ಲಿರುವ ಮಧ್ಯಪ್ರದೇಶದ ಸರಕಾರಿ ಗೋದಾಮುಗಳಲ್ಲಿ ೧ ಲಕ್ಷ ಟನ್ ಗೋಧಿ ಕೊಳೆತುಬಿದ್ದಿರುವುದನ್ನು ತೋರಿಸುವ ದೃಶ್ಯಗಳನ್ನು ಮೇ ತಿಂಗಳಲ್ಲಿ ರಾಷ್ಟ್ರೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿದಾಗ, ಕೋಲಾಹಲವುಂಟಾಗಿತ್ತು.
ಉತ್ತರಪ್ರದೇಶದಲ್ಲಿ ಗಾನೆ ಎಂಬ ಪಟ್ಟಣದಲ್ಲಿ ಮಕ್ಕಳು ಹಸಿವಿನ ಬೇಗೆಯನ್ನು ತಾಳಲಾರದೆ ಮಣ್ಣನ್ನು ತಿನ್ನುತ್ತಿರುವುದು ಕೂಡಾ ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಅದು ಮಾಧ್ಯಮಗಳಲ್ಲಿ ಬರತೊಡಗುತ್ತಿದ್ದಂತೆಯೇ, ಎಚ್ಚೆತ್ತ ಅಧಿಕಾರಿಗಳು ಒಂದಿಷ್ಟು ಆಹಾರವನ್ನು ರವಾನಿಸಿ ಕೈತೊಳೆದುಕೊಂಡರು ಹಾಗೂ ಗ್ರಾಮಸ್ಥರಿಗೆ ತೆಪ್ಪಗಿರುವಂತೆ ತಿಳಿಸಿದರು. ಹಸಿವನ್ನು ಮುಚ್ಚಿಡುವುದೆಂದರೆ ಹೀಗಲ್ಲವೇ?.

Subscribe to:
Posts (Atom)
IMP....web.jpg)